ಐಪಿಎಲ್‌: ಕೆಕೆಆರ್‌ ಸೂಪರ್‌ ಶೋ; ಚೆನ್ನೈಗೆ ಸೋಲು


Team Udayavani, Mar 26, 2022, 11:14 PM IST

ಕೆಕೆಆರ್‌ ಸೂಪರ್‌ ಶೋ; ಚೆನ್ನೈಗೆ ಸೋಲು

ಮುಂಬಯಿ: ಹಾಲಿ ಚಾಂಪಿಯನ್‌ ಚೆನ್ನೈಗೆ 6 ವಿಕೆಟ್‌ಗಳಿಂದ ಸೋಲುಣಿಸಿದ ಕೋಲ್ಕತಾ ನೈಟ್‌ರೈಡರ್ 15ನೇ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ. ಕಳೆದ ವರ್ಷದ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ.|

ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈಗೆ ಗಳಿಸಲು ಸಾಧ್ಯವಾದದ್ದು 5ಕ್ಕೆ 131 ರನ್‌ ಮಾತ್ರ. ಕೋಲ್ಕತಾ 18.3 ಓವರ್‌ಗಳಲ್ಲಿ 4 ವಿಕೆಟಿಗೆ 133 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಕೆಕೆಆರ್‌ನ ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಗೆಲುವಿನ ಆರಂಭ ಪಡೆದರೆ, ಮತ್ತೋರ್ವ ಹೊಸ ನಾಯಕ ರವೀಂದ್ರ ಜಡೇಜ ಸೋಲಿನ ಆಘಾತ ಎದುರಿಸುವಂತಾಯಿತು.

ಚೇಸಿಂಗ್‌ ವೇಳೆ ಅಜಿಂಕ್ಯ ರಹಾನೆ ಸರ್ವಾಧಿಕ 44 ರನ್‌ ಬಾರಿಸಿದರು. ಅವರಿಲ್ಲಿ ಆರಂಭಿಕನಾಗಿ ಇಳಿದಿದ್ದರು. ಉಳಿದಂತೆ ಬಿಲ್ಲಿಂಗ್ಸ್‌ 25, ರಾಣಾ 21 ರನ್‌ ಹೊಡೆದರು. ಸಣ್ಣ ಸವಾಲಾದ ಕಾರಣ ಕೆಕೆಆರ್‌ಗೆ ಯಾವುದೇ ಒತ್ತಡ ಎದುರಾಗಲಿಲ್ಲ.

ಧೋನಿ ಅರ್ಧ ಶತಕ
ಧೋನಿ ಮತ್ತು ಜಡೇಜ ಡೆತ್‌ ಓವರ್‌ಗಳಲ್ಲಿ ಬಿರುಸಿನ ಆಟವಾಡಿದ್ದರಿಂದ ಸಿಎಸ್‌ಕೆ ಗೌರವಯುತ ಮೊತ್ತ ದಾಖಲಿತು. ಮೊದಲ 15 ಓವರ್‌ಗಳ ಆಟ ಕಂಡಾಗ ಚೆನ್ನೈ ನೂರರ ಆಸುಪಾಸಿನಲ್ಲಿ ಕುಸಿಯುವ ಭೀತಿ ದಟ್ಟವಾಗಿತ್ತು. ಆದರೆ ಧೋನಿ-ಜಡೇಜ ಸೇರಿಕೊಂಡು ಮುರಿಯದ 6ನೇ ವಿಕೆಟಿಗೆ 56 ಎಸೆತಗಳಿಂದ 70 ರನ್‌ ಪೇರಿಸಿ ತಂಡದ ಮರ್ಯಾದೆ ಕಾಪಾಡಿದರು. ಕೊನೆಯ 3 ಓವರ್‌ಗಳಲ್ಲಿ 47 ರನ್‌ ಹರಿದು ಬಂತು. ಧೋನಿ 50 ರನ್‌ (38 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಜಡೇಜ 26 ರನ್‌ ಮಾಡಿ ಅಜೇಯರಾಗಿ ಉಳಿದರು.

