ವಾರ್ನರ್‌-ಬೇರ್‌ಸ್ಟೊ ಬೆಸ್ಟ್‌ ಶೋ

ಹೈದರಾಬಾದ್‌ 9 ವಿಕೆಟ್‌ ಜಯಭೇರಿ ವಾರ್ನರ್‌-ಬೇರ್‌ಸ್ಟೊ 131 ರನ್‌ ಜತೆಯಾಟ

Team Udayavani, Apr 22, 2019, 9:33 AM IST

warner-beristo

ಹೈದರಾಬಾದ್‌: ಡೇವಿಡ್‌ ವಾರ್ನರ್‌-ಜಾನಿ ಬೇರ್‌ಸ್ಟೊ ಜೋಡಿಯ ಅಮೋಘ ಬ್ಯಾಟಿಂಗ್‌ ವೈಭವದ ನೆರವು ಪಡೆದ ಹೈದರಾಬಾದ್‌ ರವಿವಾರದ ತವರಿನ ಐಪಿಎಲ್‌ ಹಣಾಹಣಿಯಲ್ಲಿ ಕೆಕೆಆರ್‌ಗೆ 9 ವಿಕೆಟ್‌ಗಳ ಸೋಲುಣಿಸಿ ಮೆರೆದಾಡಿದೆ. 9ರಲ್ಲಿ 5 ಪಂದ್ಯ ಗೆದ್ದು ಪ್ಲೇ-ಆಫ್ ಹೋರಾಟವನ್ನು ಜಾರಿಯಲ್ಲಿರಿಸಿದೆ.

ಎಡಗೈ ಪೇಸರ್‌ ಖಲೀಲ್‌ ಅಹ್ಮದ್‌ ದಾಳಿಗೆ ತತ್ತರಿಸಿದ ಕೆಕೆಆರ್‌ 8 ವಿಕೆಟಿಗೆ 159 ರನ್ನುಗಳ ಸಾಧಾರಣ ಮೊತ್ತ ದಾಖಲಿಸಿತು. ದಿಟ್ಟ ಜವಾಬಿತ್ತ ಹೈದರಾಬಾದ್‌ 15 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 161 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ವಾರ್ನರ್‌ 500 ರನ್‌
ವಾರ್ನರ್‌-ಬೇರ್‌ಸ್ಟೊ ಜೋಡಿಯ ಭರ್ಜರಿ ಜತೆಯಾಟ ಹೈದರಾಬಾದ್‌ ಸರದಿಯ ಆಕರ್ಷಣೆಯಾಗಿತ್ತು. ಇವರಿಬ್ಬರು 12.2 ಓವರ್‌ಗಳನ್ನು ನಿಭಾಯಿಸಿ 131 ರನ್‌ ಪೇರಿಸಿದರು. ಇದರಲ್ಲಿ ವಾರ್ನರ್‌ ಪಾಲು 67 ರನ್‌. ಈ ಪ್ರಚಂಡ ಇನ್ನಿಂಗ್ಸ್‌ ಕೇವಲ 38 ಎಸೆತಗಳಲ್ಲಿ ದಾಖಲಾಯಿತು. ಸಿಡಿಸಿದ್ದು 5 ಸಿಕ್ಸರ್‌ ಮತ್ತು 3 ಬೌಂಡರಿ. ಈ ಸಾಧನೆಯೊಂದಿಗೆ ಪ್ರಸಕ್ತ ಐಪಿಎಲ್‌ನಲ್ಲಿ 500 ರನ್‌ ಪೇರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ವಾರ್ನರ್‌ ಅವರದಾಯಿತು. ಆಡಿದ ಎಲ್ಲ 5 ಋತುಗಳಲ್ಲೂ 500 ರನ್‌ ಗಡಿ ದಾಟಿದ ಹಿರಿಮೆಗೂ ವಾರ್ನರ್‌ ಪಾತ್ರರಾದರು. 2016ರಲ್ಲಿ 848 ರನ್‌ ಪೇರಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.


