ಹುತಾತ್ಮ ಯೋಧರಿಗೆ ಅಕ್ಷರ ನಮನ
ಮತ್ತೆ ಹುಟ್ಟಿ ಬನ್ನಿ ಧೀರ ಯೋಧರೇ....
Team Udayavani, Jun 20, 2020, 12:07 PM IST
ಭಾರತಾಂಬೆಯ ರಕ್ಷಣೆಯ ಕಾರ್ಯದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಓದುಗರು ಉದಯವಾಣಿ ಕರೆಗೆ ಸ್ಪಂದಿಸಿ ಕಳುಹಿಸಿದ ಆಯ್ದ ನುಡಿನಮನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಭಾರತಮಾತೆಯ ಸೇವೆ ಮಾಡಿ ವೀರಮರಣವನ್ನಪ್ಪಿದ ರಕ್ಷಕರಿಗೆ ನನ್ನದೊಂದು ಸಲಾಂ. ನಿಮ್ಮ ಈ ಬಲಿದಾನವು ಮುಂದಿನ ಯುವಕರಿಗೆ ಒಂದು ಆದರ್ಶವಾಗಲಿ.
-ನಿಶಾಲ್ ಲೋಬೋ,ಕೋಮಿನಡ್ಕ
ಜೀವವನ್ನೇ ಪಣವಾಗಿಟ್ಟು ನಮ್ಮೆಲ್ಲರ ರಕ್ಷಕರಂತಿರುವ ಯೋಧರಿಗೆ ನಾವೆಲ್ಲರೂ ಚಿರರುಣಿಗಳು. ಚೀನ ಕುತಂತ್ರಕ್ಕೆ ವೀರ ಯೋಧರು ಹುತಾತ್ಮರಾಗಿದ್ದು ಬೇಸರದ ಸಂಗತಿಯಾಗಿದೆ.
-ಶ್ರದ್ಧಾ ಪೂಜಾರಿ, ಬೆದ್ರಲ್ಕೆ ತೆಳ್ಳಾರ್
ಹುತಾತ್ಮ ಯೋಧರು ಎಂದು ನಮ್ಮ ಮನದಲ್ಲಿ ಅಜರಾಮರ. ಯೋಧರ ಬಲಿದಾನ ವ್ಯರ್ಥವಾಗುದಿಲ್ಲ ಎಂದು ಪ್ರಧಾನಿ ಹೇಳಿ¨ªಾರೆ. ನಾವು ಚೀನ ವಸ್ತು ತಿರಸ್ಕರಿಸಿ ಕುತಂತ್ರಿ ದೇಶಕ್ಕೆ ಬುದ್ಧಿ ಕಲಿಸೋಣ.
-ಝುನೈಫ್, ಕೋಲ್ಪೆ
ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡುತ್ತಾರೆ, ಪ್ರಾಣ ತ್ಯಾಗ ಮಾಡು ತ್ತಾರೆ. ನಾವು ಅವರಿಗೆ ಯಾವ ರೀತಿ ನಮನ ಸಲ್ಲಿಸಿದರೂ ಕಡಿಮೇನೆ. ಇವರ ಬಲಿದಾನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
-ಮಂಜುನಾಥ ಭೀ ನಾವಿ
ಭಾರತದ ಗಡಿ ಪ್ರದೇಶದಲ್ಲಿ ನಿಶಸ್ತ್ರರಾಗಿ ವೈರಿಗಳೊಡನೆ ಹೋರಾಡಿ ವೀರ ಮರಣ ಹೊಂದಿದ ನಮ್ಮ ಯೋಧರು ಅಸಾಮಾನ್ಯರು. ಅಗಲಿದ ಚೇತನಗಳಿಗೆ ಅಂತರಾಳದ ನಮನಗಳು.
-ರಾಜಾರಾಮ ನೆಲ್ಲಿತ್ತಾಯ, ಬಲ್ನಾಡು
ನಮ್ಮ ಯೋಧರ ಬಗ್ಗೆ ನಿಜವಾಗಿಯೂ ಹೆಮ್ಮೆಯಿದ್ದರೆ ಚೀನದ ವಸ್ತು ಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು. ಆಗ ಮಾತ್ರ ನಾವು ಯೋಧರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ.
-ರಾಜೇಂದ್ರ ಕುಮಾರ್ ಜೈನ್,ಉಜಿರೆ
ಚೀನ-ಭಾರತ ಪರಸ್ಪರ ಶಾಂತಿ ಮಾತುಕತೆಯ ಒಪ್ಪಂದವಾಗಿದ್ದರೆ ಭಾರತದ ಯೋಧರನ್ನು ಚೀನ ಯಾಕೆ ಹತ್ಯೆಗೈಯಿತು? ಹಾಗೆಯೇ ಚೀನದ ವಸ್ತುಗಳನ್ನು ಬಹಿ ಷ್ಕರಿಸುವ ಮುಖಾಂತರ ಹುತಾತ್ಮ ವೀರ ಯೋಧರಿಗೆ ಕಂಬನಿ ಮಿಡಿಯೋಣ.
-ಸೂರ್ಯಕಾಂತ್ ಶೆಟ್ಟಿ, ಪೊಳಲಿ
ದೇಶಕ್ಕಾಗಿ ಹೋರಾಡಿ ಉಸಿರು ಚೆಲ್ಲಿದ ಅನಂತರ ತಿರಂಗವನ್ನೇ ಹೊದ್ದು ಮಲಗುವ ಯೋಧರಿಗೆ ಸಾವಿರ ಸಲಾಂ ಹೇಳಿದರೂ ಸಾಲದು. ಅವರನ್ನು ನಂಬಿದ ಕುಟುಂಬದ ಕಂಬನಿ ಒರೆಯುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಶ್ರದ್ಧೆ ನಮ್ಮದಾಗಲಿ.
-ಎಂ.ಕೆ. ಕನ್ಯಾಡಿ, ಧರ್ಮಸ್ಥಳ
ನಮ್ಮ ಜೀವಗಳಿಗೆ ನಿಮ್ಮ ಜೀವನವನ್ನೇ ಮುಡಿಪಾಗಿಟ್ಟ ಕರ್ತವ್ಯ ಪದಗಳಿಗೆ ನಿಲುಕದ್ದು. ನಮ್ಮ ಪ್ರತಿ ಉಸಿರಿನ ಹಿಂದೆ ನಿಮ್ಮ ಶ್ರಮವಿದೆ. ದೇಶಕ್ಕಾಗಿ ನಿಮ್ಮ ತ್ಯಾಗಕ್ಕೆ ಹೃದಯಪೂರ್ವಕ ಸಲಾಂ ಸಹೋದರರೆ.