ಇದು 2019ರ ಎ. 21ರ ಬಳಿಕ ಧೋನಿ ಐಪಿಎಲ್‌ನಲ್ಲಿ ಹೊಡೆದ ಮೊದಲ ಫಿಫ್ಟಿ. ಅಂದು ಆರ್‌ಸಿಬಿ ವಿರುದ್ಧ ಅಜೇಯ 84 ರನ್‌ ಬಾರಿಸಿದ್ದರು.

ನೋಬಾಲ್‌ನೊಂದಿಗೆ ಆರಂಭ
15ನೇ ಐಪಿಎಲ್‌ ನೋಬಾಲ್‌ನೊಂದಿಗೆ ಆರಂಭಗೊಂಡಿತು. ಇದನ್ನೆಸೆದವರು ಕೆಕೆಆರ್‌ನ ವೇಗಿ ಉಮೇಶ್‌ ಯಾದವ್‌. ದ್ವಿತೀಯ ಎಸೆತ ವೈಡ್‌ ಆಗಿತ್ತು. 3ನೇ ಎಸೆತದಲ್ಲಿ ಋತುರಾಜ್‌ ಗಾಯಕ್ವಾಡ್‌ ವಿಕೆಟ್‌ ಉರುಳಿಸಿದರು. 4ನೇ ಎಸೆತವೂ ವೈಡ್‌ ಆಗಿತ್ತು. ಹೀಗೆ ನಾಟಕೀಯ ರೀತಿಯಲ್ಲಿ ಐಪಿಎಲ್‌ಗೆ ಚಾಲನೆ ಲಭಿಸಿತು.

ಬ್ಯಾಟ್‌ ಮೂಲಕ ಮೊದಲ ರನ್‌ ಬಂದದ್ದು ಶಿವಂ ಮಾವಿ ಎಸೆದ ದ್ವಿತೀಯ ಓವರ್‌ನ 3ನೇ ಎಸೆತದಲ್ಲಿ. ಡೇವನ್‌ ಕಾನ್ವೇ ಸಿಂಗಲ್‌ ಮೂಲಕ ಖಾತೆ ತೆರೆದರು. ಬಳಿಕ ರಾಬಿನ್‌ ಉತ್ತಪ್ಪ ತಾನೆದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿದರು. ಮೊದಲ ಸಿಕ್ಸರ್‌ ಕೂಡ ಉತ್ತಪ್ಪ ಅವರಿಂದಲೇ ಸಿಡಿಯಿತು. ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದ ಉತ್ತಪ್ಪ, ಮಾವಿ ಅವರ ಮುಂದಿನ ಓವರ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ ಬಾರಿಸಿ ಅಪಾಯಕಾರಿಯಾಗಿ ಬೆಳೆಯುವ ಸೂಚನೆ ನೀಡಿದರು.

ಈ ಹಂತದಲ್ಲಿ ಉಮೇಶ್‌ ಯಾದವ್‌ ಮತ್ತೊಂದು ವಿಕೆಟ್‌ ಬೇಟೆಯಾಡಿದರು. ತಮ್ಮ 3ನೇ ಓವರ್‌ನ ಮೊದಲ ಎಸೆತದಲ್ಲೇ ಕಾನ್ವೇಗೆ ಪೆವಿಲಿಯನ್‌ ಹಾದಿ ತೋರಿಸಿದರು. ಕಿವೀಸ್‌ ಆರಂಭಿಕನ ಗಳಿಕೆ ಕೇವಲ 3 ರನ್‌. ಪವರ್‌ ಪ್ಲೇ ಮುಗಿಯುವಾಗ ಚೆನ್ನೈ 2 ವಿಕೆಟಿಗೆ 35 ರನ್‌ ಗಳಿಸಿತ್ತು.

