ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್
ಕ್ವಾಲಿಫೈಯರ್‌ನಲ್ಲಿ ಸೋತರೂ ಫೈನಲ್‌ಗೇರಲು ಸಂಜು ಸ್ಯಾಮ್ಸನ್ ಪಡೆಗೆ ಇನ್ನೊಂದು ಅವಕಾಶ
Team Udayavani, May 20, 2022, 11:28 PM IST
ಮುಂಬೈ: ಅಗ್ರಸ್ಥಾನಿಯಾಗಿ ಐಪಿಎಲ್ ಪ್ಲೇಗೇರಲು ಶುಕ್ರವಾರದ ಪಂದ್ಯ ರಾಜಸ್ಥಾನ್ ರಾಯಲ್ಸ್‌ಗೆ ಮಹತ್ವದ್ದಾಗಿತ್ತು. ಇದರಲ್ಲಿ ರಾಜಸ್ಥಾನ್ ಯಶಸ್ಸು ಪಡೆದು 2ನೇ ಸ್ಥಾನಕ್ಕೇರಿದೆ. ಇದರಿಂದ ರಾಜಸ್ಥಾನ್ ಒಂದು ವೇಳೆ ಕ್ವಾಲಿಫೈಯರ್‌ನಲ್ಲಿ ಸೋತರೂ, ಫೈನಲ್‌ಗೇರಲು ಇನ್ನೊಂದು ಅವಕಾಶ ಪಡೆಯಲಿದೆ. ಲಕ್ನೋ 3ನೇ ಸ್ಥಾನಕ್ಕೆ ಕುಸಿದು ಈ ಅವಕಾಶ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಸೋತ ಚೆನ್ನೈ ಕಿಂಗ್ಸ್‌ಗೆ ಯಾವುದೇ ನಷ್ಟವಾಗಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್ ಗಳಿಸಿತು. ಇದನ್ನು ಬೆನ್ನತ್ತಿದ ರಾಜಸ್ಥಾನ್ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 151 ರನ್ ಗಳಿಸಿತು. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ (59), ಆರ್.ಅಶ್ವಿನ್ (40) ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಚೆನ್ನೈ ಪರ ಪ್ರಶಾಂತ್ ಸೋಲಂಕಿ 20 ರನ್ ನೀಡಿ 2 ವಿಕೆಟ್ ಪಡೆದರು.
ಮಿಂಚಿದ ಮೊಯಿನ್ ಅಲಿ: ಮೊದಲು ಬ್ಯಾಟಿಂಗ್ ಚೆನ್ನೈ ಪರ ಮೊಯಿನ್ ಅಲಿ ಮಿಂಚಿದರು. ಅವರು 93 ರನ್ ಚಚ್ಚಿದರು. ಮೊದಲ 6 ಓವರ್‌ಗಳಲ್ಲಿ 75 ರನ್ ಸಿಡಿಸಿದ ಧೋನಿ ಪಡೆಗೆ, ಅನಂತರದ 75 ರನ್ ಗಳಿಸಲು 14 ಓವರ್ ಬೇಕಾಯಿತೆಂಬುದೊಂದು ವಿಪರ್ಯಾಸ. ರಾಜಸ್ಥಾನ್ ಬೌಲರ್ ಅಷ್ಟರ ಮಟ್ಟಿಗೆ ಬಿಗಿ ದಾಳಿ ಸಂಘಟಿಸಿ ಚೆನ್ನೈಗೆ ಕಡಿವಾಣ ಹಾಕಿ ಪಂದ್ಯಕ್ಕೆ ಮರಳಿದರು. ಸ್ಫೋಟಕ ಆರಂಭ ಒದಗಿಸಿದ ಮೊಯಿನ್ ಅಲಿಗೆ ಶತಕ ಒಲಿಯದೇ ಹೋಯಿತು. ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಇವರ ವಿಕೆಟ್ ಉರುಳಿತು. 57 ಎಸೆತ ಎದುರಿಸಿದ ಅಲಿ 13 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.