-ದಿವ್ಯಾಶ್ರೀ ರೈ, ತ್ಯಾಗರಾಜನಗರ
ಭಾರತಮಾತೆಯ ಓ ವೀರಪುತ್ರ ರತ್ನಗಳೇ, ಮತ್ತೂಮ್ಮೆ ಹುಟ್ಟಿಬನ್ನಿ ಈ ತಾಯಿ ಮಡಿಲಿಗೆ. ವ್ಯರ್ಥವಾಗಲು ಬಿಡೆವು ನಿಮ್ಮಿà ಬಲಿದಾನ ಕೊಡುಗೆ. ಪಣ ತೊಡುವೆವಿಂದೇ ಬಹಿಷ್ಕಾರ ಚೀನೀ ವಸ್ತುಗಳಿಗೆ.
-ಶುಭಲಕ್ಷ್ಮೀ ಶಿವಗಿರಿ, ಮಾಣಿ
ನಮ್ಮೆಲ್ಲರನ್ನು ಭಾರತ ಮಾತೆಯ ರಕ್ಷಣೆಯಲ್ಲಿಟ್ಟ ನಮ್ಮ ಬಾಳಿನ ರಕ್ಷಕರಿಗೆ ನಾವೆಂದಿಗೂ ಚಿರಋಣಿ. ದೇಶಕ್ಕಾಗಿ ಗಡಿಭಾಗದಲ್ಲಿ ಚಳಿಗಾಳಿಯನ್ನು ಲೆಕ್ಕಿಸದೇ ಹುತಾತ್ಮರಾದ ನಿಮಗಿದೋ ಕೋಟಿ ಗೌರವ ನುಡಿನಮನ.
-ಚೇತನ್, ಪೇರಿಂಜೆ
ಗಾಳಿ- ಮಳೆ- ಬಿಸಿಲು ಚಳಿಯ ಬದಿಗೆ ಸರಿಸಿ, ದೇಶ ಭಕ್ತಿಯೊಂದನ್ನೇ ಉಸಿರಾಗಿಸಿ, ಎಲ್ಲೆ ಮೀರಿದ ಎದುರಾಳಿಗಳ ಎದೆಯ ಸೀಳಿ ಹೊಸ ಇತಿಹಾಸ ಸೃಷ್ಟಿಗೆ ನಾಂದಿ ಹಾಡಿ ವೀರ ಸ್ವರ್ಗವನ್ನಪ್ಪಿದ ವೀರ ಸೇನಾನಿಗಳೇ ನಿಮಗಿದೋ ನಮ್ಮ ನಮನ.
-ಭಾರ್ಗವಿ, ಉಜಿರೆ
ನಮ್ಮ ದೇಶವನ್ನು ಹಗಲು-ರಾತ್ರಿ, ಮಳೆ – ಬಿಸಿಲು, ಚಳಿ-ಗಾಳಿಗೆ ಎದೆಗುಂದದೆ ಹೋರಾಡಿ ನಮ್ಮನ್ನು ರಕ್ಷಿಸುವ ಸಲುವಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಮನದಾಳದ ನಮನ.
-ಪವನ್‌ರಾಜ್, ವೀರಕಂಭ
ದೇಶವನ್ನು ರಕ್ಷಿಸಿ ನಮಗಾಗಿ ಹುತಾತ್ಮರಾದ ಯೋಧರಿಗೆ ನನ್ನದೊಂದು ಸಲಾಂ. ಚೀನ ಕುತಂತ್ರವರಿತು ಅದರ ಆರ್ಥಿಕ ಭದ್ರತೆಗೆ ನಾವೇ ಬುನಾದಿಯಾಗದೆ ಚೀನ ವಸ್ತುವನ್ನು ಬಹಿಷ್ಕರಿಸೋಣ.
ಜ್ಯೋತಿಶ್ರೀ, ಮಾವಿನಕಟ್ಟೆ
ನಿಮ್ಮ ವೀರ ಮರಣ ತಾಯಿ ಭಾರತಿಯನ್ನು ರಕ್ಷಣೆ ಮಾಡಿದೆ. ನಿಮಗೆ ನಮ್ಮ ನಮನಗಳು. ನಿಮ್ಮ ತ್ಯಾಗ ವ್ಯರ್ಥವಾಗದು. ಇತಿಹಾಸದ ಕಾಲಗರ್ಭದಲ್ಲಿ ನಿಮ್ಮ ಹೆಸರು ಸ್ಥಿರವಾಗಿ ನಿಲ್ಲಲಿ.
-ಬಿ. ಜಯರಾಮ ನೆಲ್ಲಿತ್ತಾಯ, ಧರ್ಮಸ್ಥಳ
ದೇಶದ ಗಡಿಯ ಕಾಯ್ವಿರಿ ಅವಿರತ, ಮರೆತು ಸಂಸಾರದ ಒಲವ ರಥ. ದೇಶವೇ ಎಲ್ಲ ಎಂಬ ಭಾವದಿ, ಹುತಾತ್ಮರಾಗುವಿರಿ ಮರೆಯದೆ ನವ ಮಾನಸದಿ. ಮೂಡಿಸುವುದು ಮನದಿ ಮತ್ತೆ ದೇಶ ಪ್ರೇಮವ, ನೀಡುವೆ ನಿಮಗೊಂದು ಭಾವ ಪೂರ್ಣ, ಗೌರವಯುತ ನುಡಿ ನಮನವ.
-ಜಯರಾಮ ಮಯ್ಯ, ಧರ್ಮಸ್ಥಳ
ನಮ್ಮ ಉಸಿರಿರುವುದು ವೀರ ಯೋಧರ ಉಸಿರಿನಿಂದ ಎಂದರೆ ತಪ್ಪಾಗದು. ಚೀನದ ಕುತಂತ್ರದಿಂದಾಗಿ ಮಡಿದ ಯೋಧರಿಗೆ ಕೋಟಿ ನಮನಗಳು. ಮತ್ತೂಮ್ಮೆ ತಾಯಿ ಭಾರತಿಯ ಪುಣ್ಯ ಮಡಿಲಲ್ಲಿ ಜನಿಸಿ ಬನ್ನಿ.
-ಸೌಜನ್ಯಾ, ಪುತ್ತೂರು
ತಾಯಿ ನಾಡಿನ ರಕ್ಷಣೆಗೆ ಪಣತೊಟ್ಟು ಕರ್ತವ್ಯದ ಕರೆಗೆ ಓಗೊಟ್ಟು ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ಹೃದಯ ತುಂಬಿದ ಕಂಬನಿ. ಮತ್ತೆ ಹುಟ್ಟಿ ಬನ್ನಿ.
