ಸಶಕ್ತ, ಸಮತೋಲಿತ ತಂಡದ ಅಗತ್ಯವಿದೆ: ಕೊಹ್ಲಿ


Team Udayavani, Apr 4, 2019, 6:00 AM IST

c-6

ಜೈಪುರ: ಆರ್‌ಸಿಬಿ ಬಂಡಿ ಸತತ 4ನೇ ಸಲ ಹಳಿ ತಪ್ಪಿದೆ. ಮಂಗಳವಾರ ರಾತ್ರಿ “ಜೈಪುರ’ ಕೂಡ ಬೆಂಗಳೂರು ತಂಡದ ಪಾಲಿಗೆ “ಸೋಲಿನ ಪುರ’ವಾಯಿತು. ಸೋಲಿಗೆ ಕಾರಣ ಹೇಳಿ ಹೇಳಿ ಸುಸ್ತಾದಂತೆ ಕಂಡು ಬಂದ ನಾಯಕ ವಿರಾಟ್‌ ಕೊಹ್ಲಿ, ಮುಂಬರುವ ಪಂದ್ಯಗಳಲ್ಲಿ ಸಶಕ್ತ ಆಡುವ ಬಳಗವನ್ನು ಕಣಕ್ಕಿಳಿಸುವ ಸೂಚನೆ ನೀಡಿದರು.

ರಾಜಸ್ಥಾನ್‌ ಮತ್ತು ಆರ್‌ಸಿಬಿ ಸತತ 3 ಸೋಲುಂಡು ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿದ್ದವು. ಇವುಗಳಲ್ಲೀಗ ಅಜಿಂಕ್ಯ ರಹಾನೆ ಬಳಗಕ್ಕೆ ಸೋಲಿನಿಂದ ಮುಕ್ತಿ ಸಿಕ್ಕಿದೆ. ಕೊಹ್ಲಿ ಪಡೆ ಮಾತ್ರ ಸೋಲಿನ ಕಂದಕದಿಂದ ಮೇಲೇಳುವ ಸೂಚನೆ ನೀಡಿಲ್ಲ.

“ಇಂದು ನಾವು ಹೆಚ್ಚು ಸಮರ್ಥರಿದ್ದೆವು. ಆದರೆ 15-20 ರನ್‌ ಕೊರತೆ ಕಾಡಿತು. 160 ರನ್‌ ಈ ಪಿಚ್‌ನಲ್ಲಿ ಧಾರಾಳವಾಗಿತ್ತು. ಆದರೆ ಇಬ್ಬನಿ ಬೀಳುತ್ತಿದ್ದುದರಿಂದ ಇನ್ನೂ 15 ರನ್‌ ಹೆಚ್ಚು ಮಾಡಿದ್ದರೆ ಪಂದ್ಯ ಹೆಚ್ಚು ಸವಾಲಿನಿಂದ ಕೂಡಿರುತ್ತಿತ್ತು’ ಎಂದು ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟರು.

“ಇಲ್ಲಿ ಬೌಂಡರಿ ಅಷ್ಟೊಂದು ಸುಲಭದಲ್ಲಿ ಬರುತ್ತಿರಲಿಲ್ಲ. ನಮ್ಮ ಫೀಲ್ಡಿಂಗ್‌ ಕೂಡ ಕಳಪೆ ಮಟ್ಟದಲ್ಲಿತ್ತು, ಅನೇಕ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ರಹಾನೆ ಮತ್ತು ಸ್ಮಿತ್‌ಗೆ ಜೀವದಾನ ನೀಡಿದೆವು. ಇದು ದುಬಾರಿಯಾಗಿ ಪರಿಣಮಿಸಿತು’ ಎಂದರು.

“ತಂಡದ ಕಾಂಬಿನೇಶನ್‌ ಬಗ್ಗೆ ಯೋಚಿಸಬೇಕಾಗಿ ಬಂದಿದೆ. ಸಶಕ್ತ ಹಾಗೂ ಸಮರ್ಥ ಆಟಗಾರರನ್ನೊಳಗೊಂಡ ಸಮತೋಲಿತ ತಂಡವೊಂದನ್ನು ಕಟ್ಟುವತ್ತ ಮುಂದಡಿ ಇಡಬೇಕಿದೆ. ನಮ್ಮಲ್ಲಿ ಯುವ ಆಟಗಾರರ ಸಂಖ್ಯೆ ಸಾಕಷ್ಟಿದ್ದು, ಇವರಿಗೆ ಅವಕಾಶ ನೀಡಿ ಮ್ಯಾಚ್‌ ವಿನ್ನಿಂಗ್‌ ಸಾಧನೆ ಹೊರಹೊಮ್ಮುವುದನ್ನು ನಿರೀಕ್ಷಿಸಬೇಕಿದೆ’ ಎಂಬುದಾಗಿ ಕೊಹ್ಲಿ ಹೇಳಿದರು.

