ಅಬುಧಾಬಿಯಲ್ಲಿಂದು ರಾಯಲ್ ಕಾಳಗ: ವಿರಾಟ್ – ಸ್ಮಿತ್ ಮುಖಾಮುಖಿಯಲ್ಲಿ ಗೆಲುವು ಯಾರಿಗೆ?
Team Udayavani, Oct 3, 2020, 11:34 AM IST
ಅಬುಧಾಬಿ: ಬಲಿಷ್ಠ ಶಕ್ತಿಯಾಗಿ ಪುನರ್ ಸಂಘಟನೆಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2020ರ ಐಪಿಎಲ್‌ನ ಮೊದಲ ಹಗಲು ಪಂದ್ಯದ ಅಭಿಯಾನವನ್ನು ಶನಿವಾರ ಆರಂಭಿಸಲಿದೆ. ಎದುರಾಳಿ ಸ್ಟೀವನ್ ಸ್ಮಿತ್ ನಾಯಕ್ವದ ಬಲಿಷ್ಠ ರಾಜಸ್ಥಾನ್ ರಾಯಲ್ಸ್. ದಿನದ ಮತ್ತೂಂದು ಪಂದ್ಯದಲ್ಲಿ ಡೆಲ್ಲಿ ಮತ್ತು ಕೆಕೆಆರ್ ಮುಖಾಮುಖೀಯಾಗಲಿದೆ.
ಆತ್ಮವಿಶ್ವಾಸದಲ್ಲಿ ಆರ್‌ಸಿಬಿ: ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಆರ್‌ಸಿಬಿ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ತಂಡದಲ್ಲಿ ಕೆಲವು ಬದಲಾವಣೆಯನ್ನು ಮಾಡಿ ಯಶಸ್ಸು ಕಂಡಿರುವ ಕೊಹ್ಲಿ ಪಡೆ ಅಖಾಡಕ್ಕಿಳಿಯಲಿದೆ.
ಆಸೀಸ್ ಸ್ಪಿನ್ನರ್ ಆ್ಯಡಂ ಝಂಪ, ಲಂಕಾ ವೇಗಿ ಇಸುರು ಉದಾನ ಅವರು ತಂಡ ಸೇರಿಕೊಂಡಿದ್ದರೂ ಆರ್‌ಸಿಬಿಯ ಬೌಲಿಂಗ್ ಹರಿತಗೊಳ್ಳಲಿಲ್ಲ. ಕಳೆದ ಪಂದ್ಯದಲ್ಲಿ 200 ರನ್ ಬಾರಿಸಿಯೂ ಪಂದ್ಯವನ್ನು ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿದ್ದು ಇದಕ್ಕೆ ಉತ್ತಮ ನಿದರ್ಶನ. ಬೌಲಿಂಗ್ ಹರಿತಗೊಳ್ಳುವ ಜೊತೆಗೆ, ಫೀಲ್ಡಿಂಗ್ ಕೂಡ ಸುಧಾರಣೆ ಕಾಣಬೇಕಿದೆ.
ಸಿಡಿಯಬೇಕಿದೆ ಕೊಹ್ಲಿ: ಆಡಿದ ಮೂರು ಪಂದ್ಯದಲ್ಲಿಯೂ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎರಡಂಕಿಯ ಸ್ಕೋರ್ ದಾಖಲಿಸುವಲ್ಲಿ ಕೊಹ್ಲಿ ಪರದಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಫಾರ್ಮ್ ಗೆ ಮರಳಬೇಕಿದೆ.
ಇದನ್ನೂ ಓದಿ:IPL 2020: ಕೈಕೊಟ್ಟ CSK ಬ್ಯಾಟಿಂಗ್: ಹೈದರಾಬಾದ್ ವಿರುದ್ಧ 7 ರನ್ನಿನಿಂದ ಸೋಲು
ಸೈಲೆಂಟ್ ಕಿಲ್ಲರ್ ರಾಜಸ್ಥಾನ್
ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನು ಸೋತಿರುವ ಸ್ಮಿತ್ ನಾಯಕತ್ವದ ರಾಜಸ್ಥಾನ್ ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿ ಗೋಚರಿಸುತ್ತಿದೆ. ನಾಯಕ ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್, ರಾಹುಲ್ ತೆವಾತಿಯಾ, ಜಾಸ್ ಬಟ್ಲರ್ ಬ್ಯಾಟಿಂಗ್ ಬಲವಾದರೆ ಜೋಫ್ರಾ ಆರ್ಚರ್ ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲರು. ಆದರೆ ರಾಬಿನ್ ಉತ್ತಪ್ಪಮತ್ತು ರಿಯಾನ್ ಪರಾಗ್ ಅವರ ಬ್ಯಾಟ್ ಮಾತ್ರ ಈ ಬಾರಿ ಸದ್ದು ಮಾಡದಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಬೌಲಿಂಗ್‌ನಲ್ಲಿ ವೇಗಿ ಜೋಫ್ರಾ ಆರ್ಚರ್ ಕ್ಲಿಕ್ ಆಗಿದ್ದು, ಅವರಿಗೆ ಉನಾದ್ಕತ್, ಕರನ್ ಸಾಥ್ ನೀಡಬಲ್ಲರು.
ಮೈದಾನ: ಅಬುಧಾಬಿ
ಸಮಯ: ಮಧ್ಯಾಹ್ನ 3.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.