ರಸೆಲ್‌-ರಬಾಡ ಮುಖಾಮುಖೀ ಕೌತುಕ

ಈಡನ್‌ನಲ್ಲಿ ಇಂದು ಕೆಕೆಆರ್‌-ಡೆಲ್ಲಿ ಮೇಲಾಟ

Team Udayavani, Apr 12, 2019, 9:34 AM IST

dc

ಕೋಲ್ಕತಾ: ಐಪಿಎಲ್‌ನ ಮರು ಪಂದ್ಯಕ್ಕೆ ಕೋಲ್ಕತಾ ನೈಟ್‌ರೈಡರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಅಣಿಯಾಗಿವೆ. ಶುಕ್ರವಾರ ರಾತ್ರಿ ಈ ಪಂದ್ಯ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆಯಲಿದೆ. ವಿಶೇಷವೆಂದರೆ, ಕೆಕೆಆರ್‌ನ ಮಾಜಿ ನಾಯಕ ಸೌರವ್‌ ಗಂಗೂಲಿ ತವರಿನಂಗಳದ ಮುಖಾಮುಖೀಯ ವೇಳೆ ಅತಿಥಿಯಾಗಿರುವುದು. ಕಾರಣ, ಅವರೀಗ ಡೆಲ್ಲಿ ತಂಡದ ಸಲಹೆಗಾರ!

ಕೋಟ್ಲಾದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯ ದಲ್ಲಿ ಕೆಕೆಆರ್‌ ವಿರುದ್ಧ ಡೆಲ್ಲಿ ತಂಡ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಎರಡೂ ತಂಡಗಳು 185 ರನ್‌ ಬಾರಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಸೂಪರ್‌ ಓವರ್‌ಗೆ ವಿಸ್ತರಿಸಲ್ಪಟ್ಟ ಏಕೈಕ ಪಂದ್ಯವಾಗಿದೆ.

ರಬಾಡ ಎಸೆದ ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ರಸೆಲ್‌ ಬೌಂಡರಿ ಸಿಡಿಸಿದ್ದರು. ಬಳಿಕ ಅದ್ಭುತ ಯಾರ್ಕರ್‌ ಒಂದರ ಮೂಲಕ ಮಿಡ್ಲ್ ಸ್ಟಂಪ್‌ ಎಗರಿಸಿದ ರಬಾಡ, ರಸೆಲ್‌ಗೆ ಪೆವಿಲಿಯನ್‌ ಹಾದಿ ತೋರಿಸಿದ್ದರು. ಈ ಎಸೆತವನ್ನು ಗಂಗೂಲಿ “ಬಾಲ್‌ ಆಫ್ ದ ಟೂರ್ನಮೆಂಟ್‌’ ಎಂದು ಹೊಗಳಿದ್ದನ್ನು ನೆನಪಿಸಿಕೊಳ್ಳಬಹುದು. ಹೀಗಾಗಿ ಮತ್ತೂಮ್ಮೆ ರಬಾಡ-ರಸೆಲ್‌ ಎದುರುಗೊಳ್ಳುವುದನ್ನು ಕಾಣಲು ಅಭಿಮಾನಿಗಳು ಕಾತರಗೊಂಡಿದ್ದಾರೆ.

