ರಾಜಸ್ಥಾನ್‌ಗೆ ಪಂಚ್ ಕೊಟ್ಟ ಪಂತ್
Team Udayavani, Apr 23, 2019, 10:11 AM IST
ಜೈಪುರ: ಅಜಿಂಕ್ಯ ರಹಾನೆ ಅಜೇಯ 105 ರನ್ ಸಾಹಸದ ಹೊರತಾಗಿಯೂ ಡೆಲ್ಲಿ ಎದುರಿನ ತವರಿನ ಪಂದ್ಯದಲ್ಲಿ ರಾಜಸ್ಥಾನ್ 6 ವಿಕೆಟ್‌ಗಳ ಸೋಲನುಭವಿಸಿದೆ.
ರಾಜಸ್ಥಾನ್ 6 ವಿಕೆಟಿಗೆ 191 ರನ್ ಒಟ್ಟು ಗೂಡಿಸಿದರೆ, ಡೆಲ್ಲಿ 4ವಿಕೆಟಿಗೆ 193 ರನ್ ಗಳಿಸಿ ಜಯಭೇರಿ ಬಾರಿಸಿತು. ಧವನ್, ಶಾ, ಪಂತ್ ಅವರು ಡೆಲ್ಲಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂತ್ ಕೇವಲ 36 ಎಸೆತಗಳಿಂದ 78 ರನ್ ಗಳಿಸಿ ಅಜೇಯರಾಗಿ ಉಳಿದರು.
ಸಂಜು ಸ್ಯಾಮ್ಸನ್ ಸೊನ್ನೆಗೆ ರನೌಟಾದ ಬಳಿಕ ಕ್ರೀಸ್ ಆಕ್ರಮಿಸಿಕೊಂಡ ರಹಾನೆ 63 ಎಸೆತಗಳಿಂದ 105 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಐಪಿಎಲ್‌ನಲ್ಲಿ ರಹಾನೆ ಬಾರಿಸಿದ 2ನೇ ಶತಕವಾದರೆ, ರಾಜಸ್ಥಾನ್ ಪರ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಅವರು 11 ಬೌಂಡರಿ, 3 ಸಿಕ್ಸರ್ ಸಿಡಿಸಿ ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.
ನಾಯಕ ಸ್ಟೀವನ್ ಸ್ಮಿತ್ 50 ರನ್ ಹೊಡೆದರು (32 ಎಸೆತ, 8 ಬೌಂಡರಿ). ಇದು ಐಪಿಎಲ್‌ನಲ್ಲಿ ಸ್ಮಿತ್ ದಾಖಲಿಸಿದ 8ನೇ ಅರ್ಧ ಶತಕ. ರಹಾನೆ-ಸ್ಮಿತ್ 130 ರನ್ ಜತೆಯಾಟ ನಿಭಾಯಿಸಿದರು. ಇದು 2ನೇ ವಿಕೆಟಿಗೆ ರಾಜಸ್ಥಾನ್ ಪೇರಿಸಿದ ಅತ್ಯಧಿಕ ರನ್ ಆಗಿದೆ.
ಹ್ಯಾಟ್ರಿಕ್ ಗೋಲ್ಡನ್ ಡಕ್!
ಒಂದೆಡೆ ರಹಾನೆ ಶತಕ ಬಾರಿಸಿ ಸಂಭ್ರಮಿಸಿದರೆ, ಇನ್ನೊಂದೆಡೆ ಆ್ಯಶನ್ ಟರ್ನರ್ ಸತತ 3ನೇ ಸೊನ್ನೆ ಸುತ್ತಿದ ಅವಮಾನಕ್ಕೆ ಸಿಲುಕಿದರು. ಅವರನ್ನು ಇಶಾಂತ್ ಮೊದಲ ಎಸೆತದಲ್ಲೇ ಔಟ್ ಮಾಡಿದರು. ಇದರೊಂದಿಗೆ ಟರ್ನರ್ ಐಪಿಎಲ್‌ನ “ಗೋಲ್ಡನ್ ಡಕ್ ಹ್ಯಾಟ್ರಿಕ್’ ದಾಖಲೆ ಬರೆದರು. ಟರ್ನರ್ ಐಪಿಎಲ್‌ನಲ್ಲಿ ಸತತ 3 ಸೊನ್ನೆ ಸುತ್ತಿದ 6ನೇ ಆಟಗಾರ.
