ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
Team Udayavani, May 16, 2022, 4:29 PM IST
2017ರ ಐಪಿಎಲ್ ಋತುವಿನ ಏಕೈಕ ಟೈ ಪಂದ್ಯಕ್ಕೆ ಸಾಕ್ಷಿಯಾದದ್ದು ನೂತನ ಗುಜರಾತ್ ಲಯನ್ಸ್-ಮುಂಬೈ ಇಂಡಿಯನ್ಸ್ ನಡುವಿನ ರಾಜ್‌ಕೋಟ್ ಪಂದ್ಯ. ಈ ಮುಖಾಮುಖೀಯಲ್ಲಿ ಎರಡೂ ತಂಡಗಳು 153 ರನ್ ಬಾರಿಸಿದ್ದರಿಂದ ಪಂದ್ಯ ಸೂಪರ್ ಓವರ್‌ನತ್ತ ಮುಖ ಮಾಡಿತು. ಇದರಲ್ಲಿ ಮುಂಬೈ ಇಂಡಿಯನ್ಸ್‌ಗೆ ಅದೃಷ್ಟ ಒಲಿಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 5 ಎಸೆತಗಳಲ್ಲಿ 2 ವಿಕೆಟಿಗೆ 11 ರನ್ ಗಳಿಸಿತು. ಜೇಮ್ಸ್ ಫಾಕ್ನರ್ 4ನೇ ಮತ್ತು 5ನೇ ಎಸೆತಗಳಲ್ಲಿ ಕೈರನ್ ಪೊಲಾರ್ಡ್ ಮತ್ತು ಜಾಸ್ ಬಟ್ಲರ್ ವಿಕೆಟ್ ಕಿತ್ತು ರಾಜಸ್ಥಾನ್‌ಗೆ ಮೇಲುಗೈಯೇನೋ ಒದಗಿಸಿದರು. ಆದರೆ ಈ ಮೊತ್ತವನ್ನು ಮೀರಿ ನಿಲ್ಲಲು ಸುರೇಶ್ ರೈನಾ ಪಡೆಯಿಂದ ಸಾಧ್ಯವಾಗಲಿಲ್ಲ. ಬ್ರೆಂಡನ್ ಮೆಕಲಮ್, ಆರನ್ ಫಿಂಚ್ ಅವರಂಥ ಬಿಗ್ ಹಿಟ್ಟರ್ ಇದ್ದರೂ ಗುಜರಾತ್ 12 ರನ್ ಗಳಿಸಲು ವಿಫಲವಾಯಿತು.
ಮುಂಬೈ ಪರ ಸೂಪರ್ ಓವರ್ ಎಸೆಯಲು ಬಂದ ಜಸ್‌ಪ್ರೀತ್ ಬುಮ್ರಾ ಮೊದಲು ಲಯ ತಪ್ಪಿದರೂ ಬಿಗಿ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಮೊದಲ ಎಸೆತ ನೋಬಾಲ್, ಬಳಿಕ ಲೆಗ್ ಬೈ, ಅನಂತರ ವೈಡ್… ಹೀಗೆ ಆರಂಭಗೊಂಡಿತ್ತು ಬುಮ್ರಾ ಸ್ಪೆಲ್. ಆದರೆ ಯಾವ ಎಸೆತದಲ್ಲೂ ಒಂದಕ್ಕಿಂತ ಹೆಚ್ಚು ರನ್ ಗಳಿಸಲು ಗುಜರಾತ್ ಬ್ಯಾಟರ್‌ಗಳಿಂದ ಸಾಧ್ಯವಾಗಲಿಲ್ಲ. 2 ಡಾಟ್ ಬಾಲ್‌ಗಳ ಮೂಲಕವೂ ಬುಮ್ರಾ ಕಡಿವಾಣ ಹಾಕಿದರು. ಅಂತಿಮವಾಗಿ ಗುಜರಾತ್‌ಗೆ ಗಳಿಸಲು ಸಾಧ್ಯವಾದದ್ದು 6 ರನ್ ಮಾತ್ರ!
