ಮೊಹಾಲಿ ಮೇಲಾಟದಲ್ಲಿ ಜಯ ಯಾರಿಗೆ?
ಗೇಲ್-ರಸೆಲ್ ಪ್ರಮುಖ ಆಕರ್ಷಣೆ
Team Udayavani, May 3, 2019, 6:00 AM IST
ಮೊಹಾಲಿ: ಶುಕ್ರವಾರದ ಐಪಿಎಲ್ ಹಣಾಹಣಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್- ಕೋಲ್ಕತಾ ನೈಟ್‌ರೈಡರ್ ಮೊಹಾಲಿ ಅಂಗಳದಲ್ಲಿ ಸೆಣಸಲಿವೆ. ಇತ್ತಂಡಗಳಿಗೂ ಪ್ಲೇ ಆಫ್ಗೆ ಪ್ರವೇಶ ಪಡೆಯಲು ಇದು ಮಹತ್ವದ ಪಂದ್ಯವಾಗಿದೆ.
ಎರಡು ತಂಡಗಳು 12 ಪಂದ್ಯಗಳಲ್ಲಿ 10 ಅಂಕಗಳನ್ನು ಪಡೆದಿವೆ. ಆದರೆ ರನ್‌ರೇಟ್ ಆಧಾರದಲ್ಲಿ ಕೆಕೆಆರ್ ಪಂಜಾಬ್‌ಗಿಂತ ಒಂದು ಸ್ಥಾನ ಮುಂದಿದೆ. ಮೊದಲ ಮುಖಾಮುಖೀಯಲ್ಲಿ ಕೆಕೆಆರ್ ಪಂಜಾಬ್‌ಗ 28 ರನ್‌ಗಳ ಸೋಲುಣಿಸಿತ್ತು. ಈ ಸೋಲಿನ ಸೇಡನ್ನು ತೀರಿಸಲು ಪಂಜಾಬ್ ತವರಿನಲ್ಲಿ ಕಾದು ಕುಳಿತಿದೆ. ಎರಡು ತಂಡಗಳಿಗೂ ದೊಡ್ಡ ಅಂತರದ ಗೆಲುವು ಅಗತ್ಯವಾಗಿದೆ. ಇಲ್ಲವಾದರೆ ರನ್‌ರೇಟ್ ಆಧಾರದಲ್ಲಿ ಪ್ಲೇ ಆಫ್ ಅವಕಾಶವನ್ನೂ ಕಳೆದುಕೊಳ್ಳುವ ಸ್ಥಿತಿಯೂ ಬರಬಹುದು. ಆದ್ದರಿಂದ ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡು ಶುಕ್ರವಾರ ಎರಡು ತಂಡಗಳು ಕಣಕ್ಕಿಳಿಯಲಿವೆ.
ಪಂಜಾಬ್‌ಗ ರಾಹುಲ್ ಬಲ
ಕಳೆದ ಕೆಲವು ಪಂದ್ಯಗಳಲ್ಲಿ ಯುನಿವರ್ಸ್ ಬಾಸ್ ಗೇಲ್ ಬ್ಯಾಟ್ ಸದ್ದು ಮಾಡದಿರುವುದೂ ಪಂಜಾಬ್‌ಗ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ನಂಬಿಕೆ ಇಡುವ ಹಾಗಿಲ್ಲ. ಮಿಲ್ಲರ್, ಅಗರ್ವಾಲ್, ಪೂರನ್, ಮನ್‌ದೀಪ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಮಾತ್ರ ಪ್ರತೀ ಪಂದ್ಯದಲ್ಲೂ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಈ ಐಪಿಎಲ್‌ನಲ್ಲಿ 520 ರನ್ ಬಾರಿಸಿರುವ ರಾಹುಲ್ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ತಂಡದ ಬ್ಯಾಟಿಂಗ್ ವಿಭಾಗ ರಾಹುಲ್ ಮೇಲೆ ಅವಲಂಬಿತವಾಗಿದೆ. ಇನ್ನು ಬೌಲಿಂಗ್ ವಿಭಾಗ ತೀರ ಕಳಪೆ, ಅನುಭವಿ ಬೌಲರ್‌ಗಳು ತಂಡದಲ್ಲಿದ್ದರೂ ಯಾರೊಬ್ಬರೂ ಘಾತಕವೆನಿಸಿಲ್ಲ. ಅಶ್ವಿನ್‌ದ್ವಯರು, ಮಹಮ್ಮದ್ ಶಮಿ, ಆಂಡ್ರೂé ಟೈ, ಸ್ಯಾಮ್ ಕರಣ್, ಅಂಕಿತ್ ರಜಪೂತ್ ದುಬಾರಿಯಾಗುತ್ತಿದ್ದಾರೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಪಂಜಾಬ್‌ನಿಂದ ಸಂಘಟಿತ ಪ್ರದರ್ಶನ ಅಗತ್ಯವಿದೆ.
ಕೆಕೆಆರ್ ಸಮತೋಲಿತ ತಂಡ
ಈ ಆವೃತ್ತಿಯಲ್ಲಿ ಕೆಕೆಆರ್ ಅತ್ಯಂತ ಸಮತೋಲಿತ ತಂಡ. ಆಲ್ ರೌಂಡರ್ ಆಂಡ್ರೂé ರಸೆಲ್ ತಂಡದ ದೊಡ್ಡ ಆಸ್ತಿ. ಯಾವುದೇ ಪರಿಸ್ಥಿಯಲ್ಲಿಯೂ ಸಿಡಿಯಬಲ್ಲ ರಸೆಲ್ ಅತ್ಯುತ್ತಮ ಪ್ರದರ್ಶನ ನೀಡಿತ್ತಾ ಬಂದಿದ್ದಾರೆ. ಅಸಾಧ್ಯವಾದ ಪಂದ್ಯಗಳನ್ನೆಲ್ಲ ಸಾಧ್ಯ ಎನ್ನುವ ರೀತಿಯಲ್ಲಿ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಕಿಸ್ ಲೀನ್, ಶುಭಮನ್ ಗಿಲ್, ನಾಯಕ ದಿನೇಶ್ ಕಾರ್ತಿಕ್ ಫಾರ್ಮ್ಗೆ ಮರಳಿರುವುದೂ ತಂಡಕ್ಕೆ ಪ್ಲಸ್ ಪಾಂಯಿಂಟ್. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ ಬಿರುಸಿನ ಬ್ಯಾಟಿಂಗ್ ಕೂಡ ಕೆಕೆಆರ್‌ಗೆ ಹೆಚ್ಚು ಬಲ ನೀಡಿದಂತಾಗಿದೆ. ಬೌಲಿಂಗ್‌ನಲ್ಲಿ ಸುನಿಲ್ ನಾರಾಯಣ್, ಪ್ರಸಿದ್ಧ ಕೃಷ್ಣ, ಪೀಯೂಷ್ ಚಾವ್ಲಾ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.