ಬಿರುಸಿನ ಆಟವಾಡುತ್ತಿದ್ದ ರಾಬಿನ್‌ ಉತ್ತಪ್ಪ ಮಿಸ್ಟರಿ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಮೋಡಿಗೆ ಸಿಲುಕಿದರು. ಮುನ್ನುಗ್ಗಿ ಬಾರಿಸಲು ಹೋಗಿ ಕೀಪರ್‌ ಶೆಲ್ಡನ್‌ ಜಾಕ್ಸನ್‌ ಅವರಿಂದ ಸ್ಟಂಪ್ಡ್ ಆದರು. ಉತ್ತಪ್ಪ ಗಳಿಕೆ 21 ಎಸೆತಗಳಿಂದ 28 ರನ್‌ (2 ಬೌಂಡರಿ, 2 ಸಿಕ್ಸರ್‌).

ಅಂಬಾಟಿ ರಾಯುಡು ಕೂಡ ಉತ್ತಮ ಲಯದಲ್ಲಿದ್ದರು. ಆದರೆ ನಾಯಕ ರವೀಂದ್ರ ಜಡೇಜ ಅವರೊಂದಿಗೆ ಮಿಕ್ಸ್‌ಅಪ್‌ ಆಗಿ ರನೌಟ್‌ ಆಗಬೇಕಾಯಿತು. ರಾಯುಡು ಗಳಿಕೆ 17 ಎಸೆತಗಳಿಂದ 15 ರನ್‌ (1 ಫೋರ್‌, 1 ಸಿಕ್ಸರ್‌). ಇದರೊಂದಿಗೆ ಐಪಿಎಲ್‌ನಲ್ಲಿ ರಾಯುಡು 15ನೇ ಸಲ ರನೌಟ್‌ ಆದಂತಾಯಿತು. ಅತ್ಯಧಿಕ ಸಲ ರನೌಟ್‌ ಆದವರ ಯಾದಿಯಲ್ಲಿ ಅವರು ಸುರೇಶ್‌ ರೈನಾ ಜತೆ ದ್ವಿತೀಯ ಸ್ಥಾನದಲ್ಲಿ ಕಾಣಿಕೊಂಡರು. ಶಿಖರ್‌ ಧವನ್‌ ಮತ್ತು ಗೌತಮ್‌ ಗಂಭೀರ್‌ ತಲಾ 16 ಸಲ ರನೌಟ್‌ ಆದದ್ದು ಐಪಿಎಲ್‌ ದಾಖಲೆ.

ಅರ್ಧ ಹಾದಿ ಕ್ರಮಿಸುವಾಗ ಚೆನ್ನೈ 4 ವಿಕೆಟಿಗೆ 57 ರನ್‌ ಮಾಡಿ ಪರದಾಡುತ್ತಿತ್ತು. ಶಿವಂ ದುಬೆ (3) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. ಆ್ಯಂಡ್ರೆ ರಸೆಲ್‌ ತಮ್ಮ ಮೊದಲ ಓವರ್‌ನಲ್ಲೇ ಇವರ ವಿಕೆಟ್‌ ಕಿತ್ತರು.

ಒಲಿಂಪಿಕ್ಸ್‌ ಸಾಧಕರಿಗೆ ಬಿಸಿಸಿಐ ಸಮ್ಮಾನ
ಐಪಿಎಲ್‌ ಆರಂಭಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾ ಸಾಧಕರನ್ನು ಬಿಸಿಸಿಐ ಸಮ್ಮಾನಿಸಿತು. ಇವರಲ್ಲಿ ಜಾವೆಲಿನ್‌ ಚಿನ್ನ ಗೆದ್ದ ನೀರಕ್‌ ಚೋಪ್ರಾ ಆಕರ್ಷಣೆಯ ಕೇಂದ್ರವಾಗಿದ್ದರು. ಅವರಿಗೆ ಬಿಸಿಸಿಐ ಒಂದು ಕೋಟಿ ರೂ. ಮೊತ್ತ ನೀಡಿ ಗೌರವಿಸಿತು.

