ಪಂಜಾಬ್ ಪ್ಲೇ ಆಫ್ ಆಸೆಗೆ ಹೊಡೆತ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು
ಮಾಯಾಂಕ್ ಪಡೆ ಇಕ್ಕಟ್ಟಿನಲ್ಲಿ
Team Udayavani, May 7, 2022, 8:30 PM IST
ಮುಂಬೈ: ಆರಂಭಿಕ ಯಶಸ್ವಿ ಜೈಸ್ವಾಲ್ ಅವರ ತಾಳ್ಮೆಯ ಅರ್ಧಶತಕ ಹಾಗೂ ಬಟ್ಲರ್, ಪಡಿಕ್ಕಲ್ ಮತ್ತು ಹೆಟ್‌ಮೈರ್ ಅವರ ಸಮಯೋಚಿತ ಆಟದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.
ಈ ಗೆಲುವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಲಕ್ನೋ ಸಹ 14 ಅಂಕ ಪಡೆದಿದ್ದರೂ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಈ ಸೋಲಿನಿಂದಾಗಿ ಪಂಜಾಬ್ ಪ್ಲೇಆಫ್ಗೆ ತೇರ್ಗಡೆಯಾಗುವ ಅವಕಾಶ ಕ್ಷೀಣಿಸಿದೆ.
ಗೆಲ್ಲಲು 190 ರನ್ ಗಳಿಸುವ ಕಠಿಣ ಗುರಿ ಪಡೆದಿದ್ದ ರಾಜಸ್ಥಾನ್ ತಂಡವು ಯಶಸ್ವಿ ಜೈಸ್ವಾಲ್ ಅವರ ಬಿರುಸಿನ ಅರ್ಧಶತಕದಿಂದಾಗಿ ಸುಲಭವಾಗಿ ಗುರಿಯತ್ತ ಸಾಗಿತ್ತು. ಕೊನೆ ಹಂತದಲ್ಲಿ ಹೆಟ್‌ಮೈರ್ ಭರ್ಜರಿಯಾಗಿ ಆಡಿದ್ದರಿಂದ 19.4 ಓವರ್‌ಗಳಲ್ಲಿ ತಂಡವು 4 ವಿಕೆಟ್ ನಷ್ಟದಲ್ಲಿ ಜಯ ಸಾಧಿಸುವಂತಾಯಿತು. ಇದು ರನ್ ಚೇಸ್ ವೇಳೆ ರಾಜಸ್ಥಾನ್ ದಾಖಲಿಸಿದ ಮೊದಲ ಗೆಲುವು ಆಗಿದೆ. ಈ ಮೊದಲು ಜಾನಿ ಬೇರ್‌ಸ್ಟೋ ಅವರ ಅರ್ಧಶತಕದಿಂದಾಗಿ ಪಂಜಾಬ್ 5 ವಿಕೆಟಿಗೆ 189 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಯಶಸ್ವಿ ಜೈಸ್ವಾಲ್ ಯಶಸ್ವಿ
ಬಟ್ಲರ್ ಜತೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಭರ್ಜರಿ ಆಟದ ಮೂಲಕ ಯಶಸ್ವಿ ಪ್ರದರ್ಶನ ನೀಡಿದರು. ಬಟ್ಲರ್ 30 ರನ್ನಿಗೆ ಔಟಾದರೆ ನಾಯಕ ಸಂಜು ಸ್ಯಾಮ್ಸನ್ 23 ರನ್ ಗಳಿಸಿ ರಿಶಿ ಧವನ್‌ಗೆ ವಿಕೆಟ್ ಒಪ್ಪಿಸಿದರು. ಆಬಳಿಕ ಯಶಸ್ವಿ ಮತ್ತು ದೇವದತ್ತ ಪಡಿಕ್ಕಲ್ ಅವರು ಮೂರನೇ ವಿಕೆಟಿಗೆ 56 ರನ್ನುಗಳ ಜತೆಯಾಟ ನಡೆಸಿದರು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ ಅವರು ಅರ್ಷದೀಪ್‌ಗೆ ವಿಕೆಟ್ ಒಪ್ಪಿಸಿದರು. 41 ಎಸೆತ ಎದುರಿಸಿದ ಅವರು 68 ರನ್ ಹೊಡೆದರು. 9 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ಕೊನೆ ಹಂತದಲ್ಲಿ ಹೆಟ್‌ಮೈರ್ ಸಿಡಿದ ಕಾರಣ ತಂಡ ಸುಲಭ ಗೆಲುವು ಕಾಣುವಂತಾಯಿತು. ಹೆಟ್‌ಮೈರ್ 16 ಎಸೆತಗಳಿಂದ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಅಜೇಯರಾಗಿ ಉಳಿದರು.
