ರಾಯಲ್ ಕದನದಲ್ಲಿ ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್ ಆಯ್ಕೆ
Team Udayavani, Oct 3, 2020, 2:59 PM IST
ಅಬುಧಾಬಿ: 13ನೇ ಆವೃತ್ತಿಯ 15ನೇ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸಜ್ಜಾಗಿದೆ. ಅಬುಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.
ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಆರ್‌ಸಿಬಿ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿರುವ ರಾಜಸ್ಥಾನ್ ಮತ್ತೆ ಗೆಲುವಿನ ಹಳಿಯೇರುವ ಪ್ರಯತ್ನದಲ್ಲಿದೆ. ರಾಜಸ್ಥಾನ ಮತ್ತು ಆರ್ ಸಿಬಿ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದ ತಂಡ ನೇರವಾಗಿ ಮೊದಲ ಸ್ಥಾನಕ್ಕೇರಲಿದೆ.
ಇದು ಈ ಬಾರಿಯ ಐಪಿಎಲ್ ನ ಮೊದಲ ಹಗಲ ಪಂದ್ಯವಾಗಿದೆ. ಯುಎಇ ನ ಬಿಸಿಲಿಗೆ ಆಡುವುದು ಆಟಗಾರರಿಗೆ ಸವಾಲಾಗಲಿದೆ.
ಇದನ್ನೂ ಓದಿ:“ಅವ್ನು ಬರ್ತಿದ್ದಾನೆ ಕಣ್ರೋ..”ಇಂದಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸೇರಲಿರುವ ಬೆನ್ ಸ್ಟೋಕ್ಸ್
ತಂಡಗಳು
ಆರ್ ಸಿಬಿ: ದೇವದತ್ ಪಡಿಕ್ಕಲ್, ಆರೋನ್ ಫಿಂಚ್, ವಿರಾಟ್ ಕೊಹ್ಲಿ (ನಾ), ಎಬಿ ಡಿವಿಲಿಯರ್ಸ್ (ವಿ.ಕೀ), ಶಿವಮ್ ದುಬೆ, ಗುರ್ಕೀರತ್ ಸಿಂಗ್ ಮನ್, ಇಸುರು ಉದಾನಾ, ವಾಷಿಂಗ್ಟನ್ ಸುಂದರ್, ಆಡಮ್ ಜಂಪಾ, ನವದೀಪ್ ಸೈನಿ, ಯುಜ್ವೇಂದ್ರ ಚಹಲ್.
ಆರ್ ಆರ್: ಜೋಸ್ ಬಟ್ಲರ್ (ವಿ.ಕೀ), ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ (ಸಿ), ರಾಬಿನ್ ಉತ್ತಪ್ಪ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಮಹಿಪಾಲ್ ಲೂಮರ್, ಜಯದೇವ್ ಉನಾದ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.