ತಾವರೆಯನ್ನೇ ಬಯಸಿ, ಅಲ್ಲಿಗೆ ಹಾರುವ ದುಂಬಿ


Team Udayavani, Dec 18, 2020, 5:49 AM IST

Lotus

ಸಾಂದರ್ಭಿಕ ಚಿತ್ರ

ನೀವು ಯಾವುದನ್ನು ಪ್ರೀತಿಸುತ್ತೀರೋ ಅದಾಗುತ್ತೀರಿ, ನಿಮ್ಮ ಪ್ರೀತಿ ಯಾವುದ ರಲ್ಲಿದೆಯೋ ಅದು ನಿಮಗೆ ಸಿಗುತ್ತದೆ. ಹಾಗಾಗಿ ನಿಮ್ಮ ಪ್ರೀತಿಯನ್ನು, ಒಲವನ್ನು ಮೊದಲು ಕಂಡುಕೊಳ್ಳಿ. ಕಾರನ್ನು, ನಾಲ್ಕಂತಸ್ತಿನ ಮನೆಯನ್ನು, ಆರಂಕಿಯ ಬ್ಯಾಂಕ್‌ ಬ್ಯಾಲೆನ್ಸನ್ನು ಮಾತ್ರ ಪ್ರೀತಿಸುವುದಕ್ಕೆ ಈ ಅಮೂಲ್ಯ ಬದುಕನ್ನು ವಿನಿಯೋಗಿಸ ಬೇಡಿ. ಏಕೆಂದರೆ ಇವಿಷ್ಟರ ಮೇಲೆ ಮಾತ್ರ ಒಲವು ಹೊಂದಿದ್ದರೆ ನಾವೂ ಅದೇ ಮಟ್ಟ ದಲ್ಲಿ ಉಳಿದುಬಿಡುತ್ತೇವೆ. ಏನನ್ನಾದರೂ ಪ್ರೀತಿಸುವುದಿದ್ದರೆ ಅದು ದೈವಿಕವಾದದ್ದು, ಜೀವನವನ್ನು ಬದಲಾಯಿಸುವಂಥ ಶ್ರೇಷ್ಠವಾದದ್ದು, ಬದುಕನ್ನು ಎತ್ತರಿಸು ವಂಥದ್ದು ಆಗಿರಲಿ. ಹಿಮಾಲಯದಷ್ಟು ಉಚ್ಚವಾದದ್ದನ್ನು ಪ್ರೀತಿಸಿ, ಬಯಸಿ. ಪ್ರೀತಿ, ಬಯಕೆ, ಒಲುಮೆ ಎಂಬುದು ಅಗಾಧ ಶಕ್ತಿಯ ಸ್ರೋತ. ಅದು ಯಾವ ಕಡೆಗೆ ಸೆಳೆಯುತ್ತದೆಯೋ ಅತ್ತ ಕಡೆಗೆ ನಮ್ಮ ಗಮನ. ಪ್ರೀತಿ, ಒಲುಮೆಯೇ ಬದುಕಿನ ಹಾದಿ. ತಾವರೆ ಎಲ್ಲೇ ಅರಳಿರಲಿ, ದುಂಬಿ ಅದನ್ನು ಹುಡುಕುತ್ತದೆ. ಏಕೆಂದರೆ ದುಂಬಿಯ ಒಲವು ತಾವರೆಯ ಕಡೆಗೆ.

ಇಲ್ಲೊಂದು ಸುಂದರ ಕಥೆಯಿದೆ. ನಾವು ಸೊಲೊಮನ್‌ ಬಗ್ಗೆ ಕೇಳಿದ್ದೇವೆ. ಪುರಾತನ ಮಧ್ಯಪ್ರಾಚ್ಯದಲ್ಲಿ ಅವನೊಬ್ಬ ಅತ್ಯಂತ ಬುದ್ಧಿವಂತ, ಜ್ಞಾನಿ ದೊರೆ. ಒಂದು ದಿನ ಅವನ ಆಸ್ಥಾನಕ್ಕೆ ಯುವತಿಯೊಬ್ಬಳು ಬಂದಳು. ಆಕೆ ಕ್ಲಿಯೊಪಾತ್ರಾ, ಸೌಂದರ್ಯಕ್ಕೆ ಅನ್ವರ್ಥನಾಮ. ಆಕೆಗೆ ಸೊಲೊಮನ್‌ ಮೇಲೆ ಒಲವು ಹುಟ್ಟಿತ್ತು. ಅತ್ಯದ್ಭುತ ಸುಂದರಿ ಯಾದ ತಾನು ಮಹಾಜ್ಞಾನಿ ಸೊಲೊಮನ್ನನ ಪತ್ನಿಯಾಗಬೇಕು ಎಂಬ ಹಂಬಲ.

