ಯಾರಿದು… ರಾಜಸ್ಥಾನವನ್ನು ವಿನ್ ಮಾಡಿಸಿದ ಕುಲದೀಪ್ ಸೇನ್?
Team Udayavani, Apr 11, 2022, 11:04 PM IST
ಈ ಬಾರಿಯ ಐಪಿಎಲ್ ಪಂದ್ಯಾ ವಳಿ ಮತ್ತೋರ್ವ ಆಟಗಾರನನ್ನು ಮುನ್ನೆಲೆಗೆ ತಂದಿದೆ. ಅದು ರಾಜಸ್ಥಾನ್ ರಾಯಲ್ಸ್ನ ಮೀಡಿಯಂ ಪೇಸರ್ ಕುಲದೀಪ್ ಸೇನ್.
ರವಿವಾರ ರಾತ್ರಿ ಲಕ್ನೋ ವಿರುದ್ಧ ನಡೆದ ಥ್ರಿಲ್ಲಿಂಗ್ ಪಂದ್ಯದಲ್ಲಿ ಅಂತಿಮ ಓವರ್ ಎಸೆದ ಕುಲದೀಪ್ ಸೇನ್ ಅಮೋಘ ನಿಯಂತ್ರಣ ಸಾಧಿಸಿ ರಾಜಸ್ಥಾನ್ಗೆ 3 ರನ್ನುಗಳ ರೋಚಕ ಗೆಲುವು ತಂದಿತ್ತಿದ್ದರು.
ಅಂದಹಾಗೆ ಇದು ಕುಲದೀಪ್ ಸೇನ್ ಅವರ ಪದಾರ್ಪಣ ಐಪಿಎಲ್ ಪಂದ್ಯ ಎಂಬುದನ್ನು ಮರೆಯುವಂತಿಲ್ಲ. ನವದೀಪ್ ಸೈನಿ ಬದಲು ಆಡುವ ಅವಕಾಶ ಪಡೆದಿದ್ದರು.
ಆ ಓವರ್ನಲ್ಲಿ ರಾಜಸ್ಥಾನ್ ಜಯಕ್ಕೆ 15 ರನ್ ಆಗತ್ಯವಿತ್ತು. ಬಿಗ್ ಹಿಟ್ಟರ್ ಸ್ಟೋಯಿನಿಸ್ ಕ್ರೀಸ್ನಲ್ಲಿದ್ದುದರಿಂದ ಇದು ಅಸಾಧ್ಯವೇನೂ ಆಗಿರಲಿಲ್ಲ. ಸ್ಯಾಮ್ಸನ್ ಬೇರೆ ಆಲೋಚನೆ ಮಾಡದೆ ಸೇನ್ ಅವರನ್ನೇ ದಾಳಿಗೆ ಇಳಿಸಿದರು. 3 ಓವರ್ಗಳಲ್ಲಿ 24 ರನ್ ನೀಡಿದ ಸೇನ್, ದೀಪಕ್ ಹೂಡಾ ಅವರನ್ನು ಬೌಲ್ಡ್ ಮಾಡಿದ್ದರು.
ಸ್ಟೋಯಿನಿಸ್ಗೆ ಬ್ರೇಕ್!
ಮೊದಲ ಎಸೆತದಲ್ಲಿ ಆವೇಶ್ ಖಾನ್ ಸಿಂಗಲ್ ತೆಗೆದು ಸ್ಟೋಯಿನಿಸ್ಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಆದರೆ ಮುಂದಿನ 3 ಎಸೆತಗಳಲ್ಲಿ ಸ್ಟೋಯಿನಿಸ್ಗೆ ರನ್ನೇ ಗಳಿಸಲಾಗಲಿಲ್ಲ. ಸೇನ್ ಅಮೋಘ ನಿಯಂತ್ರಣ ಸಾಧಿಸಿದ್ದರು. ಆಗಲೇ ರಾಜಸ್ಥಾನ್ ಗೆಲುವು ಖಾತ್ರಿಯಾಗಿತ್ತು. ಏಕೆಂದರೆ ಕೊನೆಯ 2 ಎಸೆತಗಳಲ್ಲಿ 14 ರನ್ ತೆಗೆಯಲು ಸಾಧ್ಯವಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.