ಚೆನ್ನೈ ವಿರುದ್ಧದ ಸೋಲಿನ ಸರಣಿಯನ್ನು ಮುರಿಯುವುದೇ ರಾಯಲ್ಸ್‌ ?


Team Udayavani, Sep 22, 2020, 7:15 PM IST

rajasthanroyals-1567666045

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ಐಪಿಎಲ್‌ನ 13 ನೇ ಋತುವಿನ ನಾಲ್ಕನೇ ಪಂದ್ಯವು ಇಂದು ಶಾರ್ಜಾದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಮತ್ತು ರಾಜಸ್ಥಾನ್‌ ರಾಯಲ್ಸ್‌ (ಆರ್‌ಆರ್‌) ನಡುವೆ ನಡೆಯುತ್ತಿದೆ.

ಐಪಿಎಲ್ 13ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ  ರಾಜಸ್ಥಾನ್ ರಾಯಲ್ಸ್  ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್  ತಂಡ ಟಾಸ್ ಗೆದ್ದು ಬೌಲಿಂಗ್  ಆಯ್ದುಕೊಂಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಎರಡನೇ ಪಂದ್ಯವನ್ನು ಆಡುತ್ತಿರುವ ಮಹೇಂದ್ರ ಸಿಂಗ್‌ ಧೋನಿ ಅವರ ಸಿಎಸ್‌ಕೆ ತಂಡವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ರಾಯಲ್ಸ್  ತಮ್ಮ ವಿರುದ್ಧದ ಕೊನೆಯ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ರಾಜಸ್ಥಾನ ರಾಯಲ್ಸ್‌ ಗೆದ್ದಿದೆ. ಕಳೆದ ಬಾರಿಯ ಪಂದ್ಯದಲ್ಲಿ ಚೆನ್ನೈ ಎರಡೂ ಪಂದ್ಯಗಳಲ್ಲಿ ರಾಯಲ್ಸ್‌  ತಂಡವನ್ನು ಸೋಲಿಸಿತ್ತು.

ಅಂದಹಾಗೆ ಈ ಬಾರಿಯ ಪಂದ್ಯಾವಳಿಯಲ್ಲಿ ರಾಯಲ್ಸ್‌ ಮೊದಲ ಪಂದ್ಯವಾಡುತ್ತಿದೆ. ರಾಯಲ್ಸ್ ಬೆನ್‌ ಸ್ಟೋಕ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಜೋಸ್‌ ಬಟ್ಲರ್‌ ಅವರ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕ್ವಾರಂಟೈನಲ್ಲಿರುವ ಕಾರಣ ಬಟ್ಲರ್‌ ಆಡುತ್ತಿಲ್ಲ. ಕ್ಯಾರೆಂಟೈನ್‌ಲ್ಲಿ ಅವರು 6 ದಿನಗಳನ್ನು ಕಳೆಯಬೇಕಾಗಿದೆ. ಸ್ಟೋಕ್ಸ್‌ ಅವರ ತಂದೆಗೆ ಮೆದುಳಿನ ಕ್ಯಾನ್ಸರ್‌ ಇರುವ ಕಾರಣ ಆಸ್ಪತ್ರೆಯಲ್ಲಿ ತಂದೆಯ ಜತೆಗಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಪ್ಟನ್‌ ಧೋನಿ ಸಿಎಸ್‌ಕೆಯಲ್ಲಿ ಅತ್ಯಂತ ದುಬಾರಿ ಆಟಗಾರ. ತಂಡವು ಧೋನಿಗೆ ಒಂದು ಋತುವಿನಲ್ಲಿ 15 ಕೋಟಿ ರೂ. ನೀಡುತ್ತದೆ. ಕೇದಾರ್‌ ಜಾಧವ್‌ 7.80 ಕೋಟಿ ರೂ., ಸ್ಮಿತ್‌ 12.50 ಕೋಟಿ ರೂ., 8 ಕೋಟಿ ಮೌಲ್ಯದ ಸಂಜು ಸ್ಯಾಮ್ಸನ್‌ ರಾಜಸ್ಥಾನದಲ್ಲಿ ಅತ್ಯಂತ ದುಬಾರಿ.

ಪಿಚ್‌ ಮತ್ತು ಹವಾಮಾನ ವರದಿ
ಶಾರ್ಜಾದಲ್ಲಿ ನಡೆಯುವ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ತಾಪಮಾನವು 28ರಿಂದ 39 ಡಿಗ್ರಿ ಸೆಲ್ಸಿಯಸ್‌ ನಡುವೆ ಇರುವ ಸಾಧ್ಯತೆ ಇದೆ. ಪಿಚ್‌ ಬ್ಯಾಟಿಂಗ್‌ಗೆ ಅನುಕೂಲ ಮಾಡಿಕೊಡಲಿದೆ. ಇಲ್ಲಿ ನಿಧಾನಗತಿಯ ವಿಕೆಟ್‌ ಆಗಿರುವ ಕಾರಣ ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಮಾಡಲು ಇಷ್ಟಪಡುತ್ತದೆ. ಕಳೆದ 13 ಟಿ 20ಗಳಲ್ಲಿ ಇಲ್ಲಿ ಮೊದಲ ಬ್ಯಾಟಿಂಗ್‌ ತಂಡ ಶೇ. 69ರಷ್ಟು ಗೆಲುವು ಕಂಡಿತ್ತು.

