ಮುಂಬೈಗೆ 46 ರನ್ ಜಯ
Team Udayavani, Apr 27, 2019, 9:48 AM IST
ಚೆನ್ನೈ,: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಕೂಟದ ಶುಕ್ರವಾರದ ಬಿಗ್ ಫೈಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 46 ರನ್ನುಗಳಿಂದ ಸೋಲಿಸಿದೆ.
ಗೆಲ್ಲಲು 156 ರನ್ ಗಳಿಸುವ ಸುಲಭ ಸವಾಲು ಪಡೆದ ಚೆನ್ನೈ ತಂಡವು ಲಸಿತ ಮಾಲಿಂಗ ಮತ್ತು ಕೃಣಾಲ್ ಪಾಂಡ್ಯ ದಾಳಿಗೆ ತತ್ತರಿಸಿ ಹೋಯಿತು. 66 ರನ್ನಿಗೆ 6 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ತಂಡಕ್ಕೆ ಯಾರು ಕೂಡ ಆಸರೆಯಾಗಿ ನಿಲ್ಲಲಿಲ್ಲ. ಅಂತಿಮವಾಗಿ 17.4 ಓವರ್‌ಗಳಲ್ಲಿ 109 ರನ್ನಿಗೆ ಆಲೌಟಾಯಿತು. 38 ರನ್ ಗಳಿಸಿದ್ದ ಮುರಳಿ ವಿಜಯ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಧೋನಿ ಅನುಪಸ್ಥಿತಿಯಲ್ಲಿ ಆಡಿದ ಚೆನ್ನೈ ತಂಡವು ತವರಿನಲ್ಲಿ ಮೊದಲ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ಚೆನ್ನೈ ನೆಲದಲ್ಲಿಯೂ ಗೆಲುವು ದಾಖಲಿಸುವ ಉತ್ಸಾಹದಿಂದಲೇ ಆಟ ಆರಂಭಿಸಿತ್ತು. ಕ್ವಿಂಟನ್ ಡಿ ಕಾಕ್ 15 ರನ್ ಗಳಿಸಿ ನಿರ್ಗಮಿಸಿದಾಗ ತಂಡ 24 ರನ್ ಪೇರಿಸಿತ್ತು. ಆದರೆ ಆಬಳಿಕ ರೋಹಿತ್ ಮತ್ತು ಎವಿನ್ ಲೂವಿಸ್ ನಿಧಾನಗತಿಯಲ್ಲಿ ಆಡಿದರು. ಇಬ್ಬರೂ ಅಬ್ಬರದ ಬ್ಯಾಟಿಂಗ್‌ಗೆ ಮುಂದಾಗಲಿಲ್ಲ. ದ್ವಿತೀಯ ವಿಕೆಟಿಗೆ ಅವರಿಬ್ಬರು 75 ರನ್ನುಗಳ ಜತೆಯಾಟ ನಡೆಸಿದ್ದರೂ ಆಗಲೇ 12 ಓವರ್ ಮುಗಿದಿತ್ತು. ತಂಡದ ಮೊತ್ತ 99 ರನ್ ತಲುಪಿದಾಗ ಲೂವಿಸ್ ಔಟಾದರು. ಇನ್ನೆರಡು ರನ್ ಪೇರಿಸುವಷ್ಟರಲ್ಲಿ ಕೃಣಾಲ್ ಪಾಂಡ್ಯ ಕೂಡ ಔಟಾದರು. ಹಾರ್ದಿಕ್ ಪಾಂಡ್ಯ ಕೊನೆ ಹಂತದಲ್ಲಿ ಬಿರುಸಿನ ಆಟವಾಡಿ 18 ಎಸೆತಗಳಿಂದ 23 ರನ್ ಗಳಿಸಿದರು.
ವಿಕೆಟ್‌ನ ಒಂದು ಕಡೆ ಗಟ್ಟಿಯಾಗಿ ನಿಂತು ಭರ್ಜರಿ ಆಟವಾಡಿದ ರೋಹಿತ್ ಒಟ್ಟಾರೆ 48 ಎಸೆತ ಎದುರಿಸಿ 67 ರನ್ ಗಳಿಸಿ ವಿಜಯ್ ಶಂಕರ್‌ಗೆ ವಿಕೆಟ್ ಒಪ್ಪಿಸಿದರು. 6 ಬೌಂಡರಿ ಬಾರಿಸಿದ ಅವರು 3 ಸಿಕ್ಸರ್ ಸಿಡಿಸಿದರು.