-ಮಂಜುನಾಥ ಕುಂಬ್ಳೆ, ಗುರುವಾಯನಕೆರೆ
ಮಡಿದ ವೀರ ಪುತ್ರರಿಗೆ ವೀರ ಸ್ವರ್ಗ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಚೀನದ ವಸ್ತುಗಳನ್ನು ಬಹಿಷ್ಕರಿಸಿ ಸ್ವಾವಲಂಬಿಗಳಾಗುವಲ್ಲಿ ದಿಟ್ಟ ಹೆಜ್ಜೆ ಇಡೋಣ.
-ರಾಧಾಕೃಷ್ಣ ರೈ., ತುಂಡುಬೈಲು
ಜಗತ್ತು ಕೊರೊನಾ ದಿಂದ ಕಂಗಾಲಾಗಿರುವ ಸಂದರ್ಭದಲ್ಲಿ ಚೀನ ದೇಶದ ಸೈನಿಕರು ಗಡಿಯಲ್ಲಿ ಚಿತ್ರಹಿಂಸೆಯ ರೀತಿಯಲ್ಲಿ ಭಾರತಿಯರ ಯೊಧರನ್ನು ವಧೆ ಮಾಡಿದ್ದು ನಿಜವಾಗಿಯೂ ಅಪರಾಧ. ಹೇಯ ಕೃತ್ಯ. ಮಡಿದ ನಮ್ಮ ಯೋಧರಿಗೆ ಕೋಟಿ ಕೋಟಿ ಶ್ರದ್ಧಾಂಜಲಿ ಭಾರತೀಯರ ಪರವಾಗಿ ಸಲ್ಲಿಸುತ್ತೇನೆ.
-ಕೆ. ಸದಾಶಿವ, ಧರ್ಮಸ್ಥಳ
ಭಾರತದ ನಾಗರಿಕರಾಗಿ ನಾವು, ಚೀನೀ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಕೆಂಪು ರಾಷ್ಟ್ರದ ಹುಟ್ಟಡಗಿಸಬಹುದಾಗಿದೆ. ಆ ಮೂಲಕ ಮಡಿದ ಸೇನಾನಿಗಳಿಗೆ ನಿಜವಾದ ಶ್ರದ್ಧಾಂಜಲಿ ಸಮರ್ಪಿಸಬಹುದು.
-ಸುದೀಪ್ ಶೆಟ್ಟಿ, ಪೇರಮೊಗ್ರು
ಭಾರತ ಮಾತೆಯ ಮುಕುಟದಲ್ಲಿ ಮಾಣಿಕ್ಯದ ಹೂವಾಗಿ ಅರಳಿದ ನಮ್ಮ ಯೋಧರು ತಾಯ್ನಾಡಿನ ಹಿತರಕ್ಷಣೆಗಾಗಿ ತಮ್ಮ ನ್ನು ತಾವೇ ತೊಡಗಿಸಿ, ಇಂದು ಕೆಲವು ವೀರಯೋಧರು ತಾಯಿ ಭಾರತಾಂಬೆಯ ಪಾದ ಚರಣಕ್ಕೆ ತಮ್ಮುಸಿರನ್ನು ಎರಗಿದ್ದಾರೆ.
-ಶ್ರದ್ಧಾ ಶ್ರೀ ಜೆ.ಎಸ್., ಜಯನಗರ (ಸುಳ್ಯ)
ವಿನಾಶ ಕಾಲೇ ವಿಪರೀತ ಬುದ್ಧಿ. ಕೋವಿಡ್ – 19 ಸೃಷ್ಟಿ, ಇದೀಗಯೋಧರ ಮೇಲೆ ದಾಳಿ.ವಿಶ್ವವೇ ಅವರನ್ನು ನೆಲಸಮ ಮಾಡುವ ದಿನ ದೂರವಿಲ್ಲ. ಆಗ ನಿಮ್ಮ ಈ ತ್ಯಾಗಕ್ಕೆ ಅಮೂಲ್ಯ ಬೆಲೆ ಸಿಗುತ್ತದೆ.
-ದೇವದಾಸ್ ಬೈಕಂಪಾಡಿ, ಪಣಂಬೂರು
ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರ ಕುರಿತು ಹೆಮ್ಮೆ ಪಡುತ್ತಿರುವ ಅವರ ಹೆತ್ತವರನ್ನು ನೋಡಿ ಹೆಮ್ಮೆಯಾಗುತ್ತಿದೆ. ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿ
ರುವ, ಹುತಾತ್ಮರಾದ ಯೋಧರಿಗೆ ಚಿರಋಣಿ.
-ಪ್ರತೀಕ್ಷಾ ಪೈ, ಬೆಳುವಾಯಿ
ನಮ್ಮ ಹೆಮ್ಮೆಯ ಯೋಧರಿಗೆ ವೀರ ಸ್ವರ್ಗ ಪ್ರಾಪ್ತಿಯಾಗಲಿ. ದೇಶ ತಮ್ಮ ತ್ಯಾಗ, ಬಲಿದಾನವನ್ನು ಮರೆಯುವುದಿಲ್ಲ. ಈ ದೇಶದ ರಕ್ಷಣೆಗಾಗಿ ತಾಯಿ ಭಾರತಾಂಬೆಯ ಮಡಿಲಲ್ಲಿ ಮತ್ತೆ ಹುಟ್ಟಿ ಬನ್ನಿ.
-ರಂಜಿತ್ ಪೂಜಾರಿ , ಮುಕ್ಕ
ಭಾರತಾಂಬೆಯ ಮಡಿಲು ಸೇರಿದ ವೀರಯೋಧರಿಗೆ ನಮನ ಸಲ್ಲಿಸಬೇಕಾಗಿದೆ. ಮೇಣದಬತ್ತಿ ಹಚ್ಚುವುದರಿಂದ ಹುತಾತ್ಮ ರಿಗೆ ಶಾಂತಿ ಸಿಗುವುದಿಲ್ಲ. ಕಠಿನ ಕ್ರಮ ಕೈಗೊಳ್ಳಬೇಕು.
-ಸಂತೋಷ್ ಪಿ., ಅಳಿಯೂರು
ದೇಶಕ್ಕಾಗಿ ಗಡಿಯಲಿ ನೆತ್ತರು ಹರಿಸಿ ಪ್ರಾಣವ ಬಿಟ್ಟರು ಭಾರತಾಂಬೆಯ ಹೆಮ್ಮೆಯ ಪುತ್ರರು. ನಮ್ಮಿ ಈ ಸುಖ ನಿದ್ರೆಗೆ ಹಗಲಿರುಳು ಹೋರಾಡಿ ಅವರೆಲ್ಲ ಸಂತೋಷಗಳ ಬದಿಗೊತ್ತಿ ನಮ್ಮೆಲ್ಲರ ರಕ್ಷಣೆಗೆ ಸಿದ್ಧರಾದರು. ನನ್ನೆಲ್ಲ ನೆಚ್ಚಿನ ವೀರರಿಗೂ ನನ್ನದೊಂದು ಸಲಾಮ್.