  • ಈ ಮೈದಾನದಲ್ಲಿ ನಡೆದ ಒಟ್ಟು ಟಿ 20     13
  • ಮೊದಲ ಬ್ಯಾಟಿಂಗ್‌ ತಂಡದ ಗೆಲುವು         9
  • ಮೊದಲ ಬೌಲಿಂಗ್‌ ತಂಡ ಗೆಲುವು            4
  • ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್‌      149
  • ಎರಡನೇ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್‌     131

ಮೂರು ಬಾರಿ ಚಾಂಪಿಯನ್‌ ಆಗಿರುವ ಸಿಎಸ್‌ಕೆ ಈ ಪಂದ್ಯವನ್ನು ಗೆದ್ದರೆ 3 ತಂಡಗಳ ವಿರುದ್ಧ 15ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದ ಎರಡನೇ ತಂಡವಾಗಲಿದೆ. 2018, 2011, 2010 ಎಲ್ಲಿ ಚಾಂಪಿಯನ್‌ ಆಗಿತ್ತು.ಮುಂಬೈ ಇಂಡಿಯನ್ಸ್‌ ಈ ಹಿಂದೆಯೇ ಈ ಸಾಧನೆ ಮಾಡಿತ್ತು.

ಕೋವಿಡ್‌ ಗೆದ್ದ ರಿತುರಾಜ್‌
ಚೆನ್ನೈನ ರಿತುರಾಜ್‌ ಗೈಕ್ವಾಡ್‌ ಕೋವಿಡ್‌ ಮುಕ್ತರಾಗಿದ್ದಾರೆ.ಅವರ ಮೂರನೇ ವರದಿ ನಕಾರಾತ್ಮಕವಾಗಿದೆ. ಇದರೊಂದಿಗೆ ತರಬೇತಿಗೆ ಇಳಿದಿದ್ದಾರೆ. ಪಂದ್ಯಾವಳಿಯ ಮೊದಲು ರಿತುರಾಜ್‌ ಮತ್ತು ಚೆನ್ನೈನ ದೀಪಕ್‌ ಚಹರ್‌ ಸೇರಿದಂತೆ 13 ಜನರು ಸೋಂಕಿಗೆ ಒಳಗಾಗಿದ್ದರು. ರಿತುರಾಜ್‌ ಹೊರತುಪಡಿಸಿ ಎಲ್ಲರೂ ಈಗಾಗಲೇ ಚೇತರಿಸಿಕೊಂಡಿದ್ದಾರೆ.  ದೀಪಕ್‌ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಯಲ್ಸ್‌ ಬಲಾಬಲ
ರಾಯಲ್ಸ್  ತಂಡದಲ್ಲಿ, ಸ್ಮಿತ್‌, ಉತ್ತಪ್ಪ ಮತ್ತು ಆರ್ಚರ್‌ ಕೀ-ಆಟಗಾರರಾಗಿದ್ದಾರೆ. ಕ್ಯಾಪ್ಟನ್‌ ಸ್ಮಿತ್‌, ರಾಬಿನ್‌ ಉತ್ತಪ್ಪ, ಸಂಜು ಸ್ಯಾಮ್ಸನ್‌ ಪ್ರಮುಖ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆಲ್‌ರಂಡರ್‌‌ಗಳಲ್ಲಿ ಟಾಮ್‌ ಕರಣ್‌ ಮತ್ತು ಶ್ರೇಯಾಸ್‌ ಗೋಪಾಲ್‌ ಇದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದ ಜೋಫ್ರಾ ಆರ್ಚರ್‌ ಅವರಲ್ಲದೆ, ಜಯದೇವ್‌ ಉನಾದ್ಕಟ್‌ ಮತ್ತು ವರುಣ್‌ ಆರನ್‌ ದೊಡ್ಡ ಆಟಗಾರರು ಇದ್ದಾರೆ. ಉಭಯ ತಂಡಗಳು ಈ ವರೆಗೆ ಐಪಿಎಲ್‌ನಲ್ಲಿ 22 ಪಂದ್ಯಗಳನ್ನು ಆಡಿವೆ. ಅವುಗಳಲ್ಲಿ ಚೆನ್ನೈ 14 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ 8 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.

 

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌  ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಏರಿಕೆ

ಐಪಿಎಲ್‌ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಏರಿಕೆ

ರಾಹುಲ್‌-ಕುಂಬ್ಳೆ ಜೋಡಿ ಉಳಿಸಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್‌ ಉತ್ಸುಕ

ರಾಹುಲ್‌-ಕುಂಬ್ಳೆ ಜೋಡಿ ಉಳಿಸಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್‌ ಉತ್ಸುಕ

ಐಪಿಎಲ್‌ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ

ಐಪಿಎಲ್‌ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ

ಪಂತ್‌ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್‌!

ಪಂತ್‌ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್‌!

ಕಿರಿಯ ನಾಯಕನ ದೊಡ್ಡ ಸಾಧನೆ

ಕಿರಿಯ ನಾಯಕನ ದೊಡ್ಡ ಸಾಧನೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.