ಅಭಿನವ್ ಮನೋಹರ್ ಭವಿಷ್ಯದ ತಾರೆ: ಹಾರ್ದಿಕ್ ಪಾಂಡ್ಯ
Team Udayavani, Mar 29, 2022, 9:15 PM IST
ಮುಂಬಯಿ: ಅಭಿನವ್ ಮನೋಹರ್ ಅವರು ಭವಿಷ್ಯದ ತಾರೆಯಾಗಿ ಮೂಡಿ ಬರಲಿದ್ದಾರೆ. ಅವರ ಬಗ್ಗೆ ಹೆಚ್ಚೆಚ್ಚು ವಿಷಯಗಳನ್ನು ಕೇಳುತ್ತೀರಿ ಎಂದು ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರಿನಲ್ಲಿ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಅವರು ಗುಜರಾತ್ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟಿದ್ದಾರೆ.
ಬಹಳಷ್ಟು ಒತ್ತಡದ ನಡುವೆಯೂ ಆತ್ಮವಿಶ್ವಾಸದಿಂದ ಆಡಿದ ಮನೋಹರ್ ಆವೇಶ್ ಖಾನ್ ಅವರ ಬೌಲಿಂಗ್‌ನಲ್ಲಿ ಬೆನ್ನು ಬೆನ್ನಿಗೆ ಎರಡು ಬೌಂಡರಿ ಬಾರಿಸಿ ಗಮನ ಸೆಳೆದರು. ಐಪಿಎಲ್‌ನಂತಹ ದೊಡ್ಡ ಕೂಟದಲ್ಲಿ ಆಡುತ್ತಿದ್ದರೂ ಅವರು ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ.
ಕರ್ನಾಟಕ ಮೂಲದ ಮನೋಹರ್ ಅವರಲ್ಲಿ ಸಾಕಷ್ಟು ಅನುಭವವಿದೆ. ಭವಿಷ್ಯದಲ್ಲೂ ಅವರ ಆಟದ ವೈಭವವನ್ನು ಕಾಣಲಿದ್ದೀರಿ. ರಾಹುಲ್ ತೆವಾಟಿಯ ಜತೆ ಅವರು ಅಮೋಘ ಜತೆಯಾಟ ನಡೆಸಿ ತಂಡಕ್ಕೆ ಗೆಲುವು ಒದಗಿಸಿಕೊಟ್ಟರು ಎಂದು ಹಾರ್ದಿಕ್ ವಿವರಿಸಿದರು. ತೆವಾಟಿಯ ಅವರದ್ದು ಮನಮೋಹಕ ಆಟ ಎಂದವರು ಬಣ್ಣಿಸಿದರು.
ಕಳೆದ ನವೆಂಬರ್ ಬಳಿಕ ಮೊದಲ ಪಂದ್ಯವನ್ನಾಡಿದ ಹಾರ್ದಿಕ್ ನಾಲ್ಕು ಓವರ್ ಎಸೆದಿದ್ದರಲ್ಲದೇ ನಾಲ್ಕನೇ ಕ್ರಮಾಂಕದಲ್ಲಿ ಆಡಿ 33 ರನ್ ಹೊಡೆದಿದ್ದರು.
ಇದನ್ನೂ ಓದಿ:ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಕಂಗಾಲು; ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ
ಉತ್ತಮ ಆರಂಭ: ಹಾರ್ದಿಕ್ ಪಾಂಡ್ಯ
ಪುಣೆ: ಇದೊಂದು ನಮ್ಮ ಪಾಲಿಗೆ ಸರಿಯಾದ ಪಂದ್ಯವಾಗಿತ್ತು. ಗೆಲುವು ಸಾಧಿಸುವ ಮೂಲಕ ನಾವು ಬಹಳಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇವೆ. ಶಮಿ ಅವರ ಅದ್ಭುತ ದಾಳಿಯಿಂದ ನಾವು ಉತ್ತಮ ಆರಂಭ ಪಡೆದೆವು ಎಂದು ಪಂದ್ಯದ ಬಳಿಕ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು.
ಈ ಪಿಚ್‌ನಲ್ಲಿ 160 ರನ್ ಗುರಿಯನ್ನು ತೆಗೆಯಬಹುದು ಎಂದು ಭಾವಿಸಿದ್ದೆ.
ನಾನು ಹೆಚ್ಚಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ. ಯಾಕೆಂದರೆ ನನ್ನ ಅನುಭವದಿಂದ ಒತ್ತಡದ ಜತೆ ಆಡಲು ಸಾಧ್ಯವಿದೆ. ಈ ಮೂಲಕ ಇತರ ಆಟಗಾರರು ಆರಾಮವಾಗಿ ಆಡುವ ಸಾಧ್ಯತೆಯಿದೆ. ತಂಡವಾಗಿ ನಾವಿಂದು ಜಯಭೇರಿ ಬಾರಿಸಿದ್ದೇವೆ ಎಂದು ಪಾಂಡ್ಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.