ಯಾವ ಕಾಲು ಮೊದಲು ಮತ್ತು ಯಾವುದು ಬಳಿಕ?


Team Udayavani, Jan 23, 2021, 6:55 AM IST

ಯಾವ ಕಾಲು ಮೊದಲು ಮತ್ತು ಯಾವುದು ಬಳಿಕ?

ಪ್ರಕೃತಿಯಲ್ಲಿ ಅನೇಕ ವೃತ್ತಗಳಿರುತ್ತವೆ. ಭೂಮಿ ಸಹಿತ ಗ್ರಹಗಳು ವೃತ್ತಾಕಾರವಾಗಿ ಸೂರ್ಯನಿಗೆ ಸುತ್ತುಹಾಕುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಹೊರಟಲ್ಲಿಗೇ ಬಂದು ತಲುಪಬೇಕು – ಇದೂ ಒಂದು ವೃತ್ತ. ಹುಟ್ಟು ಮತ್ತು ಮರಣಗಳ ನಡುವಣ ಜೀವನ ಕೂಡ ಒಂದು ವೃತ್ತವೇ. ಗೂಡಿನಿಂದ ಹೊರಟ ಇರುವೆ ಆಹಾರ ಹೊತ್ತುಕೊಂಡು ಮತ್ತೆ ಗೂಡಿಗೆ ಬರುತ್ತದೆ. ಇವೆಲ್ಲವೂ ನೈಸರ್ಗಿಕ. ಈ ವೃತ್ತಗಳನ್ನು ರಚಿಸುವುದಕ್ಕೆ ಕೈವಾರ ಬೇಕಾಗಿಲ್ಲ. ನೂಲು ಹಿಡಿದು ಅಳೆಯ ಬೇಕಾಗಿಲ್ಲ. ಇವೆಲ್ಲವೂ ತನ್ನಷ್ಟಕ್ಕೆ ತಾನು ಆಗುವಂಥದ್ದು. ಜೇನು ಗೂಡಿನಿಂದ ಮೈಲು ಗಟ್ಟಲೆ ದೂರ ಮಕರಂದ ಹುಡುಕಿ ಹಾರುವ ಜೇನ್ನೊಣಕ್ಕೆ ಗೂಗಲ್‌ ಮ್ಯಾಪ್‌ ಕೊಟ್ಟರೆ ಅನರ್ಥವಾದೀತು. ಅದು ಎಷ್ಟೇ ದೂರ ಹೋದರೂ ತನ್ನ ದಾರಿ ಹಿಡಿದು ಗೂಡಿಗೆ ಮರಳುತ್ತದೆ. ದೂರದ ಸೈಬೀರಿಯಾದಿಂದ ಪ್ರತೀ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಹಕ್ಕಿಗಳಿಗೆ ಯಾರೂ ದಾರಿ ತೋರಿಸಿ ಕೊಡುವುದಿಲ್ಲ. ಅವುಗಳ ದೇಹದಲ್ಲಿಯೇ ವಲಸೆಯ ಕಾಲ, ದಾರಿ, ಹಾರಬೇಕಾದ ದೂರ ಎಲ್ಲವೂ ಪೂರ್ವನಿಶ್ಚಿತ.

ನಾವು ಕೂಡ ಹೀಗೆಯೇ ನಿಸರ್ಗದ ಕರೆಗೆ ಓಗೊಟ್ಟು ಬದುಕಿದರೆ ಹೆಚ್ಚು ಸುಂದರವಾದ ಜೀವನವನ್ನು ನಡೆಸು ವುದು ಸಾಧ್ಯವಾಗಬಲ್ಲುದು.

ನೀವು ಸಹಸ್ರಪದಿಯನ್ನು ಕಂಡೇ ಇರುತ್ತೀರಿ. ಸಹಸ್ರಪದಿಗೆ ಕನಿಷ್ಠ ನೂರಾ ದರೂ ಕಾಲುಗಳಿರಬಹುದು. ಆ ಕಾಲುಗಳು ಲಯಬದ್ಧವಾಗಿ ಒಂದರ ಹಿಂದೊಂದು ಚಲಿಸುತ್ತ ಸಹಸ್ರಪದಿ ಮುಂದುಮುಂದಕ್ಕೆ ಹೋಗುತ್ತದೆ. ಅದರ ನಡಿಗೆಯನ್ನು ಗಮನಿಸಿದರೆ ಆ ಕಾಲುಗಳು ನೀರಿನ ಅಲೆಯ ಹಾಗೆ ಚಲಿಸುವುದನ್ನು ಕಾಣಬಹುದು.

ಒಮ್ಮೆ ಒಂದು ಕಪ್ಪೆ ಕೊಳದ ಬದಿ ಯಲ್ಲಿ ಕುಳಿತಿತ್ತು. ಅದು ಸಾಮಾನ್ಯ ಕಪ್ಪೆಯಲ್ಲ, ಬಲು ದೊಡ್ಡ ತಣ್ತೀಜ್ಞಾನಿ. ಅದು ಯಾವುದೋ ವಿಚಾರವಾಗಿ ಗಹನ ಚಿಂತನೆ ನಡೆಸುತ್ತಿರುವಾಗ ಒಂದು ಸಹಸ್ರಪದಿ ಮೆಲ್ಲಮೆಲ್ಲನೆ ನಡೆಯುತ್ತ ಬರುವುದು ಅದಕ್ಕೆ ಕಾಣಿಸಿತು.

