ಅರಬ್ ನಾಡಿನಲ್ಲಿ ಇಂದಿನಿಂದ 53 ದಿನಗಳ ಐಪಿಎಲ್ ಅಬ್ಬರ
ಅಬುಧಾಬಿಯಲ್ಲಿ ಮುಂಬೈ-ಚೆನ್ನೈ ಮೊದಲ ಮುಖಾಮುಖಿ
Team Udayavani, Sep 19, 2020, 6:10 AM IST
ಅಬುಧಾಬಿ: ಆರು ತಿಂಗಳುಗಳಿಂದ ಐಪಿಎಲ್ ಗುಂಗಿನಲ್ಲೇ ಇದ್ದ ದೇಶದ ಕ್ರಿಕೆಟ್ ಅಭಿಮಾನಿಗಳು ಇನ್ನು ಕಾಯಬೇಕಿಲ್ಲ. ವಿಶ್ವದ ಈ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ನ 13ನೇ ಆವೃತ್ತಿಗೆ ಎದುರಾದ ಕಂಟಕವೆಲ್ಲ ನಿವಾರಣೆ ಗೊಂಡಿದೆ. ಕೋವಿಡ್ ಕಾರಣದಿಂದ ಸುಮಾರು 6 ತಿಂಗಳು ವಿಳಂಬವಾಗಿ ಅರಬ್ ನಾಡಿನ 3 ಅಂಗಳದಲ್ಲಿ ಶನಿವಾರದಿಂದ ಅಬ್ಬರಿಸಲಿದೆ. ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮುಂದಿನ 53 ದಿನಗಳ ಕಾಲ ಹಬ್ಬದ ವಾತಾವರಣ.
ಅಬುಧಾಬಿಯ “ಶೇಖ್ ಜಾಯೇದ್ ಸ್ಟೇಡಿಯಂ’ನಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ. ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಪಂದ್ಯ ಆರಂಭವಾಗುತ್ತದೆ.
ಕೊರೊನಾ ಭೀತಿಯ ನಡುವೆ, ಹತ್ತಾರು ನಿಬಂಧನೆ ಗಳು ಮತ್ತು ವೀಕ್ಷಕರ ಅನುಪಸ್ಥಿತಿ ಯಲ್ಲಿ ಈ ಪಂದ್ಯಾವಳಿ ನಡೆದರೂ ಇದು ಸೃಷ್ಟಿ ಸಿರುವ ರೋಮಾಂಚನಕ್ಕೇನೂ ಕೊರತೆ ಇಲ್ಲ. ಕೊರೊನಾದಿಂದಾಗಿ ಮನೋರಂಜನೆಯ ತೀವ್ರ ಬರಗಾಲದಲ್ಲಿದ್ದ ಇತರರನ್ನೂ ಈ ಬಾರಿಯ ಐಪಿಎಲ್ ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ.
ಎಂಟೂ ತಂಡ ಬಲಿಷ್ಠ
ಮೇಲ್ನೋಟಕ್ಕೆ ಎಲ್ಲ 8 ತಂಡಗಳೂ ಬಲಿಷ್ಠ ವಾಗಿವೆ. ಆದರೂ ಕೆಲವು ಸ್ಟಾರ್ ಆಟಗಾರರ ಅನುಪಸ್ಥಿತಿ ಕೆಲವು ತಂಡಗಳ ಕಾರ್ಯತಂತ್ರವನ್ನು ಏರುಪೇರಾಗಿಸುವ ಸಾಧ್ಯತೆ ಇದೆ. ಲಸಿತ ಮಾಲಿಂಗ (ಮುಂಬೈ), ಸುರೇಶ್ ರೈನಾ, ಹರ್ಭಜನ್ ಸಿಂಗ್ (ಚೆನ್ನೈ) ಈಗಾಗಲೇ ಕೂಟದಿಂದ ಹೊರಗುಳಿದಿದ್ದಾರೆ. ಬೆನ್ ಸ್ಟೋಕ್ಸ್ (ರಾಜಸ್ಥಾನ್) ಕೂಡ ಫಿಫ್ಟಿ-ಫಿಫ್ಟಿ ಎಂಬ ಸ್ಥಿತಿಯಲ್ಲಿದ್ದಾರೆ. ಇನ್ನೊಂದೆಡೆ ಕೆಲವು ತಂಡಗಳು ಹೆಚ್ಚುವರಿ ತಾರಾ ಆಟಗಾರರಿಂದ ಹೆಚ್ಚು ಬಲಿಷ್ಠವಾಗಿವೆ. ಉದಾಹರಣೆಗೆ
ಆರ್‌ಸಿಬಿ. ಕರ್ನಾಟಕದ ಈ ಫ್ರಾಂಚೈಸಿ ಆರನ್ ಫಿಂಚ್, ಕ್ರಿಸ್ ಮಾರಿಸ್ ಸೇರ್ಪಡೆಯಿಂದ ಜಬರ್ದಸ್ತ್ ಆಗಿ ಗೋಚರಿಸುತ್ತಿದೆ.
ಧೋನಿ ಕೇಂದ್ರಬಿಂದು
ಎಲ್ಲರ ಕೇಂದ್ರಬಿಂದು ಆಗಿರುವವರು ಮಹೇಂದ್ರ ಸಿಂಗ್ ಧೋನಿ. ಅಂತಾರಾಷ್ಟ್ರೀಯ ಕ್ರಿಕೆಟಿಗೆ ಈಗಾಗಲೇ ವಿದಾಯ ಘೋಷಿಸಿರುವ ಧೋನಿ ಇನ್ನು ಆಡುವುದೇನಿದ್ದರೂ ಐಪಿಎಲ್ ಮಾತ್ರ. ಇದು ಅವರ ಕೊನೆಯ ಐಪಿಎಲ್ ಕೂಡ ಆಗಿರಲೂಬಹುದು. ಹೀಗಾಗಿ ಮೊದಲ ಪಂದ್ಯದಿಂದಲೇ 13ನೇ ಐಪಿಎಲ್ ಮೋಡಿ ಗೈಯುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.