ರಾಹುಲ್ ನಾಮ್ ತೊ ಸುನಾ ಹಿ ಹೋಗಾ!
Team Udayavani, Oct 9, 2020, 7:41 AM IST
ಅಬುಧಾಬಿ: ಈ ಬಾರಿ ಐಪಿಎಲ್‌ನಲ್ಲಿ ರಾಹುಲ್ ಎಂಬ ಹೆಸರು ಬಹಳ ಸದ್ದು ಮಾಡುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್, ರಾಜಸ್ಥಾನ್ ರಾಯಲ್ಸ್ ಆಲ್‌ರೌಂಡರ್ ರಾಹುಲ್ ತೆವಾತಿಯ, ಕೋಲ್ಕತ ನೈಟ್ ರೈಡರ್ಸ್ ತಂಡದ ರಾಹುಲ್ ತ್ರಿಪಾಠಿ… ಅಷ್ಟೂ ಮಂದಿ ತಂಡದ ಪರ ಪಂದ್ಯಗಳನ್ನು ಗೆಲ್ಲಿಸಿ ಮಿಂಚಿದ್ದಾರೆ.
ಕೋಲ್ಕತ ಆಟಗಾರ ರಾಹುಲ್ ತ್ರಿಪಾಠಿಗೆ ಬುಧವಾರ ವಿಶೇಷ ಅನಭವ. ಅವರ ಶ್ರೇಷ್ಠ ಬ್ಯಾಟಿಂಗ್‌ಕಾರಣ ಕೋಲ್ಕತ, ಬುಧವಾರ ಚೆನ್ನೈಯನ್ನು ಸೋಲಿಸಿತು. ಈ ಹಿನ್ನೆಲೆಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಲುಬಂದ ತ್ರಿಪಾಠಿಗೆ ತಂಡದ ಮಾಲಿಕ ಶಾರುಖ್ ಖಾನ್ ಅಭಿನಂದನೆ ಸಲ್ಲಿಸಿದ್ದು ಹೇಗೆ ಗೊತ್ತಾ?
ರಾಹುಲ್ ನಾಮ್ ತೋ ಸುನಾಹಿಹೋಗಾ…ಹೀಗೆಂದು ಜೋರಾಗಿ ತಾವು ಕೂತಿದ್ದ ಜಾಗದಿಂದಲೇ ಶಾರುಖ್ ಕೂಗಿದರು. ಇದನ್ನು ನೋಡಿ ರಾಹುಲ್ ಸೇರಿದಂತೆ ಎಲ್ಲರ ಮುಖದಲ್ಲೂ ನಗುವರಳಿತು. ರಾಹುಲ್ ನಾಮ್ ತೋ ಸುನಾ ಹಿ ಹೋಗಾ…ಇದು ಶಾರುಖ್‌ರ ದಿಲ್ ತೋ ಪಾಗಲ್ ಹೈ ಚಿತ್ರದ ಜನಪ್ರಿಯ ಸಂಭಾಷಣೆ.
ಕೋಲ್ಕತವನ್ನು ಗೆಲ್ಲಿಸಿದ ಚೆನ್ನೈನ ಕೇದಾರ್‌ಗೆ ಪಂದ್ಯಶ್ರೇಷ್ಠ ನೀಡಿ!
ಏಕಾಂಗಿಯಾಗಿ ಕೋಲ್ಕತವನ್ನು ಗೆಲ್ಲಿಸಿದ್ದ ಚೆನ್ನೈ ಕಿಂಗ್ಸ್ ಬ್ಯಾಟ್ಸ್‌ಮನ್‌ಕೇದಾರ್ ಜಾಧವ್‌ಗೆ ಪಂದ್ಯಶ್ರೇಷ್ಠ ಗೌರವ ನೀಡಬೇಕು…ಹೀಗೆಂದು ಅಣಕವಾಡಿದ್ದು ಚೆನ್ನೈಕಿಂಗ್ಸ್ ತಂಡದ ಅಭಿಮಾನಿಗಳು. ಬುಧವಾರ ಸುಲಭವಾಗಿ ಚೆನ್ನೈಕಿಂಗ್ಸ್, ಕೋಲ್ಕತ ಎದುರು ಗೆಲ್ಲುವ ಅವಕಾಶವಿತ್ತು.
ಅಂತಿಮ ಎರಡು ಓವರ್‌ನಲ್ಲಿ ಚೆನ್ನೈ ಕೇದಾರ್ ಜಾಧವ್ ಬಹುತೇಕ ಎಸೆತ ವ್ಯರ್ಥಗೊಳಿಸಿದರು. ಇದೇ ತಂಡದ ಸೋಲಿನಲ್ಲಿ ನಿರ್ಣಾಯಕವಾಗಿದ್ದು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು, ನೀವು ಟೆಸ್ಟ್ ತಂಡದಲ್ಲಿರಲು ಲಾಯಕ್ಕು, ಐಪಿಎಲ್‌ನಲ್ಲಲ್ಲ ಎಂದರು. ಒಬ್ಬರಂತೂ ಮುಂದುವರಿದು ಏಕಾಂಗಿಯಾಗಿ ಕೋಲ್ಕತವನ್ನು ಗೆಲ್ಲಿಸಿದ ನಿಮಗೇ ಪಂದ್ಯಶ್ರೇಷ್ಠಕೊಡಬೇಕೆಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.