ವಿಶ್ವಾಸದ ಶಕ್ತಿ ಅನುಕ್ಷಣವೂ ಕಾಯುತ್ತದೆ


Team Udayavani, May 28, 2021, 6:00 AM IST

ವಿಶ್ವಾಸದ ಶಕ್ತಿ ಅನುಕ್ಷಣವೂ ಕಾಯುತ್ತದೆ

ವಿಶ್ವಾಸ ಬದುಕಿಗೆ ಬಹಳ ದೊಡ್ಡ ಶಕ್ತಿ ಯನ್ನು ಕೊಡುತ್ತದೆ. ನೀವದನ್ನು ದೇವರ ಮೇಲಿನ ವಿಶ್ವಾಸ ಎನ್ನಬಹುದು, ಸೃಷ್ಟಿಯ ಮೇಲೆ ವಿಶ್ವಾಸ ಎನ್ನಬಹುದು, ಕಣ್ಣಿಗೆ ಕಾಣದ ಅಗೋಚರ ಶಕ್ತಿಯೊಂದರ ಮೇಲಿನ ವಿಶ್ವಾಸ ಎಂದು ಕರೆಯಬ ಹುದು; ಹೇಗೆ ಬೇಕಾದರೂ ಹೇಳಿ. ವಿಶ್ವಾಸ ಇರಿಸುವುದು ಬಹಳ ಮುಖ್ಯ. ಅದು ನಮ್ಮ ಪ್ರಯತ್ನದಲ್ಲಿ ಹೆಚ್ಚು ಶಕ್ತಿ ಹಾಕುವಂತೆ ಮಾಡುತ್ತದೆ. ಪ್ರಯತ್ನ ನಮ್ಮದು, ಅದಕ್ಕೆ ತಕ್ಕ ಫ‌ಲ ಸಿಗುತ್ತದೆ ಎನ್ನುವುದು ಹಿರಿಯರ ಮಾತು. ಆದರೆ ಈ ಪ್ರಯತ್ನದಲ್ಲಿ ನಮ್ಮ ಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಹೂಡು ವಂತಾ ಗುವುದು ಅಚಲವಾದ ವಿಶ್ವಾಸ ಇದ್ದರೆ ಮಾತ್ರ. ಬದುಕಿನ ಮುಂದೆಂದೋ ಒಂದು ದಿನ ನಡೆದು ಬಂದ ದಾರಿ ಯನ್ನು ಹಿಂದಿರುಗಿ ನೋಡಿದಾಗ ವಿಶ್ವಾಸದ ಶಕ್ತಿ ನಮಗೇ ನಿಚ್ಚಳ ವಾಗುತ್ತದೆ.

ಒಬ್ಬ ಯೋಧನಿದ್ದ. ಒಂದು ಬಾರಿ ಅವನಿದ್ದ ತುಕಡಿಗೂ ವೈರಿ ದಳಕ್ಕೂ ಘನಘೋರ ಕಾಳಗವಾಯಿತು. ಶತ್ರುಗಳ ಕೈ ಮೇಲಾಗುತ್ತ ಬಂತು. ಯೋಧನ ಜತೆಗಾರರು ಒಬ್ಬೊಬ್ಬರಾಗಿ ಪ್ರಾಣ ಚೆಲ್ಲಿದರು, ಕೆಲವರು ರಣರಂಗದಿಂದ ಕಾಲ್ತೆಗೆದರು. ಅನಿವಾರ್ಯವಾಗಿ ಈ ಯೋಧನೂ ಜೀವ ಉಳಿಸಿ ಕೊಳ್ಳುವುದಕ್ಕಾಗಿ ಪಲಾಯನ ಹೂಡಬೇಕಾಯಿತು.

ಅವನು ಶತ್ರುಗಳ ಕೈಯಿಂದ ಪಾರಾಗು ವುದಕ್ಕಾಗಿ ಓಡಿಹೋದ. ಕಾಡುಮೇಡು ಗಳನ್ನು ಸುತ್ತಿದ. ಶತ್ರುಗಳು ಬೆನ್ನ ಹಿಂದೆಯೇ ಇದ್ದರು. ದೂರ, ಬಹುದೂರ ಓಡಿದ ಬಳಿಕ ಅವನಿಗೆ ಕಾಡಿನಲ್ಲಿ ಒಂದು ಗುಹೆ ಎದುರಾಯಿತು. ಅದರೊಳಗೆ ಹೊಕ್ಕು ಅವಿತು ಕುಳಿತರೆ ವಿರೋಧಿಗಳಿಂದ ಪಾರಾಗಬಹುದು ಅನ್ನಿಸಿತು ಅವನಿಗೆ. ತಡ ಮಾಡದೆ ಗವಿಯೊಳಕ್ಕೆ ನುಗ್ಗಿದ.