-ಕಾವ್ಯಾ, ಮಲಾರಬೀಡು
ಹಗಲಿರುಳು ನಿದ್ದೆ ಬಿಟ್ಟು ಗಡಿ ಕಾಯುತ್ತಾ ನಮ್ಮನ್ನು ಇತರ ರಾಷ್ಟ್ರಗಳ ಶತ್ರುಗಳಿಂದ ರಕ್ಷಿಸುತ್ತಾ ಇರುತ್ತಾರೆ. ನಮ್ಮ ಯೋಧರು ನಮಗಾಗಿ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಇವರಿಗೆ ನಮ್ಮೆಲ್ಲರ ಹೃತೂರ್ವಕ ನಮನ.
-ಆಶ್ರಿತಾ ರೈ, ತೊಕ್ಕೊಟ್ಟು
ತಾಯಿ ಭಾರತಾಂಬೆಯ ರಕ್ಷಣೆಗೆ, ಜೀವತೆತ್ತ ವೀರ ಪುತ್ರರೇ…. ಭಾಷ್ಪಾಂಜಲಿಯ ಧನ್ಯವಾದಗಳೊಂದಿಗೆ, ಮರೆಯಲಾರೆವು ಈ ಋಣದ ಹೊರೆ…
-ಪರಿಕ್ಷಿತ್ ಜೈನ್, ಮೂಡುಬಿದಿರೆ
ಭಾರತಾಂಬೆಯ ವೀರ ಕುವರರೇ ತಾಯ್ನಾಡನು ಹಗಲಿರುಳು ಪೊರೆಯಲು ಅರಿಗಳ ಶಿರವ ತರಿದು ಧರೆಗುರುಳಿಸಿ ವೀರಸ್ವರ್ಗವನು ಪಡೆದ ತಮಗಿದೋ
ಭಾಷ್ಪಾಂಜಲಿ – ನಮನಾಂಜಲಿ
-ಉದಯ ಶೆಟ್ಟಿ, ಪಂಜಿಮಾರು
ಹೇ ಯೋಧಾ… ನೀ ಅಲ್ಲಿರುವರೆಗೆ ನಾನಿಲ್ಲಿ ಸುರಕ್ಷಿತ… ನಿನ್ನ ಮುಂದೆ ಶತ್ರು ಇರಲಿ ಇಲ್ಲದಿರಲಿ ನೀನು ಬೆನ್ನ ಹಿಂದೆ 136 ಕೋಟಿ ಭಾರತೀಯರನ್ನು ಬಚ್ಚಿಟ್ಟುಕೊಂಡಿರುವೆ. ನೀನು ನನ್ನ ಅಭಿಮಾನದ ಸಂಕೇತ.
-ಯೋಗಿಶ್, ಕಾವೂರು
ಪುರಾಣ ಕಾಲದಲ್ಲಿ ಋಷಿ ಮುನಿಗಳು ಭೌತಿಕ ಸುಖಗಳೆಲ್ಲವನ್ನು ತ್ಯಜಿಸಿ ತಪಸ್ಸು ಗೈಯುತ್ತಿದ್ದರು. ಕಲಿಯುಗದಲ್ಲಿ ಯೋಧರ ಸೇವೆಯು ಇದಕ್ಕಿಂತ ಭಿನ್ನವಾಗಿಲ್ಲ. ಮಡದಿ, ಮಕ್ಕಳು, ಮನೆಮಂದಿ, ಪ್ರೀತಿ ಪಾತ್ರ ರೆಲ್ಲರನ್ನು ಬಿಟ್ಟು ಸಂಕೀರ್ಣ ಪ್ರತಿಕೂಲ ಪರಿಸ್ಥಿತಿಯಲ್ಲಿ ದೇಶ ರಕ್ಷಣೆಯ ಪಣತೊಟ್ಟು ಹೋರಾಡುತ್ತಿರುವ ವೀರ ಯೊಧರ ತ್ಯಾಗಕ್ಕೆ ಕೋಟ್ಯಂತರ ಕೈಗಳು ಸಲ್ಲಿಸುವ ಸಲಾಂ. ಮಹಾ ಸಾಗರಕ್ಕೆ ಸುರಿಯುವ ನೀರು ಹನಿ ಗಳಷ್ಟೇ, ಭವಿಷ್ಯದಲ್ಲಿ ಭಾರತ ನಿತ್ಯ ವಿಜಯ ಪತಾಕೆ ಹಾರಿಸಲಿ.
-ಯತೀಶ್ ಗೌಡ, ಶಿಶಿಲ ಧರ್ಮಸ್ಥಳ
ಚೀನದ ಅಗ್ಗದ ಸಾಮಗ್ರಿಗಳಿಗೆ, ಮೊಬೈಲ್ ಆ್ಯಪ್‌ಗ್ಳಿಗೆ ತಿಲಾಂಜಲಿ ನೀಡುತ ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡುತ ನಮ್ಮ ಪುಟ್ಟ ಸೇವೆಯಾದರೂ ನೀಡೋಣ. ಭಾರತದ ಕಲಿಗಳೇ ನಿಮಗಿದೋ ವಂದನೆ.
-ವಿಜಯಲಕ್ಷ್ಮೀ, ಬಂಟ್ವಾಳ
ಬಾನೆತ್ತರ ಹಾರುತಿರುವ ಧ್ವಜಕ್ಕೆ ಎದೆಯುಬ್ಬಿಸಿ ನಮಿಸಿದೆ. ಇಂದು ಹಾರುತಿದೆ ಧ್ವಜವು ಬಾನೆತ್ತರ. ರಾಷ್ಟ್ರರಕ್ಷಣೆಗೆ ರುಧಿರ ಚೆಲ್ಲಿ ಎದೆಯುಬ್ಬಿಸಿ ಧ್ವಜವ ಹೊತ್ತು ನಿಶ್ಚಲವಾಗಿ ಮಲಗಿದೆ ಇಂದು. ತಾಯಿ ಭಾರತೀ ಬಂಜೆಯಲ್ಲ ಮತ್ತೇ ಹುಟ್ಟಿ ಬರುವಿರೆಂದು.. ನಿಮಗಿದೋ ನಮನಗಳು.
-ಹರೀಶ, ಕಡಬ
ತಂದೆ, ತಾಯಿ, ಪತ್ನಿ, ಮಕ್ಕಳು, ಬಂಧು ಬಳಗ ಎಲ್ಲವನ್ನೂ ತ್ಯಾಗ ಮಾಡಿ, ದೇಶಕ್ಕಾಗಿ ತಂತಿ, ಮೊಳೆ, ಮರದ ತುಂಡುಗಳಿಂದ ಹಿಂಸೆ ಅನುಭವಿಸಿ ಜೀವವನ್ನೇ ಮುಡಿಪಾಗಿಟ್ಟ ವೀರ ಯೋಧರೆ ನಿಮಗಿದೋ ನಮನ.
