ನ್ಯೂಜಿಲ್ಯಾಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್‌ಗೆ ಆಘಾತಕಾರಿ ಸೋಲು

ವಿಶ್ವದ 212ನೇ ರ್‍ಯಾಂಕಿಂಗ್‌ ಆಟಗಾರ್ತಿಗೆ ಶರಣು

Team Udayavani, May 2, 2019, 9:51 AM IST

SAINA-LOSES1

ಆಕ್ಲೆಂಡ್‌: ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್‌ “ನ್ಯೂಜಿಲ್ಯಾಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ತನಗಿಂತ 10 ವರ್ಷ ಕಿರಿಯಳಾದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 212ರಷ್ಟು ಕೆಳಗಿನ ಸ್ಥಾನದಲ್ಲಿರುವ ಚೀನದ 19ರ ಹರೆಯದ ವಾಂಗ್‌ ಜಿಹಿ 21-16, 21-23, 21-4 ಅಂತರದಿಂದ ಸೈನಾಗೆ ಸೋಲಿನ ಬಲೆ ಬೀಸಿದರು.

29ರ ಹರೆಯದ, ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಮೊದಲ ಗೇಮ್‌ ಕಳೆದುಕೊಂಡ ಬಳಿಕ ಉತ್ತಮ ಹೋರಾಟ ನಡೆಸಿ ಸ್ಪರ್ಧೆಯನ್ನು ಸಮಬಲಕ್ಕೆ ತಂದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮಂಕಾದರು. ಇಲ್ಲಿ ಸೈನಾಗೆ ಗಳಿಸಲು ಸಾಧ್ಯವಾದದ್ದು 4 ಅಂಕ ಮಾತ್ರ! ಇವರಿಬ್ಬರ ಹೋರಾಟ ಒಂದು ಗಂಟೆ, 7 ನಿಮಿಷಗಳ ಕಾಲ ಸಾಗಿತು. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಸ್ಪರ್ಧಿಸದ ಕಾರಣ ಸೈನಾ ಮೇಲೆ ಹೆಚ್ಚಿನ ಭರವಸೆ ಇಡಲಾಗಿತ್ತು.
ವನಿತಾ ಸಿಂಗಲ್ಸ್‌ ವಿಭಾಗದ ಮತ್ತೂಂದು ಪಂದ್ಯದಲ್ಲಿ ಅನುರಾ ಪ್ರಭುದೇಸಾಯಿ ಕೂಡ ಸೋಲನುಭವಿಸಿದ್ದಾರೆ. ಅವರನ್ನು ವಿಶ್ವದ 15ನೇ ರ್‍ಯಾಂಕಿಂಗ್‌ ಆಟಗಾರ್ತಿ ಲೀ ಕ್ಸುರುಯಿ 21-9, 21-10 ಅಂತರದಿಂದ ಹಿಮ್ಮೆಟ್ಟಿಸಿದರು.

ಲಕ್ಷ್ಯ ಸೇನ್‌ಗೂ ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಆರಂಭಿಕ ಸುತ್ತಿನಲ್ಲೇ ಎಡವಿದ್ದಾರೆ. ತೈವಾನ್‌ನ ವಾಂಗ್‌ ಜು ವೀ ವಿರುದ್ಧ ದಿಟ್ಟ ಹೋರಾಟ ನೀಡಿದ ಲಕ್ಷ್ಯ ಸೇನ್‌ 21-15, 18-21, 10-21 ಅಂತರದಿಂದ ಪರಾಭವಗೊಂಡರು. ಮೊದಲ ಗೇಮ್‌ ಗೆದ್ದರೂ ಇದೇ ಓಟ ಮುಂದುವರಿಸಲು ಸೇನ್‌ ವಿಫ‌ಲರಾದರು.
ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಜೋಡಿಯ ಆಟವೂ ಮುಗಿದಿದೆ. ಚೀನದ ಲಿಯು ಕ್ಸುವಾನ್‌ಕುÕವಾನ್‌-ಕ್ಸಿಯಾ ಯುಟಿಂಗ್‌ ವಿರುದ್ಧ 70 ನಿಮಿಷಗಳ ಹೋರಾಟ ನಡೆಸಿದ ಭಾರತೀಯ ಜೋಡಿ 14-21, 23-21, 14-21 ಅಂತರದಿಂದ ಸೋಲನುಭವಿಸಿತು.

ಅತ್ರಿ-ರೆಡ್ಡಿ ಮುನ್ನಡೆ
ಭಾರತದ ಪಾಲಿನ ಮೊದಲ ದಿನದ ಸಮಾಧಾನಕರ ಸಂಗತಿಯೆಂದರೆ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಬಿ. ಸುಮೀತ್‌ ರೆಡ್ಡಿ ಜೋಡಿ ಗೆಲುವು ಸಾಧಿಸಿದ್ದು. ಇವರು ಆತಿಥೇಯ ನಾಡಿನ ಜೋಶುವ ಫೆಂಗ್‌- ಜಾಕ್‌ ಜಿಯಾಂಗ್‌ ವಿರುದ್ಧ 21-17, 21-10 ಅಂತರದಿಂದ ಮೇಲುಗೈ ಸಾಧಿಸಿದರು.

ಟಾಪ್ ನ್ಯೂಸ್

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.