ರಾಜಸ್ಥಾನ ರಾಯಲ್ಸ್‌ ಗೆ ಕಿಂಗ್ಸ್‌ ಸವಾಲು


Team Udayavani, Apr 11, 2019, 6:30 AM IST

rajastan

ಜೈಪುರ: ಮಂಗಳವಾರದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಭರ್ಜರಿ 7ವಿಕೆಟ್‌ಗಳ ಗೆಲುವು ಸಾಧಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಜೈಪುರಕ್ಕೆ ಬಂದಿಳಿದಿದ್ದು. ಗುರುವಾರ ಜೈಪುರ ಅಂಗಳದಲ್ಲಿ ರಾಜಸ್ಥಾನದ ವಿರುದ್ಧ ಆಡಲಿಳಿಯಲಿದೆ. ರಾಜಸ್ಥಾನ ವಿರುದ್ಧ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಚೆನ್ನೈ 2ನೇ ಪಂದ್ಯದಲ್ಲೂ ರಾಜಸ್ಥಾನ ಮೇಲೆ ಸವಾರಿ ಮಾಡುವ ಸಿದ್ಧತೆಯಲ್ಲಿದೆ.

ಮಾ.31ರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ 8 ರನ್‌ಗಳ ಸೋಲನುಭವಿಸಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ರಹಾನೆ ಪಡೆ ಕಾತುರದಿಂದ ಕಾಯುತ್ತಿದೆ. ಆಡಿದ 5 ಪಂದ್ಯದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೆ ಗೆದ್ದಿರುವ ರಾಜಸ್ಥಾನ್‌ಗೆ ಉಳಿದಿರುವ ಪಂದ್ಯ ಗಳನ್ನು ಜಯಿಸುವುದು ಅನಿರ್ವಾಯ. ಈ ಪಂದ್ಯದಲ್ಲಿಯೂ ಸೋತರೆ ಪ್ಲೇಆಫ್ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಚೆನ್ನೈ ತಂಡವನ್ನು ಸೋಲಿಸಿ ಗೆಲು ವಿನ ಟ್ರ್ಯಾಕ್‌ ಏರುವ ತಯಾರಿ ಮಾಡಿಕೊಳ್ಳುತ್ತಿದೆ. ಚೆನ್ನೈ- ರಾಜಸ್ಥಾನ್‌ ಐಪಿಎಲ್‌ನಲ್ಲಿ ಕಳೆದ ಪಂದ್ಯ ಸೇರಿದಂತೆ 21 ಬಾರಿ ಮುಖಾಮುಖೀ ಯಾಗಿವೆ.

ಇದರಲ್ಲಿ ಚೆನ್ನೈ 13ರಲ್ಲಿ ಜಯಿಸಿದ್ದರೆ ರಾಜಸ್ಥಾನ್‌ 8ರಲ್ಲಿ ಗೆದ್ದಿದೆ.

ಚೆನ್ನೈ ಬಲಿಷ್ಠ ತಂಡ
ಪ್ರತೀ ಸೀಸನ್‌ನಲ್ಲೂ ಬಲಿಷ್ಠ ತಂಡವೆನಿಸಿ ಕೊಂಡಿರುವ ಚೆನ್ನೈ ಈ ಬಾರಿಯೂ ಆಡಿದ 6 ಪಂದ್ಯಗಳಲ್ಲಿ ಐದನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಹಿರಿಯರನ್ನೇ ಹೆಚ್ಚಾಗಿ ಹೊಂದಿರುವ ಈ ತಂಡದಲ್ಲಿ ಅನುಭವಕ್ಕೇನೂ ಕೊರತೆ ಇಲ್ಲ. ತಂಡದ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಡಿಮೆ ರನ್‌ ಗಳಿಸಿದರೂ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಬಲಿಷ್ಠ ಬೌಲಿಂಗ್‌ ಪಡೆ ಒಂದೆಡೆಯಾದರೆ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡರೆ ನಾಯಕನ ಜವಾಬ್ದಾರಿಯುತ ಆಟ ಇವೆಲ್ಲ ಚೆನ್ನೈ ತಂಡದ ಪ್ಲಸ್‌ ಪಾಯಿಂಟ್‌. ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ವಿರುದ್ಧ ಆರಂಭಿಕ ಆಘಾತ ಎದುರಿಸಿದ ಚೆನ್ನೈಗೆ ಆಸರೆಯಾಗಿದ್ದು ನಾಯಕ ಧೋನಿ. 75 ರನ್‌ ಗಳಿಸಿ ಅವರು ತಂಡದ ಮೊತ್ತವನ್ನು 175ಕ್ಕೆ ತಲುಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ. ಇಮ್ರಾನ್‌ ತಾಹಿರ್‌, ಹರ್ಭಜನ್‌ಸಿಂಗ್‌, ರವೀಂದ್ರ ಜಡೇಜಾ ಸ್ಪಿನ್‌ ದಾಳಿಗೆ ಎದುರಾಳಿ ಬ್ಯಾಟ್ಸ್‌ ಮನ್‌ಗಳು ರನ್‌ ಗಳಿಸಲು ಪರದಾಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಮಂಗಳವಾರ ಕೆಕೆಆರ್‌ವಿರುದ್ಧದ ಆಟವೇ ಸಾಕ್ಷಿ.