ಒಳಗೆ ಗಾಢಾಂಧಕಾರ. ಅಲ್ಲಲ್ಲಿ ಬಾವಲಿಗಳಿದ್ದವು. ನೀರು ಜಿನುಗುತ್ತಿತ್ತು. ಆದರೆ ಹೇಸದೆ ಅಂಜದೆ ಆ ಯೋಧ ಗುಹೆಯೊಳಗೆ ಅಡಗಿ ಕುಳಿತ.

ಹೊರಗೆ ಶತ್ರುಗಳ ಹೆಜ್ಜೆಯ ಸದ್ದು ಹತ್ತಿರವಾಗುವುದು ಕೇಳಿಸುತ್ತಿತ್ತು. ಯೋಧ “ದೇವರೇ ಹೇಗಾದರೂ ನನ್ನನ್ನು ಪಾರು  ಮಾಡು, ವೈರಿಗಳಿಂದ ಪಾರಾ ಗುವ ಶಕ್ತಿ ಕೊಡು’ ಎಂದು ಪ್ರಾರ್ಥಿಸಿದ.

ಸ್ವಲ್ಪವೇ ಹೊತ್ತಿನಲ್ಲಿ ಒಂದು ಜೇಡ ಆ ಗುಹೆಯ ದ್ವಾರದತ್ತ ಸರಿದು ಬಂತು. ನಿಧಾನವಾಗಿ ಗುಹೆಯ ಬಾಯಿಗೆ ಅಡ್ಡಲಾಗಿ ಬಲೆ ಹೆಣೆಯ ಲಾರಂಭಿಸಿತು. ಕೆಲವು ನಿಮಿಷಗಳಲ್ಲಿ ಬಲೆಯಿಂದ ದ್ವಾರವನ್ನು ಮುಚ್ಚಿಬಿಟ್ಟಿತು.

ಅಡಗಿದ್ದ ಯೋಧನಿಗೆ ವಿಚಿತ್ರ ಅನ್ನಿಸಿತು, “ನಾನು ಪ್ರಾರ್ಥಿಸಿದ್ದು ದೇವರನ್ನು, ರಕ್ಷಿಸು ಎಂದು. ಆದರೆ ಇಲ್ಲೊಂದು ಜೇಡ ಬಲೆ ಹೆಣೆದುಬಿಟ್ಟಿದೆಯಲ್ಲ!’ ಎಂದುಕೊಂಡ.

ಸ್ವಲ್ಪ ಹೊತ್ತಿನಲ್ಲಿ ಶತ್ರುಗಳು ಹುಡುಕುತ್ತ ಬಂದರು. ಅವರಲ್ಲಿ ಒಬ್ಬ ಗುಹೆಯ ಬಳಿಗೆ ಬಂದ. ತಪ್ಪಿಸಿಕೊಂಡ ಯೋಧ ಅಲ್ಲಿ ಅವಿತಿರಬೇಕು ಅನ್ನಿಸಿ ತವನಿಗೆ. ತನ್ನ ಸಂಗಡಿಗರನ್ನು ಕರೆದ. ಅವರಲ್ಲಿ ಇನ್ನೊಬ್ಬ, “ಇಲ್ಲ ತಪ್ಪಿಸಿ ಕೊಂಡವನು ಇದರೊಳಗೆ ಹೊಕ್ಕಿರಲಾರ. ಅವನು ಒಳಗೆ ಹೋಗಿದ್ದರೆ ಈ ಜೇಡರ ಬಲೆ ಹರಿದಿರಬೇಕಿತ್ತು. ನಾವು ಮುಂದೆ ಹೋಗಿ ಹುಡುಕೋಣ’ ಎಂದ. ಉಳಿದ ವರಿಗೆ ಈ ವಾದ ಸರಿ ಅನ್ನಿಸಿತು. ಎಲ್ಲರೂ ಮುಂದೆ ಹೋದರು.

ಶತ್ರುಗಳು ದೂರವಾದ ಬಳಿಕ ಅಡ ಗಿದ್ದ ಯೋಧ ಹೊರಗೆ ಬಂದು ಸುರಕ್ಷಿತ ಪ್ರದೇಶ ಸೇರಿಕೊಂಡ.

ಎಷ್ಟೋ ವರ್ಷಗಳ ಬಳಿಕ ವೃದ್ಧಾಪ್ಯ ದಲ್ಲಿ ಅವನು ಹಳೆಯ ನೆನಪುಗಳನ್ನು ಬರೆಯುತ್ತ ಹೀಗೆ ಉಲ್ಲೇಖೀಸಿದ, “ದೇವರ ಬೆಂಬಲ ಇಲ್ಲದಿದ್ದರೆ ಉಕ್ಕಿನ ಕವಚವೂ ಜೇಡರ ಬಲೆಯಂತೆ ದುರ್ಬಲವಾಗ ಬಹುದು. ಸರ್ವಶಕ್ತನ ಕೃಪೆ ಇದ್ದರೆ ಜೇಡರ ಬಲೆಯೂ ವಜ್ರಕವಚದಷ್ಟು ಶಕ್ತಿಶಾಲಿ ಆಗಬಹುದು…’( ಸಾರ ಸಂಗ್ರಹ)

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.