-ಡಯಾನಾ ಡಿ’ಸೋಜಾ, ಮೊಡಂಕಾಪು
ಶಾಂತಿಯ ಮಂತ್ರ ಜಪಿಸುತ್ತಾ ಗಡಿಯಲ್ಲಿ ಅಶಾಂತಿಯನ್ನು ನಿರ್ಮಿಸಿದ ವೈರಿಗಳ ಹುಟ್ಟನ್ನು ಅಡಗಿಸಲು ಕೆಚ್ಚೆದೆಯಿಂದ ಹೋರಾಡಿ ಭಾರತಮಾತೆಯ ಮಡಿಲಲ್ಲಿ ಲೀನರಾದ ನಮ್ಮ ಯೋಧರಿಗೆ ನುಡಿ ನಮನಗಳು.
-ಮೋಹನ್ ಗೌಡ ಜಿ.ಕೆ. ಮಿರ್ಜಾ
ಭಾರತೀಯರ ರಕ್ಷಣೆಯ ಹೊಣೆ ಹೊತ್ತು ಚೀನೀಯರ ದಾಳಿಗೆ ದಿಟ್ಟತನದಿಂದ ಹೋರಾಡಿದ ಧೀರ ಯೋಧರೆ ನೀವು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವಿರಿ. ನಿಮ್ಮಂತಹ ವೀರರು ಇನ್ನೂ ಹುಟ್ಟಿ ಬರಲಿ.
-ಪ್ರಣಾಮ್, ಕೊಡಿಂಬಾಳ
ತಂದೆ-ತಾಯಿ, ಬಂಧುಬಳಗ ಊರಲ್ಲಿ… ನೀವು ಮಾತ್ರ ದೇಶದ ಗಡಿಯಲ್ಲಿ. ಭಾರ ತಾಂಬೆಯ ಸೇವೆಗೆ ಶತ್ರುಗಳ ಸದೆಬಡಿದಿರಿ, ದೇಶಕ್ಕಾಗಿ ಪ್ರಾಣವನ್ನೇ ತೆತ್ತಿರಿ. ನಮ್ಮ ನೆಲದ ರಕ್ಷಣೆಗಾಗಿ ಹೋರಾಡಿದ, ಹೋರಾ ಡುತ್ತಿರುವ ನಿಮಗೊಂದು ಸಲಾಂ.
-ಭಾಗ್ಯಶ್ರೀ ರೈ, ಪುತ್ತೂರು
ಚೀನದ ಕುತಂತ್ರಕ್ಕೆ ಮಣ್ಣು ಮುಕ್ಕಿಸಿ, ಶತ್ರುಗಳನ್ನು ಸದೆಬಡಿದು ಭಾರತ ಮಾತೆಯ ಮಡಿಲಲ್ಲಿ ಹುತಾತ್ಮರಾಗಿ ರುವ ನಿಮ್ಮ ಹೆಸರು ಇತಿಹಾಸದ ಪುಟಗಳಲ್ಲಿ ಅಜರಾಮರ.
-ಸಚಿನ್, ಕಂಬಳಬೆಟ್ಟು
ಇಡೀ ದೇಶ ನನ್ನ ಕುಟುಂಬ ಎನ್ನುತ್ತಾ ನಿಸ್ವಾರ್ಥ ಸೇವೆ ಮಾಡುತ್ತಿರುವ ಹೆಮ್ಮೆಯ ವೀರ ಯೋಧರೇ ನಿಮಗಿದೋ ನನ್ನ ಹೃದಯಾಂತರಾಳದಿ ಸಲಾಂ ಹೇಳುತಿರುವೆ.
-ಹರ್ಷಿತ್ ಕುಮಾರ್, ಈಶ್ವರಮಂಗಲ
ಯೋಧರಿಗೆ ನಮ್ಮ ಕಣ್ಣೀರು, ಒಂದು ಕ್ಷಣದ ಮೌನ, ಉಳಿತಾಯದಲ್ಲೊಂದು ಕಾಸು, ಪ್ರಾರ್ಥನೆಯಲ್ಲೊಂದು ಪಾಲು, ಹಾರೈಕೆಯಲ್ಲೊಂದು ಸಾಲು, ಹುತಾತ್ಮರಾದ ಹೆಮ್ಮೆಯ ಯೋಧರಿಗೊಂದು ಸಲಾಂ.
-ಅಖೀಲಾ, ಸಾಲೆತ್ತೂರು
ಭಾರತ ಮಾತೆಯ ರಕ್ಷಣೆಯಲ್ಲಿ ತೊಡಗಿರುವ ವೀರ ಪುತ್ರರಿಗೆ ಧೈರ್ಯವನ್ನು ತುಂಬಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಚೀನ ತಯಾರಿಸಿದ ವಸ್ತುಗಳನ್ನು ಬಹಿಷ್ಕರಿ ಸುವುದೇ ಯೋಧರ ಬಲಿದಾನಕ್ಕೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
-ಗೀತಾ ಆರ್.,ಅನಂತಾಡಿ
ನಮ್ಮ ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಮ್ಮ ಯೋಧರ ಕುಟುಂಬಕ್ಕೆ ಸರಕಾರ ಅವರ ಬಲಿದಾನಕ್ಕೆ ತಕ್ಕ ಪ್ರತಿಫಲ, ಕುಟುಂಬಕ್ಕೆ ಶಕ್ತಿ ನೀಡಲಿ. ನಮ್ಮ ವೀರ ಯೋಧರಿಗೆ ಸಲಾಂ.
-ಅಚ್ಯುತ, ಬಂಟ್ವಾಳ
ಭಾರತೀಯರ ಸುಖನಿದ್ರೆಗಾಗಿ ಚಿರನಿದ್ರೆಗೆ ಜಾರಿದ ನಮ್ಮ ಯೊಧರಿಗೆ ಹೃದಯಾಳದ ಶ್ರದ್ಧಾಂಜಲಿ. ಮತ್ತೆ ಭಾರತಾಂಬೆಯ ಮಗನಾಗಿ ಹುಟ್ಟಿ ಬನ್ನಿ.
