ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ-ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆಯೇನು ಗೊತ್ತಾ?
Team Udayavani, Oct 28, 2020, 9:40 AM IST
ದುಬೈ: ಮಂಗಳವಾರ (ಅ.27) ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಡೆಲ್ಲಿಯನ್ನು 88 ರನ್ನುಗಳ ಭಾರೀ ಅಂತರದಿಂದ ಮಣಿಸಿ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ವಾರ್ನರ್ ಬಳಗ ಫ್ಲೇ ಆಫ್ ಹಾದಿ ಸುಗಮವಾಗಿಸಿಕೊಂಡಿದೆ.
ಮತ್ತೊಂದೆಡೆ ನಾಯಕ ಡೇವಿಡ್ ವಾರ್ನರ್ ಮಂಗಳವಾರದ ಗೆಲುವಿನ ಮೂಲಕ ಭರ್ಜರಿ ಬರ್ತ್ ಡೇ ಗಿಫ್ಟ್ ಪಡೆದಿದ್ದಾರೆ. ರಶೀದ್ ಖಾನ್, ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ದುಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಕ್ಷರಶಃ ಮುಗಿಬಿದ್ದಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 219 ರನ್ ಗಳ ದಾಖಲೆಯ ಮೊತ್ತವನ್ನು ಪೇರಿಸಿತು. ಇದರಲ್ಲಿ ವಾರ್ನರ್ -66, ಸಹಾ- 87, ಪಾಂಡೆ-44 ರನ್ ಗಳ ಕಾಣಿಕೆ ನೀಡಿದ್ದರು.
ಗುರಿ ಬೆನ್ನತ್ತಿದ್ದ ಶ್ರೇಯಸ್ ಬಳಗ ರಷೀದ್ ಖಾನ್ ದಾಳಿಗೆ ತತ್ತರಿಸಿ ಹೋಗಿತ್ತು. ಡೆಲ್ಲಿ ಪರ ರಿಷಬ್ ಪಂತ್, ಅಜಿಂಕ್ಯಾ ರಹಾನೆ ಹೊರತುಪಡಿಸಿದರೆ ಯಾರೋಬ್ಬರು ಆರ್ಭಟಿಸಲಿಲ್ಲ. ಮಿಂಚಿನ ಬೌಲಿಂಗ್ ನಡೆಸಿದ ರಷೀದ್ ಖಾನ್ 4 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್ ಪಡೆದರು. ಅಂತಿಮವಾಗಿ ಡೆಲ್ಲಿ 19 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 131 ರನ್ ಗೆ ಆಲೌಟ್ ಆಯಿತು.
ಆ ಮೂಲಕ ಸತತ ಮೂರು ಸೋಲು ಕಂಡ ಡೆಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು. ಸನ್ ರೈಸರ್ಸ್ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ.
ಇದನ್ನೂ ಓದಿ: ಕೋವಿಡ್ 2ನೇ ಅಲೆ, ಜನರ ಕೈಯಲ್ಲೇ ಆರೋಗ್ಯ: ಚಳಿಗಾಲದಲ್ಲಿ ವೈರಸ್‌ಗಳು ಶೇ.50ರಷ್ಟು ವೃದ್ಧಿ
ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ- ಹೈದರಾಬಾದ್ ಪಂದ್ಯ:
- ಘಾತಕ ಬೌಲಿಂಗ್ ನಡೆಸಿದ ರಷೀದ್ ಖಾನ್ ಸನ್ ರೈಸರ್ಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 4 ಓವರ್ ಗಳಲ್ಲಿ ಕೇವಲ 7 ರನ್ ನೀಡಿದ ರಷೀದ್ ಖಾನ್, ಡೆಲ್ಲಿಯ ಪ್ರಮುಖ 3 ವಿಕೆಟ್ ಉರುಳಿಸಿರು. ಐಪಿಎಲ್ ಇತಿಹಾಸದಲ್ಲಿ ಇದು 6ನೇ ಎಕಾನಾಮಿಕಲ್ 4 ಓವರ್ ಬೌಲಿಂಗ್ ಎನಿಸಿಕೊಂಡಿದೆ.
- ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೋ ರಬಾಡ ಐಪಿಎಲ್ ನಲ್ಲಿ ಆಡಿದ 26 ಇನ್ನಿಂಗ್ಸ್ ನಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು. ಆ ಮೂಲಕ ತಮ್ಮದೇ “ಐಪಿಎಲ್ ನಲ್ಲಿ ಸತತವಾಗಿ ವಿಕೆಟ್” ಪಡೆದ ದಾಖಲೆಯನ್ನು ಕೊನೆಗೊಳಿಸಿಕೊಂಡರು.
- ಸನ್ ರೈಸರ್ಸ್ ಆರಂಭಿಕರಾದ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಮೊದಲ 6 ಓವರ್ ಗಳಲ್ಲಿ 77 ರನ್ ಗಳ ಭರ್ಜರಿ ಜೊತೆಯಾಟ ನಡೆಸಿದರು. ಇದು ಐಪಿಎಲ್ 13ನೇ ಆವೃತ್ತಿಯ ಪವರ್ ಪ್ಲೇ ನಲ್ಲಿ ಮೂಡಿಬಂದ ದಾಖಲೆಯ ಮೊತ್ತವಾಗಿದೆ.
- ಐಪಿಎಲ್ ಇತಿಹಾಸದಲ್ಲೇ ಸನ್ ರೈಸರ್ಸ್ ಹೈದರಾಬಾದ್ ಪಡೆದ ಅತೀ ದೊಡ್ಡ ಗೆಲುವು(88 ರನ್) ಇದಾಗಿದೆ. ಇದಕ್ಕೂ ಮೊದಲು 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 118 ರನ್ ಗಳ ಜಯಗಳಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.
- 219 ರನ್ ಗಳು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 2020ರಲ್ಲಿ ಮೂಡಿಬಂದ ಅತೀ ದೊಡ್ಡ ಮೊತ್ತ. ಇದಕ್ಕೂ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್, ಬೆಂಗಳೂರು ವಿರುದ್ಧ 206 ರನ್ ಪೇರಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. 219 ರನ್ ಗಳು 2020ರ ಐಪಿಎಲ್ ಕ್ರೀಡಾಕೂಟದಲ್ಲಿ ಸನ್ ರೈಸರ್ಸ್ ದಾಖಲಿಸಿದ ಅತೀ ದೊಡ್ಡ ಮೊತ್ತ ಕೂಡ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.