ಬೇರ್‌ಸ್ಟೊ ಐಪಿಎಲ್‌ ದಾಖಲೆ

ಪ್ರಸಕ್ತ ಐಪಿಎಲ್‌ನಲ್ಲಿ ಕೊನೆಯ ಪಂದ್ಯವಾಡಿದ ಜಾನಿ ಬೇರ್‌ಸ್ಟೊ 43 ಎಸೆತಗಳಿಂದ ಅಜೇಯ 80 ರನ್‌ ಬಾರಿಸಿದರು. ಈ ಪ್ರಚಂಡ ಬ್ಯಾಟಿಂಗ್‌ ವೇಳೆ 4 ಸಿಕ್ಸರ್‌, 7 ಬೌಂಡರಿ ಸಿಡಿಯಿತು. ಈ ಸಾಹಸದೊಂದಿಗೆ ಬೇರ್‌ಸ್ಟೊ ಪದಾರ್ಪಣ ಐಪಿಎಲ್‌ನಲ್ಲೇ ಸರ್ವಾಧಿಕ 445 ರನ್‌ ಪೇರಿಸಿದ ದಾಖಲೆ ಬರೆದರು. ವಾರ್ನರ್‌-ಬೇರ್‌ಸ್ಟೊ ಪವರ್‌ ಪ್ಲೇ ಅವಧಿಯಲ್ಲಿ 72 ರನ್‌ ಸೂರೆಗೈದರು. ಇದು ಈ ಐಪಿಎಲ್‌ ಪವರ್‌ ಪ್ಲೇ ಅವಧಿಯಲ್ಲಿ ದಾಖಲಾದ ಅತ್ಯಧಿಕ ಮೊತ್ತ.

ಕೆಕೆಆರ್‌ಗೆ ಖಲೀಲ್‌ ಕಡಿವಾಣ
ಕೆಕೆಆರ್‌ ದಿಟ್ಟ ರೀತಿಯಲ್ಲೇ ಇನ್ನಿಂಗ್ಸ್‌ ಆರಂಭಿಸಿತ್ತು. ಕ್ರಿಸ್‌ ಲಿನ್‌-ಸುನೀಲ್‌ ನಾರಾಯಣ್‌ ಕೇವಲ 2.4 ಓವರ್‌ಗಳಿಂದ 42 ರನ್‌ ಪೇರಿಸಿ ಸಿಡಿದು ನಿಂತಿದ್ದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಹೈದರಾಬಾದ್‌ ಬೌಲರ್ ಮೇಲುಗೈ ಸಾಧಿಸಿದರು. ಅದರಲ್ಲೂ ಖಲೀಲ್‌ ಅಹ್ಮದ್‌ ಘಾತಕವಾಗಿ ಪರಿಣಮಿಸಿದರು. ಆರಂಭಿಕರಿಬ್ಬರ ವಿಕೆಟ್‌ ಕಬಳಿಸಿದ ಖಲೀಲ್‌, ವನ್‌ಡೌನ್‌ನಲ್ಲಿ ಬಂದ ಶುಭಮನ್‌ ಗಿಲ್‌ ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದರು. ಭುವನೇಶ್ವರ್‌ ಕುಮಾರ್‌ 2 ವಿಕೆಟ್‌ ಕಿತ್ತರು.
ಕ್ರಿಸ್‌ ಲಿನ್‌ 47 ಎಸೆತಗಳಿಂದ 51 ರನ್‌ ಹೊಡೆದು ಕೆಕೆಆರ್‌ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (4 ಬೌಂಡರಿ, 1 ಸಿಕ್ಸರ್‌). ನಾರಾಯಣ್‌ ಕೇವಲ 8 ಎಸೆತಗಳಿಂದ 25 ರನ್‌ ಬಾರಿಸಿದರು (3 ಬೌಂಡರಿ, 2 ಸಿಕ್ಸರ್‌). ಕೊನೆಯಲ್ಲಿ ರಿಂಕು ಸಿಂಗ್‌ 30 ರನ್‌ ಕೊಡುಗೆ ಸಲ್ಲಿಸಿದರು.

