ಅದೃಷ್ಟದ ಕೆಕೆಆರ್‌ಗೆ ಆರ್‌ಸಿಬಿ ಸವಾಲು: ಕಾರ್ತಿಕ್- ಕೊಹ್ಲಿ ಕಾಳಗದಲ್ಲಿ ಗೆಲುವು ಯಾರಿಗೆ?

Team Udayavani, Oct 12, 2020, 4:21 PM IST

ಅದೃಷ್ಟದ ಕೆಕೆಆರ್‌ಗೆ ಆರ್‌ಸಿಬಿ ಸವಾಲು: ಕಾರ್ತಿಕ್- ಕೊಹ್ಲಿ ಕಾಳಗದಲ್ಲಿ ಗೆಲುವು ಯಾರಿಗೆ?

ಶಾರ್ಜಾ: ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ಆತ್ಮವಿಶ್ವಾಸ ದಲ್ಲಿರುವ ಕೊಹ್ಲಿ ಸಾರಥ್ಯದ ಆರ್‌ಸಿ ಬೆಂಗಳೂರು ಮತ್ತು ಪಂಜಾಬ್‌ ವಿರುದ್ಧದ ಸೋಲುವ ಪಂದ್ಯವನ್ನು ಅದೃಷ್ಟದ ಬಲದಿಂದ ಕೊನೆಯ ಹಂತದಲ್ಲಿ ರೋಚಕವಾಗಿ ಗೆದ್ದಿರುವ ದಿನೇಶ್‌ ಕಾರ್ತಿಕ್‌ ನೇತೃತ್ವದ ಕೆಕೆಆರ್‌ ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿದೆ. ಇತ್ತಂಡಗಳಿಗೂ ಇದು ಕೂಟದ ಮೊದಲ ಪಂದ್ಯವಾಗಿದ್ದು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ನೋಡಬೇಕಿದೆ.

ಉಭಯ ತಂಡಗಳು ಅಪಾಯಕಾರಿ ಹಾಗೂ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದು ಏಕಾಂಗಿಯಾಗಿ ಪಂದ್ಯವನ್ನು ತಮ್ಮತ್ತ ಸೆಳೆಯುವಷ್ಟು ಸಮರ್ಥ ಹೊಂದಿವೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವುದರಲ್ಲಿ ಅನುಮಾನವಿಲ್ಲ.

ಆರ್‌ಸಿಬಿ ಇದುವರೆಗೆ ಆಡಿದ ಪಂದ್ಯಗಳೆಲ್ಲವೂ ಅರಬ್‌ ನಾಡಿನ ಬೃಹತ್‌ ಮೈದಾನ ಖ್ಯಾತಿಯ ಅಬುಧಾಬಿ, ದುಬಾೖ ಅಂಗಳದಲ್ಲಿ ನಡೆದಿತ್ತು. ಇದೀಗ “ಶಾರ್ಜಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ ನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಹೊಡಿಬಡಿ ಆಟಕ್ಕೆ ಹೇಳಿ ಮಾಡಿಸಿದಂತಿರುವ ಈ ಮೈದಾನದಲ್ಲಿ ಆರ್‌ಸಿಬಿಗೆ ಹೆಚ್ಚು ಅವಕಾಶ ಎನ್ನಲಡ್ಡಿಲಿಲ್ಲ. ಆದರೆ ಆರ್‌ಸಿಬಿಯ ಪ್ರದರ್ಶನವನ್ನು ಅಷ್ಟು ಬಲವಾಗಿ ನಂಬುವುದು ಕಷ್ಟ. ಯಾಕೆಂದರೆ ತಂಡ ಸ್ಥಿರವಾದ ನಿರ್ವಹಣೆ ನೀಡಿದ ನಿದರ್ಶನವಿಲ್ಲ. ತಂಡವು ಕೆಲವೊಮ್ಮೆ ತನ್ನ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದ್ದರೆ ಮತ್ತೂಮ್ಮೆ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ. ಹಾಗಾಗಿ ಆರ್‌ಸಿಬಿ ಮೇಲೆ ನಂಬಿಕೆ ಇರಿಸುವುದು ತುಸು ಕಷ್ಟಕರ ಎನ್ನಬಹುದು.

