ರೋಚಕ ಸೂಪರ್ ಓವರ್: ಫರ್ಗ್ಯುಸನ್ ಆರ್ಭಟಕ್ಕೆ ಬೆಚ್ಚಿದ ವಾರ್ನರ್ ಪಡೆ, ಕೋಲ್ಕತ್ತಾಗೆ ಗೆಲುವು
Team Udayavani, Oct 18, 2020, 7:48 PM IST
ಅಬುಧಾಬಿ: ಲಾಕಿ ಫರ್ಗ್ಯುಸನ್ ಮಾರಕ ದಾಳಿಗೆ ಬೆಚ್ಚಿದ ಡೇವಿಡ್ ವಾರ್ನರ್ ನೇತೃತ್ವದ ಹೈದರಾಬಾದ್ ತಂಡ ಸೂಪರ್ ಓವರ್ ನಲ್ಲಿ ಸೋಲನನುಭವಿಸಿದೆ.
ಕೊಲ್ಕತ್ತಾ ನೀಡಿದ 164 ರನ್ ಗಳ ಗುರಿ ಬೆನ್ನತ್ತಿದ ಹೈದರಾಬಾದ್ ವಾರ್ನರ್ ಸಾಹಸದಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಮ್ಯಾಚ್ ಟೈ ಮಾಡಿಕೊಂಡು ಸೂಪರ್ ಓವರ್ ಗೆ ಆಹ್ವಾನ ನೀಡಿತ್ತು.
ಆದರೇ ಸೂಪರ್ ಓವರ್ ನಲ್ಲಿ ಪಂದ್ಯಕ್ಕೆ ಲಾಕಿ ಫರ್ಗ್ಯುಸನ್ ರೋಚಕ ಟ್ವಿಸ್ಟ್ ನೀಡಿದರು. ಮೊದಲ ಎಸೆತದಲ್ಲೇ ವಾರ್ನರ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ಸಮದ್ ಕೂಡ ಬೌಲ್ಡ್ ಆಗಿ ವಾರ್ನರ್ ಹಾದಿ ಹಿಡಿದರು. ಅಂತಿಮವಾಗಿ ಹೈದರಾಬಾದ್ ಕೇವಲ 3 ರನ್ ಗಳ ಟಾರ್ಗೇಟ್ ನೀಡಿತು.
ಅಲ್ಪ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ತಂಡದ ಮೋರ್ಗನ್ ಮತ್ತು ಕಾರ್ತಿಕ್, 4 ಎಸೆತಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿದರು.
ಇದಕ್ಕೂ ಮೊದಲು ಕೊಲ್ಕತ್ತಾ ನೀಡಿದ 164 ರನ್ ಗಳ ಗುರಿ ಬೆನ್ನತ್ತಿದ ಹೈದರಾಬಾದ್ ಭರ್ಜರಿ ಆರಂಭ ಪಡೆದುಕೊಂಡಿತು. ಜಾನಿ ಬೈರ್ ಸ್ಟೋವ್ ಮತ್ತು ಕೇನ್ ವಿಲಿಯಮ್ಸನ್ ಕೊಲ್ಕತ್ತಾ ಬೌಲರ್ ಗಳನ್ನು ದಂಡಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳ ಜೊತೆಯಾಟ ನಡೆಸಿತು. ವಿಲಿಯಮ್ಸನ್ 19 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಬೌಂಡರಿಗಳ ನೆರವಿನಿಂದ 29 ರನ್ ಗಳಿಸಿ ಫರ್ಗ್ಯುಸನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಪ್ರಿಯಂ ಗರ್ಗ್ (4) ಒಂದಂಕಿ ದಾಟುವ ಮೊದಲೇ ಫರ್ಗ್ಯುಸನ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.
ಏತನ್ಮಧ್ಯೆ 7 ಭರ್ಜರಿ ಫೋರ್ ಗಳ ನೆರವಿನಿಂದ 36 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಬೈರ್ ಸ್ಟೋವ್, ರಸ್ಸೆಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಕೇವಲ 6 ರನ್ ಗಳಿಸಿದರೆ, ವಿಜಯ್ ಶಂಕರ್ ಕೂಡ 7 ರನ್ ಗಳಿಸಿ ಬಂದ ಹಾದಿಯಲ್ಲೆ ಹಿಂದಿರುಗಿದರು.
ನಾಯಕ ಡೇವಿಡ್ ವಾರ್ನರ್ ಏಕಾಂಗಿಯಾಗಿ ಹೋರಾಟ ನಡೆಸಿ ಐಪಿಎಲ್ ಕ್ರಿಕಟ್ ನಲ್ಲಿ 5000 ರನ್ ಫೂರೈಸಿದ ಸಾಧನೆ ಮಾಡಿದರು. ಈ ವೇಳೆ 1 ಸಿಕ್ಸ್ ಹಾಗೂ 2 ಬೌಂಡರಿಗಳ ನೆರವಿನಿಂದ 23 ರನ್ ಗಳಿಸಿ ನಾಯಕನಿಗೆ ಉತ್ತಮ ಸಾಥ್ ನೀಡಿದ್ದ ಅಬ್ದುಲ್ ಸಮದ್ ಶುಭ್ ಮನ್ ಹಿಡಿದ ಅದ್ಭುತ ಕ್ಯಾಚ್ ಗೆ ಪೆವಿಲಿಯನ್ ಸೇರಿದರು.
ನಂತರ ಅಬ್ಬರಿಸಿದ ವಾರ್ನರ್ ಪಂದ್ಯವನ್ನು ರೋಚಕತೆಗೆ ಕೊಂಡೊಯ್ದರು. .ಅಂತಿಮ ಓವರ್ ನಲ್ಲಿ 18 ರನ್ ಅಗತ್ಯವಿದ್ದಾಗ 3 ಭರ್ಜರಿ ಬೌಂಡರಿ ಸಿಡಿಸಿದ ಗೆಲ್ಲುವ ಮುನ್ಸೂಚನೆ ನೀಡಿದರು. ಆದರೇ ರಸ್ಸೆಲ್ ಕರಾರುವಾಕ್ ದಾಳಿಗೆ ಪಂದ್ಯವನ್ನು ಡ್ರಾ ಮಾಡುವಷ್ಟರಲ್ಲೇ ಸಫಲರಾದರು.
ಕೊಲ್ಕತ್ತಾ ಪರ ಫರ್ಗ್ಯುಸನ್ 3 ವಿಕೆಟ್ ಪಡೆದು ಮಿಂಚಿದರು. ಪ್ಯಾಟ್ ಕಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.