ಎಲ್ಲರ ಕಲ್ಯಾಣಕ್ಕಾಗಿ ಅರಳುವ ಬದುಕು


Team Udayavani, Aug 11, 2021, 6:00 AM IST

ಎಲ್ಲರ ಕಲ್ಯಾಣಕ್ಕಾಗಿ ಅರಳುವ ಬದುಕು

ಆಡ್ಯ ಕುಟುಂಬದ ಸದ್ಗೃಹಸ್ಥೆಯೊಬ್ಬ ರಿದ್ದರು. ಒಂದು ದಿನ ಸಂಜೆ ಅವರು ತನ್ನ ವಾರ್ಡ್‌ರೋಬ್‌ ತೆರೆದಿಟ್ಟುಕೊಂಡು ಕಣ್ಣೀರು ಸುರಿಸುತ್ತಿದ್ದರು, ಉಗುರು ಮುರಿದುಕೊಳ್ಳುತ್ತಿದ್ದರು. ಕೆಲಸದವಳು, “ಏನಾಯಿತು ಅಮ್ಮಾ’ ಎಂದು ಕೇಳಿದರೆ, “ನನ್ನ ಬಳಿ ಇಷ್ಟು ರಾಶಿ ಸೀರೆಗಳಿವೆ. ಇವತ್ತು ಸಂಜೆಯ ಸಮಾರಂಭಕ್ಕೆ ಯಾವುದನ್ನು ಉಡುವುದು ಎಂದು ತೋಚುತ್ತಿಲ್ಲವಲ್ಲ’ ಎಂದು ಬಿಕ್ಕಿದರು.

ಬದುಕಿನ ಇಂಥ ಗೊಂದಲದಿಂದ ಪಾರಾಗುವುದಕ್ಕೆ ಬಹಳ ಸರಳವಾದ ಒಂದು ಉಪಾಯವಿದೆ – ಎಷ್ಟು ಬೇಕೋ ಅಷ್ಟನ್ನು ಮಾತ್ರ ಇರಿಸಿಕೊಂಡು ಉಳಿದದ್ದನ್ನು ದಾನ ಮಾಡಿಬಿಡುವುದು!  ಸೀರೆಗಳಾದರೆ ಏಳು ಸಾಕು – ಸೋಮ ವಾರದಿಂದ ತೊಡಗಿ ರವಿವಾರದ ವರೆಗೆ ದಿನಕ್ಕೊಂದರಂತೆ.

ಇದರರ್ಥ ಎಲ್ಲರೂ ಏಳು ಸೀರೆಗಳನ್ನು ಮಾತ್ರ ಹೊಂದಿರಬೇಕು, ಉಳಿದದ್ದನ್ನೆಲ್ಲ ತ್ಯಾಗ ಮಾಡಿಬಿಡಬೇಕು ಎಂದಲ್ಲ. ಭೋಗವಸ್ತುಗಳ ಜತೆಗೆ ಇದ್ದು-ಇಲ್ಲದಂತಹ ನಿರ್ಮೋಹಿ ಸಂಬಂಧ ಇರಿಸಿಕೊಳ್ಳುವುದಾದರೆ ಎಷ್ಟು ಬೇಕಾದರೂ ಇರಲಿ ಬಿಡಿ. ಆದರೆ ಅವೆಲ್ಲವನ್ನೂ ತಲೆಯ ಮೇಲೆ ಹೊತ್ತು ಕೊಂಡಂತಹ ವ್ಯಾಮೋಹ ಬೇಡ. ನಾವು ಮುಟ್ಟಿದ್ದೆಲ್ಲವೂ ನಮ್ಮದಾಗಬೇಕು, ಕಂಡ ದ್ದೆಲ್ಲವೂ ಬೇಕು ಎಂಬ ಮೋಹ ಇದ್ದರೆ ನಮ್ಮ ಬದುಕು ಒಳಿತಾಗುವುದಿಲ್ಲ.

ಪರಸ್ಪರ ಸಹಕಾರ ಮನೋಭಾವ, ಪರಸ್ಪರ ಕಲ್ಯಾಣದ ಆಶಯ, ನಮ್ಮ ಹಾಗೆ ಇನ್ನೊಬ್ಬರಿಗೂ ಒಳಿತಾಗಬೇಕು ಎಂದು ಆಶಿಸಿದ ಜೀವಿಗಳು ಮಾತ್ರ ಜೀವವಿಕಾಸ ಪ್ರಕ್ರಿಯೆಯಲ್ಲಿ ಉಳಿದು ಬೆಳೆದು ಬಂದಿವೆ. ಇದಕ್ಕೆ ವೈಜ್ಞಾನಿಕ ಸಾಕ್ಷಿಗಳಿವೆ. “ಉಳಿದವರು ಏನು ಬೇಕಾದರೂ ಆಗಲಿ, ನಾನು ಮಾತ್ರ ಉಳಿಯಬೇಕು’ ಎಂದು ಬಯಸಿದ ಜೀವಿಗಳು ಉಳಿಯದೆ ಅಳಿದು ಹೋಗಿವೆ. ಈ ಅಳಿವು ಕಾಲಾಂತರದಲ್ಲಿ ಸಂಭವಿಸಿದೆ. ನಮ್ಮ ಸುತ್ತಮುತ್ತ ಗಮನಹರಿಸಿದರೆ, “ನನಗೆ ಅದು ಬೇಕು, ಇದನ್ನು ನಾನು ಪಡೆಯಬೇಕು, ಹೇಗಾ ದರೂ ಸರಿ – ಅದು ನನ್ನದಾಗಬೇಕು’ ಎಂದು ಮೋಹಿಸುವವರ ಮುಖಗಳಲ್ಲಿ ಸಂತೋಷ, ಸಂತೃಪ್ತಿ ಇಲ್ಲದೆ ಇರುವು ದನ್ನು ಕಾಣಬಹುದು.