ಥಂಪಿ, ಪಠಾಣ್ ಕಡಿವಾಣ
ಗುಜರಾತ್ ಲಯನ್ಸ್‌ಗೆ ಈ ಪಂದ್ಯವನ್ನು ಗೆಲ್ಲುವ ಅವಕಾಶ ಹೆಚ್ಚಿತ್ತು. ಅಂತಿಮ 2 ಓವರ್‌ಗಳಲ್ಲಿ 5 ವಿಕೆಟ್‌ಗಳಿಂದ 15 ರನ್ ಗಳಿಸಬೇಕಿತ್ತು. ಆದರೆ 19ನೇ ಓವರ್‌ನಲ್ಲಿ ಬಾಸಿಲ್ ಥಂಪಿ ಕೇವಲ 4 ರನ್ ನೀಡಿ 3 ವಿಕೆಟ್ ಉಡಾಯಿಸುವ ಮೂಲಕ ಮುಂಬೈಗೆ ಮೇಲುಗೈ ಒದಗಿಸಿದರು.
ಅಂತಿಮ ಓವರ್‌ನಲ್ಲಿ ಗುಜರಾತ್ 2 ವಿಕೆಟ್‌ಗಳಿಂದ 11 ರನ್ ಮಾಡಬೇಕಾದ ಒತ್ತಡಕ್ಕೆ ಸಿಲುಕಿತು. ಬೌಲರ್ ಇರ್ಫಾನ್ ಪಠಾಣ್. ಮೊದಲ ಎಸೆತವನ್ನು ಕೃಣಾಲ್ ಪಾಂಡ್ಯ ಸಿಕ್ಸರ್‌ಗೆ ಬಡಿದಟ್ಟಿದಾಗ ಮುಂಬೈ ಸಂಭ್ರಮಕ್ಕೆ ಪಾರವಿಲ್ಲ. ಮುಂದಿನ ಎಸೆತದಲ್ಲಿ ಒಂದು ರನ್ ಬಂತು. ಆದರೆ 3ನೇ ಎಸೆತದಲ್ಲಿ ಬುಮ್ರಾ ರನೌಟಾದರು. ಉಳಿದದ್ದು ಒಂದೇ ವಿಕೆಟ್. ಆದರೆ ಕೃಣಾಲ್ ಪಾಂಡ್ಯ ಸ್ಟ್ರೈಕ್‌ಗೆ ಮರಳಿದ್ದರು. 4ನೇ ಎಸೆತದಲ್ಲಿ 2 ರನ್ ತೆಗೆದರು. 5ನೇ ಎಸೆತದಲ್ಲಿ ಸಿಕ್ಕಿದ್ದು ಒಂದೇ ರನ್. ಅಲ್ಲಿಗೆ ಸ್ಕೋರ್ ಸಮನಾಯಿತು. ಅಂತಿಮ ಎಸೆತ ಯಾರ್ಕರ್ ಆಗಿತ್ತು. ಇದು ಲಸಿತ ಮಾಲಿಂಗ ಪ್ಯಾಡ್‌ಗೆ ಬಡಿದು ಕವರ್‌ನತ್ತ ಸಾಗಿತು. ಆದರೆ ಮಾಲಿಂಗ-ಪಾಂಡ್ಯ ಓಟ ಆರಂಭಿಸಿದರು. ಇದನ್ನು ಅಮೋಘ ರೀತಿಯಲ್ಲಿ ತಡೆದ ರವೀಂದ್ರ ಜಡೇಜ, ಚೆಂಡನ್ನೆತ್ತಿ ಬ್ಯಾಟ್ಸ್‌ಮನ್ ಎಂಡ್‌ನ ಸ್ಟಂಪ್‌ಗೆ ಬಡಿದರು. ಆಗಿನ್ನೂ ಕೃಣಾಲ್ ಪಾಂಡ್ಯ ಕ್ರೀಸ್ ಮುಟ್ಟಿರಲಿಲ್ಲ!
