ಕೆಟ್ಟವನೆನೆಸಿಯೂ ಪ್ರೀತಿ ಉಣಿಸುವ ನೈಜ ಗೆಳೆತನ
Team Udayavani, Nov 19, 2020, 6:02 AM IST
ನಮಗೆಲ್ಲರಿಗೂ ಗೆಳೆಯರು, ಗೆಳತಿಯರು ಇದ್ದಾರೆ. ನಾವೇನು ಮಾಡುತ್ತೇವೆಯೋ ಅದನ್ನು ಅವರು ಬೆಂಬಲಿಸಬೇಕು ಎಂಬುದು ಸಾಮಾನ್ಯವಾಗಿ ನಮ್ಮ ನಿರೀಕ್ಷೆ.
ಇದು ವಿದೇಶದಲ್ಲಿ ಚಳಿಗಾಲ ಆರಂಭ ವಾಗುವುದಕ್ಕೆ ಮುನ್ನ ನಡೆದ ಒಂದು ಕಥೆ. ಪುಟ್ಟ ಪಕ್ಷಿಯೊಂದು ಚಳಿ ಕಾಲಿಡುವುದಕ್ಕೆ ಮುನ್ನವೇ ಬೆಚ್ಚಗಿನ ಪ್ರದೇಶಕ್ಕೆ ವಲಸೆ ಹೋಗಬೇಕಿತ್ತು. ವಾತಾವರಣವನ್ನು ಸ್ವಲ್ಪ ಹೆಚ್ಚು ಕಾಲ ಆಸ್ವಾದಿಸುತ್ತ ಅಲ್ಲೇ ಉಳಿಯಿ ತದು. ಅಷ್ಟರಲ್ಲಿ ಚಳಿ ಆರಂಭವಾಗಿಯೇ ಬಿಟ್ಟಿತು, ಮಂಜು ಬೀಳಲಾರಂಭವಾಯಿತು. ಹಕ್ಕಿ ಸ್ವಲ್ಪ ದೂರ ಹಾರುವಷ್ಟರಲ್ಲಿ ಮರಗಟ್ಟಿ ಕೆಳಕ್ಕೆ ಬಿದ್ದುಬಿಟ್ಟಿತು.
ಸ್ವಲ್ಪ ಹೊತ್ತಿನಲ್ಲಿ ಅದೇ ದಾರಿಯಾಗಿ ಬಂದ ಹಸುವೊಂದು ಸರಿಯಾಗಿ ಆ ಹಕ್ಕಿಯ ಮೇಲೆಯೇ ಸೆಗಣಿ ಹಾಕಿತು. ಮರಗಟ್ಟಿದ ಪಕ್ಷಿ ಸೆಗಣಿಯಲ್ಲಿ ಮುಚ್ಚಿಹೋಯಿತು. ಆಗಷ್ಟೇ ದನದ ಹೊಟ್ಟೆಯಿಂದ ಹೊರಬಂದ ಸೆಗಣಿಯಾದ್ದರಿಂದ ಬಿಸಿಯಾಗಿತ್ತು, ಆ ಬಿಸಿಯಿಂದಾಗಿ ಪಕ್ಷಿಗೆ ಎಚ್ಚರವಾಯಿತು. ಅದು ಚಿಲಿಪಿಲಿಗುಟ್ಟಿತು.
ಅದೇ ದಾರಿಯಾಗಿ ಬರುತ್ತಿದ್ದ ಬೆಕ್ಕಿಗೆ ಹಕ್ಕಿಯ ಚಿಲಿಪಿಲಿ ಕೇಳಿಸಿತು. ಎಲ್ಲಿಂದ ಇದು ಎಂದು ಕಿವಿಯಗಲಿಸಿ ಕೇಳಿದ ಅದು ಸಗಣಿ ಮುದ್ದೆಯ ಅಡಿಯಿಂದಲೇ ಸದ್ದು ಕೇಳುತ್ತಿರುವುದು ಎಂದು ತಿಳಿದುಕೊಂಡು ಹಕ್ಕಿಯನ್ನು ಹೊರಕ್ಕೆಳೆದು ತಿಂದುಬಿಟ್ಟಿತು.
ನಮ್ಮ ಮಿತ್ರರು, ಶತ್ರುಗಳು ಹೀಗೆಯೇ. ನಮ್ಮ ಮೇಲೆ ಹೊಲಸು ಸುರಿದವರೆಲ್ಲ ಶತ್ರು ಗಳಾಗಬೇಕಿಲ್ಲ; ಕೆಸರಿನಿಂದ ಹೊರಗೆಳೆದ ವರೆಲ್ಲ ಮಿತ್ರರಾಗಬೇಕಿಲ್ಲ. ಉತ್ತಮ ಮಿತ್ರರು ನಮ್ಮ ಪಾಲಿಗೆ ಸದಾ ಪ್ರಿಯವಾದದ್ದನ್ನೇ ಆಡ ಬೇಕಿಲ್ಲ, ಮಾಡಬೇಕಿಲ್ಲ. ನಮ್ಮ ಗುಣವನ್ನು ಹೊಗಳಿ, ಅವಗುಣವನ್ನು ಎತ್ತಿ ತೋರಿಸಿ, ತಿದ್ದಿಕೋ ಎನ್ನುವವನೇ ನಿಜವಾದ ಗೆಳೆಯ.
