ಆರ್‌ಸಿಬಿ ಫೀಲ್ಡಿಂಗ್ ಕಳಪೆ; ಎಬಿಡಿ ಕಳವಳ
Team Udayavani, Apr 11, 2019, 6:30 AM IST
ಬೆಂಗಳೂರು: ಸತತ 6 ಸೋಲುಂಡ ಆರ್‌ಸಿಬಿ ಮೇಲಿನ ನಂಬಿಕೆ ನಿಧಾನವಾಗಿ ಹೊರಟು ಹೋಗುತ್ತಿದೆ. ಕೊಹ್ಲಿ ಪಡೆಯ ಸೋಲಿಗೆ ಕಾರಣಗಳು ಹಲವು.
ತಂಡದ ಬಿಗ್ ಹಿಟ್ಟರ್ ಎಬಿ ಡಿ ವಿಲಿಯರ್ ಪ್ರಕಾರ, ಆರ್‌ಸಿಬಿಯ ಫೀಲ್ಡಿಂಗ್ ಪಾತಾಳ ಕಂಡಿದೆ. ಇದನ್ನವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
“ಕ್ರಿಕೆಟ್‌ನಲ್ಲಿ ತಂಡವೊಂದರ ಸಾಮರ್ಥ್ಯವನ್ನು ಅದರ ಕ್ಷೇತ್ರರಕ್ಷಣೆಯ ಮಟ್ಟವನ್ನು ನೋಡಿ ಅಳೆಯಬಹುದು. ತಂಡದ ಪ್ರತಿಯೊಬ್ಬ ಆಟಗಾರ ಬ್ಯಾಟ್ಸ್‌ಮನ್, ಬೌಲರ್ ಅಥವಾ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುತ್ತಾರೆ. ಆದರೆ ಯಾರನ್ನೂ ಫೀಲ್ಡರ್ ಎಂದು ಗುರುತಿಸುವುದಿಲ್ಲ. ನನ್ನ ಪ್ರಕಾರ ಪ್ರತಿಯೊಬ್ಬ ಆಟಗಾರ ಫೀಲ್ಡರ್ ಕೂಡ ಆಗಿರುತ್ತಾನೆ. ಆತ ಅಂಗಳದಲ್ಲಿ ಬಲಿಷ್ಠ ನಿರ್ವಹಣೆ ತೋರಬೇಕಾಗುತ್ತದೆ. ಆರ್‌ಸಿಬಿ ಈ ವಿಷಯದಲ್ಲಿ ಎಡವುತ್ತಿದೆ’ ಎಂದು ಎಬಿಡಿ ಹೇಳಿದರು.
ಆರೂ ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಈಗ ಕೂಟದಿಂದ ಹೊರಬೀಳುವ ಅಪಾಯದಲ್ಲಿದೆ. ಇನ್ನೊಂದು ಪಂದ್ಯದಲ್ಲಿ ಎಡವಿದರೆ ಕೊಹ್ಲಿ ಬಳಗದ ಕತೆ ಮುಗಿಯಲಿದೆ.
“6 ಅಂಕ ಹೊಂದಿರಬೇಕಿತ್ತು’
“ಈ ಕೂಟದಲ್ಲಿ ನಮ್ಮ ಫೀಲ್ಡಿಂಗ್ ಅತ್ಯಂತ ಕಳಪೆ ಆಗಿದೆ. ಪ್ರತಿಯೊಂದು ಪಂದ್ಯದಲ್ಲೂ ನಾವು ಬಹಳಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಸಣ್ಣ ಅಂತರದಿಂದ ಸೋತೆವು. ತವರಿನ ಪಂದ್ಯಗಳಲ್ಲಿ ನಾವು ಮುಂಬೈ ಮತ್ತು ಕೆಕೆಆರ್ ವಿರುದ್ಧ ಗೆಲ್ಲಬಹುದಿತ್ತು. ರವಿವಾರ ಡೆಲ್ಲಿ ವಿರುದ್ಧ 20 ರನ್ ಹೆಚ್ಚು ಗಳಿಸಿದ್ದರೆ ಈ ಪಂದ್ಯವನ್ನೂ ಗೆಲ್ಲುವ ಸಾಧ್ಯತೆ ಇತ್ತು. ಈಗ ನಾವು 6 ಅಂಕಗಳನ್ನು ಹೊಂದಿರುತ್ತಿದ್ದೆವು’ ಎಂದು ಎಬಿಡಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.