ಸ್ಕೋರ್ ಪಟ್ಟಿ
ಗುಜರಾತ್ ಲಯನ್ಸ್
ಇಶಾನ್ ಕಿಶನ್ ಸಿ ಪೊಲಾರ್ಡ್ ಬಿ ಹರ್ಭಜನ್ 48
ಬ್ರೆಂಡನ್ ಮೆಕಲಮ್ ಬಿ ಮಾಲಿಂಗ 6
ಸುರೇಶ್ ರೈನಾ ಸಿ ಪೊಲಾರ್ಡ್ ಬಿ ಬುಮ್ರಾ 1
ಆರನ್ ಫಿಂಚ್ ಬಿ ಮಾಲಿಂಗ 0
ದಿನೇಶ್ ಕಾರ್ತಿಕ್ ಸ್ಟಂಪ್ಡ್ ಪಾರ್ಥಿವ್ ಬಿ ಕೃಣಾಲ್ 2
ರವೀಂದ್ರ ಜಡೇಜ ಸಿ ಮತ್ತು ಬಿ ಕೃಣಾಲ್ 28
ಜೇಮ್ಸ್ ಫಾಕ್ನರ್ ಬಿ ಬುಮ್ರಾ 21
ಇರ್ಫಾನ್ ಪಠಾಣ್ ಸಿ ಪಾಂಡ್ಯ ಬಿ ಕೃಣಾಲ್ 2
ಆ್ಯಂಡ್ರೂé ಟೈ ರನೌಟ್ 25
ಬಾಸಿಲ್ ಥಂಪಿ ಔಟಾಗದೆ 2
ಅಂಕಿತ್ ಸೋನಿ ಔಟಾಗದೆ 7
ಇತರ 11
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 153
ವಿಕೆಟ್ ಪತನ: 1-21, 2-46, 3-48, 4-56, 5-83, 6-95, 7-101, 8-144, 9-144.
ಬೌಲಿಂಗ್: ಮಿಚೆಲ್ ಮೆಕ್ಲೆನಗನ್ 4-0-50-0
ಲಸಿತ ಮಾಲಿಂಗ 4-0-33-2
ಹರ್ಭಜನ್ ಸಿಂಗ್ 4-0-23-1
ಜಸ್‌ಪ್ರೀತ್ ಬುಮ್ರಾ 4-0-32-2
ಕೃಣಾಲ್ ಪಾಂಡ್ಯ 4-0-14-3
ಮುಂಬೈ ಇಂಡಿಯನ್ಸ್
ಪಾರ್ಥಿವ್ ಪಟೇಲ್ ಸಿ ಕಾರ್ತಿಕ್ ಬಿ ಫಾಕ್ನರ್ 70
ಜಾಸ್ ಬಟ್ಲರ್ ರನೌಟ್ 9
ನಿತೀಶ್ ರಾಣಾ ಎಲ್‌ಬಿಡಬ್ಲ್ಯು ಸೋನಿ 19
ರೋಹಿತ್ ಶರ್ಮ ಸಿ ಕಾರ್ತಿಕ್ ಬಿ ಫಾಕ್ನರ್ 5
ಕೈರನ್ ಪೊಲಾರ್ಡ್ ಸಿ ಮೆಕಲಮ್ ಬಿ ಥಂಪಿ 15
ಕೃಣಾಲ್ ಪಾಂಡ್ಯ ರನೌಟ್ 29
ಹಾರ್ದಿಕ್ ಪಾಂಡ್ಯ ಸಿ ಇಶಾನ್ ಬಿ ಥಂಪಿ 4
ಹರ್ಭಜನ್ ಸಿಂಗ್ ಎಲ್‌ಬಿಡಬ್ಲ್ಯು ಥಂಪಿ 0
ಮಿಚೆಲ್ ಮೆಕ್ಲೆನಗನ್ ರನೌಟ್ 1
ಜಸ್‌ಪ್ರೀತ್ ಬುಮ್ರಾ ರನೌಟ್ 0
ಲಸಿತ ಮಾಲಿಂಗ ಔಟಾಗದೆ 0
ಇತರ 1
ಒಟ್ಟು (20 ಓವರ್‌ಗಳಲ್ಲಿ ಆಲೌಟ್) 153
ವಿಕೆಟ್ ಪತನ: 1-43, 2-82, 3-104, 4-109, 5-127, 6-139, 7-142, 8-143, 9-150.
ಬೌಲಿಂಗ್: ಬಾಸಿಲ್ ಥಂಪಿ 4-0-29-3
ಜೇಮ್ಸ್ ಫಾಕ್ನರ್ 4-0-34-2
ಇರ್ಫಾನ್ ಪಠಾಣ್ 2-0-26-0
ಅಂಕಿತ್ ಸೋನಿ 4-0-16-1
ಸುರೇಶ್ ರೈನಾ 4-0-28-0
ಆ್ಯಂಡ್ರೂ ಟೈ 1-0-9-0
ರವೀಂದ್ರ ಜಡೇಜ 1-0-11-0
ಪಂದ್ಯಶ್ರೇಷ್ಠ: ಕೃಣಾಲ್ ಪಾಂಡ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.