ಡೆಲ್ಲಿ ಪರ ಕಾಗಿಸೊ ರಬಾಡ 37 ರನ್ನಿಗೆ 2 ವಿಕೆಟ್ ಕಿತ್ತರು. ಈ ಎರಡೂ ವಿಕೆಟ್‌ಗಳನ್ನು ಅವರು ಅಂತಿಮ ಓವರಿನಲ್ಲಿ ಉರುಳಿಸಿದರು.
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ ಔಟಾಗದೆ 105
ಸಂಜು ಸ್ಯಾಮ್ಸನ್ ರನೌಟ್ 0
ಸ್ಟೀವನ್ ಸ್ಮಿತ್ ಸಿ ಮಾರಿಸ್ ಬಿ ಅಕ್ಷರ್ 50
ಬೆನ್ ಸ್ಟೋಕ್ಸ್ ಸಿ ಅಯ್ಯರ್ ಬಿ ಮಾರಿಸ್ 8
ಆ್ಯಶrನ್ ಟರ್ನರ್ ಸಿ ರುದರ್‌ಫೋರ್ಡ್ ಬಿ ಇಶಾಂತ್ 0
ಸ್ಟುವರ್ಟ್ ಬಿನ್ನಿ ಬಿ ರಬಾಡ 19
ರಿಯಾನ್ ಪರಾಗ್ ಬಿ ರಬಾಡ 4
ಇತರ 5
ಒಟ್ಟು (6 ವಿಕೆಟಿಗೆ) 191
ವಿಕೆಟ್ ಪತನ: 1-5, 2-135, 3-157, 4-163, 5-187, 6-191.
ಬೌಲಿಂಗ್:
ಇಶಾಂತ್ ಶರ್ಮ 4-0-29-1
ಕಾಗಿಸೊ ರಬಾಡ 4-0-37-2
ಅಕ್ಷರ್ ಪಟೇಲ್ 4-0-39-1
ಅಮಿತ್ ಮಿಶ್ರಾ 3-0-28-0
ಕ್ರಿಸ್ ಮಾರಿಸ್ 4-0-41-1
ಶೆಫೇìನ್ ರುದರ್‌ಫೋರ್ಡ್ 1-0-16-0
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಪರಾಗ್ ಬಿ ಗೋಪಾಲ್ 42
ಶಿಖರ್ ಧವನ್ ಸ್ಟಂಪ್ಡ್ ಸ್ಯಾಮ್ಸನ್ ಬಿ ಗೋಪಾಲ್ 54
ಶ್ರೇಯಸ್ ಅಯ್ಯರ್ ಸಿ ಸ್ಟೋಕ್ಸ್ ಬಿ ಪರಾಗ್ 4
ರಿಷಬ್ ಪಂತ್ ಔಟಾಗದೆ 78
ರುದರ್‌ಫೋರ್ಡ್ ಸಿ ಪರಾಗ್ ಬಿ ಕುಲಕರ್ಣಿ 11
ಕಾಲಿನ್ ಇನ್‌ಗಾÅಂ ಔಟಾಗದೆ 3
ಇತರ 1
ಒಟ್ಟು (19.2 ಓವರ್‌ಗಳಲ್ಲಿ 4 ವಿಕೆಟಿಗೆ) 193
ವಿಕೆಟ್ ಪತನ: 1-72, 2-77, 2-77, 3-161, 4-175.
ಬೌಲಿಂಗ್:
ಸ್ಟುವರ್ಟ್ ಬಿನ್ನಿ 1-0-3-0
ಧವಳ್ ಕುಲಕರ್ಣಿ 4-0-51-1
ಜೈದೇವ್ ಉನಾದ್ಕತ್ 3.2-0-36-0
ಶ್ರೇಯಸ್ ಗೋಪಾಲ್ 4-0-47-2
ಜೋಫÅ ಆರ್ಚರ್ 4-0-31-0
ರಿಯಾನ್ ಪರಾಗ್ 3-0-25-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.