ಆಲೋಚನೆಗಳು ಒದಗಿಸಿದ ಅಸೀಮ ಅವಕಾಶ
Team Udayavani, Dec 2, 2020, 5:55 AM IST
ಸಾಂದರ್ಭಿಕ ಚಿತ್ರ
ಎಲ್ಲ ಮನುಷ್ಯರಲ್ಲಿಯೂ ಸಾಮಾನ್ಯವಾಗಿ ಇರುವುದು ಏನು ಎಂದರೆ, ಅದು ಆಲೋಚನೆ. ಈ ಆಲೋಚನೆಗಳ ಹೂರಣವು ನಮ್ಮ ಪಂಚೇಂದ್ರಿಯಗಳು ಗ್ರಹಿಸಿ ದಾಸ್ತಾನು ಮಾಡಿಟ್ಟಿರುವ ಅನುಭವ ಕೋಶದಿಂದ ಹುಟ್ಟಿಕೊಳ್ಳುತ್ತದೆ. ಸ್ವರೂಪದಲ್ಲಿ ಆಲೋಚನೆಗಳು ಕೇವಲ ಪ್ರತಿಫಲನಗಳಾಗಿರುತ್ತವೆ – ನಾವು ಆಲೋಚನೆಗಳಿಗೆ ಯಾವುದೇ ರೂಪ ವನ್ನು ಕೊಡ ಬಹುದು. ನಾವು ಆಲೋಚನೆಯಾಗಿ ಈಗ ಅನುಭವಿಸುವ ಪ್ರತಿ ಫಲನವು ಜೀವವಿಕಾಸ ಸರಣಿಯ ತಳ ಹಂತದಲ್ಲಿ ಮೂಲಪ್ರವೃತ್ತಿಯ ಸ್ವರೂಪ ದಲ್ಲಿರುತ್ತದೆ. ಮೂಲ ಪ್ರವೃತ್ತಿಯು ಆಲೋಚನೆಯಂತಲ್ಲ; ಅದು ಆಲೋಚ ನೆಗಿಂತ ಹೆಚ್ಚು ಸ್ಪಷ್ಟವಾದದ್ದು.
ಆಲೋಚನೆಗಳು ಒಂದಕ್ಕೊಂದು ಪೂರಕವಾಗಿರಬಹುದು, ತದ್ವಿರುದ್ಧವಾಗಿ ರಬಹುದು. ಆದರೆ ಮೂಲ ಪ್ರವೃತ್ತಿ ಯೆಂಬುದು ಸ್ಪಷ್ಟ, ನಿಖರ. ಜೀವ ವಿಕಾಸ ಸರಣಿಯ ತಳಭಾಗ ದಲ್ಲಿರುವ ಪ್ರಾಣಿಗಳು ತಮ್ಮ ಬದುಕಿನ ಉದ್ದೇ ಶದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುತ್ತವೆ. . ಏಕೆಂದರೆ, ಅವುಗಳ ಆಲೋಚನೆ ಅಂದರೆ ಪ್ರತಿಫಲನವು ಮೂಲಪ್ರವೃತ್ತಿಯ ಮಟ್ಟ ದಲ್ಲಿದೆ. ಮೂಲಪ್ರವೃತ್ತಿ ಎಂದರೆ ಬದುಕು ಳಿಯುವ ಬಗೆಗಿನ ಚಿಂತನೆ. ಉದಾಹರಣೆ ಯಾಗಿ ಒಂದು ಹುಳವನ್ನು ತೆಗೆದು ಕೊಂಡರೆ, ಮೂಲಪ್ರವೃತ್ತಿಯ ಮಟ್ಟದಲ್ಲಿ ರುವ ಅದರ ಆಲೋಚನೆಯು ಅತ್ಯಂತ ಸ್ಪಷ್ಟ- ಬದುಕಿ ಉಳಿಯುವುದು. ಎಲ್ಲಿ ಹೋಗಬೇಕು, ಯಾವುದನ್ನು ತಿನ್ನಬೇಕು, ಯಾವಾಗ ಮೊಟ್ಟೆ ಇರಿಸಿ ಸಂತತಿಯನ್ನು ಬೆಳೆಸಬೇಕು ಎನ್ನುವುದು ಅದಕ್ಕೆ ನಿಖರ ವಾಗಿ ತಿಳಿದಿರುತ್ತದೆ. ಯಾಕೆಂದರೆ ಅದು ಮೂಲ ಪ್ರವೃತ್ತಿ ಹೇಳಿದಂತೆ ಮಾತ್ರ ಕೇಳುತ್ತದೆ.
