ಐಪಿಎಲ್ ನಲ್ಲಿ ಈ ಬಾರಿ ಬೆನ್ ಸ್ಟೋಕ್ಸ್ ಆಟ ಅನುಮಾನ
ಕೌಟುಂಬಿಕ ಕಾರಣದಿಂದ ಕೂಟದಿಂದ ಹಿಂಜರಿಯುವ ಸಾಧ್ಯತೆ
Team Udayavani, Sep 15, 2020, 8:10 PM IST
ನವದೆಹಲಿ : ಐಪಿಎಲ್ 13 ನೇ ಆವೃತ್ತಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಒಂದಿಷ್ಟು ಸ್ಟಾರ್ ಆಟಗಾರರು ಈಗಾಗಲೇ ಕೂಟದಿಂದ ಹಿಂಜರಿದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯ ಹೊಡೆತ ನೀಡಿದೆ. ಈ ಪಟ್ಟಿಗೆ ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಟಗಾರ ಇಂಗ್ಗೆಂಡ್ ನ ಬೆನ್ ಸ್ಟೋಕ್ಸ್ ಸೇರಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್ ಡೊನಾಲ್ಡ್ ಮಾತಾಡುತ್ತಾ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್ ನಲ್ಲಿ ಆಡುವುದು ಅನುಮಾನ ಎಂದು ಹೇಳಿದ್ದಾರೆ. ನಾವು ಈಗಾಗಲೇ ಸ್ಟೋಕ್ಸ್ ಅವರಿಗೆ ಬೇಕಾದ ಸಮಯವನ್ನು ನೀಡಿದ್ದೇವೆ. ಇದು ಅವರಿಗೆ ಸಂಕಷ್ಟದ ಸನ್ನಿವೇಶ. ಇಂಥ ಸಮಯದಲ್ಲಿ ಬೇಕಾದ ಸಮಯವನ್ನು ನಾವು ನೀಡಿದ್ದೇವೆ.ನಾನು ಈಗಲೇ ಸ್ಟೋಕ್ಸ್ ಈ ಬಾರಿ ತಂಡಕ್ಕೆ ಸೇರಿಕೊಳ್ಳುತ್ತಾರೆ ಎನ್ನುವುದನ್ನು ಖಚಿತವಾಗಿ ಹೇಳಲಾರೆ ಎಂದು ಹೇಳಿದ್ದಾರೆ.
ಸ್ಟೋಕ್ಸ್ ಅವರ ಕೌಟುಂಬಿಕ ವಿಚಾರವಾಗಿರುವ ಕಾರಣ. ನಾವು ಖಚಿತವಾಗಿ ಏನನ್ನು ಹೇಳಲು ಸಾಧ್ಯವಿಲ್ಲ.. ಅವರು ಯಾವಾಗ ತರಬೇತಿಗೆ ಸೇರಿಕೊಳ್ಳುತ್ತಾರೆ ಎನ್ನುವುದು ಗೊತ್ತಿಲ್ಲ.ನಾವು ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನ ಪಟ್ಟಿದ್ದೇವೆ. ಕೌಟುಂಬಿಕ ವಿಚಾರ ಬಗೆ ಹರಿದ ಮೇಲೆ ಅವರ ಕುರಿತು ನಿರ್ಧಾರ ತೆಗೆದುಕೊಳ್ಳಬಹುದೆಂದು ಕೋಚ್ ಹೇಳಿದ್ದಾರೆ.
ರಾಜಸ್ಥಾನ್ ತಂಡದ ಮತ್ತೊರ್ವ ಆಟಗಾರ ಆಸ್ಟೇಲಿಯಾದ ಸ್ಟೀವ್ ಸ್ಮಿತ್ ಗಾಯದಿಂದ ಹೊರ ಉಳಿದಿದ್ದು ಅವರ ಲಭ್ಯತೆಯ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದೆ.
ರಾಜಸ್ಥಾನ್ ರಾಯಲ್ಸ್ 22 ಸೆಪ್ಟೆಂಬರ್ ರಂದು ಚೆನ್ನೈ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.