ನಾವೂ ಹಲವರಿಗೆ ಗೆಳೆಯರಾಗಿರುತ್ತೇವೆ. ಅವರ ದುರ್ಗುಣಗಳನ್ನು ಸದಾ ಎತ್ತಿ ತೋರಿಸಬೇಕು ಎಂಬುದು ಇದರರ್ಥವಲ್ಲ. ಆದರೆ ಗೆಳೆಯರ ನಡುವೆ, ಜನರ ದೃಷ್ಟಿಯಲ್ಲಿ ಕೆಟ್ಟವರಾಗಲು ನಾವು ಸದಾ ಸಿದ್ಧರಾಗಿರ ಬೇಕು, ಆ ಧೈರ್ಯ ನಮಗಿರಬೇಕು. ನಾವು ಎಲ್ಲರಿಗೂ ಎಲ್ಲ ಕಾಲಗಳಲ್ಲಿಯೂ ಒಳ್ಳೆಯ ವರಾಗಿಯೇ ಇರಲು ಸಾಧ್ಯವಿಲ್ಲ. ಎಲ್ಲರಿಗೂ ಸಂತೋಷವಾಗುವ ಹಾಗೆ ಇರಬೇಕಾದರೆ ಎಷ್ಟೋ ಅಸಂತೋಷಗಳನ್ನು ನಾವು ನುಂಗಿ ಕೊಳ್ಳಬೇಕಾಗುತ್ತದೆ. ಕೊನೆಗೆ ನಾವು ಅಸಂತೋಷಗಳ ಮೂಟೆ ಆಗಬೇಕಾದೀತು.
ನಮ್ಮ ಗೆಳೆಯನ ಹುಳುಕನ್ನು ಹೇಳಿಯೂ ಆತನನ್ನು ಪ್ರೀತಿಸುವ, ಆತನಿಗಾಗಿ ಸಹಾನು ಭೂತಿ ಹೊಂದುವ ಧೈರ್ಯ ನಮ್ಮಲ್ಲಿರಬೇಕು. ಅದುವೇ ನಿಜವಾದ ಗೆಳೆತನ. “ನಿನ್ನ ಬೆನ್ನನ್ನು ನಾನು, ನನ್ನ ಬೆನ್ನನ್ನು ನೀನು ತಟ್ಟು’ ಎಂಬಂಥದ್ದು ನೈಜ ಸ್ನೇಹವಲ್ಲ.
ಸ್ನೇಹಿತರಾದ ಮೂವರು ಅರಸರು ತಮ್ಮ ತಮ್ಮ ಸೈನ್ಯ ತುಕಡಿಗಳ ಜತೆಗೆ ಪ್ರವಾಸ ಹೊರಟಿದ್ದರು. ಮಾರ್ಗ ಮಧ್ಯೆ ತಮ್ಮ ಯೋಧರ ನಿಷ್ಠೆ, ಧೈರ್ಯಗಳ ಮಾತು ಬಂತು. ಒಂದನೇ ರಾಜ, “ನನ್ನ ಸೈನಿಕರು ಈ ಬೆಟ್ಟದ ಮೇಲಿಂದ ಹಾರು ಎಂದರೂ ಹಿಂದೆ ಮುಂದೆ ನೋಡದೆ ಹಾರುತ್ತಾರೆ’ ಎಂದ. ಪರೀಕ್ಷೆಗಾಗಿ ಹಾಗೆ ಆದೇಶಿಸಿದಾಗ ಅವನ ಯೋಧ ಹಾಗೆಯೇ ಮಾಡಿದ. ಎರಡನೆಯ ವನದೂ ಅದೇ ಕಥೆ. ಮೂರನೆಯ ರಾಜ ಮಾತ್ರ ಮೌನವಾಗಿದ್ದ. ಉಳಿದಿಬ್ಬರು ಕುಟುಕಿದಾಗ ಆತನೂ ತನ್ನ ಸೈನಿಕರ ಲ್ಲೊಬ್ಬನನ್ನು ಕರೆದು ಬೆಟ್ಟದ ಮೇಲಿಂದ ಹಾರುವಂತೆ ಆದೇಶಿಸಿದ.
ಆಗ ಆ ಸೈನಿಕ, “ದೊರೆಯೇ, ನೀವು ಈ ದಿನವೂ ಅಮಲು ಪದಾರ್ಥ ಸೇವಿಸಿದ ಹಾಗಿದೆ. ಕ್ಷಮಿಸಿ, ಇಲ್ಲಿಂದ ಹಾರಲಾರೆ, ಹಾರಿದರೆ ನಿಷ್ಠಾವಂತ ಯೋಧನೊಬ್ಬನನ್ನು ನೀವು ಕಳೆದುಕೊಳ್ಳುತ್ತೀರಿ’ ಎಂದ.
ಧೈರ್ಯ, ಕೆಚ್ಚು ಎಂದರೆ ಇದು. ಗೆಳೆತನ, ಅಧಿಕಾರಿ- ದುಡಿಮೆಗಾರ, ಮಾಲಕ- ನೌಕರ ತಂದೆ- ಮಕ್ಕಳು… ಹೀಗೆ ಎಲ್ಲ ಬಗೆಯ ಸಂಬಂಧಗಳಲ್ಲೂ ಇರಬೇಕಾದಂಥದ್ದು.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.