-ಶ್ರೀಜನಿ ಎಸ್.ಆರ್., ಸುಬ್ರಹ್ಮಣ್ಯ
ಭಾರತೀಯ ಯೋಧರ ಬಲಿದಾನಕ್ಕೆ ಬೆಲೆ ಕಟ್ಟಲು ಅಸಾಧ್ಯ. ಸಾವು ನೋವುಗಳು ಕಣ್ಣಿಗೆ ಕಟ್ಟುವಂತಿದ್ದರೂ ಮುನ್ನುಗ್ಗುವ ನಮ್ಮ ಯೋಧರ ಸಾಹಸ ಮನೋಸ್ಥೈರ್ಯವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ.
-ಶ್ಯಾಮಸುಂದರ ಪಾಣಾಜೆ, ವಿಟ್ಲ
ವೀರ ಯೋಧರ ತ್ಯಾಗ ವ್ಯರ್ಥ ವಾಗಬಾರದು. ಕಾನೂನಿಗೆ ಗೌರವ ಕೊಟ್ಟು, ನಿರಾಯುಧರಾಗಿ ಮುನ್ನುಗ್ಗಿ, ಚೀನ ಸೈನಿಕರನ್ನು ಎದುರಿಸಿದ ಭಾರತದ ವೀರ ಯೋಧರ ಎದೆಗಾರಿಕೆ ಸಲಾಂ.
-ಸುಧಾಕರ ಸಾಲ್ಯಾನ್, ಬಂಟ್ವಾಳ
ಭಾರತದ ಪ್ರಜೆಗಳಾದ ನಾವೆಲ್ಲ ಈಗ ಚೀನದ ಜತೆಗೆ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಚೀನದ ಆರ್ಥಿಕತೆಯನ್ನು ಕುಗ್ಗಿಸಬೇಕು.
-ಪಾರ್ಶ್ವನಾಥ ಹೆಗ್ಡೆ, ಉಜಿರೆ
ಪ್ರೀತಿಯ ಮಕ್ಕಳು, ಪೊರೆವ ತಾಯಿ, ಕೈ ಹಿಡಿದ ಮಡದಿಯ ತೊರೆದು ಸರ್ವರಿಗೂ ರಕ್ಷಣೆ ನೀಡುತ್ತಿರುವ ನಿಮಗಿದೋ ಹೃದಯ ತುಂಬಿದ ನಮನ. ನಮಗಾಗಿ ಹೋರಾಡಿದ ಯೋಧರೇ ನಿಮಗೆ ಕಣ್ಣೀರ ಅರ್ಪಣೆ.
-ನಾರಾಯಣ, ಪುತ್ತೂರು
ಚೀನೀ ಸೈನಿಕರ ಸಂಖ್ಯೆಗಿಂತ ನಮ್ಮ ಯೋಧರ ಸಂಖ್ಯಾಬಲ ಕಡಿಮೆ ಇದೆ ಎಂದು ಕುಗ್ಗಬೇಡಿ, ತಾಯಿ ಭಾರತಾಂಬೆಯ ಸೇವೆಗೆಂದು ಹೊರಟವರು. ಸರಕಾರದ ಆಜ್ಞೆಗೆ ಶತ್ರು ಸೈನ್ಯದ ವಿರುದ್ಧ ಮುನ್ನುಗ್ಗಿ. ಜಯವಿದೆ.
-ಸುನಿಲ್ ಕುಲಾಲ್, ಉಪ್ಪಿನಂಗಡಿ
ದೇಶ ಸೇವೆಯೆಂಬ ಲಾಂಛನವನ್ನು ಹೊತ್ತು, ಭಾರತ ಮಾತೆಯ ರಕ್ಷಣೆಯ ಹೊಣೆಯನ್ನು ನಿಲುವಾಗಿ ಇಟ್ಟುಕೊಂಡು ಆ ತಾಯಿಯ ಸೇವೆಗಾಗಿ ನಿಂತ ವೀರ ಯೋಧರಿಗೆ ನನ್ನದೊಂದು ಸಲಾಂ.
-ತಿಲಕ್ ಟಿ., ಪುತ್ತೂರು
ಭಾರತ ಮಾತೆಯ ಮಡಿಲಲ್ಲಿ ಹುಟ್ಟಿ, ದೇಶವೇ ತನ್ನುಸಿರು ಎಂದು ಎದುರಾಳಿಗಳ ಹುಟ್ಟು ಅಡಗಿಸಿ, ತಮ್ಮ ತೋಳ್ಬದಲ್ಲಿ ಚೀನೀಯರ ಕುತಂತ್ರಕ್ಕೆ ಬಲಿಯಾದ ವೀರ ಯೋಧರಿಗೆ ನಮೋನಮಃ .
-ಚಂದ್ರಹಾಸ್ ಶೆಟ್ಟಿ, ಮಾಣಿ
ಜಾತಿ, ಧರ್ಮ, ಭಾಷೆ ಇದ್ಯಾವುದೇ ಹಂಗಿಲ್ಲ. ಮನೆಯವರ ಚಿಂತೆ ಇಲ್ಲದೇ ದೇಶದ ರಕ್ಷಣೆಗಾಗಿ ಚೀನದ ರಕ್ಕಸರೆದುರು ಹೋರಾಡಿ ದೇಶಕ್ಕಾಗಿ ಪ್ರಾಣ ಬಿಟ್ಟ ನಮ್ಮ ಯೋಧರೇ ನಿಮಗಿದು ನಮ್ಮ ಸಲಾಂ.
-ಮುಸ್ತಾಫಾ ಒರೋಡಿ, ಕಡಬ
ಪ್ರಾಣವನ್ನು ಪಣಕ್ಕಿಟ್ಟು ಹೋರಾ ಡುತ್ತಿರುವ ಪ್ರತಿಯೊಬ್ಬ ಭಾರತೀಯ ಯೋಧನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ.
-ಸಂತೋಷ್ ಶೆಟ್ಟಿ, ಸರಪಾಡಿ
ಇಡೀ ದೇಶದ ಜನತೆಯೇ ತನ್ನ ಬಂಧು ಎಂದು ಭಾವಿಸಿ, ಕೊರೆಯುವ ಚಳಿಯಲ್ಲಿ ತಮ್ಮ ಜೀವದ ಹಂಗನ್ನೂ ತೊರೆದು ಹೋರಾಡುವ ಯೋಧರು ನಿಜವಾದ ಭಾರತಾಂಬೆಯ ಮಡಿಲಿನ ಮಕ್ಕಳು.
