ಮತ್ತೆ ಅಗ್ರಸ್ಥಾನಕ್ಕೇರಲು ಚೆನ್ನೈ ಕಾತರ
Team Udayavani, May 1, 2019, 10:21 AM IST
ಚೆನ್ನೈ: ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ ಇನ್ನೊಂದು ಪಂದ್ಯಕ್ಕೆ ಸಜ್ಜಾಗಿವೆ. ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಇತ್ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆೆ.
ಕೂಟದ ಮೊದಲ ಮುಖಾಮುಖೀ ಯಲ್ಲಿ ಚೆನ್ನೈ ಡೆಲ್ಲಿ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಸೋಲಿನ ಸೇಡಿಗೆ ಡೆಲ್ಲಿ ಕಾದು ಕುಳಿತಿದೆ. ಆದರೆ ಡೆಲ್ಲಿಗೆ ಈ ಸವಾಲು ಸುಲಭದ್ದಲ್ಲ. ಚೆನ್ನೈ ತವರಿನಂಗಳದಲ್ಲಿ ಹೆಚ್ಚು ಬಲಿಷ್ಠವಾಗಿದೆ ಮಾತ್ರ ವಲ್ಲದೇ ಅಗ್ರಸ್ಥಾನಕ್ಕೇರಲು ಹಾತೊರೆಯುತ್ತಿದೆ.
ಡೆಲ್ಲಿಗೆ ಯುವ ಆಟಗಾರರ ಬಲ
ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿ ಅಚ್ಚರಿ ಮೂಡಿಸಿರುವ ಡೆಲ್ಲಿ ತಂಡ ಯುವ ಆಟಗಾರರ ದಂಡನ್ನು ಹೊಂದಿದೆ. ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಬ್ ಪಂತ್, ಕಾಗಿಸೋ ರಬಾಡ, ಅಕ್ಷರ್ ಪಟೇಲ್ ತಂಡದ ಆಸ್ತಿಯಾಗಿದ್ದಾರೆ. ಅನುಭವಿ ಆಟಗಾರ ಶಿಖರ್ ಧವನ್ ಉತ್ತಮ ಫಾರ್ಮ್ನಲ್ಲಿರುವುದೂ ತಂಡಕ್ಕೆ ಬಲ ನೀಡಿದೆ.
ಬೌಲಿಂಗ್‌ನಲ್ಲಿ ಇಶಾಂತ್, ಲಮಿಚಾನೆ, ಮಾರಿಸ್ ಉತ್ತಮ ಲಯದಲ್ಲಿದ್ದಾರೆ. ಹೀಗಾಗೀ ಡೆಲ್ಲಿ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿ ತೋರ್ಪಡಿಸಿಕೊಂಡಿದೆ.
ಚೆನ್ನೈ ಬೌಲಿಂಗ್ ಹೆಚ್ಚು ಘಾತಕ
ಬ್ಯಾಟಿಂಗ್‌ಗಿಂತ ಚೆನ್ನೈ ಬೌಲಿಂಗ್ ಹೆಚ್ಚು ಘಾತಕವಾಗಿದೆ. ತಾಹಿರ್, ಚಹರ್, ಹರ್ಭಜನ್, ಜಡೇಜ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. ಆದರೆ ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಯಾರೊಬ್ಬರೂ ಸ್ಥಿರ ಬ್ಯಾಟಿಂಗ್ ನಡೆಸುತ್ತಿಲ್ಲ. ವಾಟ್ಸನ್ ಒಂದು ಪಂದ್ಯವಾಡಿದರೆ ಮತ್ತೆರಡು ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಕೇದಾರ್ ಜಾಧವ್, ಅಂಬಾಟಿ ರಾಯುಡು, ರೈನಾ ಕೂಡ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ಮತ್ತೆ ಕಾಡಲಿದೆಯೇ ಧೋನಿ ಗೈರು!
ಧೋನಿ ಅನುಪಸ್ಥಿತಿಯಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ತವರಿನಲ್ಲೇ ಚೆನ್ನೈ 46 ರನ್‌ಗಳ ಸೋಲನುಭವಿಸಿತ್ತು. ಡೆಲ್ಲಿ ವಿರುದ್ಧವೂ ಅವರು ಆಡುವುದೂ ಅನುಮಾನವಾಗಿದೆ. ಧೋನಿ ಅನುಪಸ್ಥಿತಿಯಲ್ಲಿ ತಂಡ ಸೋಲುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ಗೈರಿನಲ್ಲಿ ಚೆನ್ನೈ 2 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಸೋತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.