ಗೆಲ್ಲಲೇಬೇಕಾದ ಒತ್ತಡದಲ್ಲಿ CSK-SRH: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಧೋನಿಪಡೆ
Team Udayavani, Oct 13, 2020, 6:59 PM IST
ದುಬೈ: ಐಪಿಎಲ್ 13ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಮತ್ತೊಂದೆಡೆ ವಾರ್ನರ್ ನೇತೃತ್ವದ ಹೈದರಾಬಾದ್ ತಂಡ ಕೂಡ ಜಯಕ್ಕಾಗಿ ಹಾತೋರೆಯುತ್ತಿದೆ. ಎರಡೂ ತಂಡಗಳೂ ಕೂಡ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಚೆನ್ನೈ ಈ ಬಾರಿ ಆಡಿದ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯಗಳಿಸಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ವಾಟ್ಸನ್, ಡುಪ್ಲೆಸಿ ಲಯದಲ್ಲಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಧೋನಿ, ಕರ್ರನ್, ಜಡೇಜಾ, ಬ್ರಾವೋ ರಿಂದ ಸ್ಥಿರ ಪ್ರದರ್ಶನ ಮೂಡಿಬರುತ್ತಿಲ್ಲ.
ಇನ್ನು ಹೈದರಾಬಾದ್ ಈ ಬಾರಿ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇನ್ನು ವಾರ್ನರ್ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ಮೂಡಿಬರಬೇಕಾಗಿದೆ.
ಈವರೆಗೂ ಎರಡೂ ತಂಡಗಳು 13 ಬಾರಿ ಮುಖಾಮುಖಿಯಾಗಿದ್ದು, ಹೈದರಾಬಾದ್ 4ರಲ್ಲಿ ಮತ್ತು ಚೆನ್ನೈ 9ರಲ್ಲಿ ಗೆಲುವು ಸಾಧಿಸಿದೆ.
ಆಡುವ ಹನ್ನೊಂದರ ಬಳಗ:
ಚೆನ್ನೈ ಸೂಪರ್ ಕಿಂಗ್ಸ್ : ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಶಾರ್ದುಲ್ ಠಾಕೂರ್, ಕರ್ಣ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ವಿಜಯ್ ಶಂಕರ್, ಶಹಬಾಜ್ ನದೀಮ್, ರಶೀದ್ ಖಾನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಟಿ ನಟರಾಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.