ಬಿಗು ದಾಳಿ ಸಂಘಟಿಸಿದ ಮಿಚೆಲ್ ಸ್ಯಾಂಟ್ನರ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಕಿತ್ತರು. ತಾಹಿರ್ ಮತ್ತು ಚಾಹರ್ ತಲಾ ಒಂದು ವಿಕೆಟ್ ಪಡೆದರು. ಚೆನ್ನೈಯಲ್ಲಿ ಅಜೇಯ ಸಾಧನೆ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಎದುರಿಸಿತ್ತು. ಸುರೇಶ್ ರೈನಾ ತಂಡವನ್ನು ಮುನ್ನಡೆಸಿದ್ದರು.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ವಿಜಯ್ ಬಿ ಸ್ಯಾಂಟರ್ 67
ಕ್ವಿಂಟನ್ ಡಿ ಕಾಕ್ ಸಿ ರಾಯುಡು ಬಿ ಚಹರ್ 15
ಇವಿನ್ ಲೇವಿಸ್ ಸಿ ಬ್ರಾವೊ ಬಿ ಸ್ಯಾಂಟ್ನರ್ 32
ಕೃಣಾಲ್ ಪಾಂಡ್ಯ ಸಿ ಸ್ಯಾಂಟ್ನರ್ ಬಿ ತಾಹಿರ್ 1
ಹಾರ್ದಿಕ್ ಪಾಂಡ್ಯ ಔಟಾಗದೆ 23
ಕೈರನ್ ಪೋರ್ಲಾಡ್ ಔಟಾಗದೆ 13
ಇತರ 4
ಒಟ್ಟು (4 ವಿಕೆಟಿಗೆ) 155
ವಿಕೆಟ್ ಪತನ- 1-24, 2-99, 3-103, 4-122
ಬೌಲಿಂಗ್ ದೀಪಕ್ ಚಹರ್ 4-0-46-1
ಹರ್ಭಜನ್ ಸಿಂಗ್ 4-0-23-0
ಇಮ್ರಾನ್ ತಾಹಿರ್ 4-0-37-1
ಡ್ವೆನ್ ಬ್ರಾವೊ 4-0-35-0
ಮಿಚೆಲ್ ಸ್ಯಾಂಟ್ನರ್ 4-0-13-2
ಚೆನ್ನೈ ಸೂಪರ್ ಕಿಂಗ್ಸ್
ಮುರಳಿ ವಿಜಯ್ ಸಿ ಯಾದವ್ ಬಿ ಬುಮ್ರಾ 38
ಶೇನ್ ವಾಟ್ಸನ್ ಸಿ ಚಹರ್ ಬಿ ಮಾಲಿಂಗ 8
ಸುರೇಶ್ ರೈನಾ ಸಿ ಯಾದವ್ ಬಿ ಹಾರ್ದಿಕ್ 2
ಅಂಬಾಟಿ ರಾಯುಡು ಕೃಣಾಲ್ 0
ಕೇದಾರ್ ಜಾಧವ್ ಬಿ ಕೃಣಾಲ್ 6
ಧ್ರುವ್ ಶೋರೆ ಸಿ ಚಹರ್ ಬಿ ರಾಯ್ 5
ಡ್ವೇಯ್ನ ಬ್ರಾವೊ ಬಿ ಮತ್ತು ಬಿ ಮಾಲಿಂಗ 20
ಮಿಚೆಲ್ ಸ್ಯಾಂಟ್ನರ್ ಸಿ ಪೋಲಾರ್ಡ್ ಬಿ ಮಾಲಿಂಗ 22
ದೀಪಕ್ ಚಹರ್ ಸಿ ಕೃಣಾಲ್ ಬಿ ಬುಮ್ರಾ 0
ಹರ್ಭಜನ್ ಸಿಂಗ್ ಸಿ ಹಾರ್ದಿಕ್ ಬಿ ಮಾಲಿಂಗ 1
ಇಮ್ರಾನ್ ತಾಹಿರ್ ಔಟಾಗದೆ 0
ಇತರ: 7
ಒಟ್ಟು (17.4 ಓವರ್‌ಗಳಲ್ಲಿ ಆಲೌಟ್) 109
ವಿಕೆಟ್ ಪತನ: 1-9, 2-22. 3-34, 4-46, 5-60, 6-66, 7-99, 8-101, 9-103
ಬೌಲಿಂಗ್: ಲಸಿತ ಮಾಲಿಂಗ 3.4-0-37-4
ಕೃಣಾಲ್ ಪಾಂಡ್ಯ 3-0-7-2
ಹಾರ್ದಿಕ್ ಪಾಂಡ್ಯ 2-0-22-1
ಜಸ್‌ಪ್ರೀತ್ ಬುಮ್ರಾ 3-0-10-2
ರಾಹುಲ್ ಚಹರ್ 4-0-21-0
ಅಂಕುಲ್ ರಾಯ್ 2-0-11-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.