ನಾವು ನೆಟ್ಟದ್ದರ ಫಲವನ್ನು ನಾವೇ ಉಣ್ಣಬೇಕೆಂದಿಲ್ಲ!
Team Udayavani, Jan 27, 2021, 6:30 AM IST
ಒಂದಾನೊಂದು ರಾಜ್ಯದಲ್ಲಿ ನಡೆದ ಕಥೆಯಿದು. ಅಲ್ಲಿಯ ಅರಸನಿಗೆ ಒಂದು ಅಭ್ಯಾಸವಿತ್ತು. ಹಳೆಯ ಕಾಲದ ಬಹುತೇಕ ಎಲ್ಲ ರಾಜರೂ ಅನುಸರಿ ಸುತ್ತಿದ್ದ ಪದ್ಧತಿ ಇದು; ಪ್ರತೀ ದಿನ ರಾತ್ರಿ ಮಾರುವೇಷ ಧರಿಸಿ ಒಂದೊಂದು ಪ್ರಾಂತ್ಯದಲ್ಲಿ ಸಂಚ ರಿಸಿ ಸ್ಥಿತಿಗತಿಗಳ ಅವಲೋಕನ. ಬೇಹು ಗಾರರು, ಸೇನೆ, ಮಂತ್ರಿಗಳು ಇದ್ದರೂ ಪರಿಸ್ಥಿತಿಯನ್ನು ಸ್ವತಃ ತಿಳಿದುಕೊಳ್ಳುವು ದಕ್ಕಾಗಿ ರಾಜರು ಈ ಉಪಾಯ ಅನುಸರಿಸುತ್ತಿದ್ದರು. ರಾಮನಿಗೆ ಅಗಸನ ಅಭಿಪ್ರಾಯ ಗೊತ್ತಾದದ್ದು, ಶಿವಾಜಿಗೆ ಅಜ್ಜಿಯೊಬ್ಬಳು ಬಿಸಿ ಗಂಜಿ ಉಣ್ಣುವ ಪಾಠದ ಮೂಲಕ ರಾಜ್ಯ ವಿಸ್ತರಣೆಯ ಪಾಠ ಹೇಳಿದ್ದು ಹೀಗೆ ಮಾರು ವೇಷದಲ್ಲಿ ಸಂಚರಿಸು ತ್ತಿದ್ದಾಗಲೇ.
ಈಗ ಮತ್ತೆ ನಮ್ಮ ಕಥಾನಾಯಕ ರಾಜನ ವಿಷಯಕ್ಕೆ ಬರೋಣ. ಒಮ್ಮೆ ರಾಜ ಹೀಗೆ ಮಾರು ವೇಷದಲ್ಲಿ ಸಂಚರಿಸು ತ್ತಿದ್ದಾಗ ವಿಚಿತ್ರ ವೊಂದನ್ನು ಕಂಡ. ನೂರರ ಆಸುಪಾಸು ವಯಸ್ಸಿನ ವೃದ್ಧನೊಬ್ಬ ಗಿಡಗಳನ್ನು ನೆಡುತ್ತಿರುವ ದೃಶ್ಯವದು. ಮರುದಿನವೂ ಇದೇ ದೃಶ್ಯ ಕಂಡಿತು. ಹಲವು ದಿನಗಳ ಕಾಲ ರಾಜನಿಗೆ ಅದೇ ವೃದ್ಧ ಗಿಡಗಳನ್ನು ನೆಡುತ್ತಿರುವುದು ಕಾಣಿಸಿತು.
ಆ ವೃದ್ಧ ಹೂಗಿಡಗಳನ್ನು ನೆಡುತ್ತಿದ್ದರೆ ಅರಸನಿಗೆ ಹೆಚ್ಚು ಕೌತುಕವಾಗುತ್ತಿರಲಿಲ್ಲ. ಆದರೆ ಅವನು ನಾಟಿ ಮಾಡುತ್ತಿದ್ದದ್ದು ಮಾವು, ಹಲಸು, ಕಿತ್ತಳೆ, ಮೂಸಂಬಿ, ಚಿಕ್ಕಿನಂತಹ ಹಣ್ಣಿನ ಮರಗಳ ಗಿಡಗಳನ್ನು. ಇವು ಬೆಳೆದು ಫಲ ನೀಡುವುದಕ್ಕೆ ಕನಿಷ್ಠ ಹತ್ತಾರು ವರ್ಷಗಳು ಬೇಕು. ಆದರೆ ಅವುಗಳನ್ನು ನೆಡುತ್ತಿದ್ದದ್ದು ಒಬ್ಬ ವಯೋ ವೃದ್ಧ. ಅವನ ಕೈಗಳು ನಡುಗುತ್ತಿದ್ದವು, ಚರ್ಮ ನೆರಿಗೆಗಟ್ಟಿತ್ತು. ಮುಂಬರುವ ವಸಂತ ಕಾಲಕ್ಕೆ ಅವನು ಬದುಕಿ ರುತ್ತಾನೆಯೋ ಇಲ್ಲವೋ ಎಂಬುದು ಖಾತರಿಯಿಲ್ಲದಂತಹ ವಯಸ್ಸು. ಆದರೂ ದೀರ್ಘಕಾಲ ಬಾಳಿ ಫಸಲು ನೀಡುವಂತಹ ಹಣ್ಣಿನ ಮರಗಳ ಗಿಡಗಳನ್ನು ನೆಡುತ್ತಿ