-ಪ್ರಜ್ಞಾ, ಮದ್ದಡ್ಕ
ಓ ಭಾರತಮಾತೆಯ ವೀರ ಪುತ್ರರೇ… ನೀವು ನಮಗೆಲ್ಲರಿಗೂ ಸ್ಫೂರ್ತಿ. ದುಃಖವಾಗುತ್ತಿದೆ, ನಿಮ್ಮ ವೀರ ಮರಣದ ವಾರ್ತೆಯನ್ನು ಕೇಳಿ. ಎದೆಯಾಂತರಾಳದಲ್ಲಿ ದೇಶ ಪ್ರೇಮದ ಕಾರಂಜಿ ಚಿಮ್ಮುತ್ತಿದೆ. ಕೊರೊನಾದಂತಹ ಭಯಾನಕ ಸ್ಥಿತಿ, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಹಿಮಗಿರಿಯ ಗಾಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣಕೊಟ್ಟ ನಿಮ್ಮ ಬಲಿದಾನ ವ್ಯರ್ಥವಾಗದು. ಎದೆಯೊಡ್ಡಿ ಪ್ರಾಣ ಕೊಟ್ಟ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ.
-ಪೂರ್ಣಿಮಾ, ಪೆರ್ಲಂಪಾಡಿ
ದೇಶ ಪ್ರೇಮದ ಅರಿವು ಬರಿದಿಟ್ಟ ಪುಸ್ತಕದಿಂದ ತಿಳಿಯಲಿಲ್ಲ.. ಅವರಿವರ ಮಾತಿನಿಂದ ಅರ್ಥವಾಗಲಿಲ್ಲ.. ಬದಲಿಗೆ ನಮ್ಮೆಲ್ಲರ ಸುರಕ್ಷತೆಗೆ ಗಡಿಯಲ್ಲಿ ನಿಂತ ನಿಮ್ಮ ದಿಟ್ಟ ನಿರ್ಧಾರದಲ್ಲಿದೆ ಭಾರತಾಂಬೆಯ ಅಸ್ತಿತ್ವ…
-ಯಶಸ್ವಿನಿ ಶಂಕರ್, ಮೂಲ್ಕಿ
ಅವನ ಬದುಕಿಗೂ ಒಂದು ಅರ್ಥವಿದೆ. ಅವನ ಸಾವಿಗೂ ಒಂದು ಅರ್ಥವಿದೆ. ಯಾಕೆಂದರೆ ಆತ ಯೋಧ.. ಆತ ತನ್ನ ಮನೆ, ಮನೆಯವರನ್ನು ಬಿಟ್ಟು ದೇಶ
ಸೇವೆಗೆ ನಿಂತವ..
-ಕೌಶಿಕ್ ಎಸ್., ಕುಳಾಯಿ
ನಮ್ಮ ಭವಿಷ್ಯಕ್ಕಾಗಿ, ನಿಮ್ಮ ವರ್ತ ಮಾನವನ್ನು ನೀಡಿದ್ದೀರಿ. ದೇಶಕ್ಕಾಗಿ ಶ್ರೇಷ್ಠ ಬಲಿದಾನ ಮಾಡಿದ ಮಹಾತ್ಮರು. ಭಾರತ ಚಿರಋಣಿ. ಹೃದಯಾಂತರಾಳದ
ನಮಗಳು. ಜೈ ಹಿಂದ್.
-ವೈ. ಧರ್ಮೇಂದ್ರ, ಕಾಸರಗೋಡು
ಈ ದೇಶಕ್ಕಾಗಿ ಜೀವ ನೀಡಿದ ಯೋಧರಿಗೆ ನಾನು ತಲೆಬಾಗುವೆ. ಈ ದೇಶಕ್ಕಾಗಿ ಹಿತಾತ್ಮರಾದ ಯೋಧರಿಗೆ ನಾನು ತಲೆ ಬಾಗುವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮ್ಮೆಲ್ಲರ ನಮನಗಳು
-ಗಗನ್, ಕರೆಕಾಡು
“ಬದುಕು’ ಎಂಬ ಈ ಭೂಮಿಯಲ್ಲಿ “ಸೈನಿಕ’ ಎಂಬ ಪದವಿ ಪಡೆದು “ದೇಶದ’ ರಕ್ಷಣೆಗೆ ಜೀವವ ಸವೆದ ನೀವು ಸದಾ ಅಮರ, ಅಜರಾಮರ.
-ರಕ್ಷಿತಾ, ಮಂಗಳೂರು
ಯೋಧರೇ ನಿಮ್ಮ ಕೆಚ್ಚೆದೆಯ ಧೈರ್ಯವನ್ನು ಮೆಚ್ಚುವೆವು. ಚೀನದ ವಸ್ತುಗಳನ್ನು ಬಹಿಷ್ಕರಿಸಿ ಅದಕ್ಕೆ ತಿರುಗೇಟನ್ನು ನೀಡುವೆವು. ನಿಮ್ಮ ತ್ಯಾಗವನ್ನು ವ್ಯರ್ಥವಾಗಲು ಬಿಡೆವು. ನಿಮ್ಮ ಕುಟುಂಬ ಮತ್ತು ತಾಯಿ ಭಾರತಿಗೆ ನ್ಯಾಯ ದೊರಕಿಸದೇ ಬಿಡೆವು.
-ಭಾರತಿ ಎ., ಉಪ್ಪಳ
ದೇಶಕ್ಕಾಗಿ ಜೀವವನ್ನು ಸಮರ್ಪಿಸಿದ ವೀರಯೋಧರಿಗೆ ಶತಕೋಟಿ ಪ್ರಣಾಮ ಗಳು. ನಿಮ್ಮ ಈ ಸೇವೆಗೆ ಚಿರರುಣಿ
-ನಂದಕಿಶೋರ, ದೇಲಂಪಾಡಿ
ಚೀನ-ಭಾರತ ಪರಸ್ಪರ ಶಾಂತಿ ಮಾತುಕತೆಯ ಒಪ್ಪಂದವಾಗಿದ್ದರೆ ಭಾರತದ ಯೋಧರನ್ನು ಚೀನ ಯಾಕೆ ಹತ್ಯೆಗೈಯಿತು? ಹಾಗೆಯೇ ಚೀನದ ವಸ್ತುಗಳನ್ನು ಬಹಿ ಸ್ಕರಿಸುವ ಮುಖಾಂತರ ಹುತಾತ್ಮ ವೀರ ಯೋಧರಿಗೆ ಕಂಬನಿ ಮಿಡಿಯೋಣ.
-ಸೂರ್ಯಕಾಂತ್ ಶೆಟ್ಟಿ, ಪೊಳಲಿ
ಭಾರತದ ಮಾತೆಯ ರಕ್ಷಣೆಯಲ್ಲಿ ಹುತಾತ್ಮರಾದ ಎಲ್ಲ ವೀರ ಪುತ್ರರಿಗೆ ಹೃದಯಾಂತರಾಳದ ನಮನಗಳು. ಅವರು ಮತ್ತೂಮ್ಮೆ ಈ ಪುಣ್ಯ ಭೂಮಿಯಲ್ಲಿ
ಜನಿಸಿ ಬರಲಿ.
