ಇಂದು ಚೆನ್ನೈ- ಮುಂಬೈ ಬಿಗ್ ಮ್ಯಾಚ್
ತವರಿನಲ್ಲಿ ಅಜೇಯ ದಾಖಲೆ ಹೊಂದಿರುವ ಚೆನ್ನೈ
Team Udayavani, Apr 26, 2019, 9:56 AM IST
ಚೆನ್ನೈ: ಕೂಟದ ಆರಂಭದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿದ್ದ ಚೆನ್ನೈಗೆ ಮೊದಲ ಆಘಾತವಿಕ್ಕಿದ ಮುಂಬೈ ಇಂಡಿಯನ್ಸ್ ಮರು ಪಂದ್ಯಕ್ಕೆ ಸಜ್ಜಾಗಿದೆ. ಶುಕ್ರವಾರ ಚೆನ್ನೈಯ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಇತ್ತಂಡಗಳು ಸೆಣಸಲಿವೆ. ಧೋನಿ ಪಡೆ ಸೇಡು ತೀರಿಸಿಕೊಳ್ಳಲು ಕಾದಿದ್ದರೆ, ರೋಹಿತ್ ಬಳಗ ಅಂಕಪಟ್ಟಿಯಲ್ಲಿ ಮೇಲೇರುವ ಕಾತರದಲ್ಲಿದೆ.
ಇವೆರಡೂ ಐಪಿಎಲ್‌ನ ಬಲಿಷ್ಠ ತಂಡಗಳಾದ ಕಾರಣ ಇದನ್ನು “ಬಿಗ್ ಮ್ಯಾಚ್’ ಎಂದೇ ಪರಿಗಣಿಸಲಾಗಿದೆ. ಇತ್ತಂಡಗಳು 26 ಬಾರಿ ಮುಖಾ ಮುಖೀಯಾಗಿವೆ. ಮುಂಬೈ 15, ಚೆನ್ನೈ 11 ಪಂದ್ಯಗಳನ್ನು ಗೆದ್ದಿವೆ. ಚೆನ್ನೈ ಯನ್ನು ಅತ್ಯಧಿಕ 15 ಬಾರಿ ಸೋಲಿ ಸಿದ ತಂಡವೆಂಬುದು ಮುಂಬೈ ಪಾಲಿನ ಹೆಗ್ಗಳಿಕೆ. ಉಳಿದವರ್ಯಾರೂ ಚೆನ್ನೈಯನ್ನು ಏಳಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮಣಿಸಿಲ್ಲ.
ಈ ಲೆಕ್ಕಾಚಾರದಲ್ಲಿ ಮುಂಬೈ ಮೇಲುಗೈ ಸಾಧಿಸಿದ್ದರೂ ಚೆನ್ನೈಗೆ ಇದು ತವರಿನ ಪಂದ್ಯವಾದ್ದರಿಂದ ಗೆಲುವಿನ ಅವಕಾಶ ಉಜ್ವಲವಾಗಿಯೇ ಇದೆ. ಅಲ್ಲದೇ ಈ ಬಾರಿ ತವರಿನಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಚೆನ್ನೈ ಜೈಕಾರ ಮೊಳಗಿಸಿದೆ. ಈ ದಾಖಲೆ ಮುಂಬೈಗೆ ದೊಡ್ಡ ಸವಾಲಾಗಿ ಪರಿಣಮಿಸಲೂಬಹುದು.
ಮುಂಬೈ ಸಶಕ್ತ ತಂಡ
ಮುಂಬೈ ಬ್ಯಾಟಿಂಗ್ ಬಲ ಮಧ್ಯ ಮ ಕ್ರಮಾಂಕದಲ್ಲಿ ಅಡಗಿದೆ. ಆಲ್‌ರೌಂಡರ್ ಪಾಂಡ್ಯ ಬ್ರದರ್ ಮತ್ತು ಕೈರನ್ ಪೊಲಾರ್ಡ್ ದೊಡ್ಡ ಮೊತ್ತ ಪೇರಿಸಲು ಸಮರ್ಥರು. ಡಿ ಕಾಕ್, ರೋಹಿತ್, ಸೂರ್ಯಕುಮಾರ್, ಬೆನ್ ಕಟಿಂಗ್ ಅಬ್ಬರಿಸಿದರೆ ಮುಂಬೈಗೆ ದೊಡ್ಡ ಮೊತ್ತ ಸಮಸ್ಯೆಯೇನಲ್ಲ. ಬುಮ್ರಾ, ಮಾಲಿಂಗ, ಮಾರ್ಕಾಂಡೆ, ಪಾಂಡ್ಯ ಬ್ರದರ್ ಬೌಲಿಂಗ್ ವಿಭಾಗದ ಪ್ರಮುಖರು.
ಫಾರ್ಮ್ಗೆ ಬಂದ ವಾಟ್ಸನ್
ಕಳಪೆ ಫಾರ್ಮ್ನಿಂದ ಹೊರಬಂದಿರುವ ಶೇನ್ ವಾಟ್ಸನ್ ಚೆನ್ನೈ ತಂಡಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಹೈದರಾಬಾದ್ ವಿರುದ್ಧ 96 ರನ್ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು. ಮತ್ತೂಬ್ಬ ಆರಂಭಕಾರ ಡು ಪ್ಲೆಸಿಸ್ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಆಟಗಾರ. ತಂಡದ ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಜಾಧವ್ ವಿಶೇಷ ಯಶಸ್ಸು ಕಂಡಿಲ್ಲ. ಸುರೇಶ್ ರೈನಾ ಬ್ಯಾಟ್ ಕೂಡ ಸದ್ದುಮಾಡುತ್ತಿಲ್ಲ. ಹೀಗಾಗಿ ಧೋನಿ ಮೇಲೆ ಹೆಚ್ಚಿನ ಭಾರ ಬೀಳುತ್ತಿದೆ. ಚೆನ್ನೈ ಬೌಲಿಂಗ್ ಈ ಬಗ್ಗೆ ಎರಡು ಮಾತಿಲ್ಲ ತಾಹಿರ್ 16 ವಿಕೆಟ್ ಉರುಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಹರ್ಭಜನ್, ಜಡೇಜ, ದೀಪಕ್ ಚಹರ್, ಮುಂಬಯಿಯವರೇ ಆದ ಶಾದೂìಲ್ ಠಾಕೂರ್ ಮುಂಬೈಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಬಹುದೆಂಬ ನಂಬಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.