ರಾಜಸ್ಥಾನ್‌ ಕೈ ಹಿಡಿಯದ ಲಕ್‌
ಬಲಿಷ್ಠ ಆಟಗಾರರನ್ನೇ ಹೊಂದಿದ ರಾಜಸ್ಥಾನ್‌ಗೆ ಅದೃಷ್ಟದ ಬಾಗಿಲು ಇನ್ನೂ ತೆರೆದಿಲ್ಲ. ಸುಲಭವಾಗಿ ಗೆಲ್ಲುವ ಪಂದ್ಯಗಳನ್ನೆಲ್ಲ ಕೊನೆಯ ಹಂತದಲ್ಲಿ ಕೈಚೆಲ್ಲುತ್ತಿರುವುದು ರಾಜಸ್ಥಾನ್‌ ತಂಡಕ್ಕೆ ಹಿನ್ನಡೆಯಾಗಿದೆ. ಆರಂಭದ 2 ಪಂದ್ಯಗಳಲ್ಲಿ ಮಿಂಚಿದ ಸಂಜು ಸ್ಯಾಮ್ಸನ್‌ ಮತ್ತು ಜೋಸ್‌ ಬಟ್ಲರ್‌ ಬ್ಯಾಟ್‌ ಅನಂತರದ ಪಂದ್ಯಗಳಲ್ಲಿ ಸದ್ದು ಮಾಡದಿರುವುದು ಸಮಸ್ಯೆಯಾದರೆ, ಸ್ಟೀವನ್‌ ಸ್ಮಿತ್‌ ಪಾರ್ಮ್ಗೆ ಮರಳಿರುವುದು ತಂಡಕ್ಕೆ ಕೊಂಚ ಚೇತರಿಕೆಯಾಗಿದೆ.

ಚೆನ್ನೈ ವಿರುದ್ಧ ಆಸ್ಟ್ರೇಲಿಯದ ಬಿಗ್‌ ಹಿಟ್ಟರ್‌ ಆಶrನ್‌ ಟರ್ನರ್‌ ಕಣಕಿಳಿಯುವ ಸಾಧ್ಯತೆ ಇದೆ. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ , ಬಟ್ಲರ್‌, ಸ್ಮಿತ್‌ ನಿರೀಕ್ಷಿತ ಪ್ರದರ್ಶನ ನೀಡಿದರೆ ರಾಜಸ್ಥಾನ್‌ ದೊಡ್ಡ ಮೊತ್ತ ಕಲೆಹಾಕುವಲ್ಲಿ ಅನುಮಾನವಿಲ್ಲ. ಬೌಲಿಂಗ್‌ನಲ್ಲಿ ಕನ್ನಡಿಗರಾದ ಕೃಷ್ಣಪ್ಪ ಗೌತಮ್‌, ಶ್ರೇಯಸ್‌ ಗೋಪಾಲ್‌ ಉತ್ತಮ ಲಯದಲ್ಲಿದ್ದಾರೆ. ಇವರಿಗೆ ವೇಗಿಗಳಾದ ಜಯ್‌ದೇವ್‌ ಉನಾದ್ಕತ್‌, ಧವಳ್‌ ಕುಲಕರ್ಣಿ ಸಾಥ್‌ ನೀಡಿದರೆ ರಾಜಸ್ಥಾನ್‌ಗೆ ಗೆಲುವು ಒಲಿಯುವುದು ಕಷ್ಟವೇನಲ್ಲ.

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.