ಐಪಿಎಲ್ 2020: ಜೈವಿಕ ಸುರಕ್ಷಾ ನಿಯಮ ಉಲ್ಲಂಘನೆ ವಿರುದ್ಧ ಕಠಿನ ಕ್ರಮ!
Team Udayavani, Oct 2, 2020, 8:36 AM IST
ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಜೈವಿಕ ಸುರಕ್ಷಾ ವಲಯ ಉಲ್ಲಂಘಿಸುವ ಆಟಗಾರರು, ಫ್ರಾಂಚೈಸಿಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ! ಬಿಸಿಸಿಐ ಎಲ್ಲ ಎಂಟು ಫ್ರಾಂಚೈಸಿಗಳಿಗೆ ನೀಡಿದ ಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ಇದರಲ್ಲಿ ಅತಿ ಮುಖ್ಯವೆಂದರೆ, ಫ್ರಾಂಚೈಸಿಯೊಂದು ಜೈವಿಕ ಸುರಕ್ಷಾ ನಿಯಮ ಉಲ್ಲಂಘಿಸಿದರೆ 1 ಕೋಟಿ ರೂ. ದಂಡಕ್ಕೊಳಗಾಗಲಿದೆ, ಗರಿಷ್ಠ 2 ಅಂಕ ಕಳೆದುಕೊಳ್ಳಲಿದೆ! ಅದೇ ಆಟಗಾರನೊಬ್ಬ ಉಲ್ಲಂಘಿಸುವುದಕ್ಕಿರುವ ಗರಿಷ್ಠ ಶಿಕ್ಷೆ ಇಡೀ ಕೂಟದಿಂದ ಹೊರಹಾಕಲ್ಪಡುವುದು.
ಆಟಗಾರರಿಗೆ ಶಿಕ್ಷೆಯೇನು?
ಮೊದಲನೇ ಬಾರಿ ಆಟಗಾರನೊಬ್ಬ ನಿಯಮ ಉಲ್ಲಂಘಿಸಿದರೆ 6 ದಿನ ಪ್ರತ್ಯೇಕವಾಸ ಮಾಡಬೇಕಾಗುತ್ತದೆ. ಎರಡನೇ ಬಾರಿ ಮಾಡಿದರೆ ಪ್ರತ್ಯೇಕವಾಸದ ಜತೆಗೆ 1 ಪಂದ್ಯ ಕಳೆದುಕೊಳ್ಳಬೇಕಾಗುತ್ತದೆ. ಮೂರನೇ ಬಾರಿ ಉಲ್ಲಂಘನೆಗೆ ಇಡೀ ಕೂಟವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಂತಹ ಆಟಗಾರರಿಗೆ ಬದಲೀಯನ್ನು ನೀಡುವುದಿಲ್ಲ. ಆಟಗಾರರು ದೈನಂದಿನ ಆರೋಗ್ಯ ಪರೀಕ್ಷೆ ತಪ್ಪಿಸಿದರೆ, ಜಿಪಿಎಸ್ ಟ್ರ್ಯಾಕರ್ ಹಾಕಿಕೊಳ್ಳದಿದ್ದರೆ, ಕೋವಿಡ್-19 ಪರೀಕ್ಷೆಗೆ ಒಳಗಾಗದಿದ್ದರೆ ಅವರಿಗೆ 60,000 ರೂ. ದಂಡಹಾಕಲಾಗುತ್ತದೆ.
ಇದನ್ನೂ ಓದಿ:IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು
ಫ್ರಾಂಚೈಸಿ ಎಡವಿದರೆ?
ಒಂದು ವೇಳೆ ಫ್ರಾಂಚೈಸಿ ಜೈವಿಕ ಸುರಕ್ಷಾ ವಲಯದೊಳಗೆ ಹೊರಗಿನ ವ್ಯಕ್ತಿಗಳಿಗೆ ಪ್ರವೇಶ ನೀಡಿದರೆ, ಮೊದಲ ಬಾರಿ 1 ಕೋಟಿ ರೂ. ದಂಡ ಹಾಕಲಾಗುತ್ತದೆ. ಎರಡನೇ ಬಾರಿ ತಂಡದ 1 ಅಂಕ, ಮೂರನೇ ಬಾರಿ ಎರಡು ಅಂಕ ಕಡಿತಗೊಳಿಸಲಾಗುತ್ತದೆ.
ಈ ಎರಡು ಅಂಕವೆನ್ನುವುದು ಒಂದು ಜಯಕ್ಕೆ ಸಿಗುವ ಅಂಕವೆನ್ನುವುದನ್ನು ಮರೆಯುವಂತಿಲ್ಲ. ಒಂದು ವೇಳೆ ತಂಡವೊಂದು ತನ್ನ ತಪ್ಪಿನಿಂದ 12ಕ್ಕಿಂತ ಕಡಿಮೆ ಆಟಗಾರರೊಂದಿಗೆ ಆಡುವ ಅನಿವಾರ್ಯತೆ ಎದುರಿಸಿದರೆ, ಆ ಪಂದ್ಯವನ್ನು ಬೇರೆ ದಿನಾಂಕದಲ್ಲಿ ಆಡಿಸಲು ಯತ್ನಿಸಲಾಗುತ್ತದೆ. ಆಗದಿದ್ದರೆ ರದ್ದು ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.