ಚೆನ್ನೈ ಸ್ಫೋಟಕ ಆರಂಭ: ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮೊದಲ ಓವರ್‌ನಲ್ಲೇ ಋತುರಾಜ್ ಗಾಯಕ್ವಾಡ್ (2) ಅವರನ್ನು ಕಳೆದುಕೊಂಡಿತು. ಟ್ರೆಂಟ್ ಬೌಲ್ಟ್ ವಿಕೆಟ್ ಟೇಕರ್. ಪ್ರಸಿದ್ಧ್ ಕೃಷ್ಣ ಅವರ ಮೊದಲ ಓವರ್ ಕೂಡ ಬಿಗಿಯಾಗಿತ್ತು. 2 ಓವರ್‌ಗಳಲ್ಲಿ ಚೆನ್ನೈಗೆ ಗಳಿಸಲು ಸಾಧ್ಯವಾದದ್ದು ಮೂರೇ ರನ್.
ಮುಂದಿನದ್ದೆಲ್ಲ ಮೊಯಿನ್ ಅಲಿ ಆರ್ಭಟ. ಇವರಿಗೆ ಡೆವೋನ್ ಕಾನ್ವೆ ಉತ್ತಮ ಬೆಂಬಲವಿತ್ತರು. ರನ್ ಪ್ರವಾಹದ ರೀತಿಯಲ್ಲಿ ಹರಿದು ಬರತೊಡಗಿತು. ಬೌಲ್ಟ್ ಅವರ ದ್ವಿತೀಯ ಓವರ್‌ನಲ್ಲಿ ಕಾನ್ವೆ 12 ರನ್ ಬಾರಿಸಿದರು. ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ 18 ರನ್ ಸೋರಿಹೋಯಿತು. ಮೊಯಿನ್ ಅಲಿ 3 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ಆರ್. ಅಶ್ವಿನ್ ಅವರ ಸ್ಪಿನ್ ಕೂಡ ನಡೆಯಲಿಲ್ಲ. ಅವರ ಮೊದಲ ಓವರ್‌ನಲ್ಲಿ ಬರೋಬ್ಬರಿ 16 ರನ್ ಬಂತು.
ಬೌಲ್ಟ್ ಅವರ 3ನೇ ಓವರ್‌ನಲ್ಲಂತೂ 26 ರನ್ ಸಿಡಿಯಲ್ಪಟ್ಟಿತು. ಎಲ್ಲವೂ ಅಲಿ ಬ್ಯಾಟ್‌ನಿಂದಲೇ ಬಂತು. ಮೊದಲ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದ ಅಲಿ, ಬಳಿಕ ಸತತ 5 ಬೌಂಡರಿ ಬಾರಿಸಿ ಮೆರೆದರು. 19 ಎಸೆತಗಳಲ್ಲಿ ಅವರ ಅರ್ಧಶತಕ ಪೂರ್ತಿಗೊಂಡಿತು. ಪವರ್ ಪ್ಲೇಯಲ್ಲಿ ಚೆನ್ನೈ ಒಂದಕ್ಕೆ 75 ರನ್ ಗಳಿಸಿ ಬೃಹತ್ ಮೊತ್ತದ ಸೂಚನೆ ನೀಡಿತು. ಕಾನ್ವೆ-ಅಲಿ ದ್ವಿತೀಯ ವಿಕೆಟಿಗೆ 6.3 ಓವರ್‌ಗಳಿಂದ 83 ರನ್ ಪೇರಿಸಿ ರಾಜಸ್ಥಾನವನ್ನು ನಡುಗಿಸಿದರು. ಆದರೆ ಇಲ್ಲಿಂದ ಮುಂದೆ ರಾಜಸ್ಥಾನ್ ಬೌಲರ್‌ಗಳ ಹಿಡಿತ ಬಿಗಿಗೊಂಡಿತು.
