ಹ್ಯಾಟ್ರಿಕ್‌ ಆಕಸ್ಮಿಕ: ಸ್ಯಾಮ್‌ ಕರನ್‌


Team Udayavani, Apr 3, 2019, 6:01 AM IST

b-27

ಮೊಹಾಲಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಜಯದ ದಡ ಸೇರಿಸಿದ ಕೀರ್ತಿ ಸಂದಿದ್ದು ಪಂಜಾಬ್‌ನ ಯುವ ಆಟಗಾರ ಸ್ಯಾಮ್‌ ಕರನ್‌ಗೆ. ಈ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದ್ದು 20 ವರ್ಷದ ಕರನ್‌ ಕೊನೆಯ ಹಂತದಲ್ಲಿ ಪಂದ್ಯದ ಗತಿ ತಿರುಗಿಸಿದ ಪಂಜಾಬ್‌ಗ 14 ರನ್‌ಗಳ ನಂಬಲಸಾಧ್ಯ ಗೆಲುವು ದಕ್ಕಿಸಿಕೊಟ್ಟರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಪಂಜಾಬ್‌ 9 ವಿಕೆಟಿಗೆ 166 ರನ್ನುಗಳ ಅಲ್ಪ ಮೊತ್ತ ದಾಖಲಿಸಿತು. ಡೆಲ್ಲಿ 19. 2 ಓವರ್‌ಗಳಲ್ಲಿ 152 ರನ್ನಿಗೆ ಅಲೌಟಾಗಿ ಸ್ಪಲ್ಪ ಅಂತರದಲ್ಲೇ ಪಂದ್ಯ ಕಳೆದುಕೊಂಡಿತು. ಉತ್ತಮ ಆರಂಭ ಪಡೆದಿದ್ದ ಡೆಲ್ಲಿ ಗೆಲುವಿಗೆ ಹತ್ತಿರವಿರಬೇಕಾದರೆ ಸತತ ವಿಕೆಟ್‌ ಕಳೆದುಕೊಂಡು ಪಂಜಾಬ್‌ಗ ಶರಣಾಗಿದೆ.

ಈ ಪಂದ್ಯದಲ್ಲಿ ಕರನ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದು ರೋಹಿತ್‌ ಶರ್ಮ ಅವರ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್‌ ಶರ್ಮ ಈ ಮೈಲುಗಲ್ಲನ್ನು ತನ್ನ 22ನೇ ವರ್ಷದಲ್ಲಿ ಸಾಧಿಸಿದ್ದರು. ಕರನ್‌ 11ಕ್ಕೆ 4 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಈ ಬಗ್ಗೆ ಮಾತನಾಡಿದ ಸ್ಯಾಮ್‌ ಕರನ್‌ ಹ್ಯಾಟ್ರಿಕ್‌ ವಿಕೆಟ್‌ ಕಿತ್ತಿರುವ ವಿಷಯ ತಿಳಿದೇ ಇರಲಿಲ್ಲ ಎಂದಿದ್ದಾರೆ.

“ಹ್ಯಾಟ್ರಿಕ್‌ ಬಗ್ಗೆ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ಪಂದ್ಯ ಗೆದ್ದ ಬಳಿಕ ನಮ್ಮ ಆಟಗಾರ ನನ್ನ ಬಳಿ ಬಂದು “ನೀನು ಹ್ಯಾಟ್ರಿಕ್‌ ವಿಕೆಟ್‌ ಕಿತ್ತೆ’ ಎಂದು ಹೇಳಿದಾಗಲೇ ನನಗೆ ಗೊತ್ತಾಗಿದ್ದು’ ಎಂದು ಹೇಳಿದ್ದಾರೆ.

