ಸೂರ್ಯನನ್ನು ಮುಳುಗಿಸಿದ ಪೃಥ್ವಿ, ಪಂತ್
ರೋಚಕ ಎಲಿಮಿನೇಟರ್ ; ಡೆಲ್ಲಿಗೆ ಕಷ್ಟದ ಗೆಲುವು ; ಹೈದರಾಬಾದ್ ಔಟ್
Team Udayavani, May 9, 2019, 6:00 AM IST
ವಿಶಾಖಪಟ್ಟಣ: ಪೃಥ್ವಿ ಶಾ ಮತ್ತು ರಿಷಭ್ ಪಂತ್ ಸಾಹಸದಿಂದ ಹೈದರಾಬಾದನ್ನು 2 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ “ಎಲಿಮಿನೇಟರ್ ಹರ್ಡಲ್ಸ್’ ದಾಟಿದೆ. ಚೆನ್ನೈ ವಿರುದ್ಧ 2ನೇ ಕ್ವಾಲಿಫೈಯರ್‌ಗೆ ಅಣಿಯಾಗಿದೆ. ಕಳೆದ ಸಲದ ರನ್ನರ್ ಅಪ್ ಹೈದರಾಬಾದ್ ಕೂಟದಿಂದ ಹೊರಬಿದ್ದಿದೆ.ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 8 ವಿಕೆಟಿಗೆ 162 ರನ್ ಪೇರಿಸಿದರೆ, ಡೆಲ್ಲಿ 19.5 ಓವರ್‌ಗಳಲ್ಲಿ 8 ವಿಕೆಟಿಗೆ 165 ರನ್ ಬಾರಿಸಿತು.
ಡೆಲ್ಲಿಗೆ ಪೃಥ್ವಿ ಶಾ ದಿಟ್ಟ ಆರಂಭ ಒದಗಿಸಿದರು. 38 ಎಸೆತಗಳಿಂದ 56 ರನ್ (6 ಬೌಂಡರಿ, 2 ಸಿಕ್ಸರ್) ಸಿಡಿಸಿ ಭರವಸೆ ಮೂಡಿಸಿದರು. ಶಾ ನಿರ್ಗಮನದ ಬಳಿಕ ರಶೀದ್ ಖಾನ್ ಮೇಡನ್ ಓವರ್ ಒಂದರಲ್ಲಿ ಅವಳಿ ವಿಕೆಟ್ ಹಾರಿಸಿ ಪಂದ್ಯಕ್ಕೆ ತಿರುವು ಒದಗಿಸಿದರು. ಆದರೆ ಪಂತ್ ಪಂಥಾಹ್ವಾನ ಸ್ವೀಕರಿಸಿದರು (21 ಎಸೆತ, 49 ರನ್, 2 ಬೌಂಡರಿ, 5 ಸಿಕ್ಸರ್).
ಹೈದರಾಬಾದ್ ಆರಂಭ ಉತ್ತಮವಾಗಿಯೇ ಇತ್ತು. ಗಪ್ಟಿಲ್-ಸಾಹಾ ಸೇರಿಕೊಂಡು ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ 3.1 ಓವರ್‌ಗಳಲ್ಲಿ 31 ರನ್ ಪೇರಿಸಿದರು. ಆಗ ಇಶಾಂತ್ ಶರ್ಮ ಈ ಜೋಡಿಯನ್ನು ಬೇರ್ಪಡಿಸಿದರು. ಟ್ರೆಂಟ್ ಬೌಲ್ಟ್ ಎಸೆದ ಇನ್ನಿಂಗ್ಸಿನ ಮೊದಲ ಎಸೆತದಲ್ಲೇ ಲೆಗ್ ಬಿಫೋರ್ ಬಲೆಯಿಂದ ಪಾರಾದ ಸಾಹಾಗೆ ಇದರ ಲಾಭವೆತ್ತಲಾಗಲಿಲ್ಲ. ಅವರ ಗಳಿಕೆ ಕೇವಲ 8 ರನ್.
ಇನ್ನೊಂದೆಡೆ ಮಾರ್ಟಿನ್ ಗಪ್ಟಿಲ್ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸುತ್ತ ಪವರ್ ಪ್ಲೇ ಗಡಿ ದಾಟಿದರು. ಆದರೆ ಮುಂದಿನ ಮೂರೇ ಎಸೆತಗಳಲ್ಲಿ ಅಮಿತ್ ಮಿಶ್ರಾ ಮೋಡಿಗೆ ಸಿಲುಕಿದರು. ಗಪ್ಟಿಲ್ ಗಳಿಕೆ 19 ಎಸೆತಗಳಿಂದ 36 ರನ್. ಸಿಡಿಸಿದ್ದು 4 ಸಿಕ್ಸರ್ ಮತ್ತು ಒಂದು ಬೌಂಡರಿ. ಇದು ಹೈದರಾಬಾದ್ ಸರದಿಯ ಗರಿಷ್ಠ ಗಳಿಕೆಯಾಗಿತ್ತು.
