ಹೈದರಾಬಾದ್-ಚೆನ್ನೈ ಮೊದಲ ಫೈಟ್
Team Udayavani, Apr 17, 2019, 6:30 AM IST
ಹೈದರಾಬಾದ್: ಎಲ್ಲರೂ ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಐಪಿಎಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಕೂಟದ 2ನೇ ಸುತ್ತು ಮೊದಲ್ಗೊಂಡಿದ್ದರೂ ಹೈದರಾಬಾದ್ ಮತ್ತು ಚೆನ್ನೈ ಈವರೆಗೆ ಪರಸ್ಪರ ಎದುರಾಗಿರಲಿಲ್ಲ. ಬುಧವಾರ ರಾತ್ರಿ ಈ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖೀಯಾಗಲಿವೆ.
ಹಾಲಿ ಚಾಂಪಿಯನ್ ಚೆನ್ನೈ ಎಂಟರಲ್ಲಿ 7 ಪಂದ್ಯ ಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿದರೆ, ಹೈದರಾಬಾದ್ ಸತತ 3 ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಈ ಹ್ಯಾಟ್ರಿಕ್ ಸೋಲು ಮುಂಬೈ, ಪಂಜಾಬ್ ಮತ್ತು ಡೆಲ್ಲಿ ವಿರುದ್ಧ ಎದು ರಾಗಿತ್ತು. ಇದರಲ್ಲಿ 2 ಸೋಲು ತವರಿ ನಂಗಳದಲ್ಲೇ ಎದುರಾದದ್ದು ಸನ್‌ರೈಸರ್ ಸ್ಥಿತಿ ಬಿಗಡಾಯಿಸಿದ್ದನ್ನು ಸೂಚಿಸುತ್ತದೆ. ಹೀಗಾಗಿ, ಹೈದರಾಬಾದ್‌ಗೆ ಇದು ತವರಿನ ಪಂದ್ಯವಾದರೂ ಬಲಿಷ್ಠ ಚೆನ್ನೈಯನ್ನು ಮಣಿಸುವುದು ಸುಲಭವಲ್ಲ.
“ಹೈ’ ಬ್ಯಾಟಿಂಗ್ ಸಂಕಟ
ಹೈದರಾಬಾದ್ ವಾರ್ನರ್-ಬೇರ್‌ಸ್ಟೊ ಜೋಡಿಯ ಸ್ಫೋಟಕ ಆಟವನ್ನು ಹೆಚ್ಚು ಅವ ಲಂಬಿಸಿದೆ. ಆದರೆ ಈ ಆರಂಭಿಕರ ನಿರ್ಗಮನದ ಬಳಿಕ ತಂಡದ ಬ್ಯಾಟಿಂಗ್ ಅವಸ್ಥೆ ಏನು ಎಂಬುದಕ್ಕೆ ಡೆಲ್ಲಿ ವಿರುದ್ಧದ ಕಳೆದ ಪಂದ್ಯವೇ ಸಾಕ್ಷಿ. 16ನೇ ಓವರಿನಲ್ಲಿ 2 ವಿಕೆಟಿಗೆ 101 ರನ್ ಬಾರಿಸಿ ಗೆಲುವಿನತ್ತ ಮುಖ ಮಾಡಿದ್ದ ಹೈದರಾಬಾದ್ 116ಕ್ಕೆ ತಲಪುವಷ್ಟರಲ್ಲಿ ಆಲೌಟ್ ಆಗಿತ್ತು!
ಗಾಯದ ಸಮಸ್ಯೆಯಲ್ಲೇ ಮುಳುಗಿರುವ, ಆಗಾಗ ಆಡುವ ಬಳಗಕ್ಕೆ ಬಂದು ಹೋಗುತ್ತಿರುವ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಕೈಕೊಟ್ಟಿರುವುದು ತಂಡದ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಮಧ್ಯಮ ಕ್ರಮಾಂಕದ ಆಟಗಾರರಿಂದಲೂ ರನ್ ಬರುತ್ತಿಲ್ಲ. ಮನೀಷ್ ಪಾಂಡೆ (6 ಪಂದ್ಯ, 54 ರನ್), ದೀಪಕ್ ಹೂಡಾ (6 ಪಂದ್ಯ, 47 ರನ್), ಯೂಸುಫ್ ಪಠಾಣ್(6 ಪಂದ್ಯ, 32 ರನ್), ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ವಿಜಯ್ ಶಂಕರ್ ಇನ್ನೂ ಜೋಶ್ ತೋರಿಲ್ಲ.
ಆದರೆ ಹೈದರಾಬಾದ್ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಅದು ನಿಜಕ್ಕೂ ಘಾತಕ. ರಶೀದ್ ಖಾನ್, ಮೊಹಮ್ಮದ್‌ನಬಿ, ಭುವನೇಶ್ವರ್, ಸಂದೀಪ್ ಶರ್ಮ ಸಂಘಟಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಚೆನ್ನೈ ಸಶಕ್ತ ತಂಡ
ಹಿರಿಯರನ್ನೇ ಹೆಚ್ಚಾಗಿ ಹೊಂದಿರುವ ಚೆನ್ನೈ ತಂಡ ಅನುಭವಕ್ಕೆ ತಕ್ಕ ಪ್ರದರ್ಶನ ನೀಡುತ್ತಿದೆ. ಕಡಿಮೆ ರನ್ ಗಳಿಸಿದರೂ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾಗುತ್ತಿದ್ದಾರೆ. ಇಮ್ರಾನ್ ತಾಹಿರ್, ಹರ್ಭಜನ್ ಸಿಂಗ್, ರವೀಂದ್ರ ಜಡೇಜ ಅವರ ಸ್ಪಿನ್ನಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುವುದಂತೂ ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.