ಗೋಪಾಲ್‌ಗೆ ಶ್ರೇಯಸ್ಸು
ಈ ಗೆಲುವಿನ ಶ್ರೇಯಸ್ಸು ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ಗೆ
ಸಲ್ಲಬೇಕು ಎಂದವರು ರಾಜಸ್ಥಾನ್‌ ನಾಯಕ ಅಜಿಂಕ್ಯ ರಹಾನೆ. “ಕೊಹ್ಲಿ ಮತ್ತು ಎಬಿಡಿ ವಿರುದ್ಧ ಉತ್ತಮ ದಾಖಲೆ ಹೊಂದಿದ್ದ ಗೋಪಾಲ್‌ ಇಲ್ಲಿಯೂ ಯಶಸ್ಸು ಸಂಪಾದಿಸಿದರು. 3-4 ಓವರ್‌ಗಳಲ್ಲೇ ಇದು ನಿಧಾನ ಗತಿಯ ಟ್ರ್ಯಾಕ್‌ ಎಂಬುದು ತಿಳಿಯಿತು. ಹೀಗಾಗಿ ಸ್ಪಿನ್ನರ್‌ಗಳನ್ನು ಕೂಡಲೇ ದಾಳಿಗಿಳಿಸಿದೆವು. ಪವರ್‌ ಪ್ಲೇ ಅವಧಿಯಲ್ಲಿ ಗೌತಮ್‌ ಅಮೋಘ ನಿಯಂತ್ರಣ ಸಾಧಿಸಿದರು. ಗೋಪಾಲ್‌ ದೊಡ್ಡ ಬೇಟೆಯಾಡತೊಡಗಿದರು. ಅಂಕದ ಖಾತೆ ತೆರೆದುದರಿಂದ ದೊಡ್ಡದೊಂದು ರಿಲೀಫ್ ಸಿಕ್ಕಿದೆ. ಹಿಂದಿನ ಮೂರೂ ಪಂದ್ಯಗಳಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲೇ ಇತ್ತು. ಇಂದು ಶೇ. ನೂರಕ್ಕೂ ಹೆಚ್ಚಿನ ಪರಿಶ್ರಮ ಹಾಕಿದೆವು…’ ಎಂದು ರಹಾನೆ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 158 ರನ್‌ ಗಳಿಸಿದರೆ, ರಾಜಸ್ಥಾನ್‌ 19.5 ಓವರ್‌ಗಳಲ್ಲಿ 3 ವಿಕೆಟಿಗೆ 164 ರನ್‌ ಬಾರಿಸಿ ಗೆಲುವಿನ ಖಾತೆ ತೆರೆಯಿತು. ನಾಯಕ ಅಜಿಂಕ್ಯ ರಹಾನೆ 22, ಜಾಸ್‌ ಬಟ್ಲರ್‌ 59, ಸ್ಟೀವನ್‌ ಸ್ಮಿತ್‌ 38, ರಾಹುಲ್‌ ತ್ರಿಪಾಠಿ ಔಟಾಗದೆ 34 ರನ್‌ ಮಾಡಿ ತಂಡಕ್ಕೆ ಮೊದಲ ಜಯ ತಂದಿತ್ತರು. ಆರ್‌ಸಿಬಿ ಸರದಿಯಲ್ಲಿ ಮಿಂಚಿದ್ದು ಪಾರ್ಥಿವ್‌ ಪಟೇಲ್‌ ಮಾತ್ರ.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಆರ್‌ಸಿಬಿ ಪ್ರಸಕ್ತ ಐಪಿಎಲ್‌ ಋತುವಿನ ಎಲ್ಲ 4 ಪಂದ್ಯಗಳನ್ನು ಸೋತಿತು. ಇದರೊಂದಿಗೆ ಕಳೆದ ಋತುವಿನ ಪಂದ್ಯವೂ ಸೇರಿದಂತೆ ಆರ್‌ಸಿಬಿ ಸತತ 5 ಪಂದ್ಯಗಳನ್ನು ಸೋತಂತಾಯಿತು. ಇದು ಆರ್‌ಸಿಬಿಯ 2ನೇ ಅತೀ ದೊಡ್ಡ ಸೋಲಿನ ಸರಮಾಲೆ. 2008ರ ಆರಂಭದ ಋತುವಿನಲ್ಲೂ ಆರ್‌ಸಿಬಿ ಸತತ 5 ಪಂದ್ಯಗಳಲ್ಲಿ ಎಡವಿತ್ತು. 2017ರಲ್ಲಿ ಸತತ 6 ಪಂದ್ಯಗಳನ್ನು ಸೋತದ್ದು ದಾಖಲೆ.

