ತವರಿನಲ್ಲಿ ಜಯದ ತೇರೆಳೆಯಲು ಮುಂಬೈ ಸಜ್ಜು
Team Udayavani, Apr 13, 2019, 9:42 AM IST
ಮುಂಬಯಿ: ಈ ಬಾರಿಯ ಐಪಿಎಲ್ ಕೂಟದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಮುಖಾಮುಖೀಯಾಗುತ್ತಿವೆ. ಶನಿವಾರದ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ವಾಂಖೆಡೆ ಅಂಗಣದಲ್ಲಿ ಸೆಣೆಸಲಿವೆ.
ಸತತ 3 ಪಂದ್ಯಗಳಲ್ಲಿ ಜಯಿಸಿ ಸಂಭ್ರಮಿ ಸುತ್ತಿರುವ ಮುಂಬೈ ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದರೆ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ರಾಜಸ್ಥಾನ್ ಕೂಟದ 2ನೇ ಗೆಲುವಿಗಾಗಿ ಕಾಯುತ್ತಿದೆ. ರಾಜಸ್ಥಾನ್- ಮುಂಬೈ ಇಷ್ಟರ ವರೆಗೆ 19 ಬಾರಿ ಮುಖಾಮುಖೀಯಾಗಿದ್ದು. 10ರಲ್ಲಿ ಮುಂಬೈ ಗೆದ್ದರೆ 8 ಪಂದ್ಯಗಳನ್ನು ರಾಜಸ್ಥಾನ್ ಜಯಿಸಿದೆ. 1 ಪಂದ್ಯ ರದ್ದಾಗಿದೆ.
ಈ ಪಂದ್ಯ “ವಾಂಖೆಡೆ ಸ್ಟೇಡಿಯಂ’ ನಲ್ಲಿ ನಡೆಯುವುದರಿಂದ ಮುಂಬೈಗೆ ಇದು ತವರಿನ ಪಂದ್ಯ. ಇದರ ಲಾಭ ಮುಂಬೈ ಪಾಲಾಗಬಹುದು. ಇನ್ನೂ ತವರಿನಲ್ಲೇ ಸೋಲುತ್ತಿರುವ ರಾಜಸ್ಥಾನ್ ಗೆಲುವಿನ ಹುಡುಕಾಟದಲ್ಲಿದೆ. ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಈಗಾಗಲೇ ಸೋತಿರುವ ರಾಜಸ್ಥಾನಕ್ಕೆ ಇಲ್ಲಿ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲೇನಾದರೂ ರಾಜಸ್ಥಾನ್ ಎಡವಿದ್ದೇ ಆದರೆ ಪ್ಲೇ ಆಫ್ ಬಾಗಿಲು ಮುಚ್ಚಿದಂತೆ. ಲಸಿತ್ ಮಾಲಿಂಗ ಮತ್ತೇ ಮುಂಬೈ ಬಳಗ ಸೇರಿರುವುದು ತಂಡಕ್ಕೆ ನೆರವಾಗಿದೆ. ನಾಯಕ ರೋಹಿತ್ ಶರ್ಮ ಮರಳಿ ನಾಯಕತ್ವ ವಹಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.