ಸ್ತ್ರೀತ್ವ ಎಂದರೆ ಅರಳುವುದು, ಕೊನರುವುದು, ಜೀವಿಸುವುದು
Team Udayavani, Dec 1, 2020, 5:30 AM IST
ಸಾಂದರ್ಭಿಕ ಚಿತ್ರ
ಮನುಷ್ಯ ಕುಲ ಬಹಳ ದೀರ್ಘ ಕಾಲದ ವರೆಗೆ ಪುರುಷತ್ವಕ್ಕೆ ಪ್ರಾಧಾನ್ಯ ನೀಡುತ್ತ ಬಂದಿದೆ. ಅದು ಏಕೆ ಎಂದರೆ ಇಷ್ಟು ಸಮಯ ಬದುಕಿ ಉಳಿಯುವುದು ಬಹಳ ದೊಡ್ಡ ಸವಾಲಾಗಿತ್ತು. ಆದಿಮ ಮನುಷ್ಯ ನೆಲೆ ಯಿಲ್ಲದೆ ಅಲೆದಾಡುತ್ತಿದ್ದಾಗ, ಅರಣ್ಯವಾಸಿ ಯಾಗಿದ್ದಾಗ, ನಾಗರಿಕತೆ ಪೂರ್ಣವಾಗಿ ಅರಳದೆ ಇದ್ದಾಗ ಇಂತಹ ಸ್ಥಿತಿ ಇರುತ್ತದೆ. ಆ ಕಾಲಘಟ್ಟದಲ್ಲಿ ಬದುಕಿ ಉಳಿಯುವುದಕ್ಕೆ ಎಲ್ಲಕ್ಕಿಂತ ಹೆಚ್ಚು ಮಹತ್ವ.
ಸಮಾಜಗಳು, ಸಮುದಾಯಗಳು ಬದುಕಿ ಉಳಿಯುವ ಹೋರಾಟಕ್ಕಿಂತ ಒಂದು ಹೆಜ್ಜೆ ಮೇಲಕ್ಕೆ ತಲುಪಿ, ಒಂದು ನಿರ್ದಿಷ್ಟ ಮಟ್ಟದ ಸ್ಥಿರ ಸಂಸ್ಕೃತಿ, ನಾಗರಿಕತೆಯಾಗಿ ವಿಕಸನಗೊಂಡ ಬಳಿಕ ಅಲ್ಲಿ ಸ್ತ್ರೀತ್ವ ಅರಳಬೇಕು. ಇವತ್ತು ನಾವು ಅಂತಹ ಸ್ಥಿತಿಯನ್ನು ತಲುಪಿದ್ದೇವೆ. ದುರದೃಷ್ಟ ಎಂದರೆ ಆರ್ಥಿಕತೆಯು ಇಂದು ನಿರ್ಣಾಯಕ ಶಕ್ತಿಯಾಗಿ ಬಿಟ್ಟಿದೆ.
ಆರ್ಥಿಕತೆ, ಹಣ, ವಿತ್ತವು ನಿರ್ಣಾಯಕ ಶಕ್ತಿ ಎನಿಸಿಕೊಂಡಾಗ ಅದು ಮತ್ತೆ ಎಲ್ಲವನ್ನೂ ಬದುಕಿ ಉಳಿಯುವ ಹೋರಾಟದ ಹಂತಕ್ಕೆ ತಂದು ನಿಲ್ಲಿಸುತ್ತದೆ. ವೇಷ ಬದಲಿಸಿ ದಂತೆ ಕಾಣಿಸಬಹುದು, ಆದರೆ ನಿಜವಾಗಿಯೂ ಅದು ಬದುಕುಳಿಯುವ ತಿಣುಕಾಟವೇ. ಅಂದರೆ ಕಾಡಿನ ನ್ಯಾಯ – ಯಾರು ಬಲಶಾಲಿ ಆಗಿರುತ್ತಾ ನೆಯೋ ಅವನು ಬದುಕುತ್ತಾನೆ. ಆಗ ಮತ್ತೆ ಪುರುಷತ್ವವೇ ಮುನ್ನೆಲೆಯಲ್ಲಿ ನಿಲ್ಲುತ್ತದೆ.
ನಾಗರಿಕತೆ, ಸಂಸ್ಕೃತಿ, ಬದುಕು ಒಂದು ಬಗೆಯ ಸ್ಥಿರ, ವಿಶ್ರಾಂತಿಯ ಸ್ಥಿತಿಯಲ್ಲಿದ್ದಾಗ ಮಾತ್ರ ಸ್ತ್ರೀತ್ವ ಅರಳಲು ಸಾಧ್ಯ. ಸ್ತ್ರೀತ್ವ ಚಿಗುರೊಡೆದಿಲ್ಲ ಎಂದಾದರೆ ನಮ್ಮ ಬದುಕಿ ನಲ್ಲಿ ಎಲ್ಲವೂ ಇದ್ದು ಏನೂ ಇಲ್ಲದ ಸ್ಥಿತಿಗೆ ಸಮಾನ. ಸಮಾಜದಲ್ಲಿ ಸ್ತ್ರೀತ್ವವನ್ನು ಪ್ರಜ್ಞಾ ಪೂರ್ವಕವಾಗಿ ಪೋಷಿಸಬೇಕು, ಬೆಳೆಸ ಬೇಕು. ಇಲ್ಲವಾದರೆ ಮರ ಪೂರ್ತಿಯಾಗಿ ಬೆಳೆದರೂ ಹೂವು, ಹಣ್ಣು ಬಿಡದ ಸ್ಥಿತಿ. ಅದು ಅರ್ಧ ಬದುಕನ್ನು ಬದುಕಿದಂತೆ.