ಶ್ರೇಯಸ್‌ ಗೋಪಾಲ್‌ ಐಪಿಎಲ್‌ನಲ್ಲಿ 2ನೇ ಸಲ ಒಂದೇ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ವಿಕೆಟ್‌ಗಳನ್ನು ಉರುಳಿಸಿದರು. ಕಳೆದ ವರ್ಷದ ಬೆಂಗಳೂರು ಪಂದ್ಯದಲ್ಲೂ ಅವರು ಈ ಸಾಧನೆ ಮಾಡಿದ್ದರು.

ಶ್ರೇಯಸ್‌ ಗೋಪಾಲ್‌ 2 ಸಲ ಒಂದೇ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ಅವರನ್ನು ಔಟ್‌ ಮಾಡಿದ 2ನೇ ಬೌಲರ್‌. ಆಶಿಷ್‌ ನೆಹ್ರಾ ಮೊದಲಿಗ. ಈ ವರೆಗೆ ಒಟ್ಟು 17 ಮಂದಿ ಕೊಹ್ಲಿ ಮತ್ತು ಎಬಿಡಿ ಅವರನ್ನು ಒಂದೇ ಪಂದ್ಯದಲ್ಲಿ ಔಟ್‌ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಎಬಿಡಿ-ಶ್ರೇಯಸ್‌ ಗೋಪಾಲ್‌ ಈ ವರೆಗೆ 3 ಸಲ ಮುಖಾಮುಖಿಯಾಗಿದ್ದು, ಎಲ್ಲ 3 ಸಂದರ್ಭಗಳಲ್ಲೂ ಗೋಪಾಲ್‌ ಅವರೇ ಈ ಹೊಡಿಬಡಿ ಆಟಗಾರನ ವಿಕೆಟ್‌ ಉರುಳಿಸಿದ್ದಾರೆ. ಎಬಿಡಿಗೆ ಗೋಪಾಲ್‌ ಒಟ್ಟು 27 ಎಸೆತವಿಕ್ಕಿದ್ದು, 21 ರನ್‌ ನೀಡಿದ್ದಾರೆ.

ಆರ್‌ಸಿಬಿ ವಿರುದ್ಧ 3 ಪಂದ್ಯಗಳನ್ನಾಡಿರುವ ಗೋಪಾಲ್‌ 50 ರನ್‌ ನೀಡಿ 9 ವಿಕೆಟ್‌ ಹಾರಿಸಿದರು.

ವಿರಾಟ್‌ ಕೊಹ್ಲಿ ನಾಯಕನಾಗಿ 100 ಐಪಿಎಲ್‌ ಪಂದ್ಯಗಳನ್ನು ಪೂರ್ತಿಗೊಳಿಸಿದರು. ಈ ನೂರೂ ಪಂದ್ಯಗಳಲ್ಲಿ ಅವರು ಆರ್‌ಸಿಬಿ ತಂಡದ ನಾಯಕನಾಗಿದ್ದರು.

ಕೊಹ್ಲಿ 100 ಐಪಿಎಲ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ 3ನೇ ಕ್ರಿಕೆಟಿಗ. ಧೋನಿ (162) ಮತ್ತು ಗಂಭೀರ್‌ (129) ಉಳಿದಿಬ್ಬರು.

ಪಾರ್ಥಿವ್‌ ಪಟೇಲ್‌ ಟಿ20 ಪಂದ್ಯಗಳಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದರು (4,010 ರನ್‌). ಅವರು ಈ ಸಾಧನೆ ಮಾಡಿದ ವಿಶ್ವದ 87ನೇ, ಭಾರತದ 16ನೇ ಆಟಗಾರ.

ಪಾರ್ಥಿವ್‌ ಪಟೇಲ್‌ ಐಪಿಎಲ್‌ನಲ್ಲಿ 12ನೇ ಅರ್ಧ ಶತಕ ಹೊಡೆದರು. ಒಟ್ಟಾರೆಯಾಗಿ ಇದು ಅವರ 22ನೇ ಟಿ20 ಅರ್ಧ ಶತಕ.

ಜಾಸ್‌ ಬಟ್ಲರ್‌ ತವರಿನ ಜೈಪುರ ಐಪಿಎಲ್‌ ಪಂದ್ಯಗಳಲ್ಲಿ ಸತತ 4ನೇ ಅರ್ಧ ಶತಕ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ-4 ವಿಕೆಟಿಗೆ 158. ರಾಜಸ್ಥಾನ್‌-19.5 ಓವರ್‌ಗಳಲ್ಲಿ 3 ವಿಕೆಟಿಗೆ 164 (ಬಟ್ಲರ್‌ 59, ಸ್ಮಿತ್‌ 38, ತ್ರಿಪಾಠಿ ಔಟಾಗದೆ 34, ರಹಾನೆ 22, ಚಾಹಲ್‌ 17ಕ್ಕೆ 2, ಸಿರಾಜ್‌ 25ಕ್ಕೆ 1). ಪಂದ್ಯಶ್ರೇಷ್ಠ: ಶ್ರೇಯಸ್‌ ಗೋಪಾಲ್‌.

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.