ರಾಜಸ್ಥಾನ್ ಕನಸಿಗೆ ತಣ್ಣೀರೆರಚಿದ ಡೆಲ್ಲಿ
Team Udayavani, May 5, 2019, 6:10 AM IST
ಹೊಸದಿಲ್ಲಿ: ಲೀಗ್ ಹಂತದ ಕೊನೆಯ ಪಂದ್ಯವನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ್ ವಿರುದ್ಧ ಭರ್ಜರಿ 5 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮತ್ತೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಶನಿವಾರದ ಮೊದಲ ಪಂದ್ಯದಲ್ಲಿ ಇಶಾಂತ್ ಶರ್ಮ, ಮಿಶ್ರಾ ಬೌಲಿಂಗ್ ದಾಳಿಗೆ ಬೆಚ್ಚಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ 16.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 121 ರನ್ ಬಾರಿಸಿ ವಿಜಯಿಯಾಯಿತು.
ಪಂತ್ ಆಕರ್ಷಕ ಫಿಫ್ಟಿ
ಸಾಧಾರಣ ಮೊತ್ತದ ಗುರಿ ಬೆನ್ನತ್ತಿ ಹೊರಟ ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ (8), ಶಿಖರ್ ಧವನ್ (16), ಶ್ರೇಯಸ್ ಅಯ್ಯರ್ (15) ಬೇಗನೇ ಪೆವಿಲಿಯನ್ ಸೇರಿದರು. ಅನಂತರ ಕ್ರೀಸ್‌ಗೆ ಬಂದ ರಿಷಬ್ ಪಂತ್ 48 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಉಳಿದಂತೆ ಕಾಲಿನ್ ಇನ್‌ಗಾÅಮ್ (12), ರುದರ್‌ಫೋರ್ಡ್ (11) ಪಂತ್‌ಗೆ ಉತ್ತಮ ಸಾಥ್ ನೀಡಿದರು.
ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರಿಷಬ್ ಪಂತ್ ಅರ್ಧಶತಕ ಪೂರ್ತಿಗೊಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ರಾಜಸ್ಥಾನ್ ಪರ ಐಶ್ ಸೋಧಿ 3, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.
ಕಾಡಿದ ಇಶಾಂತ್, ಮಿಶ್ರಾ
ಟಾಸ್ ಗೆದ್ದು ಮೊದಲ ಬ್ಯಾಟಿಂಗಿಗೆ ಇಳಿದ ರಾಜಸ್ಥಾನ್ ಉತ್ತಮ ಆರಂಭ ಪಡೆಯಲಿಲ್ಲ. 30 ರನ್ ದಾಖಲಿಸುವಾಗಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರಹಾನೆ ಕೇವಲ 2 ರನ್ನಿಗೆ ಔಟಾದರೆ, ಲಿವಿಂಗ್‌ಸ್ಟೋನ್ 14 ರನ್ ಗಳಿಸಿಲಷ್ಟೇ ಶಕ್ತರಾದರು. ಸಂಜು ಸ್ಯಾಮ್ಸನ್ (5), ಮಹಿಪಾಲ್ ಲಾಮೂÅರ್ (8) ಒಂದಂಕಿಗೆ ಔಟಾಗಿ ನಿರಾಸೆ ಮೂಡಿಸಿದರು. ಇದರಲ್ಲಿ ಸಂಜು ರನೌಟಾದರೆ ಉಳಿದ 3 ವಿಕೆಟ್ ಕಿತ್ತ ಇಶಾಂತ್ ಶರ್ಮ ಮಾರಕವಾಗಿ ಕಾಡಿದರು. ಅನಂತರ ಜತೆಯಾದ ಶ್ರೇಯಸ್ ಗೋಪಾಲ್-ರಿಯಾನ್ ಪರಾಗ್ ತಂಡಕ್ಕೆ ನೆರವಾಗಲು ಪ್ರಯತ್ನಪಟ್ಟರಾದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. 12 ರನ್ ಗಳಿಸಿದ ಗೋಪಾಲ್ ಅವರು ಮಿಶ್ರಾ ಎಸೆತಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಮುಂದಿನ ಎಸೆತದಲ್ಲಿ ಮಿಶ್ರಾ ಸ್ಟುವರ್ಟ್ ಬಿನ್ನಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಈ ನಡುವೆ ಕೆ. ಗೌತಮ್ ಕ್ಯಾಚ್ ಅನ್ನು ಚೆಲ್ಲಿದ ಕಾರಣ ಮಿಶ್ರಾ ಅವರಿಗೆ ಐಪಿಎಲ್‌ನಲ್ಲಿ 4ನೇ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡುವ ಅವಕಾಶ ಕೈತಪ್ಪಿತು. ಆದರೆ ಸ್ವಲ್ಪ ಹೊತ್ತಿನಲ್ಲೇ ಗೌತಮ್ (6) ವಿಕೆಟ್ ಕೀಳುವಲ್ಲಿ ಮಿಶ್ರಾ ಯಶಸ್ವಿಯಾದರು.