-ರಾಮದಾಸ್, ಎಕ್ಕೂರು
ಕೋವಿಡ್ ಲಾಕ್‌ಡೌನ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿ ಚೀನದ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿರುವ ದಾಳಿ ಖಂಡನೀಯ. ಅದರಲ್ಲಿಯೂ ಯೋಧರು ಸಾವನ್ನಪ್ಪಿರುವುದು ಊಹಿಸಲೂ ಅಸಾಧ್ಯವಾಗಿದೆ. ಸೈನಿಕರು ದೇಶದ ಬೆನ್ನೆಲುಬಾಗಿದ್ದಾರೆ. ಗಟ್ಟಿತನದಿಂದ ದೇಶದ ಗಡಿಭಾಗಗಳಲ್ಲಿ ಶತ್ರುಗಳಿಗೆ ಎದೆಒಡ್ಡಿ ನಿಲ್ಲುವ ಕಾರಣದಿಂದಾಗಿ ನಾವು ಇಂದು ನೆಮ್ಮದಿಯಿಂದ ಇದ್ದೇವೆ. ಚಳಿ, ಮಳೆ, ಗಾಳಿ, ಬಿಸಿಲು ಇವು ಯಾವುದೂ ಕೂಡ ಅವರಿಗೆ ಮುಖ್ಯವಲ್ಲ. ದೇಶದ ಹಿತಕಾಯುವುದಷ್ಟೇ ಅವರ ಧ್ಯೇಯ. ಸೈನಿಕರಲ್ಲಿರುವ ಕೆಲವೊಂದಷ್ಟು ಅಂಶಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಈ ದಾಳಿ ಮತ್ತಷ್ಟು ಭೀಕರವಾಗದಿರಲಿ ಎಂದು ಆಶಿಸುತ್ತೇನೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಆದರೂ ಕೂಡ ನಮ್ಮ ಸೈನಿಕರು ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಈ ವೈಷಮ್ಯ ಇಲ್ಲಿಗೆ ಶಮನವಾದರೆ ಉತ್ತಮ. ಪ್ರತಿಯೊಬ್ಬರೂ ತಮ್ಮ ಕುಟುಂಬ ಸದಸ್ಯರಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಸಹಜ ಕೂಡ ಹೌದು. ಆದರೆ ಸೈನಿಕರು ಆ ಎಲ್ಲ ಕಾಳಜಿಗಳನ್ನು ದೇಶಸೇವೆಯ ಮೇಲಿರಿಸುತ್ತಾರೆ. ದೇಶರಕ್ಷಣೆಯೇ ಅವರ ಮೊದಲ ಧ್ಯೇಯವಾಗಿರುತ್ತದೆ. ಈ ಕಾರಣಕ್ಕಾಗಿ ಸೈನಿಕರಿಗೆ ಸರಕಾರ, ಜನತೆ ಮತ್ತಷ್ಟು ಬೆಂಗಾವಲಾಗಿ ನಿಲ್ಲಬೇಕು.. ದೇಶದ ಜನರು ಹಾಗೂ ಸೈನಿಕರ ಹಿತದೃಷ್ಟಿಯಿಂದ ಭಾರತ ಯುದ್ಧತಂತ್ರದಲ್ಲಿ ಜಾಣ್ಮೆಯ ನಡೆ ಅನುಸರಿಸುವುದು ಅತೀ ಅಗತ್ಯವಾಗಿದೆ.
-ರಕ್ಷಿತ್ ಶೆಟ್ಟಿ, ನಟ-ನಿರ್ದೇಶಕ
ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಲೆಕ್ಕಿಸದೆ ಸವಾಲುಗಳನ್ನೆಲ್ಲ ಅನುಕೂಲವಾಗಿ ಪರಿವರ್ತಿಸಿ ಕೊಂಡು, ಊರು, ಸಂಸಾರ ಎಲ್ಲವನ್ನು ದೂರ ಮಾಡಿಕೊಂಡರೂ ಸದಾ ಕಾಲ ದೇಶಕ್ಕಾಗಿ ಹೋರಾ ಡುವ ಸೈನಿಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎನ್ನುವುದು ಅತ್ಯಂತ ಸಂತಸ ನೀಡುತ್ತದೆ. ಸೇನೆಯಲ್ಲಿರುವ ಪ್ರತಿಯೊಬ್ಬನ ಜೀವನದಲ್ಲಿ ಯುದ್ಧ , ದುಷ್ಟ ನಿಗ್ರಹಕ್ಕೆ ಅವಕಾಶ ಸಿಗುವುದು ಹೆಮ್ಮೆಯ ವಿಚಾರ ಹಾಗೂ ದೇಶಕ್ಕಾಗಿ ಕೊನೆ ಉಸಿರಿರುವ ತನಕ ಹೋರಾಡಿ ತನ್ನನ್ನು ದೇಶಕ್ಕೆ ಸಮರ್ಪಿ ಸುವ ಯೋಧ ಅಮರ ಎನಿಸಿಕೊಳ್ಳುತ್ತಾನೆ. ದೇಶದ ಯಾವುದೇ ಮೂಲೆಯಲ್ಲಿ ಸೇವೆ ಸಲ್ಲಿಸುವ ಸೈನಿಕ ತನ್ನ ಇನ್ನೊಬ್ಬ ಸಹಪಾಠಿಯನ್ನ ಕಷ್ಟದ ಸಮಯದಲ್ಲಿ ಕೈಬಿಡಲಾರ. ಅಗತ್ಯ ಬಿದ್ದರೆ ಆತನ ರಕ್ಷಣೆಗೆ ನಿಂತು ತನ್ನ ಜೀವವನ್ನು ಬಲಿಕೊಡುತ್ತಾನೆ. ಗಡಿಯಲ್ಲಿ ಸಂಘರ್ಷಗಳಾದಾಗ, ಶತ್ರು ಸೇನೆಯ ನಡುವೆ ಬಿಗುವಿನ ವಾತಾವರಣದಲ್ಲೂ ಸೈನಿಕ ಹಿಂಜರಿಯಲಾರ. ಲಡಾಯಿ ನಡೆಯುವಾಗ ಸೇವೆಯಲ್ಲಿರುವ ಎಲ್ಲಾ ಸೈನಿಕರಿಗೆ ಆತ್ಮ ಸ್ಥೆçರ್ಯ ತುಂಬುವ ಕಾರ್ಯ, ತನ್ನ ದೇಶದ ಪರ ನಿಲ್ಲುವ ಕಾರ್ಯ ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯ ರಿಂದ ಆಗಬೇಕು.
-ಮಂಜುನಾಥ್ ಪೂಜಾರಿ, ಎನ್‌ಎಸ್‌ಜಿ ಕಮಾಂಡೊ, ಕೋಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.