ಬೇರ್‌ಸ್ಟೋ ಅರ್ಧಶತಕ
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ಜಾನಿ ಬೇರ್‌ಸ್ಟೋ ಆಕರ್ಷಕ ಅರ್ಧಶತಕ ಬಾರಿಸಿದರು. ಕೊನೆ ಹಂತದಲ್ಲಿ ಜಿತೇಶ್ ಶರ್ಮ ಸಿಡಿದ ಕಾರಣ ಪಂಜಾಬ್ ತಂಡವು ಉತ್ತಮ ಮೊತ್ತ ಪೇರಿಸುವಂತಾಯಿತು. ಬ್ಯಾಟಿಂಗ್ ಸವ್ಯಸಾಚಿ ಶಿಖರ್ ಧವನ್ ಈ ಪಂದ್ಯದಲ್ಲಿ ರನ್ ಗಳಿಸಲು ಒದ್ದಾಡಿದರು. ಆದರೆ ಬೇರ್‌ಸ್ಟೋ ಅಮೋಘವಾಗಿ ಆಡಿ ತಂಡದ ರನ್‌ವೇಗ ಹೆಚ್ಚಿಸಿದರು. 40 ಎಸೆತ ಎದುರಿಸಿದ ಬೇರ್‌ಸ್ಟೋ 56 ರನ್ ಗಳಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. 8 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು. ಇದು ಈ ಐಪಿಎಲ್‌ನಲ್ಲಿ ಬೇರ್‌ಸ್ಟೋ ಅವರ ಮೊದಲ ಅರ್ಧಶತಕ.
ಇನಿಂಗ್ಸ್‌ನ ಮಧ್ಯದಲ್ಲಿ ಪಂಜಾಬ್ ತಂಡವು ಚಹಲ್ ದಾಳಿಗೆ ಕುಸಿಯಿತು. 30 ರನ್ ಅಂತರದಲ್ಲಿ ತಂಡವು ಮೂರು ವಿಕೆಟ್ ಕಳೆದುಕೊಂಡಿತು. ಚಹಲ್ ಮಾರಕವಾಗಿ ಎರಗಿದ್ದರಿಂದ ಪಂಜಾಬ್‌ನ ರನ್‌ವೇಗಕ್ಕೆ ಕಡಿವಾಣ ಬಿತ್ತು. ಕೊನೆ ಹಂತದಲ್ಲಿ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮ ಸಿಡಿದ ಕಾರಣ ತಂಡದ ಮೊತ್ತ 180ರ ಗಡಿ ದಾಟಿತು. ಜಿತೇಶ್ ಕೇವಲ 18 ಎಸೆತಗಳಿಂದ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಔಟಾಗದೇ ಉಳಿದರು.
ಸದ್ಯ ಪರ್ಪಲ್ ಕ್ಯಾಪ್ ಹೊಂದಿರುವ ಚಹಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಹಾರಿಸಿದ್ದರು. ಆದರೆ ಈ ಪಂದ್ಯದಲ್ಲಿ ನಿಖರ ದಾಳಿ ಸಂಘಟಿಸಿ ಕೇವಲ 28 ರನ್ ನೀಡಿ 3 ವಿಕೆಟ್ ಉರುಳಿಸಿದರು. ಮೂರು ಎಸೆತಗಳ ಅಂತರದಲ್ಲಿ ಅವರು ಅಪಾಯಕಾರಿ ಆಟಗಾರರಾದ ಅಗರ್ವಾಲ್ ಮತ್ತು ಬೇರ್‌ಸ್ಟೋ ಅವರ ವಿಕೆಟನ್ನು ಕೆಡಹಿದ್ದರು.