ಕಾನ್ವೆ ಬೆನ್ನಲ್ಲೇ ಜಗದೀಶನ್ (1), ಅಂಬಾಟಿ ರಾಯುಡು (3) ಪೆವಿಲಿಯನ್ ಸೇರಿಕೊಂಡರು. 10 ರನ್ ಅಂತರದಲ್ಲಿ 3 ವಿಕೆಟ್ ಬಿತ್ತು. 7ರಿಂದ 10ನೇ ಓವರ್ ಅವಧಿಯಲ್ಲಿ ಚೆನ್ನೈ ಗಳಿಸಿದ್ದು ಕೇವಲ 19 ರನ್. 15 ಓವರ್ ಮುಕ್ತಾಯಕ್ಕೆ 4ಕ್ಕೆ 117 ರನ್ನಷ್ಟೇ ಆಗಿತ್ತು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಅಲಿಗೆ ನಾಯಕ ಧೋನಿ ಜತೆಯಾದರು. ಆದರೆ ಆರಂಭದ ಅಬ್ಬರ ಕಂಡುಬರಲಿಲ್ಲ. ಅಲಿ ಹಾಗೂ ಚೆನ್ನೈಗೆ ಕಡಿವಾಣ ಹಾಕುವಲ್ಲಿ ರಾಜಸ್ಥಾನ್ ಬೌಲರ್ ಧಾರಾಳ ಯಶಸ್ಸು ಕಂಡಿದ್ದರು. 5ನೇ ವಿಕೆಟಿಗೆ 51 ರನ್ ಬಂತಾದರೂ ಇದಕ್ಕೆ 52 ಎಸೆತ ಬೇಕಾಯಿತು. ಅಲಿ ಹೊರತುಪಡಿಸಿದರೆ 26 ರನ್ ಮಾಡಿದ ಧೋನಿ ಅವರದೇ ಹೆಚ್ಚಿನ ಗಳಿಕೆ. ರಾಜಸ್ಥಾನ್ ಪರ ಮೆಕಾಯ್ ಮತ್ತು ಚಹಲ್ ಅಮೋಘ ದಾಳಿ ಸಂಘಟಿಸಿದರು.
ದುಬೆ ಬದಲು ರಾಯುಡು: ಎರಡೂ ತಂಡಗಳು ಒಂದೊಂದು ಬದಲಾವಣೆಯೊಂದಿಗೆ ಆಡಲಿಳಿದವು. ಚೆನ್ನೈ ಪರ ಅಂಬಾಟಿ ರಾಯುಡು ಅವಕಾಶ ಪಡೆದರು. ಶಿವಂ ದುಬೆ ಹೊರಗುಳಿದರು. ಕೆಕೆಆರ್ ಶಿಮ್ರಾನ್ ಹೆಟ್‌ಮೈರ್ ಅವರನ್ನು ಸೇರಿಸಿಕೊಂಡಿತು. ಇವರಿಗಾಗಿ ಜಾಗ ಬಿಟ್ಟವರು ಜಿಮ್ಮಿ ನೀಶಮ್.
ಸಂಕ್ಷಿಪ್ತ ಸ್ಕೋರ್: ಚೆನ್ನೈ ಕಿಂಗ್ಸ್ 20 ಓವರ್, 150/6 (ಮೊಯಿನ್ ಅಲಿ 93, ಚಹಲ್ 26ಕ್ಕೆ 2, ಒಬೆದ್ ಮೆಕಾಯ್ 20ಕ್ಕೆ 2). ರಾಜಸ್ಥಾನ್ 20 ಓವರ್, 19.4 ಓವರ್, 151/5 (ಜೈಸ್ವಾಲ್ 59, ಆರ್.ಅಶ್ವಿನ್ 40, ಪ್ರಶಾಂತ್ ಸೋಲಂಕಿ 20ಕ್ಕೆ 2)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.