ಜಿಂಬಾಬ್ವೆ ತಂಡದ ಮಾಜಿ ಅಲ್‌ರೌಂಡರ್‌ ಕೆವಿನ್‌ ಕರನ್‌ ಮತ್ತು ಇಂಗ್ಲೆಂಡ್‌ ತಂಡದ ಆಟಗಾರ ಟಾಮ್‌ ಕರನ್‌ ಅವರ ತಮ್ಮನಾಗಿರುವ ಸ್ಯಾಮ್‌ ಕರನ್‌ ಬೆನ್ನು ನೋವಿನಿಂದಾಗಿ ಪಂದ್ಯದಿಂದ ಹೊರಗುಳಿದ ಕ್ರಿಸ್‌ ಗೆಲ್‌ ಸ್ಥಾನಕ್ಕೆ ಬಂದಿದ್ದರು. ಮೊದಲ ಐಪಿಎಲ್‌ನ 2ನೇ ಪಂದ್ಯವನ್ನಾಡಿದ ಕರನ್‌ ಎಲ್ಲರಿಂದಲೂ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ.

ಗೇಲ್‌ ಸ್ಥಾನವನ್ನು ಸ್ವಲ್ಪಮಟ್ಟಿಗೆ ತುಂಬಿದ ಕರನ್‌ ಇನ್ನಿಂಗ್ಸ್‌ ಆರಂಭಿಸಿ 10 ಎಸೆತಗಳಲ್ಲಿ 20 ರನ್‌ ಗಳಿಸಿದರು. ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿದ್ದರೂ ಕರನ್‌ 3 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದರು. ಬೌಲಿಂಗ್‌ ವೇಳೆ ಕರನ್‌ ದಾಳಿ ಅಮೋಘವಾಗಿತ್ತು. ಕರನ್‌ ಬೌಲಿಂಗ್‌ ಮಾಡಿದ್ದು ಕೇವಲ 2.2 ಓವರ್‌. ಇದರಲ್ಲೇ ಅವರು ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಸಂಭ್ರಮಿಸಿದ್ದಾರೆ. ಕರನ್‌ ಅವರ ಹ್ಯಾಟ್ರಿಕ್‌ ಸಾಧನೆ ಆರಂಭವಾಗಿದ್ದು 18ನೇ ಓವರ್‌ನಲ್ಲಿ. 17.6ನೇ ಎಸೆತದಲ್ಲಿ ಹರ್ಷಲ್‌ ಪಟೇಲ್‌ ಅವರ ವಿಕೆಟ್‌ ಕಿತ್ತು ಮೊದಲ ವಿಕೆಟ್‌ ಪಡೆದರು. ಆ ಬಳಿಕ 19ನೇ ಓವರ್‌ ಮೊಹಮ್ಮದ್‌ ಶಮಿ ಎಸೆದರು. ಪಂದ್ಯದ ಕೊನೆಯ ಓವರ್‌ ಹಾಕಿದ ಕರನ್‌ ಮೊದಲೆರಡು ಎಸೆತಗಳಲ್ಲಿ ಕಾಗಿಸೊ ರಬಾಡ ಮತ್ತು ಸಂದೀಪ್‌ ಲಮಿಶಾನೆ ಅವರ ವಿಕೆಟ್‌ ಕೀಳುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು.

21 ಎಸೆತದಲ್ಲಿ 23 ರನ್‌ ಬೇಕಿತ್ತು
ಡೆಲ್ಲಿಗೆ ಅಂತಿಮ 21 ಎಸೆತಗಳಲ್ಲಿ ಗೆಲ್ಲಲು ಕೇವಲ 23 ರನ್‌ ಬೇಕಿತ್ತು. 7 ವಿಕೆಟ್‌ ಕೂಡ ಕೈಯಲ್ಲಿತ್ತು. ಆದರೆ ಕರನ್‌ ಪಂದ್ಯದ ಗತಿಯನ್ನೇ ಬದಲಾಯಿಸಿ ಡೆಲ್ಲಿಗೆ ಅಘಾತವಿಕ್ಕಿದರು. ಡೆಲ್ಲಿ ಕೊನೆಯ 7 ವಿಕೆಟನ್ನು 8 ರನ್‌ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು. ಇದರಲ್ಲಿ 5 ಆಟಗಾರರು ಡಕ್‌ಔಟ್‌ ಆಗಿದ್ದಾರೆ.

