ಟಾಸ್ ಗೆದ್ದ ವಾರ್ನರ್ ಪಡೆ: ಹೈದರಾಬಾದ್ ಫ್ಲೇ-ಆಫ್ ಕನಸು ನನಸಾಗುತ್ತಾ?
Team Udayavani, Nov 3, 2020, 7:00 PM IST
ಶಾರ್ಜಾ: ಐಪಿಎಲ್ 13ನೇ ಆವೃತ್ತಿಯ ಕಟ್ಟಕಡೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ ವಾರ್ನರ್ ಬಳಗ ಬೌಲಿಂಗ್ ಆಯ್ದುಕೊಂಡಿದೆ.
ಇಂದಿನ ಪಂದ್ಯ ಭಾರೀ ಮಹತ್ವ ಪಡೆದಿದಿದ್ದು, ಹೈದರಾಬಾದ್ ಪಾಲಿಗೆ ನಿರ್ಣಾಯಕ ಪಂದ್ಯ ಎನಿಸಿಕೊಂಡಿದೆ. ಪ್ಲೇ ಆಫ್ಗೆ ಲಗ್ಗೆ ಇಡಬೇಕಾದರೆ ವಾರ್ನರ್ ಸೇನೆ ಗೆಲ್ಲಲೇಬೇಕು. ಸೋತರೆ ಅದು ಕೂಟದಿಂದಲೇ ನಿರ್ಗಮಿಸಲಿದೆ. ಹೈದರಾಬಾದ್ ತಂಡದ ರನ್ ರೇಟ್ ಅತ್ಯುತ್ತಮವಾಗಿದ್ದು, ಕೇವಲ 1 ರನ್ ಇಲ್ಲವೇ 1 ವಿಕೆಟ್ ನಿಂದ ಜಯಿಸಿದರೂ ಪ್ಲೇ ಆಫ್ ಗೆ ಎಂಟ್ರಿ ಸಿಗಲಿದೆ.
ಮುಂಬೈ ಈ ಪಂದ್ಯ ಸೋತರೂ ಅದರ ಅಗ್ರಸ್ಥಾನ ಅಬಾಧಿತ. ಗೆದ್ದರೆ ಅಂಕಗಳು 20ಕ್ಕೆ ಏರಿಕೆಯಾಗುತ್ತದೆ. ಶಾರ್ಜಾದಲ್ಲೇ ಹೈದರಾಬಾದ್ ವಿರುದ್ಧ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರೋಹಿತ್ ಪಡೆ 34 ರನ್ನುಗಳಿಂದ ಗೆದ್ದು ಬೀಗಿತ್ತು.
ಆಡುವ ಹನ್ನೊಂದರ ಬಳಗ:
ಸನ್‌ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ , ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಇಶಾನ್ ಕಿಶನ್, ಕ್ರುನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್ಸನ್, ಧವಲ್ ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.