ಸೊಲೊಮನ್ನನ ಜ್ಞಾನವನ್ನು ಪರೀಕ್ಷಿಸ ಬೇಕು ಎಂಬ ಬಯಕೆಯೂ ಆಕೆಗೆ ಇತ್ತು. ಅದಕ್ಕಾಗಿ ಆಕೆ ಒಂದು ಹೂವನ್ನು ತಂದಿದ್ದಳು. ಅದು ನೈಜ ಹೂವನ್ನು ನೂರಕ್ಕೆ ನೂರು ಹೋಲುವ ಕೃತಕ ಹೂವು. ಸೊಲೊಮನ್‌ ನಿಂದ ಬಹಳ ದೂರ ನಿಂತುಕೊಂಡು ಕ್ಲಿಯೊಪಾತ್ರಾ “ಈ ಹೂವು ಅಸಲಿಯೇ ನಕಲಿಯೇ’ ಎಂದು ಪ್ರಶ್ನಿಸಿದಳು.

ಸೊಲೊಮನ್‌ ಹೇಳಿದ, “ನೀನು ನಿಂತಿರು ವಲ್ಲಿ ಕತ್ತಲೆಯಿದೆ. ನನಗೆ ವಯಸ್ಸಾಯಿತು, ಕಾಣಿಸುತ್ತಿಲ್ಲ. ಕಿಟಿಕಿ ತೆರೆದುಬಿಡಲೇ?’ ಕ್ಲಿಯೊಪಾತ್ರಾ ಒಪ್ಪಿದಳು. ಕಿಟಿಕಿಗಳನ್ನು ತೆರೆಯಲಾಯಿತು. ಒಂದೆರಡು ನಿಮಿಷ ಬಿಟ್ಟು ಸೊಲೊಮನ್‌ ಉದ್ಗರಿಸಿದ, “ನೈಜ ಹೂವನ್ನು ನೂರಕ್ಕೆ ನೂರು ಹೋಲುವಂತೆ ಎಷ್ಟು ಸುಂದರವಾಗಿ ತಯಾರಿಸಲಾಗಿದೆ’!

ಮರುಕ್ಷಣ ಕ್ಲಿಯೊಪಾತ್ರಾ ಅಂಥದ್ದೇ ಇನ್ನೊಂದು ಹೂವನ್ನು ಕೈಚೀಲದಿಂದ ತೆಗೆದಳು. “ಇದು ಅಸಲಿಯೇ ಕೃತಕವೇ’ ಎಂದು ಪ್ರಶ್ನಿಸಿದಳು.

ಸೊಲೊಮನ್‌ ಅದನ್ನು ನೋಡುವಂತೆ ನಟಿಸಿ “ಇದಾ ದರೆ ನೈಜ ಹೂವು’ ಎಂದ. ಕ್ಲಿಯೊಪಾತ್ರಾ ತಬ್ಬಿಬ್ಟಾದಳು. “ದೊರೆಯೇ, ಹೇಗೆ ಗೊತ್ತಾ ಯಿತು’ ಎಂದು ಎಲ್ಲರೂ ಪ್ರಶ್ನಿಸಿದರು. “ಕಿಟಿಕಿ ಗಳನ್ನು ತೆರೆದಾಗ ಮೊದಲನೆಯ ಹೂವಿನ ಬಳಿಗೆ ದುಂಬಿಗಳು ಬರಲಿಲ್ಲ. ಎರಡನೆಯ ಹೂವನ್ನು ಹೊರತೆಗೆದ ಕೂಡಲೇ ಒಂದು ದುಂಬಿ ಹಾರಿಬಂತು…’ ಸೊಲೊಮನ್‌ ರಹಸ್ಯವನ್ನು ಉಸುರಿದ.

ಅತ್ಯಂತ ಗಾಢವಾಗಿ ಪ್ರೀತಿಸುವುದು ಎಲ್ಲೇ ಇದ್ದರೂ ನಮ್ಮೊಳಗು ಅದನ್ನು ಅರಸುತ್ತದೆ. ನಮ್ಮ ಗಾಢವಾದ ಒಲವು ನಮ್ಮನ್ನು ಮುನ್ನಡೆಸುತ್ತದೆ, ಪಥದರ್ಶಕನಾಗುತ್ತದೆ. ದುಂಬಿಗಳು, ಜೇನ್ನೊಣಗಳು ಮೈಲು ಗಟ್ಟಲೆ ದೂರದಲ್ಲಿ ಹೂವು ಅರಳಿದ್ದನ್ನು ಗ್ರಹಿಸಿ ಅಲ್ಲಿಗೆ ಹಾರುತ್ತವೆ. ಅವುಗಳ ಆಂತರ್ಯ ದಲ್ಲಿಯೂ ಸುಪ್ತವಾಗಿರುವುದು ಇಂಥದ್ದೇ ಒಂದು ಒಲವು.

ನಾವು ಯಾವುದನ್ನು ಪ್ರೀತಿಸುತ್ತೇವೆಯೋ ಅದನ್ನು ಪಡೆಯುತ್ತೇವೆ ಹಾಗಾಗಿ ಯಾವುದ ರತ್ತ ನಮ್ಮ ಪ್ರೀತಿ, ಯಾವುದು ನಮ್ಮ ಒಲವು ಎಂಬ ಬಗ್ಗೆ ಎಚ್ಚರದಿಂದ ಇರೋಣ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.