ತವರಿನಲ್ಲಿ ಕಿಂಗ್ಸ್ ಜಯದ ನಿರೀಕ್ಷೆ?
ಇಂದು ಪಂಜಾಬ್-ಚೆನ್ನೈ ಮುಖಾಮುಖೀ
Team Udayavani, May 5, 2019, 6:10 AM IST
ಮೊಹಾಲಿ: ಸತತ 4 ಪಂದ್ಯಗಳನ್ನು ಸೋತಿರುವ ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಎರಡು ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯ. ಐಪಿಎಲ್‌ನ ಆಟಕ್ಕೆ ಮುಕ್ತಾಯ ಹೇಳಲಿರುವ ಪಂಜಾಬ್ ಈ ಪಂದ್ಯದಲ್ಲಿ ಗೆದ್ದು ತವರಿನ ಅಭಿಮಾನಿಗಳಿಗೆ ಕೊಂಚ ಖುಷಿ ನೀಡುವ ನಿರೀಕ್ಷೆಯಲ್ಲಿದೆ.
ಇತ್ತ ಚೆನ್ನೈ ಲೀಗ್ ಹಂತವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಗುರಿಯನ್ನು ಹೊಂದಿದೆ.
ಪಂಜಾಬ್‌ನಲ್ಲಿ ಸ್ಥಿರ ಪ್ರದರ್ಶನವಿಲ್ಲ
ಪಂಜಾಬ್ ತಂಡದಲ್ಲಿ ಸ್ಟಾರ್ ಆಟಗಾರರಿ ದ್ದರೂ ಯಾರೂ ಕೂಡ ಸ್ಥಿರ ಪ್ರದರ್ಶನ ನೀಡು ತ್ತಿಲ್ಲ. ಗೇಲ್ ಆರಂಭದ ಕೆಲವು ಪಂದ್ಯ ವನ್ನಾಡಿದ ಅನಂತರ ಫಾರ್ಮ್ ಕಳೆದುಕೊಂಡಿದ್ದಾರೆ. ಕೆ.ಎಲ್. ರಾಹುಲ್ ಹೊರತುಪಡಿಸಿ ಉಳಿದ ಆಟಗಾರರು ವಿಫಲರಾಗಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಎಡವುತ್ತಿದ್ದ ಪಂಜಾಬ್‌ಗ ನಿಕೋಲಸ್ ಪೂರನ್ ಮತ್ತು ಸ್ಯಾಮ್ ಕರನ್, ಮಾಯಾಂಕ್ ಅಗರ್ವಾಲ್ ಕೊಂಚ ಬಲ ತುಂಬಿದ್ದಾರೆ.
ದುರ್ಬಲ ಬೌಲಿಂಗ್
ಬೌಲಿಂಗ್ ವಿಭಾಗ ಇನ್ನೂ ಸುಧಾರಿಸದೇ ಇರುವುದರಿಂದ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಶಮಿ ಹೊರತುಪಡಿಸಿ ಯಾರಿಂದಲೂ ಉತ್ತಮ ನಿರ್ವಹಣೆ ಮೂಡಿ ಬರುತ್ತಿಲ್ಲ. ಕಳೆದ 4 ಪಂದ್ಯಗಳಲ್ಲೂ ಸೋತಿರುವ ಪಂಜಾಬ್ ಕೊನೆಯ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿ ಗೆಲುವಿನೊಂದಿಗೆ ಕೂಟಕ್ಕೆ ಗುಡ್‌ಬೈ ಹೇಳುವ ನಿರೀಕ್ಷೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.