![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 5, 2019, 6:00 AM IST
ಹೊಸದಿಲ್ಲಿ: ತವರಿನ “ಫಿರೋಜ್ ಶಾ ಕೋಟ್ಲಾ’ ಅಂಗಳದಲ್ಲಿ ನಡೆದ ಗುರುವಾರದ ಸಣ್ಣ ಮೊತ್ತದ ಮೇಲಾಟದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್‌ಗಳಿಂದ ಸನ್‌ರೈಸರ್ ಹೈದರಾಬಾದ್‌ಗೆ ಶರಣಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಡೆಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ತೀರಾ ನಿರಾಶಾದಾಯಕ ಆಟವಾಡಿತು. ಅಯ್ಯರ್ ಪಡೆಗೆ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 129 ರನ್ ಮಾತ್ರ. ಈ ಜಯದೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.
ಹೈದರಾಬಾದ್‌ಗೆ ಈ ಸಣ್ಣ ಗುರಿ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿತು. ಅದು 18.3 ಓವರ್‌ಗಳಲ್ಲಿ 5 ವಿಕೆಟಿಗೆ 131ರನ್ ಬಾರಿಸಿ ಜಯ ದಾಖಲಿಸಿತು. ವಾರ್ನರ್ (10) ಬೇಗನೇ ಔಟಾದರೆ, ಬೇರ್‌ಸ್ಟೊ 48 ರನ್ ಮಾಡಿದರು. ಇವರಿಬ್ಬರ ವಿಕೆಟ್ 4 ರನ್ ಅಂತರದಲ್ಲಿ ಉರುಳಿತು. ಬಳಿಕ ಮನೀಷ್ ಪಾಂಡೆ (10), ವಿಜಯ್ ಶಂಕರ್ (16) ಆರು ರನ್ ಅಂತರದಲ್ಲಿ ನಿರ್ಗಮಿಸಿದರು. ದೀಪಕ್ ಹೂಡಾ ಕೂಡ ವಿಫಲರಾದರು (10). ಕೊನೆಯಲ್ಲಿ ಮೊಹಮ್ಮದ್ ನಬಿ ಮತ್ತು ಯೂಸುಫ್ ಪಠಾಣ್ ಸೇರಿಕೊಂಡು ತಂಡವನ್ನು ದಡ ಸೇರಿಸಿದರು.
ಹೈದರಾಬಾದ್‌ನ ಸಾಂ ಕ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಟಿ20 ಜೋಶ್ ತೋರಲು ಸಂಪೂರ್ಣ ವಿಫಲವಾಯಿತು. ತಂಡದ ಯಾವುದೇ ಬಿಗ್ ಹಿಟ್ಟರ್ ಸಿಡಿಯಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಕ್ರೀಸ್ ಆಕ್ರಮಿಸಿಕೊಂಡರೂ ಇನ್ನೊಂದು ತುದಿಯಲ್ಲಿ ವಿಕೆಟ್ ಉರುಳುವುದನ್ನಷ್ಟೇ ಅವರು ಕಾಣಬೇಕಾಯಿತು. 43 ರನ್ ಹೊಡೆದ ಅಯ್ಯರ್ ಅವರದೇ ಡೆಲ್ಲಿ ಸರದಿಯ ಗರಿಷ್ಠ ಮೊತ್ತ. 41 ಎಸೆತಗಳ ಈ ಆಟದಲ್ಲಿ 3 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಆಟಕ್ಕಿಳಿದು 13 ಎಸೆತಗಳಿಂದ ಅಜೇಯ 23 ರನ್ ಮಾಡಿದ್ದರಿಂದ (1 ಬೌಂಡರಿ, 2 ಸಿಕ್ಸರ್) 130ರ ಗುರಿ ನಿಗದಿಪಡಿಸಲು ಸಾಧ್ಯವಾಯಿತು.