ಮೂಲಪ್ರವೃತ್ತಿಯು ಆಲೋಚನೆಯ ಕಚ್ಚಾ ರೂಪ ಎಂದೂ ಹೇಳಬಹುದು ಅಥವಾ ಮೂಲಪ್ರವೃತ್ತಿಯ ವಿಕಸಿತ ರೂಪವೇ ಆಲೋಚನೆ ಎಂದೂ ಭಾವಿಸ ಬಹುದು. ಮೂಲಪ್ರವೃತ್ತಿ ಎಂಬುದರ ಆವರಣ ತುಂಬ ಸೀಮಿತ. ಆದರೆ ಆಲೋಚನೆಗಳಿಗೆ ಗಡಿಯೇ ಇಲ್ಲ. ಇದೇ ಕಾರಣದಿಂದ ನಾವು-ನೀವು ನಮಗೆ ಸಂಬಂಧಪಡದ ಎಷ್ಟೋ ವಿಷಯಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದು.
ಜೀವವಿಕಾಸ ಆಗುತ್ತ ಬಂದ ಹಾಗೆ, ದೇಹವು ವಿಕಾಸ ಹೊಂದುತ್ತ ಬಂದ ಹಾಗೆ ಮನಸ್ಸಿನ ಒಳಗಿನ ಪ್ರತಿ ಫಲನಗಳೂ ಮೂಲ ಪ್ರವೃತ್ತಿಯ ಮಟ್ಟ ದಿಂದ ಆಲೋಚನೆಗಳ ಸ್ತರಕ್ಕೆ ವಿಕಾಸ ಗೊಂಡವು. ಆಲೋಚನೆ ಎಂಬುದು ಒಂದು ಬಗೆಯ ಸ್ವಾತಂತ್ರ್ಯ – ಅದು ನಮ್ಮ ಬದುಕಿಗೆ ಹೆಚ್ಚು ವಿಸ್ತಾರವನ್ನು ಒದಗಿ ಸುತ್ತದೆ. ಆದರೆ ಇವೇ ಆಲೋಚನೆಗಳು ನಮ್ಮಲ್ಲಿ ಸಂಪೂರ್ಣ ಗೊಂದಲವನ್ನೂ ಹುಟ್ಟಿಸಬಲ್ಲವಾಗಿವೆ. ನಮ್ಮೆಲ್ಲ ನೋವು, ನರಳುವಿಕೆಗೆ ಇದೇ ಕಾರಣ – ಏನನ್ನು ಆಲೋಚಿಸಬೇಕು, ಏನು ಮಾಡಬೇಕು ಎಂಬುದು ಸ್ಪಷ್ಟವಾಗಿಲ್ಲದೆ ಇರುವುದು. ನಾವು ಮೂಲಪ್ರವೃತ್ತಿಯನ್ನಷ್ಟೇ ಅನುಸರಿಸಿದರೆ ಏನು ಮಾಡಬೇಕು ಎಂಬುದು ಖಚಿತವಾಗಿ ಗೊತ್ತಿರುತ್ತದೆ. ಅದರಿಂದ ಬದುಕು ಬಹಳ ಸರಳ ವಾಗಿರುತ್ತದೆ, ಆದರೆ ಅಷ್ಟೇ ಸೀಮಿತ ವಾಗಿರುತ್ತದೆ. ಬದು ಕುಳಿಯುವುದಕ್ಕಿಂತ . ಹೆಚ್ಚಿನ ಅವಕಾಶಗಳು, ಸಾಧ್ಯತೆಗಳು ಇರುವುದಿಲ್ಲ.
ನಮಗೆ ಸ್ವಾತಂತ್ರ್ಯವಾಗಿ ಒದಗಿರುವ, ನಮ್ಮ ಬದುಕನ್ನು ವಿಸ್ತರಿಸುವ ಒಂದು ಅವಕಾಶವಾಗಿರುವ ಆಲೋಚನಾ ಪ್ರಕ್ರಿಯೆಯು ನಮಗೆ ಸಮಸ್ಯೆಯನ್ನು ಏಕೆ ಸೃಷ್ಟಿಸುತ್ತದೆ ಎಂದರೆ – ಅವು ನಿಜವಾಗಿಯೂ ಪ್ರತಿಫಲನಗಳು ಮಾತ್ರ ಎಂಬ ಅರಿವು ನಮಗೆ ಇರುವುದಿಲ್ಲ. ಈ ಪ್ರತಿಫಲನಗಳು ಯಾವುದೇ ರೂಪವನ್ನು ಪಡೆಯಬಹುದು ಅಥವಾ ಅವುಗಳಿಗೆ ಯಾವುದೇ ರೂಪವನ್ನು ಕೊಡದೆ ಬರೇ ಪ್ರತಿಫಲನವಾಗಿಯಷ್ಟೇ ನಾವು ಸ್ವೀಕರಿಸ ಬಹುದು. ಅದು ಸಾಧ್ಯವಾದಾಗ ಮಾತ್ರ ಆಲೋಚನೆಗಳಿಂದ ನಮ್ಮ ಬದುಕಿನ ಗಡಿಗಳನ್ನು ವಿಸ್ತರಿಸಿಕೊಳ್ಳುವ ಅವಕಾಶ ವನ್ನು ಇರಿಸಿಕೊಂಡು ಅವುಗಳಿಂದ ಉಂಟಾಗುವ ಗೊಂದಲದಿಂದ ಪಾರಾಗಲು ಸಾಧ್ಯ.
ಸಾರ ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.