ಕೊನೆಯ ಐಪಿಎಲ್ ಪಂದ್ಯವಾಡಿದರೆ ಧೋನಿ? ಡ್ಯಾನಿ ಮಾರಿಸನ್ ಪ್ರಶ್ನೆಗೆ ಮಾಹಿ ಹೇಳಿದ್ದೇನು?
Team Udayavani, Nov 2, 2020, 7:48 AM IST
ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರವಿವಾರ ಕೊನೆಯ ಐಪಿಎಲ್ ಪಂದ್ಯವಾಡಿದರೇ? ಆ. 15ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಅವರು ಇನ್ನು ಐಪಿಎಲ್‌ನಿಂದಲೂ ದೂರ ಸರಿಯುವರೇ? ಇಂಥ ಪ್ರಶ್ನೆ ಧೋನಿ ಅಭಿಮಾನಿಗಳನ್ನು ಕಾಡುತ್ತಿದೆ.
ಕಮೆಂಟೇಟರ್ ಡ್ಯಾನಿ ಮಾರಿಸನ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. “ಇದು ಹಳದಿ ಉಡುಗೆಯಲ್ಲಿ ನಿಮ್ಮ ಕೊನೆಯ ಪಂದ್ಯವಾಗಿರಬಹುದೇ?’ ಎಂದು ರವಿವಾರದ ಟಾಸ್ ವೇಳೆ ಅವರು ಧೋನಿಯನ್ನು ಕೇಳುತ್ತಾರೆ. ಇದಕ್ಕೆ ನಗುತ್ತ ಪ್ರತಿಕ್ರಿಯಿಸಿದ ಧೋನಿ, “ಇಲ್ಲ. ಖಂಡಿತವಾಗಿಯೂ ಇದು ನನ್ನ ಕೊನೆಯ ಐಪಿಎಲ್ ಪಂದ್ಯವಲ್ಲ’ ಎಂದು ಉತ್ತರಿಸುತ್ತಾರೆ. ಅಲ್ಲಿಗೆ ಧೋನಿ ಅಭಿಮಾನಿಗಳಿಗೆ ಸಮಾಧಾನವಾಗುತ್ತದೆ.
ಈ ಬಾರಿ ಐಪಿಎಲ್ ಚರಿತ್ರೆಯಲ್ಲೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಚೆನ್ನೈ, ಕೂಟದಿಂದ ನಿರ್ಗಮಿಸಿದ ಮೊದಲ ತಂಡವೆಂಬ ಸಂಕಟಕ್ಕೆ ಸಿಲುಕಿತ್ತು. ಆದರೆ ಕೂಟದ ಅಂತ್ಯಕ್ಕೆ ಮತ್ತೆ ಹಳೆಯ ಖದರ್ ಗೆ ಮರಳಿದ ಚೆನ್ನೈ ಕೊನೆಯ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ರವಿವಾರ ಪಂಜಾಬ್ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರು ವಿಕೆಟ್ 153 ರನ್ ಗಳಿಸಿತು. ದೀಪಕ್ ಹೂಡಾ 62 ರನ್ ಗಳಿಸಿ ಈ ಬಾರಿಯ ಕೂಟದ ಮೊದಲ ಅರ್ಧಶತಕ ಬಾರಿಸಿದರು. ಇದನ್ನು ಬೆನ್ನಟ್ಟಿದ್ದ ಚೆನ್ನೈಗೆ ಗಾಯಕ್ವಾಡ್ 62 ರನ್ ಗಳಿಸಿ ಬೆನ್ನೆಲುಬಾಗಿ ನಿಂತರು. 18.5 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ಬೆನ್ನತ್ತಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.