ಇಲ್ಲಿ ಪುರುಷತ್ವ – ಸ್ತ್ರೀತ್ವ ಎಂದರೆ ಹೆಣ್ಣು – ಗಂಡು ಎಂದು ಅರ್ಥವಲ್ಲ. ಸ್ತ್ರೀತ್ವ ಎಂಬುದು ಮಹಿಳೆಯಂತೆ ಪುರುಷನಲ್ಲೂ ಇರಬಹುದು. ಅದೊಂದು ನಿರ್ದಿಷ್ಟ ಗುಣಸ್ವಭಾವ. ಪುರುಷತ್ವ ಎಂಬುದೂ ಒಂದು ಗುಣಸ್ವಭಾವ. ಈ ಎರಡೂ ಸಮತೋಲಿತವಾಗಿ ಇದ್ದರೆ ಮಾತ್ರ ಪೂರ್ಣ ಜೀವನ ನಡೆಸಬಹುದು.
ವಿತ್ತವೇ ಚಾಲನ ಶಕ್ತಿಯಾಗಿರುವಾಗ ಮಹಿಳೆಯೂ ಸ್ತ್ರೀತ್ವವನ್ನು ತೊರೆಯಬೇಕಾದ ಸಂದರ್ಭ ಎದುರಾಗುವ ಅಪಾಯವಿದೆ. ಬದುಕುಳಿಯುವುದು ಈಗ ಬೇರೆ ಬೇರೆ ರೂಪ, ಆಯಾಮಗಳಲ್ಲಿ ಮುನ್ನೆಲೆಯಲ್ಲಿದೆ. ಇವತ್ತು ಈ “ಬದುಕುಳಿಯುವುದು’ ಎಂದರೆ ಮರ್ಸಿಡಿಸ್ ಕಾರು, ಕೆಜಿಗಟ್ಟಲೆ ಚಿನ್ನಾಭರಣ… ಇಂತಹ ರೂಪಗಳಲ್ಲಿದೆ. ಇದು ಮುಂದುವರಿದರೆ ಸ್ತ್ರೀತ್ವಕ್ಕೆ ಸಮಾಜದಲ್ಲಿ ನೆಲೆಯಿಲ್ಲದಾಗುತ್ತದೆ.
ಸ್ತ್ರೀತ್ವ ಮುಖ್ಯ ಗುಣಸ್ವಭಾವ, ನಮ್ಮಲ್ಲಿ ಬೆಳೆದುಬರಬೇಕು ಎಂಬುದನ್ನು ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಮೂಡಿಸಬೇಕಿದೆ. ಮಕ್ಕಳು ವಿಜ್ಞಾನ, ತಂತ್ರ ಜ್ಞಾನ, ಗಣಿತಗಳಂತೆ ಸಂಗೀತ, ಕಲೆ, ತಣ್ತೀಜ್ಞಾನ, ಸಾಹಿತ್ಯಗಳಲ್ಲೂ ಅಭಿರುಚಿ ಬೆಳೆಸಿಕೊಳ್ಳಬೇಕು. ಇದಾಗದಿದ್ದರೆ ದೈಹಿಕವಾಗಿ ನಾರಿಯರಾಗಿರಬಹುದು, ಆದರೆ ಸ್ತ್ರೀತ್ವ ಇರಲಾರದು.
ಪುರುಷತ್ವ ಬೇರು ಇದ್ದಂತೆ, ಸ್ತ್ರೀತ್ವ ಹೂವು- ಹಣ್ಣುಗಳಂತೆ. ಬೇರಿನ ಅಸ್ತಿತ್ವದ ಉದ್ದೇಶ ಮರದಲ್ಲಿ ಹೂವು-ಹಣ್ಣುಗಳನ್ನು ಅರಳಿಸು ವುದು. ಅದಾಗದಿದ್ದರೆ ಬೇರು ಇದ್ದೂ ವ್ಯರ್ಥ. ಸ್ತ್ರೀತ್ವ ಅರಳದ ಸಮಾಜದ ಸ್ಥಿತಿ ಹೀಗೆ.
ನಾವು ಗಂಡಾಗಿರಬಹುದು, ಹೆಣ್ಣಾಗಿರ ಬಹುದು; ಸ್ತ್ರೀತ್ವವು ಕೊನರದೆ ಇದ್ದರೆ ಬದುಕಿನ ಅನೇಕ ನವಿರು ಸೂಕ್ಷ್ಮಗಳು ನಮ್ಮ ಅನುಭವಕ್ಕೆ ಸಿಗಲಾರವು. ಬದುಕಿಡೀ ಬದುಕುಳಿಯುವ ಹೋರಾಟವಾದೀತು. ಪುರುಷತ್ವವು ಗೆಲ್ಲುವುದರ ಬಗ್ಗೆ ಚಿಂತಿಸುತ್ತದೆ. ಆದರೆ ಸ್ತ್ರೀತ್ವವು ಅರಳುವುದು, ವಿಶ್ರಮಿಸು ವುದು, ಲವಲವಿಕೆಯಿಂದಿರುವುದು ಮತ್ತು ಜೀವಿಸುವುದು. ಈ ಪರಿವರ್ತನೆ ಈಗಿಂದೀಗಲೇ ಆಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.