ಹಾಕಿಯಲ್ಲಿ ಕಂಚು ಗೆದ್ದ ಪುರುಷರ ತಂಡಕ್ಕೆ ಒಂದು ಕೋಟಿ ರೂ. ನೀಡಲಾಯಿತು. ತಂಡದ ಪರವಾಗಿ ನಾಯಕ ಮನ್‌ಪ್ರೀತ್‌ ಸಿಂಗ್‌ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಂದ ಚೆಕ್‌ ಪಡೆದರು. ಬಾಕ್ಸಿಂಗ್‌ನಲ್ಲಿ ಕಂಚು ಗೆದ್ದ ಲವಿÉನಾ ಬೊರ್ಗೊಹೇನ್‌ ಅವರಿಗೆ 25 ಲಕ್ಷ ರೂ. ನೀಡಲಾಯಿತು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ಗಾಯಕ್ವಾಡ್‌ ಸಿ ರಾಣಾ ಬಿ ಉಮೇಶ್‌ 0
ಡೇವನ್‌ ಕಾನ್ವೇ ಸಿ ಶ್ರೇಯಸ್‌ ಬಿ ಉಮೇಶ್‌ 3
ರಾವಿನ್‌ ಉತ್ತಪ್ಪ ಸ್ಟಂಪ್ಡ್ ಜಾಕ್ಸನ್‌ ಬಿ ಚಕ್ರವರ್ತಿ 28
ಅಂಬಾಟಿ ರಾಯುಡು ರನೌಟ್‌ 15
ರವೀಂದ್ರ ಜಡೇಜ ಔಟಾಗದೆ 26
ಶಿವಂ ದುಬೆ ಸಿ ನಾರಾಯಣ್‌ ಬಿ ರಸೆಲ್‌ 3
ಎಂ.ಎಸ್‌. ಧೋನಿ ಔಟಾಗದೆ 50
ಇತರ 6
ಒಟ್ಟು (5 ವಿಕೆಟಿಗೆ) 131
ವಿಕೆಟ್‌ ಪತನ:1-2, 2-28, 3-49, 4-52, 5-61.
ಬೌಲರ್‌;
ಉಮೇಶ್‌ ಯಾದವ್‌ 4-0-20-2
ಶಿವಂ ಮಾವಿ 4-0-35-0
ವರುಣ್‌ ಚಕ್ರವರ್ತಿ 4-0-23-1
ಸುನೀಲ್‌ ನಾರಾಯಣ್‌ 4-0-15-0
ಆ್ಯಂಡ್ರೆ ರಸೆಲ್‌ 4-0-38-1
ಕೋಲ್ಕತಾ ನೈಟ್‌ರೈಡರ್
ಅಜಿಂಕ್ಯ ರಹಾನೆ ಸಿ ಜಡೇಜ ಬಿ ಸ್ಯಾಂಟ್ನರ್‌ 44
ವೆಂಕಟೇಶ್‌ ಸಿ ಧೋನಿ ಬಿ ಬ್ರಾವೊ 16
ನಿತೀಶ್‌ ರಾಣಾ ಸಿ ರಾಯುಡು ಬಿ ಬ್ರಾವೊ 21
ಶ್ರಯಸ್‌ ಅಯ್ಯರ್‌ ಔಟಾಗದೆ 20
ಸ್ಯಾಮ್‌ ಬಿಲ್ಲಿಂಗ್‌ ಸಿ ತುಷಾರ್‌ ಬಿ ಬ್ರಾವೊ 25
ಶೆಲ್ಡನ್‌ ಜಾಕ್ಸನ್‌ ಔಟಾಗದೆ 3
ಇತರ 4
ಒಟ್ಟು (18.3 ಓವರ್‌ಗಳಲ್ಲಿ 4 ವಿಕೆಟಿಗೆ) 133
ವಿಕೆಟ್‌ ಪತನ:1-43, 2-76, 3-87, 4-123.
ಬೌಲಿಂಗ್‌;
ತುಷಾರ್‌ ಪಾಂಡೆ 3-0-23-0
ಆ್ಯಂಡಂ ಮಿಲ್ನೆ 2.3-0-19-0
ಮಿಚೆಲ್‌ ಸ್ಯಾಂಟ್ನರ್‌ 4-0-31-1
ಡ್ವೇನ್‌ ಬ್ರಾವೊ 4-0-20-3
ಶಿವಂ ದುಬೆ 1-0-11-0
ರವೀಂದ್ರ ಜಡೇಜ 4-0-25-0

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.