ಫಿಂಚ್, ಎಬಿಡಿ ಬ್ಯಾಟಿಂಗ್‌ ವೈಫ‌ಲ್ಯ
ಮಿಸ್ಟರ್‌ 360 ಖ್ಯಾತಿಯ ಎಬಿ ಡಿ’ವಿಲಿಯರ್ ಈ ಬಾರಿಯ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿರುವುದು ನಾಯಕ ಕೊಹ್ಲಿಗೆ ಚಿಂತೆಗೀಡು ಮಾಡಿದೆ. ಜತೆಗೆ ಆಸೀಸ್‌ ಬಿಗ್‌ ಹಿಟ್ಟರ್‌ ಫಿಂಚ್‌ ಕೂಡ ಕೇವಲ ಒಂದು ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೆ ಇನ್ನುಳಿದ ಪಂದ್ಯಗಳಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ಮಹತ್ವದ ಈ ಪಂದ್ಯದಲ್ಲಿ ಸಿಡಿಯಬೇಕಾದ ಅನಿವಾರ್ಯ ಅವರ ಮೇಲಿದೆ. ನಾಯಕ ಕೊಹ್ಲಿ, ಪಡಿಕ್ಕಲ್‌ ಉತ್ತಮ ಬ್ಯಾಟಿಂಗ್‌ ಫಾರ್ಮ್ ನಲ್ಲಿದ್ದು ಈ ಪಂದ್ಯದಲ್ಲಿಯೂ ತಂಡ ಇವರ ಮೇಲೆ ಹೆಚ್ಚು ನಂಬಿಕೆ ಇರಿಸಿಕೊಂಡಿದೆ.

ಇದನ್ನೂ ಓದಿ:ಫ್ರೆಂಚ್ ಓಪನ್ : 20ನೇ ಗ್ರಾಂಡ್ ಸ್ಲಾಮ್ ಗೆದ್ದ ನಡಾಲ್! ವೃತ್ತಿ ಜೀವನದ 100ನೇ ಗೆಲುವು

ಆಲ್‌ರೌಂಡರ್‌ ಮಾರಿಸ್‌ ಸೇರ್ಪಡೆಯಿಂದ ಆರ್‌ಸಿಬಿ ಬೌಲಿಂಗ್‌ ಇನ್ನಷ್ಟು ಬಲಿಷ್ಠವಾಗಿದೆ. ಮಾರಿಸ್‌ ಶನಿವಾರದ ಪಂದ್ಯದಲಿ ಚೆನ್ನೈ ವಿರುದ್ಧ ಮೂರು ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ ಲಂಕಾ ವೇಗಿ ಇಸುರು ಉದಾನ, ನವದೀಪ್‌ ಸೈನಿ, ಚಹಲ್‌ ಉತ್ತಮ ಬೆಂಬಲ ನೀಡಬಲ್ಲರು. ಆದ್ದರಿಂದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿಯೇ ಗೊಚರಿಸುತ್ತಿದೆ.

ಕೆಕೆಆರ್‌ಗೆ ಅದೃಷ್ಟದ ಬಲ
ಕೆಕೆಆರ್‌ ಪಾಳಯದಲ್ಲಿ ಬಲಿಷ್ಠ ಆಟಗಾರರಿದ್ದರೂ ಇದುವರೆಗೆ ಕೆಲವೇ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿದ್ದಾರೆ. ಆದರೆ ಅದೃಷ್ಟದ ವಿಷಯದಲ್ಲಿ ಕೆಕೆಆರ್‌ ಉಳಿದೆಲ್ಲ ತಂಡಗಳಿಗಿಂತ ಒಂದು ಕೈ ಮೇಲು ಎನ್ನಲಡ್ಡಿಯಿಲ್ಲ. ಇದುವರೆಗಿನ ಕೆಕೆಆರ್‌ ಗೆಲುವಿನ ಹಿನ್ನೋಟವನ್ನು ಗಮನಿಸುವುದಾದರೆ ಸೋಲುವ ಪಂದ್ಯಗಳನ್ನೇ ಹೆಚ್ಚಾಗಿ ತಂಡ ಅದೃಷ್ಟದ ಬಲದಿಂದ ಗೆದ್ದುಕೊಂಡಿದೆ. ಇದೇ ವೇಳೆ ಬ್ಯಾಟಿಂಗ್‌ ಬರ ಅನುಭವಿಸುತಿದ್ದ ನಾಯಕ ದಿನೇಶ್‌ ಕಾರ್ತಿಕ್‌ ಮತ್ತೆ ಫಾರ್ಮ್ ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ವಿಂಡೀಸ್‌ ದೈತ್ಯ ರಸೆಲ್‌ ಮಾತ್ರ ಈ ಬಾರಿ ಸ್ಫೋಟಕ ಬ್ಯಾಟಿಂಗ್‌ ನಡೆಸಲು ಪರದಾ ಡುತ್ತಿದ್ದಾರೆ. ಬೌಲಿಂಗ್‌ ವಿಚಾರದಲ್ಲಿ ಕೆಕೆಆರ್‌ ಸಂಘಟಿತ ಪ್ರದರ್ಶನ ತೋರುತ್ತಿದೆ. ಸುನೀಲ್‌ ನಾರಾಯಣ್‌, ಪ್ರಸಿದ್ಧ ಕೃಷ್ಣ, ಪ್ಯಾಟ್‌ ಕಮಿನ್ಸ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.