ನಮ್ಮ ಬಳಿ ಸಾವಿರ ವಸ್ತುಗಳಿದ್ದರೂ ಇವತ್ತಿಗೆ ಯಾವುದು ಎಂಬ ಗೊಂದಲದಲ್ಲಿ ತೊಳಲಾಡಬೇಕಾಗ ಬಹುದು. ಒಂದೇ ಅಥವಾ ಏನೂ ಇಲ್ಲದೆ ಅತ್ಯಂತ ಸಂತೋಷ, ಸಂತೃಪ್ತಿಗಳಿಂದ ಇದ್ದು ಬಿಡಬಹುದು. ಬದುಕುವುದಕ್ಕೆ ಯಾವುದು ಉತ್ತಮ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು.

ನಾವು ಉಪಯೋಗಿಸುವ ಪ್ರತಿ ಯೊಂದು ಕೂಡ ಈ ಭೂಮಿಯಿಂದಲೇ ಉತ್ಪನ್ನವಾದದ್ದು. ಈ ಭೂಮಿಯಿಂದ ಏನಾದರೂ ಹೊಸತನ್ನು ಅಗೆದು ತೆಗೆದು ಅದನ್ನು ತಲೆಯ ಮೇಲೆ ಹೊತ್ತುಕೊಳ್ಳ ಬೇಕು ಎಂಬ ಮೋಹದಿಂದಲೇ ಅನೇಕರು ಜೀವಿಸುತ್ತಾರೆ. ಅದು ನನ್ನೊ ಬ್ಬನದು ಮಾತ್ರ ಆಗಿರಬೇಕು ಎಂದು ಆಶಿಸುತ್ತಾರೆ. ಒಳ್ಳೆಯ ಜೀವನ ಅಂದರೆ ಹೊಸತನ್ನು ಪಡೆದು ಅದನ್ನು ತಲೆಯ ಮೇಲೆ ಹೊತ್ತು ತಿರುಗಾಡುತ್ತ ಅದರ ಭಾರದಿಂದ ಕುಸಿಯುತ್ತ ಬದುಕು ವುದಲ್ಲ. ನಾವು ಬದುಕಿರುವಾಗ ಖುಷಿ ಖುಷಿಯಾಗಿ ಈ ಭೂಮಿಯ ಮೇಲೆ ನಡೆದಾಡಬೇಕು, ಅದನ್ನು ತಲೆಯ ಮೇಲೆ ಹೊತ್ತು ತಿರುಗಾಡುವುದಲ್ಲ.

ಒಳ್ಳೆಯ ಬದುಕಿನ ನಮ್ಮ ಪರಿಕಲ್ಪನೆ ನಮಗಾಗಿ ಮತ್ತು ನಾವಿರುವ ಈ ಭೂಮಿಯ ಕ್ಷೇಮಕ್ಕಾಗಿ ಅರಳಲಿ. ಚೆನ್ನಾಗಿ ಬದುಕುವುದು ಎಂದರೆ ನಮ್ಮ ಬಳಿ ಏನೇನೆಲ್ಲ ಇದೆ, ಎಷ್ಟೆಲ್ಲ ಇದೆ ಎಂಬುದಕ್ಕೆ ಸಂಬಂಧಿಸಿದ್ದಲ್ಲ; ನಾವು ಹೇಗಿದ್ದೇವೆ ಎಂಬುದಕ್ಕೆ ಸಂಬಂಧಿ ಸಿದ್ದು. ಈ ಬದಲಾವಣೆ ನಮ್ಮಲ್ಲಿ ಮತ್ತು ಪ್ರತಿಯೊಬ್ಬರಲ್ಲಿಯೂ ಉಂಟಾದರೆ ಇನ್ನೆಷ್ಟೋ ಕೋಟಿ ಜನಸಂಖ್ಯೆ ಹೆಚ್ಚಳವಾದರೂ ಏನೂ ಸಮಸ್ಯೆ ಆಗದು.

(ಸಾರ ಸಂಗ್ರಹ)

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.