ಪಂಜಾಬ್ ವಿರುದ್ಧ ಮುಂಬೈಗೆ ಸೇಡಿನ ಪಂದ್ಯ
Team Udayavani, Apr 10, 2019, 6:30 AM IST
ಮುಂಬಯಿ: ಸೋಮವಾರದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ ಬೆನ್ನಲ್ಲೇ ಪಂಜಾಬ್ ಮೊಹಾಲಿಯಿಂದ ಹೊರಟು ಮುಂಬಯಿಗೆ ಬಂದಿಳಿದಿದೆ. ಬುಧವಾರ ವಾಂಖೇಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಡಲಿದೆ. ಆದರೆ ಈ ಸವಾಲು ಸುಲಭದ್ದಲ್ಲ. ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ಎಡವಿದ ಮುಂಬೈ ಪಡೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿ ಕುಳಿತಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಪಂಜಾಬ್ 8 ವಿಕೆಟ್‌ಗಳಿಂದ ರೋಹಿತ್ ಬಳಗವನ್ನು ಮಣಿಸಿತ್ತು. ಮುಂಬೈ 7 ವಿಕೆಟಿಗೆ 176 ರನ್ ಪೇರಿಸಿದರೂ ಪಂಜಾಬ್ 18.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 177 ರನ್ ಬಾರಿಸಿ ಗೆದ್ದು ಬಂದಿತ್ತು.
ಮುಂಬೈ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ನಾಯಕ ರೋಹಿತ್ ಶರ್ಮ ಇನ್ನೂ ಟಿ20 ಜೋಶ್ ತೋರದಿರುವುದು ದೊಡ್ಡ ಹಿನ್ನಡೆ. ಇದರಿಂದ ಉತ್ತಮ ಆರಂಭ ಸಾಧ್ಯವಾಗುತ್ತಿಲ್ಲ. ಆದರೆ ಡಿ ಕಾಕ್, ಸೂರ್ಯಕುಮಾರ್, ಇಶಾನ್ ಕಿಶನ್, ಪೊಲಾರ್ಡ್, ಪಾಂಡ್ಯ ಬ್ರದರ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದೆ. ಇವರಲ್ಲಿ ಇಬ್ಬರು ಸಿಡಿದರೂ ಮುಂಬೈಯಿಂದ ದೊಡ್ಡ ಮೊತ್ತ ನಿರೀಕ್ಷಿಸಬಹುದು.
ಪಂಜಾಬ್‌ಗ ಕನ್ನಡಿಗರ ಬಲ
ಪಂಜಾಬ್ ತಂಡದ ದೊಡ್ಡ ಬಲವೆಂದರೆ ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್ನಲ್ಲಿರುವುದು. ಮೊದಲ ಸುತ್ತಿನ ಪಂದ್ಯದಲ್ಲಿ ಇವರಿಬ್ಬರ ಜತೆಗೆ ಗೇಲ್ ಕೂಡ ಅಮೋಘ ಆಟವಾಡಿ ಪಂಜಾಬ್‌ಗ ಭರ್ಜರಿ ಜಯ ತಂದಿತ್ತಿದ್ದರು. ಸೋಮವಾರವಷ್ಟೇ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಮತ್ತು ಅಗರ್ವಾಲ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ ಎದುರಿನ ಮರು ಪಂದ್ಯದಲ್ಲೂ ಇವರ ಆಟ ನಿರ್ಣಾಯಕ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ “ಯುನಿವರ್ಸ್ ಬಾಸ್’ ಗೇಲ್ ಅವರ ಬ್ಯಾಟ್ ಸದ್ದು ಮಾಡದಿರುವುದು ಪಂಜಾಬ್‌ಗ ಕೊಂಚ ಹಿನ್ನಡೆಯಾಗಿದೆ. ಗೇಲ್ ಮತ್ತೆ ಅಬ್ಬರಿಸಿದರೆ ಪಂಜಾಬ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಅನುಮಾನವಿಲ್ಲ.
ಎದುರಾಗಿದೆ ಅಲ್ಜಾರಿ ಭೀತಿ
ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಮುಂಬೈ ಈಗ ಚಿಗುರಿಕೊಂಡಿದೆ. ಐದರಲ್ಲಿ 3 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿದೆ. ಅಲ್ಜಾರಿ ಜೋಸೆಫ್ ಎಂಬ ವೇಗದ ಅಸ್ತ್ರ ಬೌಲಿಂಗ್ ಬತ್ತಳಿಕೆಯನ್ನು ಸೇರಿಕೊಂಡಿರುವುದರಿಂದ ಮುಂಬೈ ಸಾಮರ್ಥ್ಯವನ್ನು ಬೇರೆಯೇ ದೃಷ್ಟಿಯಿಂದ ನೋಡಬೇಕಿದೆ. ಹೈದರಾಬಾದ್ ವಿರುದ್ಧ ಕೇವಲ 136 ರನ್ ಗಳಿಸಿಯೂ ಮುಂಬೈ ಗೆಲ್ಲುವಂತಾದದ್ದು ಜೋಸೆಫ್ ಅವರ ಘಾತಕ ದಾಳಿಯಿಂದ ಎಂಬುದನ್ನು ಮರೆಯುವಂತಿಲ್ಲ. ಐಪಿಎಲ್‌ನ ಪದಾರ್ಪಣ ಪಂದ್ಯದಲ್ಲೇ ಅವರು 12 ರನ್ನಿಗೆ 6 ವಿಕೆಟ್ ಉರುಳಿಸಿ ಇತಿಹಾಸ ಬರೆದರು. ಇವರೊಂದಿಗೆ ಬುಮ್ರಾ, ಬೆಹೆÅಂಡಾಫ್ì, ಪಾಂಡ್ಯಾ ಸಹೋದರರನ್ನು ಒಳಗೊಂಡ ಮುಂಬೈ ಬೌಲಿಂಗ್ ವಿಭಾಗ ಘಾತಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.