ತಂಡ ಸಂಕಷ್ಟದಲ್ಲಿದ್ದರೂ 7ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಗೆ ಇಳಿದ ಧೋನಿ: ಕಾರಣವೇನು ?
Team Udayavani, Sep 23, 2020, 8:33 AM IST
ಶಾರ್ಜಾ: ಮಂಗಳವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಇತ್ತಂಡಗಳೂ ಕೂಡ ಬ್ಯಾಟಿಂಗ್ ಮೂಲಕ ಆರ್ಭಟಿಸಿದ್ದವು. 217 ರನ್ ಗಳ ಬೃಹತ್ ಮೊತ್ತವನ್ನು ಉತ್ತಮವಾಗಿಯೇ ಚೇಸಿಂಗ್ ಮಾಡಿದ ಚೆನ್ನೈ ಅಂತಿಮ ಹಂತದಲ್ಲಿ ಎಡವಿತ್ತು. ಅದಾಗ್ಯೂ ನಾಯಕ ಮಹೇಂದ್ರ ಸಿಂಗ್ ಧೋನಿ 7ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಇಳಿದಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು.
ಒಂದು ಹಂತದಲ್ಲಿ 77 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ, ನಂತರದ ಕ್ರಮಾಂಕದಲ್ಲಿ ಸ್ವತಃ ಧೋನಿಯೇ ಕ್ರೀಸ್ ಗೆ ಇಳಿದು ತಂಡಕ್ಕೆ ಆಸರೆಯಾಗಬಹುದೆಂದೇ ಭಾವಿಸಲಾಗಿತ್ತು. ಅದಾಗ್ಯೂ ರುತುರಾಜ್ ಗಾಯಕ್ ವಾಡ್ ಮತ್ತು ಕೇದಾರ್ ಜಾಧವ್ ಅವರನ್ನು ಬ್ಯಾಟಿಂಗ್ ಗೆ ಇಳಿಸಿ ಧೋನಿ ನಿರಾಸೆ ಮೂಡಿಸಿದ್ದರು.
ಪಂದ್ಯದ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ಧೋನಿ, ಏಳನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಇಳಿದಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ. ತಾನು ದೀರ್ಘಕಾಲ ಬ್ಯಾಟಿಂಗ್ ನಡೆಸಿಲ್ಲವಾದ್ದರಿಂದ ಇತರರಿಗೆ ಅವಕಾಶಗಳನ್ನು ನೀಡಲು ಬಯಸುತ್ತೇನೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಯಾಮ್ ಕರ್ರನ್ ಅವರನ್ನು ಮತ್ತೆ 4ನೇ ಕ್ರಮಾಂಕದಲ್ಲಿ ಇಳಿಸಲಾಗಿದೆ. ಕೊನೆಯಲ್ಲಿ, ಫಾಫ್ ಡು ಪ್ಲೆಸಿಸ್ 37 ಎಸೆತಗಳಲ್ಲಿ 72 ರನ್ ಗಳಿಸಿದರು.
ವಿಭಿನ್ನವಾಗಿ ಏನನ್ನಾದರೂ ಸಾಧಿಸಲು ಬಯಸುತ್ತಿರುವುದರಿಮದ ಸ್ಯಾಮ್ ಗೆ ಹೆಚ್ಚಿನ ಅವಕಾಶ ನೀಡುತ್ತಿದ್ದೇನೆ. ಇದು ಪರಿಣಾಮಕಾರಿಯಾಗದಿದ್ದರೇ ಹಿಂದಿನ ಬಲದ ಮೇಲೆ ನಂಬಿಕಯಿಡುತ್ತೇನೆ. ಇದಕ್ಕೆ ಫಾಫ್ ಡು ಪ್ಲೇಸಿಸ್ ಕೂಡ ಹೊಂದಿಕೊಂಡಿದ್ದಾರೆ. ಸ್ಕ್ವೇರ್ ಲೆಗ್ ಅನ್ನು ನಿರ್ಲಕ್ಷಿಸಿ ಲಾಂಗ್-ಆನ್ ಮತ್ತು ಲಾಂಗ್-ಆಫ್ ಕಡೆಗೆ ಹೆಚ್ಚು ಹೋಗಲಾಗುತ್ತಿದೆ ಎಂದು ಧೋನಿ ಹೇಳಿದ್ದಾರೆ.
ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರೂ 17 ಎಸೆತಗಳಲ್ಲಿ 29 ರನ್ ಸಿಡಿಸಿದ್ದರು. ಇದರಲ್ಲಿ ಹ್ಯಾಟ್ರಿಕ್ ಸಿಕ್ಸ್ ಕೂಡ ಸೇರಿದ್ದವು. ಸಿಎಸ್‌ಕೆ ಆರಂಭಿಕ ಜೋಡಿ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್ 6.3 ಓವರ್‌ಗಳಲ್ಲಿ 56 ರನ್ ಗಳಿಸಿದ್ದರು, 217 ರನ್ ಚೇಸ್ ಮಾಡುವಾಗ ನಮಗೆ ಉತ್ತಮ ಆರಂಭದ ಅಗತ್ಯವಿತ್ತು, ಆದರೇ ರಾಜಸ್ಥಾನ್ ಪರ ಸ್ಟೀವ್ ಮತ್ತು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಮಾಡಿದರು. ಅವರ ಬೌಲರ್‌ಗಳ ಸ್ಪೆಲ್ ಕೂಡ ಅದ್ಭುತವಾಗಿತ್ತು. ಒಂದು ವೇಳೆ 200 ರನ್ ಗೆ ರಾಯಲ್ಸ್ ತಂಡವನ್ನು ನಿಯಂತ್ರಿಸಿದ್ದರೇ ನಮ್ಮ ತಂಡ ಗೆಲ್ಲುವ ಅವಕಾಶವಿತ್ತು ಎಂದು ಧೋನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.