ದ್ದಾನೆ. ತಾನು ನೆಟ್ಟ ಗಿಡಗಳು ಮರಗಳಾಗಿ ಬೆಳೆದು ನೀಡುವ ಹಣ್ಣುಗಳನ್ನು ಸವಿಯಲು ತಾನು ಇರು ತ್ತೇನೆ ಎಂಬ ಖಾತರಿ ಇಲ್ಲದಿದ್ದರೂ…
ಅರಸನಿಗೆ ವಿಚಿತ್ರವಾಗಿ ಕಂಡದ್ದು ಇದು. ಹಲವು ದಿನಗಳ ಕಾಲ ವೃದ್ಧನ ಕಾಯಕವನ್ನು ಕಂಡ ಬಳಿಕ ದೊರೆಗೆ ತಡೆಯಲಾಗಲಿಲ್ಲ. ಒಂದು ದಿನ ಕುದುರೆಯಿಂದ ಇಳಿದು ಅಜ್ಜನ ಬಳಿಸಾರಿ ಕೇಳಿಯೇ ಬಿಟ್ಟ, “ನಿಮ್ಮ ಕೆಲಸವನ್ನು ತಡೆದು ಮಾತನಾಡಿಸುತ್ತಿರುವು ದಕ್ಕೆ ಕ್ಷಮಿಸಿ. ನೀವು ವೃದ್ಧರು. ಆದರೆ ಈ ಗಿಡಗಳು ಬೆಳೆದು ಮರ ಗಳಾಗಿ ಫಸಲು ನೀಡುವುದಕ್ಕೆ ತುಂಬ ವರ್ಷಗಳು ಬೇಕಲ್ಲ! ಆ ವರೆಗೆ…’
ವೃದ್ಧ ನಸುನಕ್ಕು ಹೇಳಿದ, “ನಿಜ, ನಿಮ್ಮ ಅನಿಸಿಕೆ ನಿಜ. ಅದುವರೆಗೆ ನಾನು ಬದುಕಿರುವುದಿಲ್ಲ. ಆದರೆ ಅದೋ ಅಲ್ಲಿ ನೋಡಿ. ಅಲ್ಲಿ ಬೆಳೆದು ನಿಂತಿರುವ ಹಣ್ಣಿನ ಮರಗಳನ್ನು ಗಮನಿಸಿ. ಅವುಗಳನ್ನು ಯಾರು ನೆಟ್ಟಿದ್ದರು ಎಂಬುದು ನನಗೆ ಗೊತ್ತಿಲ್ಲ. ನನ್ನ ಅಜ್ಜಂದಿರಂತೂ ಆಗಿರಲಿಕ್ಕಿಲ್ಲ. ಯಾರೋ ನೆಟ್ಟ ಮರಗಳವು. ಅವು ನಾನು ಸಣ್ಣವನಿ ದ್ದಾಗಿನಿಂದಲೂ ಹಣ್ಣು ಕೊಡುತ್ತಿವೆ. ನಾನೂ ತಿಂದಿದ್ದೇನೆ, ನನ್ನ ಮಕ್ಕಳು, ಮೊಮ್ಮಕ್ಕಳು ಕೂಡ. ಆ ಗಿಡಗಳನ್ನು ನೆಟ್ಟವರು ಆ ಕಾಲಕ್ಕೆ ಮುಂದೆ ಎಂದೋ ಬರುವ ಭವಿಷ್ಯದ ಮೇಲೆ ಭರವಸೆ ಇಟ್ಟು ಅವುಗಳನ್ನು ನಾಟಿ ಮಾಡಿದ್ದರು. ಮುಂದೆ ಎಂದಾದರೊಂದು ದಿನ ತಮ್ಮ ಹಾಗೆಯೇ ಹುಟ್ಟುವ ಮಕ್ಕಳು, ಮರಿಮಕ್ಕಳು ಆ ಹಣ್ಣುಗಳನ್ನು ತಿನ್ನಲಿ ಎಂದು ಆಶಿಸಿದ್ದರು. ಅವರು ಹಾಗೆ ಭವಿಷ್ಯದ ಮೇಲೆ ನಂಬಿಕೆ ಇರಿಸಿದ್ದರಿಂದ ನಾನು ಹಣ್ಣು ತಿನ್ನುವಂತಾಯಿತು.’
“ಈಗ ನಾನು ನೆಡುತ್ತಿರುವ ಗಿಡಗಳು ಎಂದಾದರೊಂದು ದಿನ ಹೀಗೆಯೇ ಬೆಳೆದು ಫಲ ಕೊಡಲಿ. ನಾನಲ್ಲದಿದ್ದರೂ ನನ್ನ ಅನಂತರದ ಹಲವು ತಲೆಮಾರುಗಳು ಅವುಗಳ ಹಣ್ಣುಗಳನ್ನು ಸವಿಯಲಿ’ ಎಂದು ಹೇಳಿ ವೃದ್ಧ ತನ್ನ ಮಾತು ಮುಗಿಸಿದ.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.