“ರಸೆಲ್‌ ಫ್ಯಾಕ್ಟರ್‌’
ಮಾ. 27ರ ಬಳಿಕ ಕೆಕೆಆರ್‌ ಈಡನ್‌ ಅಂಗಳದಲ್ಲಿ ಆಡಲಿ ಳಿಯಲಿದೆ. ಈ ಅವಧಿಯಲ್ಲಿ ಕೋಟ್ಲಾ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟರೆ, ಬೆಂಗಳೂರು ಮತ್ತು ಜೈಪುರದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್‌ ತಂಡಗಳಿಗೆ ಸೋಲುಣಿಸಿ ಮೆರೆದಾಡಿದೆ. ಈ ಎಲ್ಲ ಪಂದ್ಯ ಗಳಲ್ಲೂ “ರಸೆಲ್‌ ಫ್ಯಾಕ್ಟರ್‌’ ಎದುರಾಳಿಗಳನ್ನು ಕಾಡಿತ್ತು. ಕೂಟದಲ್ಲಿ ಏಕರೀತಿಯ ಫಾರ್ಮ್ ಕಾಯ್ದು ಕೊಂಡು ಬಂದಿರುವ ಕೆರಿಬಿಯನ್‌ನ ಬಿಗ್‌ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಅಸಾಧ್ಯವಾದುದನ್ನೆಲ್ಲ ತಮ್ಮ ಸ್ಫೋಟಕ ಬ್ಯಾಟಿಂಗಿನಿಂದ ಸಾಧ್ಯವಾಗಿಸುತ್ತ ಬಂದಿದ್ದಾರೆ. 5 ಇನ್ನಿಂಗ್ಸ್‌ಗಳಿಂದ 257 ರನ್‌ ಪೇರಿಸಿದ್ದಾರೆ. ಸರಾಸರಿ 128.50; ಸ್ಟ್ರೈಕ್‌ರೇಟ್‌ 212.39. ಇದರಲ್ಲಿ 150 ರನ್‌ ಸಿಕ್ಸರ್‌ ಮೂಲಕವೇ ಸಿಡಿಯಲ್ಪಟ್ಟಿರುವುದು ರಸೆಲ್‌ ಅಬ್ಬರಕ್ಕೆ ಸಾಕ್ಷಿ. ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ ಇಡೀ ಬ್ಯಾಟಿಂಗ್‌ ಸರದಿಯೇ ಕೈಕೊಟ್ಟಾಗ ರಸೆಲ್‌ ಅರ್ಧ ಶತಕ ಬಾರಿಸಿದ್ದನ್ನು ಮರೆಯುವಂತಿಲ್ಲ.

ಡೆಲ್ಲಿಗೆ ಯುವಪಡೆಯ ಬಲಯುವ ಪಡೆಯನ್ನೇ ಹೊಂದಿರುವ ಡೆಲ್ಲಿ ತಂಡದ ದೊಡ್ಡ ಸಮಸ್ಯೆಯೆಂದರೆ ಯಾರೂ ಸ್ಥಿರ ಬ್ಯಾಟಿಂಗ್‌ ನಡೆಸದಿರುವುದು. ಪೃಥ್ವಿ ಶಾ, ಧವನ್‌, ಅಯ್ಯರ್‌, ಪಂತ್‌, ವಿಹಾರಿ, ಇನ್‌ಗಾಮ್‌ ಅವರನ್ನೊಳಗೊಂಡ ಡೆಲ್ಲಿ ಬ್ಯಾಟಿಂಗ್‌ ಸರದಿ ಕೆಕೆಆರ್‌ಗೆ ಹೋಲಿಸಿದರೆ ದುರ್ಬಲ. ಬೌಲಿಂಗ್‌ ಕೂಡ ಘಾತಕವೇನಲ್ಲ. ಬದ್ರಿ ಆಗಮನ ಬದಲಾವಣೆ ತಂದೀತೇ ಎಂದು ಕಾದು ನೋಡಬೇಕು.

ಕೆಕೆಆರ್‌ ತ್ರಿವಳಿ ಸ್ಪಿನ್ನರ್‌ಗಳ ಬಲದೊಂದಿಗೆ ಸಶಕ್ತವಾಗಿದೆ. ಚಾವ್ಲಾ, ಕುಲದೀಪ್‌, ನಾರಾಯಣ್‌ ದಾಳಿಯನ್ನು ಡೆಲ್ಲಿ ಹೇಗೆ ನಿಭಾಯಿ ಸಲಿದೆ ಎಂಬುದು ನಿರ್ಣಾಯಕವಾಗಲಿದೆ.

ಸೇಡಿಗೆ ಕಾದಿದೆ ಕೆಕೆಆರ್‌
ಅಂದು ಅನುಭವಿಸಿದ ಸೋಲಿಗೆ ಕೆಕೆಆರ್‌ ಈಗ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಕಾರ್ತಿಕ್‌ ಬಳಗಕ್ಕೆ ಇದು ಅಸಾಧ್ಯ ಸವಾಲೇನೂ ಅಲ್ಲ. ಕೋಲ್ಕತಾದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಆತಿಥೇಯ ತಂಡವೇ ಜಯ ಸಾಧಿಸಿದೆ. ಬಲಿಷ್ಠ ಹೈದರಾಬಾದ್‌ ಮತ್ತು ಪಂಜಾಬ್‌ ತಂಡಗಳಿಗೆ ಕೆಕೆಆರ್‌ ಇಲ್ಲಿ ಸೋಲುಣಿಸಿದೆ.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.