ಆರ್‌ಸಿಬಿ ತಂಡವಾಗಿ ಆಡಲಿಲ್ಲ: ಎಲಿಮಿನೇಟರ್ ಸೋಲಿನ ಬಳಿಕ ಕೊಹ್ಲಿ ಪ್ರತಿಕ್ರಿಯೆ
Team Udayavani, Nov 8, 2020, 9:15 AM IST
ಅಬುಧಾಬಿ: ಹದಿಮೂರನೇ ಐಪಿಎಲ್ ಮುಗಿಯುತ್ತ ಬಂದರೂ ಬಲಿಷ್ಠ ರಾಯಲ್ ಚಾಲೆಂಜರ್ ಬೆಂಗಳೂರು ತಂಡಕ್ಕೆ ಕಪ್ ಮರೀಚಿಕೆಯೇ ಆಗುಳಿದಿದೆ. ಶುಕ್ರವಾರದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿಯ ಆಟಕ್ಕೆ ತೆರೆ ಬಿದ್ದಿದೆ. ಕೊನೆಯ 5 ಪಂದ್ಯಗಳಲ್ಲಿ ಸೋತದ್ದು ಕೊಹ್ಲಿ ಪಡೆಯ ಅವಸ್ಥೆಗೆ ಕನ್ನಡಿ ಹಿಡಿಯುತ್ತದೆ.
ಅಭಿಮಾನಿಗಳು ಪ್ರತೀ ವರ್ಷವೂ “ಕಪ್ ನಮ್ದೆ” ಎಂದು ಹೇಳುತ್ತ ಆರ್‌ಸಿಬಿ ಮೇಲೆ ಅಪಾರ ಪ್ರೀತಿ, ನಂಬಿಕೆ ಇರಿಸಿ ಹುರಿದುಂಬಿಸಿದರೂ ಕರ್ನಾಟಕದ ಫ್ರಾಂಚೈಸಿ ಮಾತ್ರ ಇದನ್ನೆಲ್ಲ ನೆಲಸಮ ಮಾಡುತ್ತಲೇ ಬಂದಿದೆ. ಈ ಸಂದರ್ಭದಲ್ಲಿ ತಂಡದ ಹೀನಾಯ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ನಾವು ತಂಡವಾಗಿ ಆಡಲು ವಿಫಲರಾದೆವು ಎಂದಿದ್ದಾರೆ.
“ಇಡೀ ಸರಣಿಯಲ್ಲಿ ಮಿಂಚಿದ್ದು ಮೂರ್‍ನಾಲ್ಕು ಆಟಗಾರರು ಮಾತ್ರ. ಪಡಿಕ್ಕಲ್, ಎಬಿಡಿ, ಸಿರಾಜ್ ಮತ್ತು ಚಹಲ್ ಉತ್ತಮ ಪ್ರದರ್ಶನದೊಂದಿಗೆ ಗಮನ ಸೆಳೆದರು. ಉಳಿದವರಿಂದ ದೊಡ್ಡ ಕೊಡುಗೆ ಸಂದಾಯವಾಗಲಿಲ್ಲ’ ಎಂಬುದು ಆರ್‌ಸಿಬಿ ಕಪ್ತಾನನ ಪ್ರತಿಕ್ರಿಯೆ.
ಇದನ್ನೂ ಓದಿ:2 ರನ್ ಗಳ ರೋಚಕ ಗೆಲುವು ಸಾಧಿಸಿದ ಸೂಪರ್ ನೋವಾಸ್ ಫೈನಲ್ ಪ್ರವೇಶ
ಹೈದರಾಬಾದ್ ಎದುರು ಕೊನೆಯ ಹಂತದಲ್ಲಿ ವಿಲಿಯಮ್ಸನ್‌ಗೆ ಜೀವದಾನ ನೀಡದೇ ಹೋಗಿದ್ದಲ್ಲಿ ಪಂದ್ಯದ ಫಲಿತಾಂಶ ಬೇರೆಯಾಗುವ ಸಾಧ್ಯತೆ ಇತ್ತು ಎಂದೂ ಕೊಹ್ಲಿ ಹೇಳಿದರು. ಆಗ ಹೈದರಾಬಾದ್‌ಗೆ 2.4 ಓವರ್ ಗಳಿಂದ 28 ರನ್ ಅಗತ್ಯವಿತ್ತು. ಬೌಂಡರಿ ಲೈನ್‌ನಲ್ಲಿದ್ದ ಪಡಿಕ್ಕಲ್ ಕ್ಯಾಚ್ ಪಡೆದರೂ ಬ್ಯಾಲೆನ್ಸ್ ತಪ್ಪಿ ಬೌಂಡರಿ ಲೈನ್ ಮೆಟ್ಟಿದ ಕಾರಣ ವಿಲಿಯಮ್ಸನ್ ಬಚಾವಾಗಿದ್ದರು.
ಜೋಶ್ ಇಲ್ಲದ ಬ್ಯಾಟಿಂಗ್
ಉಳಿದಂತೆ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಯಾವುದೇ ಜೋಶ್ ಇರಲಿಲ್ಲ. ಅದು ಸೊನ್ನೆಗೆ 3 ವಿಕೆಟ್ ಉದುರಿಸಿಕೊಂಡ ಡೆಲ್ಲಿಗಿಂತಲೂ ಕಳಪೆ ಆಟವಾಡಿತು. ಎಲಿಮಿನೇಟರ್‌ನಂಥ ನಿರ್ಣಾಯಕ ಪಂದ್ಯದಲ್ಲಿ 130 ಚಿಲ್ಲರೆ ರನ್ ಯಾವ ಹೋರಾಟಕ್ಕೂ ಸಾಲುತ್ತಿರಲಿಲ್ಲ. ಹಾಗೆಯೇ ಆಯಿತು. ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಆರಂಭಿಕನಾಗಿ ಬಂದ ಉದ್ದೇಶ ಅರ್ಥವಾಗಲಿಲ್ಲ. “ಡ್ಯಾರಿಂಗ್ ಕ್ರಿಕೆಟರ್’ ಪಾರ್ಥಿವ್ ಪಟೇಲ್ ಅವರನ್ನು ಕೂಟದುದ್ದಕ್ಕೂ ಬೆಂಚ್ ಬಿಸಿ ಮಾಡಲು ಕೂರಿಸಿದ್ದು ಕೂಡ ಸರಿಯಾದ ನಡೆ ಎನಿಸಲಿಲ್ಲ. ಮ್ಯಾಚ್ ವಿನ್ನರ್ ಮತ್ತು ಮ್ಯಾಚ್ ಫಿನಿಶರ್‌ಗಳ ಕೊರತೆ ತೀವ್ರ ಮಟ್ಟದಲ್ಲಿತ್ತು.
ಕೊಹ್ಲಿ ಸೇರಿದಂತೆ ಫಿಂಚ್, ಮಾರಿಸ್, ದುಬೆ, ಮಾನ್, ಅಲಿ, ಸ್ಟೇನ್, ಉಮೇಶ್ ಯಾದವ್, ಉದಾನ ಅವರೆಲ್ಲರ ವೈಫಲ್ಯ ಎನ್ನುವುದು ಆರ್‌ಸಿಬಿಯನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಬೇಕು ಎನ್ನುವುದು ಅಭಿಮಾನಿಗಳ ವಾದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
UV Fusion: ಪ್ರಕೃತಿ ಅವಶ್ಯ ಮನುಜನಿಗೆ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.