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಸಿ ವಿಲಿಯಮ್ಸನ್‌ ಬಿ ಅಹ್ಮದ್‌ 51
ಸುನೀಲ್‌ ನಾರಾಯಣ್‌ ಬಿ ಅಹ್ಮದ್‌ 25
ಶುಭಮನ್‌ ಗಿಲ್‌ ಸಿ ಶಂಕರ್‌ ಬಿ ಅಹ್ಮದ್‌ 3
ನಿತೀಶ್‌ ರಾಣಾ ಸಿ ಬೆರ್‌ಸ್ಟೊ ಬಿ ಭುವನೇಶ್ವರ್‌ 11
ದಿನೇಶ್‌ ಕಾರ್ತಿಕ್‌ ರನೌಟ್‌ 6
ರಿಂಕು ಸಿಂಗ್‌ ಸಿ ರಶೀದ್‌ ಬಿ ಸಂದೀಪ್‌ 30
ಆ್ಯಂಡ್ರೆ ರಸೆಲ್‌ ಸಿ ರಶೀದ್‌ ಬಿ ಭುವನೇಶ್ವರ್‌ 15
ಪೀಯೂಷ್‌ ಚಾವ್ಲಾ ಸಿ ಬೆರ್‌ಸ್ಟೊ ಬಿ ರಶೀದ್‌ 4
ಯರ್ರಾ ಪೃಥ್ವಿರಾಜ್‌ ಔಟಾಗದೆ 0
ಕೆ.ಸಿ. ಕಾರಿಯಪ್ಪ ಔಟಾಗದೆ 9
ಇತರ 5
ಒಟ್ಟು (8 ವಿಕೆಟಿಗೆ) 159
ವಿಕೆಟ್‌ ಪತನ: 1-42, 2-50, 3-65, 4-73, 5-124, 6-133, 7-146, 8-150.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-35-2
ಶಹಬಾಝ್ ನದೀವ್‌ 4-0-30-0
ಖಲೀಲ್‌ ಅಹ್ಮದ್‌ 4-0-33-3
ಸಂದೀಪ್‌ ಶರ್ಮ 4-0-37-1
ರಶೀದ್‌ ಖಾನ್‌ 4-0-23-1

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಬಿ ಪೃಥ್ವಿರಾಜ್‌ 67
ಜಾನಿ ಬೇರ್‌ಸ್ಟೊ ಔಟಾಗದೆ 80
ಕೇನ್‌ ವಿಲಿಯಮ್ಸನ್‌ ಔಟಾಗದೆ 8
ಇತರ 6
ಒಟ್ಟು (15 ಓವರ್‌ಗಳಲ್ಲಿ ಒಂದು ವಿಕೆಟಿಗೆ) 161
ವಿಕೆಟ್‌ ಪತನ: 1-131.
ಬೌಲಿಂಗ್‌: ಹ್ಯಾರಿ ಗರ್ನಿ 2-0-16-0
ಯರ್ರಾ ಪೃಥ್ವಿರಾಜ್‌ 3-0-29-1
ಪೀಯೂಷ್‌ ಚಾವ್ಲಾ 3-0-38-0
ಸುನೀಲ್‌ ನಾರಾಯಣ್‌ 4-0-34-0
ಕೆ.ಸಿ. ಕಾರಿಯಪ್ಪ 2-0-34-0
ಆ್ಯಂಡ್ರೆ ರಸೆಲ್‌ 1-0-8-0
ಪಂದ್ಯಶ್ರೇಷ್ಠ: ಖಲೀಲ್‌ ಅಹ್ಮದ್‌

ಟಾಪ್ ನ್ಯೂಸ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.