ಪರಾಗ್ ಏಕಾಂಗಿ ಹೋರಾಟ
ಒಂದರ ಹಿಂದೆ ಒಂದು ವಿಕೆಟ್ ಬೀಳುತ್ತಿದ್ದ ಹೊತ್ತಿನಲ್ಲಿ ತಾಳ್ಮೆಯ ಆಟವಾಡಿದ ರಿಯಾನ್ ಪರಾಗ್ ಅರ್ಧಶತಕ ಬಾರಿಸಿ ರಾಜಸ್ಥಾನ್ 100 ರನ್ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಈ ಫಿಫ್ಟಿ ಮೂಲಕ ರಿಯಾನ್ ಐಪಿಎಲ್‌ನಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 49 ಎಸೆತಗಳಲ್ಲಿ ಭರ್ತಿ 50 ರನ್ ಗಳಿಸಿದರು (2 ಸಿಕ್ಸರ್, 4 ಬೌಂಡರಿ). ಉಳಿದಂತೆ ಐಶ್ ಸೋಧಿ ಔಟಾಗದೆ 3 ರನ್ ಗಳಿಸಿದರು. ಇಶಾಂತ್ ಶರ್ಮಾ ಮತ್ತು ಅಮಿತ್ ಮಿಶ್ರಾ ತಲಾ 3 ವಿಕೆಟ್ ಕಿತ್ತು ಸಂಭ್ರಮಿಸಿದರು.
ಸ್ಕೋರ್‌ಪಟ್ಟಿ
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯಾ ರಹಾನೆ ಸಿ ಧವನ್ ಬಿ ಇಶಾಂತ್ 2
ಲಿವಿಂಗ್‌ಸ್ಟೋನ್ ಬಿ ಇಶಾಂತ್ 14
ಸಂಜು ಸ್ಯಾಮ್ಸನ್ ರನೌಟ್ 5
ಮಹಿಪಾಲ್ ಲಾಮೂÅರ್ ಸಿ ಪಂತ್ ಬಿ ಇಶಾಂತ್ 8
ಶ್ರೇಯಸ್ ಗೋಪಾಲ್ ಸ್ಟಂಪ್ಡ್ ಪಂತ್ ಬಿ ಮಿಶ್ರಾ 12
ರಿಯಾನ್ ಪರಾಗ್ ಸಿ ರುದರ್‌ಫೋರ್ಡ್ ಬಿ ಬೌಲ್ಟ್ 50
ಸ್ಟುವರ್ಟ್ ಬಿನ್ನಿ ಸಿ ಪಂತ್ ಬಿ ಮಿಶ್ರಾ 0
ಕೆ. ಗೌತಮ್ ಸಿ ಇಶಾಂತ್ ಬಿ ಮಿಶ್ರಾ 6
ಐಶ್ ಸೋಧಿ ಸಿ ಮಿಶ್ರಾ ಬಿ ಬೌಲ್ಟ್ 6
ವರುಣ್ ಆರೋನ್ ಔಟಾಗದೆ 3
ಇತರ 9
ಒಟ್ಟು (9 ವಿಕೆಟಿಗೆ) 115
ವಿಕೆಟ್ ಪತನ: 1-11, 2-20, 3-26, 4-30, 5-57, 6-57, 7-65, 8-95, 9-115.
ಬೌಲಿಂಗ್: ಟ್ರೆಂಡ್ ಬೌಲ್ಟ್ 4-0-27-2
ಇಶಾಂತ್ ಶರ್ಮ 4-0-38-3
ಅಕ್ಷರ್ ಪಟೇಲ್ 4-0-16-0
ಅಮಿತ್ ಮಿಶ್ರಾ 4-0-17-3
ಕಿಮೋ ಪೌಲ್ 3.1-0-15-0
ಶಫ್ರೆàìನ್ ರುದರ್‌ಫೋರ್ಡ್ 0.5-0-2-0
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಷಾ ಸಿ ಸೋಧಿ ಬಿ 8
ಶಿಖರ್ ಧವನ್ ಸಿ ರಿಯಾನ್ ಬಿ ಸೋಧಿ 16
ಶ್ರೇಯಶ್ ಅಯ್ಯರ್ ಸಿ ಲಿವಿಂಗ್‌ಸ್ಟೋನ್ ಬಿ ಗೋಪಾಲ್ 15
ರಿಷಬ್ ಪಂತ್ ಔಟಾಗದೆ 53
ಕಾಲಿನ್ ಇನ್‌ಗಾÅಮ್ ಸಿ ರಹಾನೆ ಬಿ ಸೋಧಿ 12
ರುದರ್‌ಫೋರ್ಡ್ ಸಿ ಲಿವಿಂಗ್‌ಸ್ಟೋನ್ ಬಿ ಗೋಪಾಲ್ 11
ಅಕ್ಷರ್ ಪಟೇಲ್ ಔಟಾಗದೆ 1
ಇತರ 5
ಒಟ್ಟು ( 16.1 ಓವರ್‌ಗಳಲ್ಲಿ 5 ವಿಕೆಟಿಗೆ) 121
ವಿಕೆಟ್ ಪತನ: 1-28, 2-28, 3-61, 4-83, 5-106.
ಬೌಲಿಂಗ್: ಕೆ. ಗೌತಮ್ 4-0-16-0
ವರುಣ್ ಆರೋನ್ 2-0-21-0
ಒಸಾನೆ ಥಾಮಸ್ 1-0-13-0
ಐಶ್ ಸೋಧಿ 3.1-1-26-3
ಶ್ರೇಯಸ್ ಗೋಪಾಲ್ 4-0-21-2
ರಿಯಾನ್ ಪರಾಗ್ 1-0-14-0
ಸ್ಟುವರ್ಟ್ ಬಿನ್ನಿ 1-0-6-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.