ಬ್ಯಾಟಿಂಗ್‌ ಇನ್ನೂ ಉತ್ತಮಗೊಳಿಸಬೇಕು
ಕಳೆದ ಕೆಲವು ತಿಂಗಳಿನಿಂದ ಬ್ಯಾಟಿಂಗ್‌ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. 3 ವಿಭಾಗಗಳಲ್ಲೂ ಕಠಿನ ತರಬೇತಿ ಪಡೆಯುತ್ತಿದ್ದೇನೆ. ಶಾಲಾ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಇಳಿದಿದ್ದೆ. ಇದೇ ಮೊದಲ ಬಾರಿಗೆ ವೃತ್ತಿಪರ ಕ್ರಿಕೆಟ್‌ನಲ್ಲಿ ಆರಂಭಕಾರನಾಗಿ ಆಡಲಿಳಿದೆ. ಮುಂದಿನ ಪಂದ್ಯಗಳಲ್ಲೂ ಹೀಗೆ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ.
ಸ್ಯಾಮ್‌ ಕರಣ್‌

ಸಂಕ್ಷಿಪ್ತ ಸ್ಕೋರ್‌
ಕಿಂಗ್ಸ್‌ ಇಲೆವೆನ್‌ ಪಂಜಾಬ್‌-9 ವಿಕೆಟಿಗೆ 166 (ಡೇವಿಡ್‌ ಮಿಲ್ಲರ್‌ 43, ಸಫ್ìರಾಜ್‌ ಖಾನ್‌ 39, ಮನ್‌ದೀಪ್‌ ಸಿಂಗ್‌ ಔಟಾಗದೆ 29). ಡೆಲ್ಲಿ ಕ್ಯಾಪಿಟಲ್ಸ್‌- 19.2 ಓವರ್‌ಗಳಲ್ಲಿ 152ಕ್ಕೆ ಅಲೌಟ್‌ (ರಿಷಬ್‌ ಪಂತ್‌ 39, ಕಾಲಿನ್‌ ಇನ್‌ಗಾಮ್‌ 38, ಶಿಖರ್‌ ಧವನ್‌ 30, ಕರನ್‌ 11ಕ್ಕೆ 4, ಅಶ್ವಿ‌ನ್‌ 31ಕ್ಕೆ 2, ಶಮಿ 27ಕ್ಕೆ 2. ಪಂದ್ಯಶ್ರೇಷ್ಠ: ಸ್ಯಾಮ್‌ ಕರಣ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌
ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಡೆಲ್ಲಿ ವಿರುದ್ಧ ಕಳೆದ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಡೆಲ್ಲಿ 2010ರಲ್ಲಿ ತವರಿನ ತಂಡದ ವಿರುದ್ಧ ಜಯಿಸಿತ್ತು. ಆದರೆ 2014ರಿಂದ ಎಲ್ಲ 5 ಪಂದ್ಯಗಳಲ್ಲಿ ಸೋಲನುಭವಿಸಿದೆ.

ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಪಂಜಾಬ್‌ ಕಳೆದ 6 ಪಂದ್ಯಗಳನ್ನು ಗೆದ್ದಿದೆ. ಇದು ಈ ಸ್ಟೇಡಿಯಂನಲ್ಲಿ ಪಂಜಾಬ್‌ನ ಅತ್ಯಧಿಕ ಗೆಲುವಾಗಿದೆ. 2008ರ ಉದ್ಘಾಟನ ಆವೃತ್ತಿಯಲ್ಲಿ ಅದು ಕೊನೆಯ 6 ಪಂದ್ಯಗಳನ್ನು ಗೆದ್ದಿತ್ತು.

ಪಂಜಾಬ್‌ ತಂಡದ ಸ್ಯಾಮ್‌ ಕರನ್‌ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ‌ ಯುವ ಆಟಗಾರ ಎನಿಸಿಕೊಂಡಿದ್ದಾರೆ (20 ವರ್ಷ 302 ದಿನ). ಹಿಂದಿನ ದಾಖಲೆ ರೋಹಿತ್‌ ಶರ್ಮ ಅವರ ಹೆಸರಿನಲ್ಲಿದೆ. ಅವರು 2009ರ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತಿದ್ದರು. ಆಗ ಅವರಿಗೆ 22 ವರ್ಷ 6 ದಿನ ವಯಸ್ಸು.

