![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 18, 2019, 5:47 AM IST
ಹೈದರಾಬಾದ್: ನಾಯಕ ಮಹೇಂದ್ರ ಸಿಂಗ್ ಧೋನಿ ಗೈರಲ್ಲಿ ಆಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ಬುಧವಾರದ ಐಪಿಎಲ್ ಹಣಾಹಣಿಯಲ್ಲಿ ಸನ್‌ರೈಸರ್ ಹೈದರಾಬಾದ್ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 5 ವಿಕೆಟಿಗೆ 132 ರನ್ ಗಳಿಸಿದರೆ, ಹೈದರಾಬಾದ್ 16.5 ಓವರ್‌ಗಳಲ್ಲಿ 4 ವಿಕೆಟಿಗೆ 137 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್‌ಸ್ಟೋ ಮೊದಲ ವಿಕೆಟಿಗೆ 66 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇಬ್ಬರಿಂದಲೂ ಅರ್ಧಶತಕ ದಾಖಲಾಯಿತು. ಈ ನಡುವೆ ಕೆಲವು ವಿಕೆಟ್ ಕಳೆದುಕೊಂಡರೂ ಹೈದರಾಬಾದ್ ಯಾವುದೇ ಆತಂಕವಿಲ್ಲದೇ ಸುಲಭವಾಗಿ ಜಯ ದಾಖಲಿಸಿತು.
ಚೆನ್ನೈ ತಂಡದ ಆರಂಭ ಉತ್ತಮವಾಗಿಯೇ ಇತ್ತು. ಫಾ ಡು ಪ್ಲೆಸಿಸ್-ಶೇನ್ ವಾಟ್ಸನ್ ಮೊದಲ ವಿಕೆಟಿಗೆ 9.5 ಓವರ್‌ಗಳಿಂದ 79 ರನ್ ಪೇರಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಚೆನ್ನೈ ಕುಸಿತ ತೀವ್ರಗೊಂಡಿತು. ರನ್‌ಗತಿಯೂ ಕುಂಟಿತಗೊಂಡಿತು. ಧೋನಿ ಇಲ್ಲದಿದ್ದದೂ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.
ಉಸ್ತುವಾರಿ ನಾಯಕ ಸುರೇಶ್ ರೈನಾ ಕೇವಲ 13 ರನ್ ಮಾಡಿ ನಿರ್ಗಮಿಸಿದರೆ, ಬದಲಿ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಖಾತೆಯನ್ನೇ ತೆರೆಯಲಿಲ್ಲ. ಕೇದಾರ್ ಜಾದವ್ ಒಂದೇ ರನ್ನಿಗೆ ಆಟ ಮುಗಿಸಿದರು. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಅಂಬಾಟಿ ರಾಯುಡು (21 ಎಸೆತಗಳಿಂದ 25) ಮತ್ತು ರವೀಂದ್ರ ಜಡೇಜ (20 ಎಸೆತಗಳಿಂದ 10) ಅಜೇಯರಾಗಿ ಉಳಿದರೂ ಮುನ್ನುಗ್ಗಿ ಬಾರಿಸಲು ವಿಫಲರಾದರು.
ಸ್ಕೋರ್‌ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ಶೇನ್ ವಾಟ್ಸನ್ ಬಿ ನದೀಂ 31
ಫಾ ಡು ಪ್ಲೆಸಿಸ್ ಸಿ ಬೇರ್‌ಸ್ಟೊ ಬಿ ಶಂಕರ್ 45
ಸುರೇಶ್ ರೈನಾ ಎಲ್‌ಬಿಡಬ್ಲ್ಯು ರಶೀದ್ 13
ಅಂಬಾಟಿ ರಾಯುಡು ಔಟಾಗದೆ 25
ಕೇದಾರ್ ಜಾದವ್ ಎಲ್‌ಬಿಡಬ್ಲ್ಯು 1
ಸ್ಯಾಮ್ ಬಿಲ್ಲಿಂಗ್ಸ್ ಸಿ ಶಂಕರ್ ಬಿ ಖಲೀಲ್ 0
ರವೀಂದ್ರ ಜಡೇಜ ಔಟಾಗದೆ 10
ಇತರ 7
ಒಟ್ಟು (5 ವಿಕೆಟಿಗೆ) 132
ವಿಕೆಟ್ ಪತನ: 1-79, 2-81, 3-97, 4-99, 5-101.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-21-0
ಖಲೀಲ್ ಅಹ್ಮದ್ 4-0-22-1
ಸಂದೀಪ್ ಶರ್ಮ 4-0-33-0
ಶಾಬಾಜ್ ನದೀಂ 2-0-24-1
ರಶೀದ್ ಖಾನ್ 4-0-17-2
ವಿಜಯ್ ಶಂಕರ್ 2-0-11-1
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಪ್ಲೆಸಿಸ್ ಬಿ ಚಹರ್ 50
ಜಾನಿ ಬೇರ್‌ಸ್ಟೊ ಔಟಾಗದೆ 61
ಕೇನ್ ವಿಲಿಯಮ್ಸನ್ ಸಿ ಮತ್ತು ಬಿ ತಾಹಿರ್ 3
ವಿಜಯ್ ಶಂಕರ್ ಸಿ ಬಿಲ್ಲಿಂಗ್ಸ್ ಬಿ ತಾಹಿರ್ 7
ದೀಪಕ್ ಹೂಡ ಸಿ ಪ್ಲೆಸಿಸ್ ಬಿ ಶರ್ಮ 13
ಯೂಸುಫ್ ಪಠಾಣ್ ಔಟಾಗದೆ 0
ಇತರ 3
ಒಟ್ಟು (16.5 ಓವರ್‌ಗಳಲ್ಲಿ 4 ವಿಕೆಟಿಗೆ) 137
ವಿಕೆಟ್ ಪತನ: 1-66, 2-71, 3-105, 4-131
ಬೌಲಿಂಗ್: ದೀಪಕ್ ಚಹರ್ 3-0-31-1
ಶಾದೂìಲ್ ಠಾಕೂರ್ 3-0-31-0
ಇಮ್ರಾನ್ ತಾಹಿರ್ 4-0-20-2
ರವೀಂದ್ರ ಜಡೇಜ 4-0-22-0
ಕೆವಿ ಶರ್ಮ 2.5-0-33-1
You seem to have an Ad Blocker on.
To continue reading, please turn it off or whitelist Udayavani.