ಸಹಸ್ರಪದಿಯನ್ನು ಕಂಡು ಕಪ್ಪೆಗೆ ಬಹಳ ಚಿಂತೆಯಾಯಿತು. ನಾಲ್ಕು ಕಾಲು ಗಳಲ್ಲಿ ಚಲಿಸುವುದು ಕೆಲವೊಮ್ಮೆ ಬಹಳ ಕಷ್ಟದ ಕೆಲಸ. ಆದರೆ ಈ ಜೀವಿಗೆ ನೂರಾರು ಕಾಲುಗಳಿವೆ! ಅಷ್ಟು ಕಾಲು ಗಳಲ್ಲಿ ನಡೆಯುವುದು ಪವಾಡವೇ ಸರಿ. ಯಾವ ಕಾಲನ್ನು ಮೊದಲು, ಯಾವು ದನ್ನು ಆ ಬಳಿಕ, ಅನಂತರ ಯಾವುದು ಎಂದು ನಿರ್ಧರಿಸುವುದು ಹೇಗೆ! ಅಷ್ಟು ಕಾಲುಗಳನ್ನು ಒಂದರ ಅನಂತರ ಒಂದು ಸತತವಾಗಿ ಚಲಿಸುತ್ತ ಮುನ್ನಡೆಯು ವುದು ಪವಾಡಕ್ಕಿಂತ ಏನೇನೂ ಕಡಿಮೆಯಲ್ಲ ಎಂದು ಕೊಂಡಿತು ತಣ್ತೀಜ್ಞಾನಿ ಕಪ್ಪೆ. ಹಾಗಾಗಿ ಅದು ಸಹಸ್ರ ಪದಿಯನ್ನು ತಡೆದು ಪ್ರಶ್ನಿಸಿತು.

“ಓ ಮಹಾನುಭಾವ, ಯಾವ ಕಾಲು ಮೊದಲು, ಯಾವ ಕಾಲು ಅನಂತರ, ಆ ಬಳಿಕ ಎಂಬುದನ್ನು ಹೇಗೆ ನಿರ್ಧರಿಸಿ ನಡೆಯುತ್ತೀ?’

ಸಹಸ್ರಪದಿಗೆ ಇದು ಜೀವಮಾನ ದಲ್ಲಿಯೇ ಹೊಸ ಪ್ರಶ್ನೆ. “ನಾನು ಹುಟ್ಟಿದ ಬಳಿಕ ಹೀಗೆ ನಡೆಯುತ್ತಲೇ ಇದ್ದೇನೆ. ನೋಡೋಣ, ಈಗ ಆ ಬಗ್ಗೆ ನಾನು ಆಲೋಚನೆ ಮಾಡಿ ಹೇಳುತ್ತೇನೆ’.

ಈಗ ಹೊಸ ವಿಚಾರ ಸಹಸ್ರಪದಿಯ ಅಂತಃಪ್ರಜ್ಞೆಯನ್ನು ಹೊಕ್ಕಿತ್ತು. ಯಾವ ಕಾಲು ಮೊದಲು, ಯಾವ ಕಾಲು ಅನಂತರ ಎಂದು ಆಲೋಚಿಸುತ್ತ ಸಹಸ್ರಪದಿ ನಿಂತಲ್ಲೇ ನಿಂತಿತು. ಅದಕ್ಕೆ ಒಂದು ಹೆಜ್ಜೆ ಕೂಡ ಮುಂದಿಡಲಿಕ್ಕೆ ಆಗಲಿಲ್ಲ. ಆ ಕಾಲು, ಈ ಕಾಲು ಎಂದು ಒದ್ದಾಡಿ ಅದು ಧಡಕ್ಕನೆ ಮಗುಚಿತು.

ಬಳಿಕ ಅದು ಕಪ್ಪೆಯನ್ನು ನೋಡಿ ಕೈಮುಗಿದು, “ಓ ತಣ್ತೀಜ್ಞಾನಿ ಕಪ್ಪೆ ರಾಯರೇ, ದಯವಿಟ್ಟು ಈ ಪ್ರಶ್ನೆಯನ್ನು ಇನ್ನೊಂದು ಸಹಸ್ರಪದಿಗೆ ಕೇಳಬೇಡಿರಿ. ನಾನು ಹುಟ್ಟಿದಾರಭ್ಯ ನನ್ನಷ್ಟಕ್ಕೆ ನಾನು ನಡೆಯುತ್ತಿದ್ದೆ. ಈಗ ನೀವು ಒಂದು ಪ್ರಶ್ನೆ ಕೇಳಿ ನನ್ನನ್ನು ಕೊಂದುಬಿಟ್ಟಿರಿ. ಈಗ ಮುಂದಕ್ಕೆ ಹೋಗಬೇಕು ಎಂದಾಕ್ಷಣ ನೂರಾರು ಕಾಲುಗಳಿವೆ, ಯಾವುದು ಮೊದಲು, ಯಾವುದು ಅನಂತರ ಎಂಬುದೇ ತಲೆಗೆ ಬರುತ್ತದೆ…’

ನಾವು ಕೂಡ ಹಾಗೆಯೇ. ಬದುಕು ತಾನಾಗಿ ತೆರೆದುಕೊಳ್ಳಲಿ. ಹೆಚ್ಚು ತಲೆ ಕೆಡಿಸಿಕೊಂಡರೆ ಒಂದು ಹೆಜ್ಜೆ ಕೂಡ ಮುಂದಿಡುವುದಕ್ಕೆ ಆಗುವುದಿಲ್ಲ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.