ಸಂಕ್ಷಿಪ್ತ ಸ್ಕೋರು: ಪಂಜಾಬ್ 20 ಓವರ್, 189/5 (ಜಾನಿ ಬೇರ್‌ಸ್ಟೊ 56, ಜಿತೇಶ್ ಶರ್ಮ 38, ಚಹಲ್ 28ಕ್ಕೆ 3). ರಾಜಸ್ಥಾನ್ 19.4 ಓವರ್, 190/4 (ಯಶಸ್ವಿ ಜೈಸ್ವಾಲ್ 68, ಹೆಟ್‌ಮೈರ್ 31, ಅರ್ಷದೀಪ್ ಸಿಂಗ್ 29ಕ್ಕೆ 2).
ಸ್ಕೋರುಪಟ್ಟಿ
ಪಂಜಾಬ್ ಕಿಂಗ್ಸ್
ಜಾನಿ ಬೇರ್‌ಸ್ಟೋ ಎಲ್‌ಬಿಡಬ್ಲ್ಯು ಬಿ ಚಹಲ್ 56
ಶಿಖರ್ ಧವನ್ ಸಿ ಬಟ್ಲರ್ ಬಿ ಅಶ್ವಿನ್ 12
ಭನುಕ ರಾಜಪಕ್ಷ ಬಿ ಚಹಲ್ 27
ಅಗರ್ವಾಲ್ ಸಿ ಬಟ್ಲರ್ ಬಿ ಚಹಲ್ 15
ಜಿತೇಶ್ ಶರ್ಮ ಔಟಾಗದೆ 38
ಲಿಯಮ್ ಲಿವಿಂಗ್‌ಸ್ಟೋನ್ ಬಿ ಪ್ರಸಿದ್ಧ್ಕೃಷ್ಣ 22
ರಿಶಿ ಧವನ್ ಔಟಾಗದೆ 5
ಇತರ: 14
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 189
ವಿಕೆಟ್ ಪತನ: 1-47, 2-89, 3-118, 4-119, 5-169
ಬೌಲಿಂಗ್:
ಟ್ರೆಂಟ್ ಬೌಲ್ಟ್ 4-1-36-0
ಪ್ರಸಿದ್ಧ್ಕೃಷ್ಣ 4-0-48-1
ಕುಲದೀಪ್ ಸೆನ್ 4-0-42-0
ಆರ್. ಅಶ್ವಿನ್ 4-0-32-1
ಯಜುವೇಂದ್ರ ಚಹಲ್ 4-0-28-3
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್ ಸಿ ಲಿಯಮ್ ಬಿ ಅರ್ಷದೀಪ್ 68
ಜಾಸ್ ಬಟ್ಲರ್ ಸಿ ರಾಜಪಕ್ಷ ಬಿ ರಬಾಡ 30
ಸಂಜು ಸ್ಯಾಮ್ಸನ್ ಸಿ ಶಿಖರ್ ಬಿ ರಿಶಿ ಧವನ್ 23
ದೇವದತ್ತ ಪಡಿಕ್ಕಲ್ ಸಿ ಮಯಾಂಕ್ ಬಿ ಅರ್ಷದೀಪ್ 31
ಶಿಮ್ರನ್ ಹೆಟ್‌ಮೈರ್ ಔಟಾಗದೆ 31
ರಿಯಾನ್ ಪರಾಗ್ ಔಟಾಗದೆ 0
ಇತರ: 7
ಒಟ್ಟು (19.4 ಓವರ್‌ಗಳಲ್ಲಿ 4 ವಿಕೆಟಿಗೆ) 190
ವಿಕೆಟ್ ಪತನ: 1-46, 2-85, 3-141, 4-182
ಬೌಲಿಂಗ್:
ಸಂದೀಪ್ ಶರ್ಮ 4-0-41-0
ಕಾಗಿಸೊ ರಬಾಡ 4-0-50-1
ಅರ್ಷದೀಪ್ ಸಿಂಗ್ 4-0-29-2
ರಿಶಿ ಧವನ್ 3-0-25-1
ರಾಹುಲ್ ಚಹರ್ 3.4-0-39-0
ಲಿಯಮ್ ಲಿವಿಂಗ್‌ಸ್ಟೋನ್ 1-0-6-0
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.