ಸ್ಯಾಮ್‌ ಕರನ್‌ ಐಪಿಎಲ್‌ನಲ್ಲಿ ಆರಂಭಿಕನಾಗಿ ಆಡಿ ಮತ್ತು ಅದೇ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ 2ನೇ ಆಟಗಾರರಾಗಿದ್ದಾರೆ. 2009ರ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪರ ಯುವರಾಜ್‌ ಸಿಂಗ್‌ ಇನ್ನಿಂಗ್ಸ್‌ ಆರಂಭಿಸಿದ್ದರು ಮತ್ತು ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದಾಗ ಯುವರಾಜ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದರು.

ಕರನ್‌ ಐಪಿಎಲ್‌ನಲ್ಲಿ 3 ಬ್ಯಾಟ್ಸ್‌ಮನ್‌ಗಳನ್ನು ಡಕ್‌ ಔಟ್‌ ಮಾಡಿ
ಟ್ರಿಕ್‌ ಸಾಧಿಸಿದ 3ನೇ ಆಟಗಾರ. 2013ರಲ್ಲಿ ಪುಣೆ ವಾರಿಯರ್ ವಿರುದ್ಧ ಸನ್‌ರೈಸರ್ ಹೈದರಾಬಾದ್‌ನ ಅಮಿತ್‌ ಮಿಶ್ರಾ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 2014ರ ಐಪಿಎಲ್‌ನಲ್ಲಿ ರಾಜಸ್ಥಾನ ತಂಡದ ಪರ ಪ್ರವೀನ್‌ ತಾಂಬೆ ಡಕ್‌ ಔಟ್‌ ಮಾಡಿ ಹ್ಯಾಟ್ರಿಕ್‌ ಸಾಧಿಸಿದ ಇನ್ನಿಬ್ಬರು ಆಟಗಾರರು.

ಡೆಲ್ಲಿ ಕ್ಯಾಪಿಟಲ್ಸ್‌ನ ಇನ್ನಿಂಗ್ಸ್‌ನಲ್ಲಿ 6 ಆಟ ಗಾರರು ಡಕ್‌ ಔಟ್‌ ಆಗಿದ್ದಾರೆ. ಇದು ಐಪಿಎಲ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಆಟಗಾರರು ಡಕ್‌ ಔಟ್‌ ಆಗಿರುವ 4ನೇ ನಿದರ್ಶನ. 2011ರ ಆವೃತ್ತಿಯಲ್ಲಿ ಡೆಕ್ಕನ್‌ ಚಾರ್ಜರ್ ವಿರುದ್ಧ ಕೊಚ್ಚಿ ಟಸ್ಕರ್ನ 6 ಆಟಗಾರರು, 2008ರಲ್ಲಿ ಕಿಂಗ್ಸ್‌ ಇಲೆವೆನ್‌ ವಿರುದ್ಧ ಆರ್‌ಸಿಬಿಯ ಮತ್ತು 2011ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ತಂಡದ 5 ಆಟಗಾರರು ಡಕ್‌ ಔಟ್‌ ಆಗಿದ್ದರು.

ಇನ್ನಿಂಗ್ಸ್‌ನ ಮೊದಲ ಓವರ್‌ ಎಸೆದ ಸಂದರ್ಭ 7ನೇ ಬಾರಿಗೆ ಆರ್‌. ಅಶ್ವಿ‌ನ್‌ ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಇದು ಸ್ಪಿನ್ನರ್‌ಗಳ ಪೈಕಿ ಗರಿಷ್ಠ ಸಾಧನೆ. ಪೃಥ್ವಿ ಶಾ ವಿಕೆಟ್‌ ಅಂತೂ ಇನ್ನಿಂಗ್ಸ್‌ ಮೊದಲ ಎಸೆತದಲ್ಲಿ ಬಂದಿದ್ದು ವಿಶೇಷ.

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.