ಸನ್‌ರೈಸರ್ ಓಟಕ್ಕೆ ಬ್ರೇಕ್
ಗಪ್ಟಿಲ್ ನಿರ್ಗಮನದ ಬಳಿಕ ಸನ್‌ರೈಸರ್ ರನ್‌ಗತಿಗೆ ಭಾರೀ ಬ್ರೇಕ್ ಬಿತ್ತು. ಮೊದಲ 6 ಓವರ್‌ಗಳಲ್ಲಿ 54 ರನ್ ಮಾಡಿದ್ದ ವಿಲಿಯಮ್ಸನ್ ಪಡೆ, ಮುಂದಿನ 9 ಓವರ್‌ಗಳಲ್ಲಿ ಕೇವಲ 50 ರನ್ ಗಳಿಸಿತು. ಅಂತಿಮ 5 ಓವರ್‌ಗಳಲ್ಲಿ 58 ರನ್ ಸಂಗ್ರಹಿಸಿದ್ದರಿಂದ 160ರ ಗಡಿ ದಾಟಲು ಸಾಧ್ಯವಾಯಿತು.ವನ್‌ಡೌನ್‌ನಲ್ಲಿ ಬಂದ ಮನೀಷ್ ಪಾಂಡೆ 30 ರನ್ ಮಾಡಿದರೂ ಅವರ ಆಟದಲ್ಲಿ ಬಿರುಸಿರಲಿಲ್ಲ. ಇದಕ್ಕಾಗಿ 36 ಎಸೆತ ಎದುರಿಸಿ 3 ಬೌಂಡರಿ ಹೊಡೆದರು.
ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್
ವೃದ್ಧಿಮಾನ್ ಸಾಹಾ ಸಿ ಅಯ್ಯರ್ ಬಿ ಇಶಾಂತ್ 8
ಮಾರ್ಟಿನ್ ಗಪ್ಟಿಲ್ ಸಿ ಪೌಲ್ ಬಿ ಮಿಶ್ರಾ 36
ಮನೀಷ್ ಪಾಂಡೆ ಸಿ ರುದರ್‌ಫೋರ್ಡ್ ಬಿ ಪೌಲ್ 30
ಕೇನ್ ವಿಲಿಯಮ್ಸನ್ ಬಿ ಇಶಾಂತ್ 28
ವಿಜಯ್ ಶಂಕರ್ ಸಿ ಅಕ್ಷರ್ ಬಿ ಬೌಲ್ಟ್ 25
ಮೊಹಮ್ಮದ್ ನಬಿ ಸಿ ಅಕ್ಷರ್ ಬಿ ಪೌಲ್ 20
ದೀಪಕ್ ಹೂಡಾ ರನೌಟ್ 4
ರಶೀದ್ ಖಾನ್ ಸಿ ಪಂತ್ ಬಿ ಪೌಲ್ 0
ಭುವನೇಶ್ವರ್ ಕುಮಾರ್ ಔಟಾಗದೆ 0
ಬಾಸಿಲ್ ಥಂಪಿ ಔಟಾಗದೆ 1
ಇತರ 10
ಒಟ್ಟು (8 ವಿಕೆಟಿಗೆ) 162
ವಿಕೆಟ್ ಪತನ: 1-31, 2-56, 3-90, 4-111, 5-147, 6-160, 7-161, 8-161.
ಬೌಲಿಂಗ್: ಟ್ರೆಂಟ್ ಬೌಲ್ಟ್ 3-0-37-1
ಇಶಾಂತ್ ಶರ್ಮ 4-0-34-2
ಅಕ್ಷರ್ ಪಟೇಲ್ 4-0-30-0
ಅಮಿತ್ ಮಿಶ್ರಾ 4-0-16-1
ಕೀಮೊ ಪೌಲ್ 4-0-32-3
ಶಫೇìನ್ ರುದರ್‌ಫೋರ್ಡ್ 1-0-11-0
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಶಂಕರ್ ಬಿ ಖಲೀಲ್ 56
ಶಿಖರ್ ಧವನ್ ಸ್ಟಂಪ್ಡ್ ಸಾಹಾ ಬಿ ಹೂಡಾ 17
ಶ್ರೇಯಸ್ ಅಯ್ಯರ್ ಸಿ ಸಾಹಾ ಬಿ ಖಲೀಲ್ 8
ರಿಷಭ್ ಪಂತ್ ಸಿ ನಬಿ ಬಿ ಭುವನೇಶ್ವರ್ 49
ಕಾಲಿನ್ ಮುನ್ರೊ ಎಲ್‌ಬಿಡಬ್ಲ್ಯು ರಶೀದ್ 14
ಅಕ್ಷರ್ ಪಟೇಲ್ ಸಿ ಸಾಹಾ ಬಿ ರಶೀದ್ 0
ರುದರ್‌ಫೋರ್ಡ್ ಸಿ ನಬಿ ಬಿ ಭುವನೇಶ್ವರ್ 9
ಕೀಮೊ ಪೌಲ್ ಔಟಾಗದೆ 5
ಅಮಿತ್ ಮಿಶ್ರಾ ಒಬಿಎಸ್ 1
ಟ್ರೆಂಟ್ ಬೌಲ್ಟ್ ಔಟಾಗದೆ 0
ಇತರ 6 ಒಟ್ಟು (19.5 ಓವರ್‌ಗಳಲ್ಲಿ 8 ವಿಕೆಟಿಗೆ) 165
ವಿಕೆಟ್ ಪತನ: 1-66, 2-84, 3-87, 4-111, 5-111, 6-151, 7-158, 8-161,
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-42-2
ಮೊಹಮ್ಮದ್ ನಬಿ 4-0-29-0
ಖಲೀಲ್ ಅಹ್ಮದ್ 2.5-0-24-2
ರಶೀದ್ ಖಾನ್ 4-1-15-2
ಬಾಸಿಲ್ ಥಂಪಿ 4-0-41-0
ದೀಪಕ್ ಹೂಡಾ 1-0-13-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.