ಹೈದರಾಬಾದ್‌ನ ಎಲ್ಲ 5 ಮಂದಿ ಬೌಲರ್‌ಗಳು ಸೇರಿಕೊಂಡು ಡೆಲ್ಲಿಗೆ ಕಡಿವಾಣ ಹಾಕಿದರು. ಮೊಹಮ್ಮದ್ ನಬಿ, ಭುವನೇಶ್ವರ್ ಕುಮಾರ್, ಕೌಲ್ ತಲಾ 2 ವಿಕೆಟ್ ಹಾರಿಸಿದರು. ರಶೀದ್ ಖಾನ್ ಮತ್ತು ಸಂದೀಪ್ ಶರ್ಮ ಒಂದೊಂದು ವಿಕೆಟ್ ಕಿತ್ತರು.ಪೃಥ್ವಿ ಶಾ (11), ಶಿಖರ್ ಧವನ್ (12), ರಿಷಬ್ ಪಂತ್ (5) ಅವರ ವೈಫಲ್ಯ ಡೆಲ್ಲಿಗೆ ಮುಳುವಾಯಿತು.
ಸ್ಕೋರ್‌ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಬಿ ಭುವನೇಶ್ವರ್ 11
ಶಿಖರ್ ಧವನ್ ಸಿ ಸಂದೀಪ್ ಬಿ ನಬಿ 12
ಶ್ರೇಯಸ್ ಅಯ್ಯರ್ ಬಿ ರಶೀದ್ 43
ರಿಷಬ್ ಪಂತ್ ಸಿ ಹೂಡಾ ಬಿ ನಬಿ 5
ರಾಹುಲ್ ತೆವಾಟಿಯ ಸಿ ನಬಿ ಬಿ ಸಂದೀಪ್ 5
ಕಾಲಿನ್ ಇನ್‌ಗಾÅಮ್ ಸಿ ಪಾಂಡೆ ಬಿ ಕೌಲ್ 5
ಕ್ರಿಸ್ ಮಾರಿಸ್ ಸಿ ನಬಿ ಬಿ ಭುವನೇಶ್ವರ್ 17
ಅಕ್ಷರ್ ಪಟೇಲ್ ಔಟಾಗದೆ 23
ಕಾಗಿಸೊ ರಬಾಡ ಸಿ ಭುವನೇಶ್ವರ್ ಬಿ ಕೌಲ್ 3
ಇಶಾಂತ್ ಶರ್ಮ ಔಟಾಗದೆ 0
ಇತರ 5
ಒಟ್ಟು (8 ವಿಕೆಟಿಗೆ) 129
ವಿಕೆಟ್ ಪತನ: 1-14, 2-36, 3-52, 4-61, 5-75, 6-93, 7-107, 8-115.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-27-2
ಮೊಹಮ್ಮದ್ ನಬಿ 4-0-21-2
ಸಿದ್ಧಾರ್ಥ್ ಕೌಲ್ 4-0-35-2
ರಶೀದ್ ಖಾನ್ 4-0-18-1
ಸಂದೀಪ್ ಶರ್ಮ 4-0-25-1
ಸನ್‌ರೈಸರ್ ಹೈದಾರಾಬಾದ್
ಡೇವಿಡ್ ವಾರ್ನರ್ ಸಿ ಮಾರಿಸ್ ಬಿ ರಬಾಡ 10
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ತೆವಾಟಿಯ 48
ವಿಜಯ್ ಶಂಕರ್ ಸಿ ಅಯ್ಯರ್ ಬಿ ಪಟೇಲ್ 16
ಮನೀಷ್ ಪಾಂಡೆ ಸಿ ಶಾ ಬಿ ಇಶಾಂತ್ 10
ದೀಪಕ್ ಹೂಡಾ ಸಿ ರಬಾಡ ಬಿ ಲಮಿಚಾನೆ 10
ಯೂಸುಫ್ ಪಠಾಣ್ ಔಟಾಗದೆ 9
ಮೊಹಮ್ಮದ್ ನಬಿ ಔಟಾಗದೆ 17
ಇತರ 11
ಒಟ್ಟು (18.3 ಓವರ್‌ಗಳಲ್ಲಿ 5 ವಿಕೆಟಿಗೆ) 131
ವಿಕೆಟ್ ಪತನ: 1-64, 2-68, 3-95, 4-101, 5-111.
ಬೌಲಿಂಗ್:
ಸಂದೀಪ್ ಲಮಿಚಾನೆ 4-0-32-1
ಅಕ್ಷರ್ ಪಟೇಲ್ 4-0-18-1
ಕ್ರಿಸ್ ಮಾರಿಸ್ 3-0-26-0
ಕಾಗಿಸೊ ರಬಾಡ 3.3-0-32-1
ರಾಹುಲ್ ತೆವಾಟಿಯ 3-0-10-1
ಇಶಾಂತ್ ಶರ್ಮ 1-0-5-1
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.